Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಳೆ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿಗಳು


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16 2019 ರಂದು ಮಹಾರಾಷ್ಟ್ರದ ಯಾವತ್ಮಾಲ್ ಮತ್ತು ಧುಲೆ ಗೆ ಭೇಟಿ ನೀಡಲಿದ್ದಾರೆ. ರಾಜ್ಯದ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ

ಯಾವತ್ಮಾಲ್ ನಲ್ಲಿ

ನಾಂದೇಡದಲ್ಲಿ ಗುಂಡಿಯನ್ನು ಒತ್ತುವ ಮೂಲಕ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ. ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆ 420 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಇದು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ವೃದ್ಧಿಸಲು ಸಹಾಯಕವಾಗಿದೆ ಮತ್ತು ಅವರ ಸಮಗ್ರ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿ ನಿರ್ಮಾಣಗೊಂಡಂತಹ ಮನೆಗಳ ಬೀಗದ ಕೈಯನ್ನು e-Gruh Pravesh (ಈ – ಗೃಹ ಪ್ರವೇಶ್) ಸಂದರ್ಭದಲ್ಲಿ ಆಯ್ದ ಫಲಾನುಭವಿಗಳಿಗೆ ಪ್ರಧಾನ ಮಂತ್ರಿಗಳು ಹಸ್ತಾಂತರಿಸಲಿದ್ದಾರೆ.

ಅಜ್ನಿ (ನಾಗ್ಪುರ್) – ಪುಣೆ ರೈಲಿಗೆ ಪ್ರಧಾನ ಮಂತ್ರಿಯವರು ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಲಿದ್ದಾರೆ. ಈ ರೈಲು 3 ಟೈರ್ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ ಹೊಂದಿದ್ದು ನಾಗ್ಪುರ್ ಮತ್ತು ಪುಣೆ ಮಧ್ಯೆ ರಾತ್ರಿ ಸಂಚರಿಸುವ ಸೇವೆ ಒದಗಿಸಲಿದೆ. ಕೇಂದ್ರ ರಸ್ತೆ ನಿಧಿ(CRF) ಅಡಿ ನಿರ್ಮಿಸಲಾಗುವ ರಸ್ತೆಗೆ ಗುಂಡಿ ಒತ್ತುವ ಮೂಲಕ ಚಾಲನೆ ನೀಡಲಿದ್ದಾರೆ.

ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನೋಪಾಯ ಮಿಶನ್ (MSRLM) ಅಡಿ ಪ್ರಮಾಣ ಪತ್ರಗಳು/ಚೆಕ್ ಗಳನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಧಾನಿ ವಿತರಿಸಲಿದ್ದಾರೆ. ಆರ್ಥಿಕ ಸೇರ್ಪಡೆಯೆಡೆಗೆ ಸಾಮಾಜಿಕ ಸನ್ನದ್ಧತೆಯ ಗುರಿಯನ್ನು MSRLM ಹೊಂದಿದೆ. ಇದು ಆರ್ಥಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಮೂಲಕ ಕೃಷಿ ಮತ್ತು ಕೃಷಿಯೇತರ ಜೀವನೋಪಾಯ ಅವಕಾಶಗಳನ್ನು ಖಾತ್ರಿಪಡಿಸಲು ಸಹಾಯ ಮಾಡುತ್ತದೆ.

ಧುಲೆಯಲ್ಲಿ:

ನಂತರ ಪ್ರಧಾನಮಂತ್ರಿಗಳು ಮಹಾರಾಷ್ಟ್ರದ ಧುಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಪಿ ಎಂ ಕೆ ಎಸ್ ವಾಯ್ ಅಡಿಲೋವರ್ ಪನಝರಾ ಮಿಡಿಯಂ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಯನ್ನು 2016-17 ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆ (PMKSY)ಯಡಿ ಸೇರಿಸಲಾಗಿತ್ತು. ಇದು ಧುಲೆ ಜಿಲ್ಲೆಯ 21 ಗ್ರಾಮಗಳ 7585 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಒದಗಿಸಲಿದ್ದು 109.31 ಮಿಲಿಯನ್ ಕ್ಯುಬಿಕ್ ಮೀಟರ್ ಗಳಷ್ಟು ಶೇಖರಣಾ ಸಾಮರ್ಥ್ಯ ಹೊಂದಿದೆ.

ಸುಲವಾಡೆ ಜಂಫಾಲ್ ಕನೋಲಿ ಏತ ನೀರಾವರಿ ಯೋಜನೆ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಯೋಜನೆ ಮಳೆಗಾಲದ 124 ದಿನಗಳಲ್ಲಿ ತಾಪಿ ನದಿಯಿಂದ ಉಕ್ಕಿ ಹರಿಯುವ 9.24 ಟಿ ಎಂ ಸಿ ನೀರನ್ನು ಮೇಲೆತ್ತುವುದಕ್ಕಾಗಿ ರೂಪಿಸಲಾಗಿದೆ. ಇದನ್ನು ಧುಲೆ ಜಿಲ್ಲೆಯ 100 ಗ್ರಾಮಗಳ 33367 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರಸ್ತಾಪಿಸಲಾಗಿದೆ.

ಅಮೃತ್ (AMRUT) ಅಡಿ ಧುಲೆ ನಗರ ನೀರು ಸರಬರಾಜು ಯೋಜನೆಗೆ ಪ್ರಧಾನಮಂತ್ರಿಗಳು ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ. ಇದು ಔದ್ಯಮಿಕ ಮತ್ತು ವಾಣಿಜ್ಯಾತ್ಮಕ ಅಭಿವೃದ್ಧಿಗೆ ನೀರಿನ ಸೌಲಭ್ಯವನ್ನು ಖಾತರಿಪಡಿಸಲಿದೆ.

ಧುಲೆ ನರ್ಡಾನಾ ರೈಲು ಹಳಿ ಮತ್ತು ಜಲಗಾಂವ್ – ಮನ್ಮಾಡ್ 3 ನೇ ರೈಲು ಹಳಿಗೆ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ವಿಡಿಯೋ ಲಿಂಕ್ ಮೂಲಕ ಭೂಸವಾಲ್- ಬಾಂದ್ರಾ ಖಾಂದೇಶ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿಗಳು ಹಸಿರು ನಿಶಾನೆ ತೋರಲಿದ್ದಾರೆ. ಇದು ಮುಂಬೈ ಮತ್ತು ಭೂಸವಾಲ್ ಗೆ ನೇರ ಸಂಪರ್ಕ ಕಲ್ಪಿಸುವ ರಾತ್ರಿ ಸಂಚರಿಸುವ ರೈಲಾಗಿದೆ. ಈ ರೈಲು ವಾರಕ್ಕೆ 3 ಬಾರಿ ಸಂಚರಿಸಲಿದೆ.

ಜಾಲಗಾಂವ್ – ಉಧಾನಾ ಡಬ್ಲಿಂಗ್ ಮತ್ತು ವಿದ್ಯುದೀಕರಣ ರೈಲು ಯೋಜನೆಯನ್ನು ಅವರು ಉದ್ಘಾಟಿಸಲಿದ್ದಾರೆ. ಈ ಯೋಜನೆ ಪ್ರಯಾಣಿಕರ ಮತ್ತು ಸರಕು ಸಾಗಾಣಿಕೆ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಾಮರ್ಥ್ಯ ಒದಗಿಸಲಿದೆ. ಇದು ನಂದುರ್ಬಾರ್, ವ್ಯಾರಾ, ಧಾರನ್ ಗಾಂವ್ ಮತ್ತು ಈ ಭಾಗದ ಇತರ ಪ್ರದೇಶಗಳ ಅಭಿವೃದ್ಧಿಗೆ ಪುಷ್ಟಿ ನೀಡುವ ಕೆಲಸ ಮಾಡಲಿದೆ.