Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಳೆ ಪ್ರಧಾನಮಂತ್ರಿ ವಾರಾಣಸಿಗೆ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ, 2019 ರ ಫೆಬ್ರವರಿ 19, ರಂದು ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡುವರು. ಅವರು ಅಲ್ಲಿ ಹಲವು ಅಭಿವೃದ್ದಿ ಯೋಜನೆಗಳನ್ನು ಅನಾವರಣ ಮಾಡುವರು.

ಪ್ರಧಾನಮಂತ್ರಿ ಶ್ರೀ ಮೋದಿ ಅವರು ವಾರಾಣಸಿಯಲ್ಲಿರುವ ಡೀಸಿಲ್ ಲೊಕೋಮೋಟಿವ್ ಕಾರ್ಯಾಗಾರದಲ್ಲಿ ಡೀಸಿಲ್ ನಿಂದ ವಿದ್ಯುತ್ ಚಾಲಿತವಾಗಿ ಪರಿವರ್ತಿಸಲ್ಪಟ್ಟ ಮೊಟ್ಟ ಮೊದಲ ಲೊಕೋಮೋಟಿವ್ ಗೆ ಹಸಿರು ನಿಶಾನೆ ತೋರುವರು. ಅವರು ಲೋಕೋಮೋಟಿವ್ ಅನ್ನು ವೀಕ್ಷಿಸುವರು ಮತ್ತು ವಸ್ತುಪ್ರದರ್ಶನಕ್ಕೂ ಭೇಟಿ ನೀಡುವರು.

ಡೀಸೆಲ್ ಲೊಕೋಮೋಟಿವ್ ಕಾರ್ಯಾಗಾರವು ಎರಡು ಡಬ್ಲ್ಯು.ಡಿ.ಜಿ3A ಡೀಸಿಲ್ ಲೋಕೋಗಳನ್ನು 10,000 ಅಶ್ವಶಕ್ತಿ ಸಾಮರ್ಥ್ಯದ ಡಬ್ಲ್ಯು.ಎ.ಜಿ.ಸಿ.3 ಲೋಕೋ ಅವಳಿ ಇಂಜಿನುಗಳನ್ನಾಗಿ ಪರಿವರ್ತಿಸಿದೆ. ಇದು ಸಂಪೂರ್ಣವಾಗಿ “ಮೇಕ್ ಇನ್ ಇಂಡಿಯಾ” ಉಪಕ್ರಮವಾಗಿದ್ದು, ಈ ಪರಿವರ್ತನೆ ಇಡೀಯ ವಿಶ್ವಕ್ಕೆ ಭಾರತೀಯ ಸಂಶೋಧನೆ ಮತ್ತು ಅಭಿವೃದ್ದಿ ಅನ್ವೇಷಣೆಯಾಗಿದೆ. ಪರಿವರ್ತಿತ ಲೋಕೋ ಇಂಜಿನುಗಳು ಕಡಿಮೆ ಹಸಿರು ಮನೆ ಪರಿಣಾಮದ ಅನಿಲಗಳನ್ನು ವಿಸರ್ಜಿಸುತ್ತವೆ ಮತ್ತು ಭಾರತೀಯ ರೈಲ್ವೇಗಳಿಗೆ ಉತ್ತಮ ದಕ್ಷ ಲೊಕೋಮೋಟಿವ್ ಗಳನ್ನು ಒದಗಿಸುತ್ತವೆ.

ಪ್ರಧಾನಮಂತ್ರಿ ಅವರು ಗೋವರ್ಧನಪುರದ ಶ್ರೀ ಗುರು ರವಿದಾಸ ಜನ್ಮಸ್ಥಾನ ದೇವಾಲಯದಲ್ಲಿ ಗುರು ರವಿದಾಸ ಜನ್ಮಸ್ಥಾನ ಅಭಿವೃದ್ದಿ ಯೋಜನೆಗೆ ಶಿಲಾನ್ಯಾಸ ಮಾಡುವರು. ಅವರು ಶ್ರೀ ಗುರು ರವಿದಾಸ ಪ್ರತಿಮೆಗೆ ಗೌರವ ಸಲ್ಲಿಸುವರು. ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವರು.

ಪ್ರಧಾನಮಂತ್ರಿ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನೂತನವಾಗಿ ನಿರ್ಮಿಸಲಾದ ಮದನ ಮೋಹನ ಮಾಳವೀಯ ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸುವರು. ಈ ಆಸ್ಪತ್ರೆಯು ಉತ್ತರ ಪ್ರದೇಶ, ಜಾರ್ಖಂಡ, ಬಿಹಾರ, ಉತ್ತರಾಖಂಡ ಮತ್ತು ನೆರೆಯ ರಾಷ್ಟ್ರವಾದ ನೇಪಾಳದ ಕ್ಯಾನ್ಸರ್ ರೋಗಿಗಳಿಗೆ ಸಮಗ್ರ ಮತ್ತು ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ಒದಗಿಸಲಿದೆ.

ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಲೆಹಾರ್ತಾರಾವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸುವರು. ಎರಡು ಕ್ಯಾನ್ಸರ್ ಆಸ್ಪತ್ರೆಗಳ ಉದ್ಘಾಟನೆಯಿಂದ ವಾರಾಣಸಿಯು ಕ್ಯಾನ್ಸರ್ ಸಂಬಂಧಿ ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.

ಪ್ರಧಾನಮಂತ್ರಿ ಶ್ರೀ ಮೋದಿ ಅವರು ಮೊದಲ ಹೊಸ ಪ್ರೆಸಿಶನ್ ಭಾಭಾಟ್ರಾನ್ ಪ್ರೆಶಿಶನ್ ತಂತ್ರಜ್ಞಾನವನ್ನು ಲೋಕಾರ್ಪಣೆ ಮಾಡುವರು.

ಅವರು ಪಂಡಿತ್ ಮದನ ಮೋಹನ ಮಾಳವೀಯ ಅವರ ಪ್ರತಿಮೆಯನ್ನು ಅನಾವರಣ ಮಾಡುವರು ಮತ್ತು ಬಿ.ಎಚ್.ಯು.ಯ ವಾರಾಣಸಿ ಘಾಟ್ ನಲ್ಲಿ ಭಿತ್ತಿಚಿತ್ರಗಳನ್ನು ಅನಾವರಣ ಮಾಡುವರು. ಅವರು ಬಿ.ಎಚ್.ಯು. ನಲ್ಲಿ ಪಿ.ಎಂ.-ಜೆ.ಎ.ವೈ. ಆಯುಷ್ಮಾನ ಭಾರತ್ ಫಲಾನುಭವಿಗಳ ಜೊತೆ ಸಂವಾದ ನಡೆಸುವರು.

ಆ ಬಳಿಕ ವಾರಾಣಸಿಯ ಅಔರೇ ಗ್ರಾಮದಲ್ಲಿ ಪ್ರಧಾನಮಂತ್ರಿ ಅವರು ಹಲವು ಅಭಿವೃದ್ದಿ ಯೋಜನೆಗಳನ್ನು ಅನಾವರಣ ಮಾಡುವರು. ಆರೋಗ್ಯ ವರ್ಧನಾ ಯೋಜನೆಗಳು ಮತ್ತು ವಾರಾಣಸಿ ಹಾಗು ಸುತ್ತಮುತ್ತಲಿನ ಪ್ರದೇಶಕ್ಕೆ ಸಂಬಂಧಿಸಿದ ಇತರ ವಲಯದ ಯೋಜನೆಗಳು ಇದರಲ್ಲಿ ಒಳಗೊಂಡಿವೆ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅವರು ಪ್ರಮಾಣಪತ್ರಗಳನ್ನು ವಿತರಿಸುವರು. ದಿವ್ಯಾಂಗರಿಗೆ ಅವರು ಸಲಕರಣೆಗಳನ್ನು ಮತ್ತು ನೆರವನ್ನು ವಿತರಿಸುವರು. ಬಳಿಕ ಪ್ರಧಾನ ಮಂತ್ರಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು.