Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಳೆ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚೆ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ


ಇಂದು ಇಲ್ಲಿ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಉಪಸ್ಥಿತರಿದ್ದರು ಮತ್ತು ಮುಂಬರುವ ಸಂಸತ್ತಿನ ಅಧಿವೇಶನದ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಂಸತ್ತಿನ ಈ ಅಧಿವೇಶನವು ರಾಜ್ಯಸಭೆಯ 250 ನೇ ಅಧಿವೇಶನವನದ ವಿಶೇಷ ಸಂದರ್ಭವಾಗಿದೆ ಎಂದ ಪ್ರಧಾನಿಯವರು, ಈ ಸಂದರ್ಭಕ್ಕಾಗಿ ವಿಶೇಷ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಯೋಜಿಸಲಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭಾರತದಂತಹ ವೈವಿಧ್ಯಮಯ ದೇಶಕ್ಕೆ ಆಡಳಿತ ಸಂಸ್ಥೆಗಳ ವಿಸ್ತಾರವಾದ ಚೌಕಟ್ಟನ್ನು ಒದಗಿಸುವಲ್ಲಿ ಮೇಲ್ಮನೆಯ 250 ನೇ ಅಧಿವೇಶನವು ಭಾರತೀಯ ಸಂಸತ್ತಿನ ಜೊತೆಗೆ ಭಾರತೀಯ ಸಂವಿಧಾನದ ವಿಶಿಷ್ಟ ಸಾಮರ್ಥ್ಯಗಳನ್ನು ಎತ್ತಿ ಹಿಡಿಯಲು ಒಂದು ಅನನ್ಯ ಅವಕಾಶವನ್ನು ಒದಗಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ಭಾರತ ಆಚರಿಸುತ್ತಿರುವಾಗ ನಡೆಯುತ್ತಿರುವ ಅಧಿವೇಶನದ ಹಿನ್ನೆಲೆಯು ಇದನ್ನು ಒಂದು ವಿಶಿಷ್ಟ ಮತ್ತು ವಿಶೇಷ ಸಂದರ್ಭವನ್ನಾಗಿ ಮಾಡಿದೆ.

ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಎತ್ತಿದ ನಿರ್ದಿಷ್ಟ ವಿಷಯಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ, ಪರಿಸರ ಮತ್ತು ಮಾಲಿನ್ಯ, ಆರ್ಥಿಕತೆ, ಕೃಷಿ ಕ್ಷೇತ್ರ ಮತ್ತು ರೈತರು, ಮಹಿಳೆಯರ ಹಕ್ಕುಗಳು, ಯುವಕರು ಮತ್ತು ಸಮಾಜದ ದುರ್ಬಲ ವರ್ಗಗಳ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಾಕಿ ಇರುವ ಮಸೂದೆಗಳನ್ನು ಪರಿಹರಿಸಲು ಮತ್ತು ನೀತಿ ಪರಿಹಾರಗಳನ್ನು ರೂಪಿಸಲು ಸರ್ಕಾರವು ಎಲ್ಲಾ ಪಕ್ಷಗಳೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಸಂಸತ್ತಿನ ಹಿಂದಿನ ಅಧಿವೇಶನವನ್ನು ಸುಗಮವಾಗಿ ನಡೆಸಿದ ಉಭಯ ಸದನಗಳ ಅಧ್ಯಕ್ಷರಿಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು. ಇದು ಸರ್ಕಾರದ ಶಾಸಕಾಂಗದ ಕಾರ್ಯಚಟುವಟಿಕೆಯ ಬಗ್ಗೆ ಜನರಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಲು ಸಹಾಯ ಮಾಡಿದೆ ಎಂದರು. ಸಂಸತ್ತಿನಲ್ಲಿರುವ ಮೊದಲ ಅವಧಿಯ ಸದಸ್ಯರು ವೈವಿಧ್ಯಮಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಶಕ್ತಿಯುತವಾಗಿ ಭಾಗವಹಿಸಿದ ಬಗ್ಗೆ ಪ್ರಧಾನ ಮಂತ್ರಿಯವರು ನಿರ್ದಿಷ್ಟ ಪ್ರಸ್ತಾಪವನ್ನು ಮಾಡಿದರು ಮತ್ತು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ರಚನಾತ್ಮಕ ಸಂಬಂಧವು ಪ್ರಸ್ತುತ ಅಧಿವೇಶನವನ್ನು ಯಶಸ್ವಿ ಮತ್ತು ಉತ್ಪಾದಕವಾಗಿಸುತ್ತದೆ ಎಂದು ಭರವ