ಅಂತಿಮವಾಗಿ ಗಂಗಾ ನದಿಯನ್ನು ಸೇರಿಕೊಳ್ಳುವ ಸೋನೆ ನದಿಯ ಉಪನದಿಯಾದ ನಾರ್ತ್ ಕೋಯಿಲ್ನಲ್ಲಿ ಈ ಯೋಜನೆ ನಿರ್ಮಾಣವಾಗುತ್ತಿದೆ. ಜಾರ್ಖಂಡ್ನ ಅತ್ಯಂತ ಹಿಂದುಳಿದ ಆದಿವಾಸಿ ಪ್ರದೇಶಗಳಾದ ಪಾಲಾಮೌ ಮತ್ತು ಗರ್ವಾ ಜಿಲ್ಲೆಗಳಲ್ಲಿ ನಾರ್ತ್ ಕೋಯಿಲ್ ಜಲಾಶಯವಿದೆ. 1972ರಲ್ಲಿ ಆರಂಭವಾದ ಈ ಯೋಜನೆ 1993ರವರೆಗೆ ಸಾಗಿತ್ತು. ಆದರೆ, ಅರಣ್ಯ ಇಲಾಖೆ, ಬಿಹಾರ ಸರ್ಕಾರದಿಂದಾಗಿ ಯೋಜನೆ ಸ್ಥಗಿತವಾಗಿತ್ತು. ಅಲ್ಲಿಂದ ಮುಂದೆ ಅಣೆಕಟ್ಟಿನ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ನಿಂತುಹೋಗಿದ್ದವು. ಯೋಜನೆಯ ಮೂಲ ರೂಪುರೇಷಗಳ ಪ್ರಕಾರ, ಮಂಡಲ್ ಡ್ಯಾಂ ಎಂದು ಕರೆಯಲ್ಪಡುವ ಈ ಅಣೆಕಟ್ಟು 67.86 ಮೀಟರ್ ಎತ್ತರ ಮತ್ತು 343.33 ಮೀಟರ್ ಉದ್ದದ ಕಾಂಕ್ರೀಟ್ ರಚನೆ ನಿರ್ಮಾಣದ ಗುರಿ ಹೊಂದಿತ್ತು. ಅಲ್ಲದೇ 1160 ಮಿಲಿಯನ್ ಕ್ಯುಬಿಕ್ ಮೀಟರ್ (ಎಂಸಿಎಂ) ನೀರು ಶೇಖರಿಸಲು ಯೋಜಿಸಲಾಗಿತ್ತು; ಮೊಹಮದ್ಗಂಜ್ನಲ್ಲಿ 819.6 ಮೀಟರ್ ಉದ್ದದ ಬ್ಯಾರೇಜ್, 96 ಕಿಲೋಮೀಟರ್ ಉತ್ತರದ ನದಿಯ ಹರಿವನ್ನು ಅಣೆಕಟ್ಟು ಹೊಂದಿತ್ತು; ಅಲ್ಲದೇ ನೀರಾವರಿ ವಿತರಣೆಯ ಉದ್ದೇಶದಿಂದ ಮೊಹಮದ್ಗಂಜ್ ಬ್ಯಾರೇಜ್ನಿಂದ ಎಡ ಮತ್ತು ಬಲಕ್ಕೆ ಎರಡು ಕಾಲುವೆಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಪ್ರಸ್ತುತ ಹೊಸ ಕಡಿತಗೊಳಿಸಿದ 341 ಮೀಟರ್ ಎತ್ತರದ ಮಂಡಲ್ ಡ್ಯಾಂ 190 ಎಂಸಿಎಂ ನೀರು ಸಂಗ್ರಹ ಸಾಮಾಥ್ರ್ಯ ಹೊಂದಿದೆ. ಅತ್ಯಂತ ಹಿಂದುಳಿದ ಜಾರ್ಖಂಡ್ನ ಪಾಲಾಮೌ ಮತ್ತು ಗರ್ವಾ ಜಿಲ್ಲೆಗಳ ಮತ್ತು ಬಿಹಾರದ ಔರಂಗಾಬಾದ್ ಮತ್ತು ಗಯಾ ಜಿಲ್ಲೆಗಳ 111,521 ಹೆಕ್ಟೇರ್ ಪ್ರದೇಶಕ್ಕೆ ಈ ಅಣೆಕಟ್ಟು ನೀರಾವರಿ ಸೌಲಭ್ಯ ಒದಗಿಸಲಿದೆ. ಅಪೂರ್ಣವಾಗಿರುವ ಈ ಯೋಜನೆಯಲ್ಲಿ ಸದ್ಯಕ್ಕೆ 71,720 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದ್ದು, ಪೂರ್ಣಗೊಂಡ ಯೋಜನೆಯಿಂದ ಹೆಚ್ಚುವರಿಯಾಗಿ 39,801 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಈ ರಾಜ್ಯಗಳಲ್ಲಿ ಯೋಜನೆಯ ನೀರಾವರಿ ಸಾಮಾಥ್ರ್ಯ ಈ ಕೆಳಕಂಡಂತಿದೆ:
ಒಟ್ಟಾರೆ ನೀರಾವರಿ ಸಾಮಾಥ್ರ್ಯ: 1,11,521 ಹೆಕ್ಟೇರ್ಗಳು
ಬಿಹಾರದಲ್ಲಿನ ನೀರಾವರಿ ಸಾಮಥ್ರ್ಯ: 91,917 ಹೆಕ್ಟೇರ್ಗಳು
ಜಾರ್ಖಂಡ್ನ ನೀರಾವರಿ ಸಾಮಾಥ್ರ್ಯ: 19,604 ಹೆಕ್ಟೇರ್ಗಳು
ಯೋಜನೆಯ ಇಂದಿನ ಒಟ್ಟಾರೆ ಮೊತ್ತ 2391.36 ಕೋಟಿ ರೂಪಾಯಿ. ಇದುವರೆಗೂ 769.09 ಕೋಟಿ ರೂಪಾಯಿಯನ್ನು ಯೋಜನೆಗೆ ವ್ಯಹಿಸಲಾಗಿದೆ. ಬಿಹಾರ ಮತ್ತು ಜಾರ್ಖಂಡ್ನ ನಾರ್ತ್ ಕೋಯಿಲ್ ಯೋಜನೆಯ ಇನ್ನುಳಿದ ಕಾಮಗಾರಿಗಳನ್ನು 1622.27 ಕೋಟಿ ರೂಪಾಯಿಯಲ್ಲಿ ಪೂರ್ಣಗೊಳಿಸಲು ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯ ನಿಧಿಯಡಿ ಕೇಂದ್ರ ಸರ್ಕಾರ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು 1013.11 ಕೋಟಿ ನೀಡಲಿದೆ. ಇದರಲ್ಲಿ 607 ಕೋಟಿ ರೂಪಾಯಿ ನಿವ್ವಳ ಪ್ರಸ್ತುತ ಮೌಲ್ಯ (ಎನ್ಪಿವಿ) ಮತ್ತು ಪರಿಹಾರ ಅರಣ್ಯೀಕರಣ ಮೊತ್ತವಾದ 43 ಕೋಟಿ ರೂಪಾಯಿಯೂ ಸೇರಿದೆ. ಇದಲ್ಲದೇ, ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿ ದೀರ್ಘಾವಧಿ ನೀರಾವರಿ ನಿಧಿ (ಎಲ್ಟಿಐಎಫ್)ನಿಂದ ಉಳಿದ ಕಾಮಗಾರಿಗಳ ಮೊತ್ತವಾದ 365.5 ಕೋಟಿ ಅಂದರೆ ಶೇ. 60 ರಷ್ಟು ಹಣವನ್ನು ನೀಡಲಿದೆ. (ಬಿಹಾರಕ್ಕೆ 318.64 ಕೋಟಿ ಮತ್ತು ಜಾರ್ಖಂಡ್ಗೆ 46.86 ಕೋಟಿ). ಇನ್ನುಳಿದ ಯೋಜನೆಯ 243.66 ಕೋಟಿ ರೂಪಾಯಿ ಮೊತ್ತವನ್ನು ನಬಾರ್ಡ್ ಮೂಲಕ ಎಲ್ಟಿಐಎಫ್ನಿಂದ ಅನುದಾನಿತವಲ್ಲದ ಮತ್ತು ಮಾರುಕಟ್ಟೆ ಬೆಲೆಯಲ್ಲಿನ ಬಡ್ಡಿಯಲ್ಲಿ ಯಾವುದೇ ಕಡಿತವಿಲ್ಲದ ಸಾಲದ ರೂಪದಲ್ಲಿ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ನೀಡಲಿವೆ (ಬಿಹಾರ 212.43 ಕೋಟಿ ಮತ್ತು ಜಾರ್ಖಂಡ್ 31.23 ಕೋಟಿ ರೂಪಾಯಿ).
ಈ ಬಾಕಿ ಇರುವ ಯೋಜನೆಯ ಕಾಮಗಾರಿಗಳನ್ನು ಪೂರ್ಣಗಳಿಸಲು ವ್ಯಪ್ಕಾಸ್ ಲಿಮಿಟೆಡ್ಗೆ ವಹಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯ ಅನುಷ್ಠಾನವನ್ನು ಸರ್ಕಾರ ರಚಿಸುವ ನೀತಿ ಆಯೋಗದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದ ಅಧಿಕೃತ ಸಮಿತಿ ಮೇಲ್ವಿಚಾರಣೆ ಮಾಡಲಿದೆ.