Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾನಾಜಿ ದೇಶ್ ಮುಖ್ ಜನ್ಮ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ

ನಾನಾಜಿ ದೇಶ್ ಮುಖ್ ಜನ್ಮ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ

ನಾನಾಜಿ ದೇಶ್ ಮುಖ್ ಜನ್ಮ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ

ನಾನಾಜಿ ದೇಶ್ ಮುಖ್ ಜನ್ಮ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ಪೂಸಾದ ಐಎಆರ್.ಐ.ನಲ್ಲಿ ನಾನಾಜಿ ದೇಶ್ ಮುಖ್ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾದರು. 
“ತಂತ್ರಜ್ಞಾನ ಮತ್ತು ಗ್ರಾಮೀಣ ಬದುಕು’’ ವಿಷಯದ ಮೇಲಿನ ವಸ್ತುಪ್ರದರ್ಶನಕ್ಕೆ ಪ್ರಧಾನಮಂತ್ರಿ ಭೇಟಿ ನೀಡಿದರು. ಈ ವಸ್ತುಪ್ರದರ್ಶನವು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಗಳು, ಉಪಕ್ರಮಗಳು ಮತ್ತು ಉತ್ತಮ ರೂಢಿಗಳನ್ನು ಪ್ರದರ್ಶನಕ್ಕಿಟ್ಟಿದೆ. ಪ್ರಧಾನಿಯವರು ಇಲ್ಲಿ ಕೆಲವು ಫಲಾನುಭವಿಗಳು ಮತ್ತು ನಾವಿನ್ಯದಾರರೊಂದಿಗೆ ಸಂವಾದ ನಡೆಸಿದರು. 
ಪ್ರಧಾನಮಂತ್ರಿಯವರು ನಾನಾಜಿ ದೇಶ್ ಮುಖ್ ಅವರಿಗೆ ಮತ್ತು ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ನಾನಾಜಿ ದೇಶ್ ಮುಖ್ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು. 
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನದ ಬಗ್ಗೆ ನಿಗಾ ವಹಿಸಲು, ಸಂಸತ್ ಸದಸ್ಯರು ಮತ್ತು ಶಾಸಕರುಗಳಿಗಾಗಿ ರೂಪಿಸಲಾಗಿರುವ ಸ್ಮಾರ್ಟ್ ಆಡಳಿತದ ಸಾಧನವಾದ ಏಕೈಕ ಅಂತರ್ಜಾಲ ತಾಮ- ದಿಶಾ ಪೋರ್ಟಲ್ ಗೂ ಪ್ರಧಾನಿ ಚಾಲನೆ ನೀಡಿದರು. ಈ ದಿನಾಂಕದವರೆಗೆ 20 ಸಚಿವಾಲಯಗಳ 41 ಕಾರ್ಯಕ್ರಮ ಮತ್ತು ಯೋಜನೆಗಳ ಸಮಗ್ರ ದತ್ತಾಂಶವನ್ನು ಈ ಅಂತರ್ಜಾಲ ತಾಣದಲ್ಲಿ ಅಳವಡಿಸಲಾಗಿದೆ. 
ಇದೇ ಸಂದರ್ಭದಲ್ಲಿ ಅವರು ಗ್ರಾಮ ಸಂವಾದ – ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಭಾರತದ ಗ್ರಾಮೀಣ ಜನರ  ಸಬಲೀಕಣ ಮಾಡುವ ಮತ್ತು ಸೇವೆ ಮಾಡುವ ಜನ ಕೇಂದ್ರಿತ ಮೊಬೈಲ್ ಆಪ್ ಗೆ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಏಳು ಕಾರ್ಯಕ್ರಮಗಳನ್ನು ಪ್ರಸ್ತುತ ಈ ಆಪ್ ಒಳಗೊಂಡಿದೆ.
ಪ್ರಧಾನಮಂತ್ರಿಯವರು 11 ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಆರ್.ಎಸ್.ಇ.ಟಿ.ಐ) ಕಟ್ಟಡಗಳನ್ನು ಮತ್ತು ಐ.ಎ.ಆರ್.ಐ.ನಲ್ಲಿ ಸಸಿ ಫೆನೋಮಿಕ್ಸ್ ಸೌಲಭ್ಯವನ್ನು ಡಿಜಿಟಲ್ ಸಾಧನದ ಮೂಲಕ ಉದ್ಘಾಟಿಸಿದರು.
ಸ್ವಸಹಾಯ ಗುಂಪುಗಳು, ಪಂಚಾಯತಿಗಳು, ಜಲ ಸಂರಕ್ಷಣಾ ನಾವಿನ್ಯದಾರರು ಮತ್ತು ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿಗಳೂ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಿದರು. 
ಇಂದು ಇಬ್ಬರು ನಾಯಕರ ಜಯಂತಿಯ ದಿನವಾಗಿದೆ – ನಾನಾಜಿ ದೇಶ್ ಮುಖ್ ಮತ್ತು ಲೋಕ ನಾಯಕ ಜಯಪ್ರಕಾಶ್ ನಾರಾಯಣ್, ಈ ಇಬ್ಬರೂ ತಮ್ಮ ಜೀವನವನ್ನು ದೇಶದ ಒಳಿತಿಗಾಗಿ ಮುಡಿಪಾಗಿಟ್ಟಿದ್ದರು ಎಂದರು. 
ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಯುವ ಜನರ ನಡುವೆ ಹೆಚ್ಚು ಜನಪ್ರಿಯರಾಗಿದ್ದರು. ಮಹಾತ್ಮಾ ಗಾಂಧಿ ಅವರ ಕರೆಗೆ ಓಗೊಟ್ಟು  ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಡಾ. ಲೋಹಿಯಾ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಎಂದು  ಪ್ರಧಾನಮಂತ್ರಿಯವರು ಹೇಳಿದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಎಂದಿಗೂ ಅಧಿಕಾರದ ರಾಜಕಾಯದಲ್ಲಿ ಆಸಕ್ತಿ ಹೊಂದಿರಲಿಲ್ಲ, ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದರು ಎಂದರು. ನಾನಾಜಿ ದೇಶ್ ಮುಖ್ ಅವರು ಕೂಡ ನಮ್ಮ ಹಳ್ಳಿಗಳನ್ನು ಸ್ವಾವಲಂಬಿಗೊಳಿಸಲು ಮತ್ತು ಬಡತನ ಮುಕ್ತಗೊಳಿಸಲು ಹಾಗೂ ಗ್ರಾಮೀಣಾಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. 
ಅಭಿವೃದ್ಧಿಗೆ ಕೇವಲ ಉತ್ತಮ ಕಲ್ಪನೆಗಳನ್ನು ಇಟ್ಟುಕೊಂಡಿದ್ದರೆ ಸಾಲದು ಎಂದು ಪ್ರಧಾನಮಂತ್ರಿಯವರು  ಹೇಳಿದರು. ಉಪಕ್ರಮಗಳು ಕಾಲಮಿತಿಯೊಳಗೆ ಮುಗಿಯಬೇಕು ಮತ್ತು ಅಭಿವೃದ್ಧಿಯ ಫಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು. ಪ್ರಯತ್ನಗಳು ಯಾವಾಗಲೂ ಸಮಗ್ರವಾಗಿರಬೇಕು ಮತ್ತು ಫಲಶ್ರುತಿ (ಔಟ್ ಕಮ್) ಚಾಲಿತವಾಗಿರಬೇಕೇ ಹೊರತು ಫಲಿತಾಂಶ (ಔಟ್ ಪುಟ್) ಚಾಲಿತವಾಗಿರಬಾರದು ಎಂದು ಪ್ರಧಾನಿ ಹೇಳಿದರು.

ನಗರಗಳಲ್ಲಿ ದೊರಕುವ ಸೌಲಭ್ಯಗಳು ನಮ್ಮ ಹಳ್ಳಿಗಳಲ್ಲೂ ದೊರಕುವಂತಾಗಬೇಕು ಎಂದು ಪ್ರಧಾನಿ ಹೇಳಿದರು. ಪ್ರಜಾಪ್ರಭುತ್ವದ ನಿಜವಾದ ಸತ್ವ ಜನರ ಪಾಲ್ಗೊಳ್ಳುವಿಕೆ ಮತ್ತು ಗ್ರಾಮೀಣ ಹಾಗೂ ನಗರದ ಅಭಿವೃದ್ಧಿಯ ಓಟದಲ್ಲಿ ಜನರವನ್ನು ಒಗ್ಗೂಡಿಸುವುದರಲ್ಲಿದೆ ಎಂದು ಹೇಳಿದರು. 
ಇದಕ್ಕೆ ಸರ್ಕಾರದೊಂದಿಗೆ ನಿರಂತರವಾದ ಮಾತುಕತೆಯ ಅಗತ್ಯವಿದೆ ಎಂದು ಹೇಳಿದರು.

ನೈರ್ಮಲ್ಯದ ಸೌಲಭ್ಯಗಳ ಕೊರತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಓಟಕ್ಕೆ ಪ್ರತೀಕೂಲ ಪರಿಣಾಮ ಬೀರುತ್ತಿದೆ ಎಂದ ಪ್ರಧಾನಿ, ಇದಕ್ಕಾಗಿಯೇ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದರು. 
***