Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗ್ಪುರದ ಸ್ಮೃತಿ ಮಂದಿರಕ್ಕೆ ಪ್ರಧಾನಮಂತ್ರಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗ್ಪುರದ ಸ್ಮೃತಿ ಮಂದಿರಕ್ಕೆ ಇಂದು ಭೇಟಿ ನೀಡಿದರು. ಭೇಟಿಯ ವೇಳೆ ಅವರು ಡಾ.ಕೆ.ಬಿ.ಹೆಡಗೇವಾರ್ ಮತ್ತು ಶ್ರೀ.ಎಂ.ಎಸ್.ಗೋಲ್ವಾಲ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ನಾಗ್ಪುರದ ಸ್ಮೃತಿ ಮಂದಿರಕ್ಕೆ ಭೇಟಿ ನೀಡುವುದು ಒಂದು ವಿಶೇಷ ಅನುಭವ. 

ಪರಮಪೂಜ್ಯ ಡಾಕ್ಟರ್ ಸಾಹಬ್ ಅವರ ಜಯಂತಿಯೂ ಆದ ವರ್ಷ ಪ್ರತಿಪದ ದಿನವಾದ ಇಂದು ಭೇಟಿ ನೀಡಿರುವುದು ಇನ್ನಷ್ಟು ವಿಶೇಷಕರ. 

ನನ್ನಂತಹ ಅಸಂಖ್ಯಾತ ಜನರು ಪರಮ ಪೂಜ್ಯ ಡಾಕ್ಟರ್ ಸಾಹಬ್ ಮತ್ತು ಪೂಜ್ಯ ಗುರುಗಳ ಚಿಂತನೆಗಳಿಂದ ಸ್ಫೂರ್ತಿ ಮತ್ತು ಶಕ್ತಿಯನ್ನು ಪಡೆದಿದ್ದಾರೆ. ಬಲಿಷ್ಠ, ಸಮೃದ್ಧ ಮತ್ತು ಸಾಂಸ್ಕೃತಿಕ ಹೆಮ್ಮೆಯ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸಿದ  ಈ ಇಬ್ಬರು ಮಹಾನ್ ವ್ಯಕ್ತಿಗಳಿಗೆ ಗೌರವ ನಮನ ಸಲ್ಲಿಸಿ ಧನ್ಯನಾದೆ.”

 

 

*****