Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗರಿಕ ಸೇವಾ ದಿನದಂದು ನಾಗರಿಕ ಸೇವಕರನ್ನುದ್ದೇಶಿಸಿ ಭಾಷಣ, ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಿ

ನಾಗರಿಕ ಸೇವಾ ದಿನದಂದು ನಾಗರಿಕ ಸೇವಕರನ್ನುದ್ದೇಶಿಸಿ ಭಾಷಣ, ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು, 11ನೇ ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ನಾಗರಿಕ ಸೇವಕರನ್ನುದ್ದೇಶಿಸಿ ಭಾಷಣ ಮಾಡಿ, ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ದಿನವನ್ನು ‘ಪುನರ್ ಸಮರ್ಪಣಾ ದಿನ’ ಎಂದು ಬಣ್ಣಿಸಿದ ಪ್ರಧಾನಿಯವರು, ನಾಗರಿಕ ಸೇವಕರಿಗೆ ಅವರ ಶಕ್ತಿ ಮತ್ತು ಸಾಮರ್ಥ್ಯ, ಸವಾಲುಗಳು ಹಾಗೂ ಜವಾಬ್ದಾರಿಯ ಬಗ್ಗೆ ಚೆನ್ನಾಗಿಯೇ ಅರಿವಿದೆ ಎಂದರು.

ಎರಡು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ, ಇಂದು ಪರಿಸ್ಥಿತಿ ವಿಭಿನ್ನವಾಗಿದೆ, ಮತ್ತು ಮುಂದಿನ ಐದು ವರ್ಷಗಳಲ್ಲಿ ಅದು ಇದನ್ನೂ ಹೊರಹೊಮ್ಮುತ್ತದೆ. ಈ ಬಗ್ಗೆ ವಿಸ್ತಾರವಾಗಿ ಹೇಳಿದ ಪ್ರಧಾನಿ, ಈ ಹಿಂದೆ ಸರ್ಕಾರವೊಂದೇ ಸರಕು ಮತ್ತು ಸೇವೆಗಳ ಏಕೈಕ ಪೂರೈಕೆದಾರನಾಗಿತ್ತು, ಇದು ಒಬ್ಬರ ನ್ಯೂನತೆಯನ್ನು ಉಪೇಕ್ಷಿಸಲು ಅವಕಾಶ ನೀಡಿತ್ತು ಎಂದರು. ಇಂದು ವಿವಿಧ ಕ್ಷೇತ್ರಗಳಲ್ಲಿ ಪರ್ಯಾಯ ಲಭ್ಯವಿದ್ದು, ಸರ್ಕಾರದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಳವಾಗಿದೆ ಎಂದರು. ಇದು ಕಾರ್ಯ ಬಾಹುಳ್ಯದಲ್ಲಿ ಹೆಚ್ಚಳವಾಗಿಲ್ಲ, ಬದಲಾಗಿ ಸವಾಲುಗಳ ವಿಚಾರದಲ್ಲಿ ಆಗಿದೆ ಎಂದರು.

ಸ್ಪರ್ಧೆಯ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಿ, ಇದು ಗುಣಾತ್ಮಕ ಬದಲಾವಣೆ ತಂದಿದೆ ಎಂದರು. ಶೀಘ್ರವೇ ನಿಯಂತ್ರಕತೆಯಿಂದ ಶಕ್ತಿಗೊಳಿಸುವತ್ತ ಸರ್ಕಾರದ ವರ್ತನೆ ಬದಲಾಗಲಿದೆ, ಈ ಸವಾಲನ್ನು ನಾವು ಎಷ್ಟು ತ್ವರಿತಗೊಳಿಸುತ್ತೇವೋ ಅಷ್ಟು ಅದು ಅವಕಾಶವಾಗಿ ಪರಿವರ್ತನೆ ಆಗುತ್ತದೆ ಎಂದರು. ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದ ಅನುಪಸ್ಥಿತಿಯನ್ನು ಬೇಕಾದರೂ ಗ್ರಹಿಸಬಹುದು, ಆದರೆ ಕಾರ್ಯಕ್ಷೇತ್ರದಲ್ಲಿ ಅದರ ಅಸ್ತಿತ್ವ ಒಂದು ಹೊರೆಯಾಗಬಾರದು ಎಂದು ಪ್ರಧಾನ ಮಂತ್ರಿ ಹೇಳಿದರು.ಅಂಥ ವ್ಯವಸ್ಥೆಯ ಬಗ್ಗೆ ಯತ್ನಿಸುವಂತೆ ಅವರು ನಾಗರಿಕ ಸೇವಕರಿಗೆ ಕರೆ ನೀಡಿದರು.

ನಾಗರಿಕ ಸೇವಾ ದಿನದ ಪ್ರಶಸ್ತಿಗಳ ಅರ್ಜಿಗಳಲ್ಲಿ ಭಾರಿ ಹೆಚ್ಚಳವಾಗಿದೆ, ಕಳೆದ ವರ್ಷ 100ಕ್ಕಿಂತ ಕಡಿಮೆ ಇದ್ದದ್ದು ಈ ವರ್ಷ 500 ಆಗಿದೆ ಎಂದು ಪ್ರಧಾನಮಂತ್ರಿಯವರು, ಈಗ ಗುಣಮಟ್ಟ ಸುಧಾರಣೆಯತ್ತ ಗಮನ ಹರಿದಿದ್ದು, ಔನ್ನತ್ಯ ಸಾಧನೆ ಹವ್ಯಾಸವಾಗಿದೆ ಎಂದರು.

ತಮ್ಮ ಅನುಭವ ಯಾವುದೇ ಕಾರಣಕ್ಕೂ ಹೊರೆಯಾಗದ ರೀತಿಯಲ್ಲಿ ಖಾತ್ರಿ ಪಡಿಸಿಕೊಳ್ಳುವಂತೆ, ಅದು ಕಿರಿಯ ಅಧಿಕಾರಿಗಳಿಗೆ ನಾವಿನ್ಯತೆಯ ಹೂರಣವಾಗುವಂತೆ ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿ ಮನವಿ ಮಾಡಿದರು.

ಅನಾಮಿಕ ನಾಗರಿಕ ಸೇವೆಯಲ್ಲಿನ ಬಹುದೊಡ್ಡ ಶಕ್ತಿಯಾಗಿದೆ ಎಂದು ಪ್ರಧಾನಿ ಶ್ರೀ. ನರೇಂದ್ರ ಮೋದಿ ಹೇಳಿದರು. ಸಾಮಾಜಿಕ ತಾಣದ ಬಳಕೆ ಈ ಬಲವನ್ನು ಕಡಿಮೆ ಮಾಡುವಂತಾಗಬಾರದು, ಮೊಬೈಲ್ ಆಡಳಿತ ಮತ್ತು ಇ ಆಡಳಿತ ಜನರಿಗೆ ಸರ್ಕಾರದ ಸೌಲಭ್ಯ ಮತ್ತು ಯೋಜನೆ ದೊರಕಲು ಸಂಪರ್ಕ ಸಾಧನವಾಗಬೇಕು ಎಂದರು.

ಸಾಧಾರಣೆ, ಸಾಧನೆ ಮತ್ತು ಪರಿವರ್ತನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು, ಆದರೆ, ಇದರ ಸಾಧನೆಯ ಭಾಗ ರೂಪುಗೊಳ್ಳುವುದೇ ನಾಗರಿಕಸೇವಕರಿಂದ ಹಾಗೂ ಜನರ ಪಾಲ್ಗೊಳ್ಳುವಿಕೆಯಿಂದ ಇದರ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.

ನಾಗರಿಕ ಸೇವಕರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಬೇಕು ಮತ್ತು ಅದು ಅವರ ನಿರ್ಧಾರಕ್ಕೆ ಸ್ಪರ್ಶಮಣಿಯಾಗಬೇಕು ಎಂದರು.

2022ನೇ ವರ್ಷದಲ್ಲಿ ನಾವು ಸ್ವಾತಂತ್ರ್ಯೋತ್ಸವದ 75ವರ್ಷಾಚರಣೆ ಮಾಡಲಿದ್ದೇವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ನಾಗರಿಕ ಸೇವಕರು ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಲು ವೇಗವರ್ಧಕ ಏಜೆಂಟರಂತೆ ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದರು.

***

AKT/HS