ಜನರ ಬದುಕನ್ನು ಮತ್ತಷ್ಟು ಸುಲಭಗೊಳಿಸಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಿಷಿಕೇಶದ ಏಮ್ಸ್ ನಿಂದ ಸುಮಾರು 40 ಕಿ.ಮೀ ವಾಯುಮಾರ್ಗ ದೂರದಲ್ಲಿರುವ ಟೆಹ್ರಿ ಗರ್ವಾಲ್‌ನ ಜಿಲ್ಲಾಸ್ಪತ್ರೆಗೆ 2 ಕೆಜಿ ತೂಕದ ಟಿಬಿ ಔಷಧಿಗಳನ್ನು 30 ನಿಮಿಷಗಳಲ್ಲಿ ಸಾಗಿಸಲು ಬಳಸಲಾದ ಡ್ರೋನ್‌ಗಳ ಪ್ರಾಯೋಗಿಕ ಚಾಲನೆ ನಡೆಸಿರುವ ರಿಷಿಕೇಶದ ಏಮ್ಸ್ ನ ಬಗ್ಗೆ ಆರೋಗ್ಯ ಸಚಿವಾಲಯದ ಮಾಡಿರುವ ಟ್ವೀಟ್ ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
“ಜನರಿಗೆ ಮತ್ತಷ್ಟು ‘ಜೀವನ ಸುಲಭಗೊಳಿಸಲು’ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.” ಎಂದು ಹೇಳಿದ್ದಾರೆ.
****
India attaches great importance to leveraging technology to further ‘Ease of Living’ for people. https://t.co/AxYBj2TW1M
— Narendra Modi (@narendramodi) February 17, 2023