Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗಪುರ್, ಮಹಾರಾಷ್ಟ್ರದಲ್ಲಿ ಸರ್ಕಾರದ ವಿಭಿನ್ನ ಯೋಜನೆಗಳಿಗೆ ಚಾಲನೆನೀಡಿದ ನಂತರ ಫ್ರಧಾನಮಂತ್ರಿಗಳ ಭಾಷಣ

ನಾಗಪುರ್, ಮಹಾರಾಷ್ಟ್ರದಲ್ಲಿ ಸರ್ಕಾರದ ವಿಭಿನ್ನ ಯೋಜನೆಗಳಿಗೆ ಚಾಲನೆನೀಡಿದ ನಂತರ ಫ್ರಧಾನಮಂತ್ರಿಗಳ ಭಾಷಣ

ನಾಗಪುರ್, ಮಹಾರಾಷ್ಟ್ರದಲ್ಲಿ ಸರ್ಕಾರದ ವಿಭಿನ್ನ ಯೋಜನೆಗಳಿಗೆ ಚಾಲನೆನೀಡಿದ ನಂತರ ಫ್ರಧಾನಮಂತ್ರಿಗಳ ಭಾಷಣ

ನಾಗಪುರ್, ಮಹಾರಾಷ್ಟ್ರದಲ್ಲಿ ಸರ್ಕಾರದ ವಿಭಿನ್ನ ಯೋಜನೆಗಳಿಗೆ ಚಾಲನೆನೀಡಿದ ನಂತರ ಫ್ರಧಾನಮಂತ್ರಿಗಳ ಭಾಷಣ


ಧರ್ಮಚಕ್ರವನ್ನು ಪರಿವರ್ತಿಸಿದಂತೆ ಕೆಲಸಮಾಡಿದ, ಡಾ. ಅಂಬೇಡ್ಕರರು ಆಟವಾಡಿದ ಈ ನೆಲಕ್ಕೆ ನನ್ನ ನಮನ.ಕಾಶಿ ಪ್ರಾಚೀನ ನಗರಿ ಹೌದು ಆದರೆ ಅದು ನಾಗಪುರ್ ಆಗಬಲ್ಲದೇ?

ಇಂದು ನನ್ನ ಬಳಿ ಎಷ್ಟು ದೊಡ್ಡ ಲಿಸ್ಟ್ ಇದೆಯೆಂದರೆ ನಾನು ಇಲ್ಲಿರುವ ಎಲ್ಲರ ಹೆಸರುಗಳನ್ನೂ ಹೇಳುತ್ತಿಲ್ಲ , ಇದರಲ್ಲಿರುವ ಸಾಕಷ್ಟು ಮಂದಿ ಈಗಾಗಲೇ ಇಲ್ಲಿ ನಿಂತು ಮಾತಾಡಿದ್ದಾರೆ. ಅವರುಗಳ ಬಗ್ಗೆ ನಿಮಗೆ ತಿಳಿದಿದೆ.

ಒಮ್ಮೆಗೇ ಇಷ್ಟೊಂದು ಬೃಹತ್ ಪ್ರಮಾಣದ ಕಾರ್ಯಕ್ರಮಗಳು ನಾಗಪುರದ ನೆಲದಲ್ಲಿ ಆರಂಭವಾಗುತ್ತಿವೆ. ಇಂದು ಏಪ್ರಿಲ್ 14, ಬಾಬಾ ಸಾಹೇಬ್ ಅಂಬೇಡ್ಕರರ ಜನ್ಮದಿನದ ಪರಮಪಾವನ ಪ್ರೇರಕ ಸಂದರ್ಭ. ಈ ಮುಂಜಾನೆ ಇಂತಹ ಪವಿತ್ರ ದೀಕ್ಷಾಭೂಮಿಗೆ ಆಗಮಿಸಿ ಈ ಪವಿತ್ರಭೂಮಿಗೆ ನಮಿಸುವ ಅವಕಾಶ ಕೊಡಿ ಬಂದಿರುವುದು ನನ್ನ ಸೌಭಾಗ್ಯ. ಹೊಸ ಹುರುಪು, ಹೊಸ ಉತ್ಸಾಹಗಳಿಂದ ನಾನು ನಿಮ್ಮೆಲ್ಲರ ನಡುವೆ ಬಂದಿದ್ದೇನೆ.

ಈ ದೇಶದ ದಲಿತರು, ಪೀಡಿತ ಶೋಷಿತರು, ವಂಚಿತರು, ಹಳ್ಳಿಯವರು, ಬಡವ,ರೈತ ಮುಂತಾದ ಪ್ರತಿಯೊಬ್ಬರೂ ಸ್ವತಂತ್ರ್ಯ ಭಾರತದ ತಮ್ಮ ಜೀವನದಲ್ಲಿ ಕಂಡ ಕನಸುಗಳೇನಾಗುವವು? ಸ್ವತಂತ್ರ್ಯ ಭಾರತದಲ್ಲಿ ಈ ಜನರಬಗೆಗೂ ಹೇಳು-ಕೇಳುವವರಿರುವರೇ ? ಈಎಲ್ಲ ಪ್ರಶ್ನೆಗಳ ಉತ್ತರವನ್ನು ಡಾ. ಭೀಮರಾವ್ ಅಂಬೇಡ್ಕರರು ಸಂವಿದಾನದ ಮೂಲಕ ದೇಶವಾಸಿಗಳಿಗೆ ಗ್ಯಾರಂಟಿಯೊಡನೆ ನೀಡಿದ್ದರು. ಅದರ ಪರಿಣಾಮಸ್ವರೂಪವಾಗಿ ಸಂವೈಧಾನಿಕ ವ್ಯವಸ್ಥೆಯ ಕಾರಣದಿಂದಲೇ ನಮ್ಮ ದೇಶದ ಯಾವುದೇ ವರ್ಗದ ವ್ಯಕ್ತಿಗೂ ಏನಾದರೂ ಮಾಡಲು ಸುಲಭವಾಗಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಅಂತಹುವೇ ಅವರನ್ನು ತಮ್ಮ ಕನಸುಗಳನ್ನು ನನಸಾಗಿಸಲು ಉಲ್ಲಾಸ, ಉತ್ಸಾಹಗಳಿಂದ ಮನೋಬಲದಿಂದ ಕೆಲಸ ಮಾಡಲು ಪ್ರೇರೇಪಿಸುತ್ತವೆ.

ವ್ಯಕ್ತಿಗತರೂಪದಿಂದ ನನ್ನ ಜೀವನದಿಂದ ನನ್ನ ಅನುಭವಕ್ಕೆ ಬಂದಿರುವುದೆಂದರೆ ಅಬಾವದ ನಡುವೆ ಜನಿಸಿ ಯಾವುದೇರೀತಿಯ ಪ್ರಭಾವಗಳಿಗೊಳಗಾಗದೆ ಅಬಾವದಲ್ಲಿಯೆ ಬದುಕುತ್ತಾ ಪ್ರಭಾವೀ ರೂಪದಲ್ಲಿ ಜೀವನ ಯಾತ್ರೆಯನ್ನು ಸಫಲತಾಪೂರ್ವಕವಾಗಿ ಮುಂದುವರೆಸಬಹುದು, ಈ ಪ್ರೇರಣೆ ದೊರೆಯುತ್ತಿರುವುದು ಅಂಬೇಡ್ಕರ ರಾವ್ ರವರಿಂದ. ನನ್ನಬಳಿ ಏನೂ ಇಲ್ಲವೆಂದು ಅಳಬಾರದು, ಎಲ್ಲವೂ ಇದೆಯೆಂದು ಬೀಗಬಾರದು, ಸಂತುಲಿತ ಜೀವನವು, ಅದುಮಿಟ್ಟ-ತುಳಿತಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಶಕ್ತಿಯಾಗಿಬಿಡುತ್ತದ ಮತ್ತು ಈ ಶಕ್ತಿ ನೀಡುವ ಕಾರ್ಯವನ್ನು ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ಜೀವನದ ಮೂಲಕ ನೀಡಿದ್ದಾರೆ.

ಕೆಲವೊಮ್ಮೆ ಅವಮಾನ,ಹೊಡೆತ,ತಿರಸ್ಕಾರ ಇವು ಯಾವುದೇ ವ್ಯಕ್ತಿಯ ದೈನಂದಿನ ಜೀವನದ ಭಾಗವಾಗಿಬಿಟ್ಟಿರುತ್ತವೆ. ಆಗ ಆ ವ್ಯಕ್ತಿ ಸಾಮಾನ್ಯ ಅಲ್ಪ ಮನಸ್ಸಿನವನಾದರೆ ಮನಸ್ಸಿನಲ್ಲಿ ಹಾಗೂ ತಲೆಯಲ್ಲಿ ಕಠೋರತೆ ತುಂಬಿ ಬಿಡುತ್ತದೆ. ನನಗೆ ಅವಕಾಶಸಿಕ್ಕಾಗ ಇವನಿಗೆ ತೋರಿಸುತ್ತೇನೆ ಎಂದುಕೊಳ್ಳುತ್ತಿರುತ್ತಾನೆ. ನನಗೆ ಈರೀತಿ ಆಯಿತು, ಶಾಲೆಯಲ್ಲಿ ಈ ರೀತಿ ಆಗಿತ್ತು, ಕೆಲಸಕ್ಕೆ ಹೋದಾಗ ಹೀಗಾಗಿತ್ತು,ಎಂದುಚಿಂತಿಸುತ್ತಾ ಹಠ ಸಾಧಿಸುತ್ತಾ ಇರುತ್ತಾನೆ. ಭೀಮರಾವ್ ಅಂಬೇಡ್ಕರರೂ ಸಹ ಕೆಟ್ಟ ಅನುಭವಗಳನ್ನು ಅನುಭವಿಸಿದ್ದರು.ಇಂಥದ್ದೆಷ್ಟೋ ತಿರಸ್ಕಾರವನ್ನುಂಡಿದ್ದರು, ಆದರೆ ತಮ್ಮ ಜೀವನದಲ್ಲಿ ಅವಕಾಶ ದೊರೆತಾಗ ಎಳ್ಳಷ್ಟೂ ಕಠೋರತೆ ಹೊರಹೊಮ್ಮದಂತೆ ನೋಡಿಕೊಂಡರು. ಸೇಡಿನ ಭಾವ ಸಂವಿಧಾನದಲ್ಲಾಗಲೀ, ಅವರ ಮಾತಿನಲ್ಲಾಗಲೀ ,ಅವರ ಅಧಿಕಾರ ಕ್ಷೇತ್ರದಲ್ಲಾಗಲೀ ಪ್ರಕಟಗೊಳ್ಳಲಿಲ್ಲ. ಇಂಥ ಸಂದರ್ಭಗಳಲ್ಲೇ ಮನುಷ್ಯನ ಹಿರಿಮೆಯ ಅರಿವಾಗುವುದು. ನಾವು ಪರಶಿವನ ಮಹಾತ್ಮೆಯ ಬಗೆಗೆ ಕೇಳುವಾಗ ವಿಷ ಕುಡಿದಿದ್ದನೆಂಬ ಕತೆಯನ್ನು ಕೇಳಿದ್ದೇವೆ.ಹೀಗೇ ನಮ್ಮ ಬಾಬ ಸಾಹೇಬ ಅಂಬೇಡ್ಕರರೂ ಸಹಜೀವನದ ಪ್ರತಿ ಹಂತದಲ್ಲೂ, ಪ್ರತಿ ಕ್ಷಣದಲ್ಲೂ ವಿಷವನ್ನುಂಡು ನಮ್ಮ ಮೇಲೆ ಅಮೃತದ ಮಳೆ ಸುರಿಸಿದ್ದಾರೆ.

ಈ ಕಾರಣದಿಂದಲೇ ಇಂದು ಆ ಮಹಾಪುರುಷನ ಜನ್ಮದಿನದಂದು ಅದೂ ಅವರು ಹುಟ್ಟಿದ, ಹಾಗೂ ಆವರ ದೀಕ್ಷಾಭೂಮಿಗೆ ನಮಿಸುತ್ತಾ, ದೇಶದ ಪಾದಪಂಕಜಗಳಿಗ ಒಂದು ಹೊಸ ವ್ಯವಸ್ಥಯನ್ನು ಅರ್ಪಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.ಇಂದು ಅನೇಕ ಯೋಜನೆಗಳಿಗೆ ಚಾಲನೆನೀಡಲಾಗುತ್ತಿದೆ,ಹೊಸ ಭವನಗಳನ್ನು ಉದ್ಘಾಟಿಸಲಾಗುತ್ತಿದೆ. ಸುಮಾರು ಎರಡು ಸಾವಿರ ಮೆಗಾವ್ಯಾಟ್ ವಿಧ್ಯುತ್ ಕಾರ್ಖಾನೆಯನ್ನು ಲೋಕಾರ್ಪಣೆ ಮಾಡಲಾಗಿದೆ. ವಿಧ್ಯುತ್ಚ್ಛಕ್ತಿ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಿಧ್ಯುತ್ ಇಲ್ಲದೆ ವಿಕಾಸದ ಯಾವುದೇ ಕನಸು ನನಸಾಗುವುದು ಅಸಾಧ್ಯ. 21ನೇ ಶತಮಾನದಲ್ಲಿ ಒಂದು ರೀತಿಯಲ್ಲಿ ವಿಧ್ಯುತ್ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿಬಿಟ್ಟಿದೆ.ಇದು ಲಿಖಿತವಲ್ಲದಿದ್ದರೂ ಹಕ್ಕಾಗಿರುವುದಂತೂ ನಿಜ. ದೇಶವನ್ನು 21ನೇ ಶತಮಾನದ ಪ್ರಗತಿಯೆತ್ತರಕ್ಕೆ ಕೊಂಡಯ್ಯ ಬೇಕಾದರೆ ಭಾರತವನ್ನು ಆಧುನಿಕ ಭಾರತದ ರೂಪದಲ್ಲಿ ನೋಡಬೇಕಾದಾಗ ವಿಧ್ಯುತ್ ಮೊಟ್ಟಮೊದಲ ಆದ್ಯತೆ. ಒಂದುಕಡೆ ಪರಿಸರದ ಚಿಂತೆ ಥರ್ಮಲ್ಪವರ್ ಅನ್ನು ಬಯಸಿದರೆ ಮತ್ತೊಂದುಕಡೆ ವಿಕಾಸಶೀಲ ದೇಶಗಳಿಗೆ ವಿಧ್ಯುತನ್ನು ಬಿಟ್ಟರೆ ಬೇರೆ ಆಸರೆಇಲ್ಲ ಎನ್ನುವ ಭಾವನೆಕೂಡ ಇದೆ.

ವಿಶ್ವಮಟ್ಟದಲ್ಲಿ ಇಂತಹ ಮಹಾ ಘರ್ಷಣೆಯ ನಡುವೆ ದಾರಿ ಹುಡುಕಬೇಕಾಗಿ ಬಂದಾಗ ಭಾರತವು ನಾವು ಇಡೀ ವಿಶ್ವವನ್ನೇ ಕುಟುಂಬನವೆನ್ನುವ ಜನ, ಸಂಪೂರ್ಣ ಬ್ರಹ್ಮಾಂಡವೇ ನಮ್ಮದೆನ್ನುಕೊಳ್ಳುವ ಮಂದಿ,ನಮ್ಮಿಂದ ಯಾವುದೇ ರೀತಿಯ ತಪ್ಪು ಆಗಲೇಬಾರದು,ಭವಿಷ್ಯದಲ್ಲಿ ಸಂಕಟಕ್ಕೊಳಗಾಗಬಾರದೆಂದು ಭಾರತವು 175 ಮೆಗಾವ್ಯಾಟ್ ನವೀಕರಿಸಬಹುದಾದ ವಿಧ್ಯುತನ ಕನಸು ಕಾಣುತ್ತಿದೆ. ಅದು ಸೌರಶಕ್ತಿಯಿರ ಬಹುದು ಅಥವಾ ವಾಯುಶಕ್ತಿ, ಜಲಶಕ್ತಿಯ ಹೈಡ್ರೋ ಪ್ರಾಜೆಕ್ಟಗಳಿರಬಹುದು ,ನಿತಿನ್ ರವರು ಹೆಮ್ಮೆಯಿಂದ ಹೇಳುತ್ತಿದ್ದುದನ್ನು ನಾನು ಗಮನಿಸಿದೆ, ಅವರು ನಾಗಪುರದ ಜನರಿಗೆ ಕೊಳಚೆ ನೀರಿನ್ನು ವಿಧ್ಯುತ್ ಉತ್ಪಾದಿಸುವ ಕೆಲಸಕ್ಕಾಗಿ ಬಳಸಿ ಅದರ ಪುನರ್ ಬಳಕೆ ಮಾಡಲಾಗುವುದೆಂದು ಹೇಳುತ್ತಿದ್ದರು. ಪರಿಸರಕ್ಕೆ ಅನುಕೂಲವಾಗುವಂತಹ ಇಂಥ ಹೊಸರೀತಿಯ ಮುನ್ನಡೆಗೆ ನಾನು ನಾಗಪುರವನ್ನು ಅಭಿನಂದಿಸುತ್ತೇನೆ. ದೇಶದ ಇತರ ಭಾಗಗಳಲ್ಲೂ ಶೂನ್ಯ ತ್ಯಾಜ್ಯದ ಭಾವನೆ ಬೆಳೆಯುತ್ತಿದೆ.

ಇಂದು ಇಲ್ಲಿ ಗೃಹನಿರ್ಮಾಣದ ಬೃಹತ್ ಕಾರ್ಯಕ್ರಮವೂಂದನ್ನೂ ಸಹ ಕೈಗೆತ್ತಿ ಕೊಳ್ಳಲಾಗಿದೆ, ಅದರ ಆರಂಭ ಸಹ ಆಗಿದೆ. 2022ಕ್ಕೆ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುತ್ತದೆ. ಒಂದೇಒಂದು ಕ್ಷಣ ನಾವು 75 ವರ್ಷ ಹಿಂದಿನ ಜೀವನ ಜೀವಿಸಲು ಪ್ರಯತ್ನಸೋಣ. ಕಲ್ಪನೆ ಮಾಡಿಕೊಳ್ಳಿ. 30,40,50ರ ವರ್ಷಗಳ ಹಿಂದೆ ಜನ ದೇಶಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟಿದ್ದರು. ಹಿಂದೂಸ್ಥಾನದ ತ್ರಿವರ್ಣ ಧ್ವಜ ಹಾರಿಸಲಿಕ್ಕಾಗಿ ನೇಣುಗಂಬವೇರಲು ಸಿದ್ಧರಾಗಿದ್ದರು.

ತಾಯಿ ಭಾರತಿಯನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಳನ್ನಾಗಿಸಲು ತಮ್ಮ ಯೌವ್ವನವನ್ನು ಜೈಲಿನಲ್ಲಿ ಕಳೆದರು. ನಗುನಗುತ್ತಾ ದೇಶಕ್ಕಾಗಿ ಸಾಯುವವರ ಸಾಲು ಎಂದೂ ಕೊನೆಗೊಳ್ಳಲಿಲ್ಲ. ನೇಣು ಹಗ್ಗಗಳ ಕೊರತೆಯಾಗಿರಬಹುದೇ ಹೊರೆತು ಸಾಯುವವರ, ದೇಶಕ್ಕಾಗಿ ಆತ್ಮಾಹುತಿ ನೀಡುವವರ ಸಂಖ್ಯೆ ಕಡಿಮೆಯಾಗಲೇ ಇಲ್ಲ. ಅಸಂಖ್ಯ ಜನರ ಬಲಿದಾನದ ನಂತರ ನಮ್ಮ ತಾಯಿ ಭಾರತಿಯು ಸ್ವಾತಂತ್ರಳಾದಳು. ಸ್ವಾತಂತ್ರ್ಯವೀರರಿಗೂ ಭಾರತ ಹೇಗಿರಬೇಕೆಂಬ ಒಂದು ಕನಸು ಒಂದು ಪರಿಕಲ್ಪನೆ ಇತ್ತು. ಆದರೆ ಆವರಿಗೆ ಸ್ವಾತಂತ್ರ್ಯ ಭಾರತದಲ್ಲಿ ಉಸಿರಾಡುವ ಸೌಭಾಗ್ಯ ಪ್ರಾಪ್ತಿಯಾಗಲಿಲ್ಲ. ನಮಗೆ ಆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ, ದೇಶಕ್ಕಾಗಿ ಆತ್ಮಾಹುತಿನೀಡುವ, ಸಾಯುವ ಸೌಭಾಗ್ಯ ಪ್ರಾಪ್ತಿಯಾಗಲಿಲ್ಲ, ಆದರೆ ದೇಶಕ್ಕಾಗಿ ಬದುಕುವ ಸೌಭಾಗ್ಯ ದೊರೆತಿದೆ.

2022ಕ್ಕೆ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುತ್ತದೆ. ನಾವು 2017ರಲ್ಲಿ ನಿಂತಿದ್ದೇವೆ. ನಮ್ಮ ಬಳಿ ಬರೋಬ್ಬರಿ ಐದು ವರ್ಷಗಳಿವೆ. ಒಂದುಕಾಲು ಕೋಟಿ ದೇಶವಾಸಿಗಳು, ನಮಗೆಲ್ಲರಿಗೂ ಸ್ವಾತಂತ್ರ್ಯ ದೊರಕಿಸಿಕೊಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮಹಾಪುರುಷರ ಕನಸಿನ ಭಾರತ ನಿರ್ಮಾಣಕ್ಕಾಗಿ ನಾನೂ ಏನಾದರೂ ಮಾಡುವೆ, ಮಾಡಿ ತೋರಿಸುವೆನು, ಸರಿದಾರಿಯಲ್ಲಿ ಗಿರಿ ಮುಟ್ಟುವೆನು ಎಂದು ಪಣತೊಟ್ಟರೆ 2022ರ ಆಗಮನದ ವೇಳೆಗೆ ಸಾಧ್ಯವಾಗೇ ಆಗುತ್ತದೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಅದರಲ್ಲೊಂದು ಕನಸು 2022ಕ್ಕೆ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗುವಾಗ ನನ್ನ ದೇಶದ ಕಡುಬಡವನ ಬಳಿಯೂ ಅವನದ್ದೇ ಆದ ಒಂದು ಮನೆಯಿರಬೇಕು. ಈ ದೇಶದಲ್ಲಿ ತನ್ನದಾದ ಮನೆಯಿರದ, ತನ್ನದೇ ಸೂರಿರದ ಯಾವ ಬಡವನೂ ಇರಬಾರದು. ಎಲ್ಲರಿಗೂ ಮನೆಯಿರಬೇಕು. ಆ ಮನೆಯಲ್ಲಿ ವಿಧ್ಯುತ್ ಇರಬೇಕು,ನೀರಿನ ಸೌಲಭ್ಯವಿರಬೇಕು,ಒಲೆ ಅಂದರೆ ಗ್ಯಾಸ್ ಒಲೆಯಿರಬೇಕು,ಸಮೀಪದಲ್ಲಿ ಮಕ್ಕಳಿಗಾಗಿ ಶಾಲೆ ಯಿರಬೇಕು,ಹಿರಿಯರಿಗಾಗಿ ಸಮೀಪದಲ್ಲಿ ಆಸ್ಪತ್ರೆಯಿರಬೇಕು, ಇಂತಹಾ ಹಿಂದೂಸ್ಥಾನದ ಕನಸನ್ನು ನಾವೇಕೆ ಕಾಣಬಾರದು? ನಾವು ಒಂದುಕಾಲು ಕೋಟಿ ದೇಶವಾಸಿಗಳು ಸೇರಿ ನಮ್ಮ ದೇಶದ ಬಡವನ ಕಣ್ಣೀರನ್ನು ಒರೆಸಲಾರೆವೇ? ಭೀಮರಾವ್ ಅಂಬೇಡ್ಕರರು ಯಾವ ಕನಸು ಕಂಡು ಸಂವಿಧಾನದ ರಚನೆಮಾಡಿದರೋ ಆ ಸಂವಿಧಾನವನ್ನು ಬದುಕಿ ತೋರಿಸುವ ಅವಕಾಶ ನಮಗೆ ದೊರೆತಿದೆ. ಬನ್ನಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ, ಏನಾದರೂ ಸಾಧಿಸಿ ತೋರಿಸುವೆವೆಂಬ ನಿರ್ಧಾರದಿಂದ ಮುನ್ನಡೆಯೋಣ. ಈ ಕನಸು ನನಸಾಗುವುದೆಂಬ ನಂಬಿಕೆ ನನಗಿದೆ.

ಭಾರತ ಸರ್ಕಾರದ ಯೋಜನೆಗಳ ಜೊತೆ ಹೆಜ್ಜೆಗೂಡಿಸಿ ಮುನ್ನಡೆಯುತ್ತಿರುವ ಮಹಾರಾಷ್ಟ್ರಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಬೃಹತ್ ಪ್ರಮಾಣದಲ್ಲಿ ಇಲ್ಲಿ ಗೃಹನಿರ್ಮಾಣದ ಬೃಹತ್ ಕಾರ್ಯಕ್ರಮವೂಂದನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಜನರಿಗೆ ಕೂಲಿ ಕೆಲಸ ಹೆಚ್ಚು ಪ್ರಮಾಣದಲ್ಲಿ ದೊರೆಯಲಿದೆ. ಬಡವನಿಗೆ ಮನೆ ಸಿಗುತ್ತೆ, ಮನೆ ಕಟ್ಟುವವನಿಗೆ ಕೂಲಿ ಕೆಲಸ ಸಿಗುತ್ತೆ, ಸಿಮೆಂಟ್ ಮಾಡುವವನಿಗೆ ಕೆಲಸ ಸಿಗುತ್ತೆ, ಕಬ್ಬಿಣದವನಿಗೆ ಕೆಲಸ ಸಿಗುತ್ತೆ,ಪ್ರತಿಯೊಬ್ಬನಿಗೂ ಕೆಲಸ ಸಿಗುತ್ತೆ. ಒಂದುರೀತಿಯಲ್ಲಿ ಕೆಲಸ ಸೃಷ್ಟಿಸುವ ಸಾಧ್ಯತೆಯೂ ಹೆಚ್ಚಾಗಿದೆ.ಹೀಗೆ ಹಿಂದೂಸ್ಥಾನದ ಮೂಲೆ- ಮೂಲೆಯಲ್ಲೂ ತಂತಮ್ಮದೇ ಆದ ರೀತಿಯಲ್ಲಿ ಮನೆ ಕಟ್ಟುವ ಒಂದು ದೊಡ್ಡ ಕ್ರಾಂತಿ ನಡೆಯುತ್ತಿದೆ ಎನ್ನಬಹುದು. ಇಂದು ಇದರ ಪ್ರಾರಂಭ ಕೂಡ ನನ್ನ ಕೈಯಿಂದ ಆಗುತ್ತಿದೆ.

21ನೇ ಶತಮಾನ ಜ್ಞಾನದ ಶತಮಾನ. ಯಾವಾಗ್ಯಾವಾಗ ಮಾನವಜಾತಿಯು ಜ್ಞಾನಯುಗಕ್ಕೆ ಕಾಲಿಡುತ್ತೋ ಆಗೆಲ್ಲಾ ಹಿಂದೂಸ್ಥಾನ ಮುಂದಾಳತ್ವ ವಹಿಸಿದೆ. 21ನೇ ಶತಮಾನ ಜ್ಞಾನದ ಯುಗ. ಭಾರತಕ್ಕೆ ಮುಂದಾಳತ್ವ ವಹಿಸಲು ಒಳ್ಳೆಯ ಅವಕಾಶ.ಇಂದು ಇಲ್ಲಿ ಒಟ್ಟೊಟ್ಟಿಗೇ IIT, IIM.AIMS ಒಂದಕ್ಕಿಂತ ಒಂದಾದ ವಿದ್ಯಾ ಸಂಸ್ಥೆಗಳು, ಇವೆಲ್ಲಾ ಹೊಸ ಬಿಲ್ಡಿಂಗುಗಳಲ್ಲಿ ನಡೆಯಲಿವೆ. ಮಹಾರಾಷ್ಟ್ರದ ಹಾಗೂ ದೇಶದ ಯುವಕರಿಗೆ ತಂತಮ್ಮ ಭವಿಷ್ಯ ಕಟ್ಟಿಕೊಳ್ಳಲು ಹಾಗೂ ಆಧುನಿಕ ಭಾರತ ಕಟ್ಟಲು ಈ ವಿದ್ಯಾ ಸಂಸ್ಥೆಗಳ ಮೂಲಕ ಅವಕಾಶಗಳು ದೊರೆಯಲಿವೆ. ಯುವಪೀಳಿಗೆಗೆ ನನ್ನ ಅನೇಕಾನೇಕ ಹಾರೈಕೆಗಳು. ಈ ವಿದ್ಯಾ ಸಂಸ್ಥೆಗಳನ್ನೆಲ್ಲಾ ನಾನು ಯುವಪೀಳಿಗೆಗೆಸಮರ್ಪಿಸುತ್ತಿದ್ದೇನೆ, ಅವರುಗಳಿಗೆಲ್ಲಾ ನನ್ನ ಹಾರ್ದಿಕ ಶುಭಾಶಯಗಳು.

ಈಗ ಕೆಲ ದಿನಗಳಿಂದ ನಾವು ಡಿಜಿಟಲ್ ಇಂಡಿಯಾ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ಬಹಳ ವ್ಯಾಪಕರೂಪದಲ್ಲಿ ಕೆಲಸ ಮಾಡುತ್ತಿದ್ದೇವೆ.ಅದರ ಒಂದು ಅಂಗ ಡಿಜಿ-ಧನ್, ನನ್ನ ಪ್ರಕಾರ ಕಡುಬಡವನೂ ಕೂಡ ಡಿಜಿ-ಧನ್, ನಿಜಿ-ಧನ್ ನ್ನುವ ದಿನ ಬಹಳ ದೂರವಿಲ್ಲ. ಡಿಜಿ-ಧನ್ ಎನ್ನುವುದು ಬಡವನ ಧ್ವನಿಯಾಗಲಿದೆ. ದೊಡ್ಡ- ದೊಡ್ಡ ವಿಧ್ವಾಂಸರೆಲ್ಲ ಮೋದೀಜೀ ಕ್ಯಾಶ್ ಲೆಸ್ ಸೊಸೈಟಿ ಇತ್ಯದಿ ಯಾಗಿ ಇದರ ಪರಿಹಾಸ್ಯ ,ವಿರೋಧ ಮಾಡಿದರು. ನಾನು ಈ ಬಗ್ಗೆ ಎಂತೆಂತಹ ಭಾಷಣಗಳನ್ನು ಕೇಳಿದನೆಂದರೆ ನನಗೆ ಬೇರೆ ಮನರಂಜನೆ ವ್ಯಂಗ್ಯ,ವಿನೋದಗಳೇ ಬೇಡವೆನ್ನಿಸಿತ್ತು. ಅವನ್ಲ್ಲಾ ನೆನಪಿಟ್ಟುಕೊಂಡಿದ್ದರೆ….. ಏನಪ್ಪಾ ಇಂಥಿಂಥಾ ವಿಧ್ವಾಂಸರು ಹೀಗಲ್ಲಾ ಮಾತಾಡುತ್ತಾರಲ್ಲಾ ಎಂದು ನಾನು ತುಂಬಾ ಆಶ್ಚರ್ಯಪಡಬೇಕಿತ್ತು.

ಕಡಿಮೆ ಹಣ,ಆಗರ್ಭ ಶ್ರೀಮಂತರ ಮನೆಯಲ್ಲಿ ಮಗ ಹಾಸ್ಟೆಲ್ನಲ್ಲಿದ್ದಾ ಎಂದುಕೊಳ್ಳಿ, ಆಗ ಅಪ್ಪ-ಅಮ್ಮರ ನಡುವೆ ಚರ್ಚೆ ನಡೀತಿರುತ್ತೆ, ಏನಂತಾ? ಒಚ್ಚಿಗೇ ಹಚ್ಚು ಹಣ ಕಳಿಸೋದು ಬೇಡ, ಇದರಂದ ಮಗ ದಾರಿತಪ್ಪಿಯಾನು ಅಂತ. ಆಗರ್ಭ ಶ್ರೀಮಂತರ ಮನೆಯಾಗಿರಲಿ ಅಥವಾ ಬಡವರ ಮನೆಯಾಗಿರಲಿ ಮಗ ಐದು ರೂಪಾಯಿ ಕೊಡು ಅಂದರೆ ಅಪ್ಪ ಬೇಡ ಎರಡು ರೂಪಾಯಿ ತೊಗೊಂಡು ಹೋಗು ಎನ್ನುತ್ತಾನೆ. ಕಡಿಮೆ ಹಣ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಇದರ ಅರಿವು ನಮಗೆಲ್ಲಾ ಕುಟುಂಬ ಜೀವನದಲ್ಲಿ ಆಗಿಯೇ ಇರುತ್ತೆ. ಅತ್ಯಂತ ಸುಖವಾಗಿರುವವರೂ ಕೂಡ ಬಂಡಲುಗಟ್ಟಲೆ ನೋಟನ್ನು ಮಕ್ಕಳಿಗೆ ಕೊಡಲ್ಲ, ಯಾಕೆಂದರೆ ಇದರಿಂದ ಏನೇನಾಗಬಹುದಂಬುದು ಅವರಿಗೆ ಗೊತ್ತಿರುತ್ತದೆ. ಇದರಿಂದ ಕೆಟ್ಟ ಪರಿಣಾಮ ಹೆಚ್ಚು, ಒಳ್ಳೆಯದು ಕಡಿಮೆ.

ವ್ಯಕ್ತಿ ಜೀವನದಲ್ಲಿ ಏನಾಗುವುದೋ ಅದೇ ಸಮಾಜ ಜೀವನದಲ್ಲಿ.ರಾಷ್ಟ್ರ ಜೀವನದಲ್ಲಿ ಆಗುತ್ತೆ.ಅದು ಅರ್ಥವ್ಯವಸ್ಥೆಯಲ್ಲೂ ಪ್ರತಿಬಿಂಬಿಸುತ್ತೆ. ಈ ನೇರ ಸರಳ ತಿಳುವಳಿಕೆಯನ್ನು ನಾವು ವ್ಯವಹಾರದಲ್ಲೂ ಅಳವಡಿಸಿಕೊಳ್ಳಬೇಕು. ಕಡಿಮೆ ಹಣ ಕಡಿಮೆ ನಗದು ಎಂಬುದರಿಂದ ವ್ಯಾಪಾರ ವಹಿವಾಟುಗಳನ್ನೂ ಮಾಡಬಹುದು. ಒಂದು ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಬಳಸಲಾಗುತ್ತಿತ್ತು.ಚಿನ್ನದ್ದು ಎಣಿಕೆಯಲ್ಲಿತ್ತು., ಕಾಲಕ್ರಮೇಣ ಚರ್ಮದ್ದು ಬಂತು,ಆಮೇಲೆ ಕಾಗದದ್ದು ಹೀಗೆ ಎಷ್ಚೋ ಬದಲಾವಣೆಗಳಾಗುತ್ತಾ ಬಂದಿತು.ಪ್ರತಿ ಯುಗವೂ ಬದಲಾವಣೆಗಳನ್ನಪ ಸ್ವೀಕರಿಸುತ್ತಾ ಬಂತು.ಆಗಿನ ಕಾಲದಲ್ಲೂ ಜನರು ಏನೋ ಹೇಳಿರಬಹುದು.ವರ್ತಮಾನಪತ್ರಿಕೆ ಈಗಿನಂತೆ ಇರಲಿಲ್ಲ ಹೀಗಾಗಿ ಅಚ್ಚಾಗಿಲ್ಲ ಆದರೆ ಆ ಕಾಲದಲ್ಲೂ ಜನರು ಏನೋ ಹೇಳಿರಬಹುದು.ವಿವಾದಗಳೂ ಆಗಿರಬಹುದು ಹಾಗೇ ಬದಲಾವಣೆಗಳೂ ಆಗಿರಬಹುದು.ಈಗ ಕಾಲ ಬದಲಾಗಿದೆ.ನಮ್ಮಗಳ ಬಳಿ ಪರ್ಯಾಯವ್ಯವಸ್ಥೆ ಇದೆ. ಭೀಮ್ ಆಪ್ ನಂತಹ ಸುರಕ್ಷಿತ ವ್ಯವಸ್ಥೆಯಿದೆ, ಭಾರತದ ಸಂವಿಧಾನದಲ್ಲಿ ಸಾಮಾನ್ಯ ಪ್ರಜೆಗೆ ಅಧಿಕಾರ ಕೊಡುವ ಕೆಲಸವನ್ನು , ಹಕ್ಕು ನೀಡುವ ಕೆಲಸ ವನ್ನು ಹೇಗೆ ಭೀಮರಾವ್ ಅಂಬೇಡ್ಕರರು ಮಾಡಿದರೋ ಹಾಗೇಯೇ ಭೀಮ್ ಆಪ್ ಅರ್ಥವ್ಯವಸ್ಥೆಯಲ್ಲಿ ಮಹಾರಥಿಯಂತೆ ಕೆಲಸ ಮಾಡಲಿದೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ, ಇದು ಆಗಿಯೇ ತೀರುತ್ತದೆ ಇದನ್ನು ಯಾರೂ ತಡೆಯಲಾರರು.

ಹಿಂದೂಸ್ಥಾನದಂತ ದೇಶದಲ್ಲಿ ಕರೆನ್ಸಿ ಮುದ್ರಿಸುವುದು, ಮುದ್ರಿಸಿ ತಲುಪಿಸುವುದು, ಸುರಕ್ಷಿತವಾಗಿ ತಲುಪಿಸುವುದು ಇವಕ್ಕೆಲ್ಲಾ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ. ಈ ವ್ಯವಸ್ಥೆಗಳಿಂದ ಹಣ ಉಳಿಸಿದರೆ ಎಷ್ಟು ಮಂದಿ ಬಡವರಿಗೆ ಮನೆ ಮಾಡಿಕೊಡಬಹುದು? ಸ್ನೇಹಿತರೇ, ಎಷ್ಟು ದೊಡ್ಡ ದೇಶಸೇವೆಯಾಗುತ್ತೆ . ಇಂತಹವೆಲ್ಲಾ ಸಾಧ್ಯವಿದೆ ಹೀಗಾಗಿ ಪ್ರಯತ್ನ ಮಾಡಲೇಬೇಕು. ಅವರೂ ಜೀವನ ಮಾಡುತ್ತಿದ್ದರು,ಮೊದಲು ಆ ವ್ಯವಸ್ಥೆಯಿತ್ತು,ಅವಶ್ಯಕವಾಗಿತ್ತು ಮಾಡುತ್ತಿದ್ದರು. ಒಂದುವೇಳೆ ಕಡಿಮೆ ಹಣದ ಕಡೆ ನಾವು ಯೋಚಿಸಿ ನಿರ್ಧರಿಸಿದರೆ ಬದಲಾವಣೆ ಸಾಧ್ಯವಾಗುತ್ತದೆ.ನನಗೆ ಒಂದು ಏ ಟಿ ಎಂ ರಕ್ಷಣೆಗೆ ಐದೈದು ಪೋಲಿಸರನ್ನು ಹಾಕಿರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತೆ,ಯಕೆಂದರೆ ಜನರಕ್ಷಣೆಗೆ ಪೋಲಿಸರನ್ನು ಹಾಕುವುದು ಕಷ್ಟವಾಗುತ್ತೆ. ಏ ಟಿ ಎಂ ನಲ್ಲಿ ನಿಂತಿರಬೇಕಾಗುತ್ತೆ.

ಒಂದುವೇಳೆ ಕಡಿಮೆ ಹಣದ ವ್ಯವಹಾರವಾದರೆ, ನಿಮ್ಮ ಮೊಬೈಲ್ ಫೋನ್ ನಿಮ್ಮ ಏ ಟಿ ಎಂ ಆಗುತ್ತದೆ. ಈಗ ಸ್ಥಳವಿಲ್ಲದ, ಕಾಗದವಿಲ್ಲದ ಬ್ಯಾಂಕಿಂಗ್ ಸಿಸ್ಟಂ ಜೀವನದ ಭಾಗವಾಗುವ ದಿನ ಬಹಳ ಹತ್ತಿರದಲ್ಲಿದೆ. ಸ್ಥಳವಿಲ್ಲದ, ಕಾಗದವಿಲ್ಲದ ಬ್ಯಾಂಕಿಂಗ್ ಸಿಸ್ಟಂ ಜೀವನದ ಭಾಗವಾಗುವ ಸಂಧರ್ಭದಲ್ಲಿ ನಿಮ್ಮ ಮೊಬೈಲ್ ಫೋನ್ ನಿಮ್ಮ ಪರ್ಸ್ ಅಲ್ಲ .ನಿಮ್ಮ ಬ್ಯಾಂಕಾಗಿಬಿಡುತ್ತೆ. ತಾಂತ್ರಿಕ ಕ್ರಾಂತಿ ಆರ್ಥಿಕ ಜೀವನದ ಭಾಗವಾಗುತ್ತಿದೆ. ಡಿಜಿ-ಧನ್ ಯೋಜನೆ ಲಾಂಚ್ ಮಾಜಿದ್ದು 25 ಡಿಸೆಂಬರ್ ರಂದು. ಅದು ಲಾಂಚ್ ಆದ ದಿನ ಕ್ರಿಸ್ಮಸ್ ನ ಆರಂಭ. ಹ್ಯಾಪಿ ಕ್ರಿಸ್ಮಸ್ ನೊಂದಿಗೆ ಆರಂಭಮಾಡಲಾಯಿತು. 100ದಿನಗಳವರೆಗೆ 100 ನಗರಗಳಲ್ಲಿ ನಡೆಯಿತು. ಇಂದು ಒಂದುರೀತಿ ಆದರ ಪುನರಾವೃತ್ತಿ 14 ಏಪ್ರಿಲ್ ರಂದು, ಬಾಬ ಸಾಹೇಬ ಅಂಬೇಡ್ಕರ ಜನ್ಮಜಯಂತಿ ದಿನದಂದು ಭೀಮ್ ಆಪ್ ನ ನೇರ ಸಂಬಂಧ ಮತ್ತು ಗುಡ್ಫ್ರಾಯ್ಡೆಯ ದಿನ. ಕ್ರಿಸ್ಮಸ್ ನ ದಿನ ಸಡಗರದಿಂದ ಆರಂಭಿಸಿದ್ದೆವು. ಮುಂದೆ ನಡೆಯುತ್ತಾ ಇಲ್ಲಿಯವರೆಗೆ ಬಂದಿದ್ದೇವೆ.

ಮೊಬೈಲ್ ಇಲ್ಲದವರೇನು ಮಾಡೋದು? ಈ ಬಗ್ಗೆ ಪಾರ್ಲಿಮೆಂಟಿನಲ್ಲೂ ಅನೇಕ, ಆಸಕ್ತಿ ಕೆರಳಿಸುವ ಭಾಷಣಗಳನ್ನು ಕೇಳಿದೆ. ದೇಶದ ಬಳಿ ಸ್ಮಾರ್ಟ್ ಫೋನಿಲ್ಲ, ಡಾಂಗಲಿಲ್ಲ, ಅದಿಲ್ಲ, ಇದಿಲ್ಲ ಇತ್ಯಾದಿ. ನಾವು ಆ ಕೆಲಸಗಳನ್ನು 800-1000 ರೂಪಾಯಿ ಫೋನಿನಿಂದಲೂ ಮಾಡಬಹುದು ಎಂಬುದನ್ನು ಅರ್ಥಮಾಡಿಸುವ ಪ್ರಯತ್ನ ಮಾಡಿದೆವು, ಆದರೆ ಅರ್ಥಮಾಡಿಕೊಳ್ಳಲು ಬಯಸದವರಿಗೆ ಹೇಗೆ ತಿಳಿಸೋದು? ನಿಮ್ಮ ಹತ್ರ ಮೊಬೈಲ್ ಫೋನಿಲ್ಲದಿದ್ದರೆ ಪರವಾಗಿಲ್ಲ ಹೆಬ್ಬೆರಳಿದೆಯಲ್ಲ .ಒಂದಾನೊಂದು ಕಾಲದಲ್ಲಿ ಅನಕ್ಷರಸ್ತರ ಗುರುತಾಗಿತ್ತು ಈ ಹೆಬ್ಬೆರಳು. ಯುಗ ಪರಿವರ್ತನೆಯಾಗಿದೆ ಇದೇ ಹೆಬ್ಬೆರಳು ನಿಮ್ಮ ಶಕ್ತಿಯ ಕೇಂದ್ರಬಿಂದುವಾಗಿ ಪರಿವರ್ತಿತವಾಗುತ್ತಿದೆ. ಇಲ್ಲಿರುವ ಎಲ್ಲ ಯುವಕರೂ ಪ್ರತಿದಿನವೂ ಎರಡೆರಡು ಗಂಟೆಗಳಕಾಲ ಹೆಬ್ಬೆರಳನ್ನು ಬಳಸುತ್ತಿರಬಹುದು. ಮೊಬೈಲ್ ಫೋನಿನಲ್ಲಿ ಮೆಸೇಜ್ ಮಾಡುತ್ತಿರಬಹುದು. ತಂತ್ರಜ್ಞಾನವು ಹೆಬ್ಬೆರಳನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡಿದೆ. ಇದರಿಂದಲೇ ವಿಶ್ವದ ಅಭಿವೃಧ್ಧಿ ಹೊಂದಿದ ದೇಶದಲ್ಲೆಲ್ಲೂ ಇಲ್ಲದ ಅತ್ಯಾಧುನಿಕ ಭೀಮ್-ಆಧಾರ್ ಟೆಕ್ನಾಲಜಿಯಿರುವ ಭಾರತ ಹೆಮ್ಮೆಯಿಂದ ಬೀಗುತ್ತಿದೆ.

ಈಗ ಭೀಮ್ ಆಪ್ ನ ಮೇಲೆ ಅನೇಕ ವಿವಾದಗಳ ನಂತರ ಜನ ಅದನ್ನು ಸ್ವೀಕರಿಸುತ್ತಾ ಇದ್ದಾರೆ, ಈಗ ಆಧಾರ್ ಮೇಲೆ ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ.ಅವರು ತಮ್ಮ ಕೆಲಸ ಮಾಡಲಿ ಬಿಡಿ. ನಿಮ್ಮ ಬಳಿ ಮೊಬೈಲ್ ಫೋನಿಲ್ಲದಿದ್ದರೂ , ಆಧಾರ್ ನಂಬರ್ ಇದ್ದರೆ ಸಾಕು. ನೀವು ಯಾವುದಾದರೂ ಅಂಗಡಿಗೆ ಹೋಗಿ, ಅಲ್ಲಿ ಸಣ್ಣದೊಂದು ಉಪಕರಣವಿರುತ್ತದೆ. ಅದು ದೊಡ್ಡದೇನೂ ಅಲ್ಲ, ಎರಡಿಂಚು ಅಗಲ ಎರಡಿಂಚು ಉದ್ದ ಇರುತ್ತೆ, ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ನಂಬರನ್ನು ಜೋಡಿಸಿದ್ದರೆ, ಅಂಗಡಿಯವನು ನಿಮ್ಮ ಹೆಬ್ಬೆರಳನ್ನು ಅಲ್ಲಿ ಒತ್ತಿಸುತ್ತಾನೆ. ನೀವು ಹತ್ತು ರೂಪಾಯಿಯ ವ್ಯಾಪಾರ ಮಾಡಿದ್ದರೆ ಆ ಹತ್ತು ರೂಪಾಯಿ ನಿಮ್ಮ ಬ್ಯಾಂಕ್ ಖಾತೆಯಿಂದ ತಂತಾನೇ ಆಟೋಮ್ಯಾಟಿಕ್ ಆಗಿ ಕಟ್ ಆಗಿಬಿಡುತ್ತೆ. ನಿಮ್ಮ ಕೆಲಸ ಕಾರ್ಯಗಳಿಗೆ ಎಲ್ಲೂ ಅಡಚಣೆಉಂಟಾಗುವುದಿಲ್ಲ. ಭೀಮ್-ಆಧಾರ್ ಇಂತಹ ಒಂದು ಅದ್ಭುತ ರೂಪ. ನೀವು ಗಮನಿಸುತ್ತಿರಿ ಈ ಭೀಮ್-ಆಧಾರ್ ನ್ನು ಅಧ್ಯಯನಮಾಡಲು ಬಹಳಬೇಗ ವಿಶ್ವದ ದೊಡ್ಡ- ದೊಡ್ಡ ಯೂನಿವರ್ಸಿಟಿಗಳು ಭಾರತಕ್ಕೆ ಬರಲಿವೆ. ಎಲ್ಲ ಯುವಕರೂ ಇದರ ಅಧ್ಯಯನ ಮಾಡಲಿದ್ದಾರೆ. ಇದು ವಿಶ್ವದ ಆರ್ಥಿಕ ಬದಲಾವಣೆಗೆ ಆಧಾರವಾಗಲಿದೆ. ಇದು ಅಧ್ಯಯನದ ಪರಾಮರ್ಶೆಯ ವಿಷಯವಾಗಲಿದೆ.

ನಿನ್ನೆ ನಾನು ರವಿಶಂಕರಜೀಯವರೊಂದಿಗೆ ಭಾರತ ಸರಕಾರ ಇದರ ಪೇಟೆಂಟ್ ಮಾಡಿಸಿದೋ ಇಲ್ಲವೋ ಎಂದು ಕೇಳ್ತಿದ್ದೆ. ಯಾಕೆಂದರೆ ವಿಶ್ವವು ಇದನ್ನು ತನ್ನದಾಗಿಸಿಕೊಳ್ಲುವ ಪ್ರಯತ್ನ ಮಾಡುವ ಸಂಭವವಿದೆ. ನನ್ನನ್ನು ಇತ್ತೀಚೆಗೆ ಬೇಟಿಯಾದ ಆಫ್ರಿಕನ್ ದೇಶದ ಮುಖಂಡರು ಈ ವಿಷಯದ ಬಗ್ಗೆ ಜಿಜ್ಞಾಸೆ ವ್ಯಕ್ತ ಪಡಿಸಿದರಾದರೂ ನಮ್ಮ ದೇಶಕ್ಕೂ ತಾವು ಇದನ್ನು ಮಾಡಿಕೊಡಲು ಸಾಧ್ಯವೇ ? ಎಂಬ ಬಯಕೆಯನ್ನೂ ಮುಂದಿಟ್ಟರು. ಮೆಲ್ಲಮೆಲ್ಲಗೆ ಇದು ವಿಶ್ವದ ಉದ್ದಗಲಕ್ಕೂ ಹರಡಲಿದೆ ವಿಶ್ವ ವಿಸ್ತಾರಕ್ಕೆ ಕಾರಣವಾಗುವುದು. ಆಗ ಭಾರತವು ಬಹಳ ದೊಡ್ಡ ಪರಿವರ್ತನಕಾರಿ (catalystic agent) ಏಜೆಂಟಿನಂತೆ ಕಾರ್ಯವನಿರ್ವಹಿಸಲಿದೆ.

ಈ ಡಿಜಿಧನ್ ಯೋಜನೆಯಡಿಯಲ್ಲಿ ಹಿಂದೂಸ್ಥಾನದ ನೂರು ಬೇರೆ-ಬೇರೆ ನಗರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜನರು ಉತ್ಸಾಹದಿಂದ ಭಾಗವಹಿಸಿದರು. ಟೆಕ್ನಾಲಜಿಯನ್ನು ಅರ್ಥಮಾಡಿಕೊಳ್ಳಲು,ಸ್ವೀಕರಿಸಲು ಪ್ರಯತ್ನಿಸಿದರು. ಬಹಳಷ್ಟು ಮಂದಿಗೆ ಬಹುಮಾನಗಳೂ ದೊರೆತವು. ಬಹುಮಾನ ದೊರೆತ ಒಬ್ಬ ಚೆನೈನ ಸಜ್ಜನರು ನನ್ನ ಬಹುಮಾನವನ್ನು ಗಂಗಾಶುಧ್ಧೀಕರಣಕ್ಕೆ ಸಮರ್ಪಿಸುತ್ತೇನೆಂದು ಘೋಷಿಸಿದರು. ನಾನು ಆ ವ್ಯಕ್ತಿಯನ್ನು ಆಭಿನಂದಿಸುತ್ತೇನೆ. ಹೇಗೂ ಡಿಜಿಧನ್ ಕೂಡ ಒಂದು ರೀತಿ ಸ್ವಚ್ಛತಾ ಅಭಿಯಾನವೇ ಆಗಿದೆ. ಕಪ್ಪುಹಣ,ಭ್ರಷ್ಟಾಚಾರದ ವಿರುದ್ಧ ದೊಡ್ಡ ಶುಧ್ಧೀಕರಣ ಹೋರಾಟವಿದು.

ನಾನು ದೇಶವಾಸಿಗಳಲ್ಲಿ ಹೇಳುವುದಿಷ್ಟೇ ಕಡಿಮೆ ಹಣದ ವಿಚಾರ ನಿಮಗೆ ಇಷ್ಟವಾಯಿತೋ ಇಲ್ಲವೋ, ಕ್ಯಾಶ್ ಲೆಸ್ ಸೊಸೈಟಿಯ ಕಲ್ಪನೆ ನಿಮಗೆ ಹಿಡಿಸಿತೋ ಇಲ್ಲವೋ, ನೋಟಿಲ್ಲದೆ ಹೇಗೆ ಬದುಕುವುದೆನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿದಯೋ ಇಲ್ಲವೋ,ಆದರೆ ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ತಂತಮ್ಮ ಹೃದಯ ಮನಸ್ಸುಗಳೆರಡರಲ್ಲೂ ಕೋಪವಿಲ್ಲದವರಂತೂ ಇಲ್ಲವೇಇಲ್ಲ.ಲಂಚ ಕೊಡುವವನಿಗೆ ಕೋಪ ಇರಬಹುದು, ತೊಗೊಳ್ಳುವವನೂ ಕೂಡ ಈಗ ಮೋದಿ ಬಂದಿದ್ದಾನೆ ಏನಾದ್ರೂ ಸಿಕ್ಕಿಹಾಕಿಕೊಂಡರೆ ಏನಾಗಬಹುದೆಂದು ರಾತ್ರಿಯಾದಕೂಡಲೇ ಯೋಚಿಸ ತೊಡಗುತ್ತಾನೇನೋ? ಈಗಾಗಲೇ ನಮಗೆ ಸಾಕಷ್ಟು ಕೆಟ್ಟದ್ದಾಗಿದೆ, ಆದರೆ ಮುಂದಾದರೂ ಇದರಿಂದ ಪಾರಾಗಲು ಒಂದು ಉತ್ತಮ ಸಾಧನವಿದೆ. ಯಾರು-ಯಾರು ಭೀಮ್-ಆಧಾರ್ ಮಾಧ್ಯಮದ ಮೂಲಕ ನನಗೆ ಸಹಾಯ ಮಾಡುವಿರೋ ನನ್ನ ಪ್ರಕಾರ ಅವರೆಲ್ಲಾ ಕಪ್ಪುಹಣದ ಜೊತೆ ಹೋರಾಟಕ್ಕಿಳಿದಿರುವ ಸೈನಿಕರು.

ನನಗಿದೇ ದೊಡ್ಡ ಶಕ್ತಿ. ನಾನು ತಮ್ಮನ್ನು ಈ ಹೋರಾಟಕ್ಕೆ ಆಹ್ವಾನಿಸುವೆನು. ನವಯುವಕರೇ ಈ ಸಲ ಇದರಲ್ಲಿ ಎರಡು ಹೊಸ ವಿಷಯವನ್ನು ಸೇರಿಸಲಾಗಿದೆ. ಇದನ್ನು ನಾವು ಅಕ್ಟೋಬರ್14 ವರೆಗೂ ನಡೆಸಲಿದ್ದೇವೆ. ಇಂದು ಏಪ್ರಲ್ 14. ಅಕ್ಟೋಬರ್ 14 ಬಾಬ ಸಾಹೇಬ ಅಂಬೇಡ್ಕರರು ದೀಕ್ಷೆತೆಗೆದುಕೊಂಡ ಪವಿತ್ರ ದಿನ. ಏಪ್ರಲ್ 14. ಇಂದಿನಿಂದ ಅಕ್ಟೋಬರ್ 14ರವರೆಗೆ ನಡೆಯಲಿರುವ ವಿಶೇಷ ಯೋಜನೆಯಿದು. ಇಂದಿನ ಕಾಲದಲ್ಲಿ ಒಳ್ಳೊಳ್ಳೆಯ ಮನೆತನದ ಯುವಕರೂ ಸಹ ರಜಾಸಮಯದಲ್ಲಿ ಏನಾದರೂ ಕೆಲಸ ಮಾಡೋಣ ಹಾಗೂ ಸ್ವಂತ ಸಂಪಾದನೆ ಮಾಡೋಣ ಎಂಬ ಮನೋಭಾವ ಹೊಂದಿರುವುದನ್ನು ನೀವು ಗಮನಿಸುತ್ತಿರಬಹುದು. ಶ್ರೀಮಂತರ ಮನೆ ಮಕ್ಕಳೂ ಸಹ ತಮ್ಮ ಪರಿಚಯ ಗೊತ್ತಿಲ್ಲದ ಜಾಗಗಳಿಗೆ ಹೋಗಿ ಏನೋಒಂದು ಕೆಲಸಮಾಡಿ ತರಬೇತಿ ಪಡೆಯುತ್ತಿದ್ದಾರೆ. ಯಾವ ವರಿಪೇಕ್ಷದಲ್ಲಿ ಅವರು ಜನಿಸಿದರೋ ಅಲ್ಲಿ ಅವರಿಗೆ ಅವಕಾಶ ದೊರೆಯದು. ಅವರು ಹೋಟೆಲ್ ಗೆ ಹೋಗಿ ಪಾತ್ರೆ ತೊಳೆಯುತ್ತಾರೆ, ಟೀ ಸಪ್ಲೆ ಇಂಥಹ ಹಲವುಹತ್ತು ಕೆಲಸಗಳನ್ನು ಮಾಡುತ್ತಾರೆ. ಕೆಲವರು ಪೆಟ್ರೋಲ್ ಪಂಪ್ ಗಳಲ್ಲೂ ಕೆಲಸಮಾಡುತ್ತಾರೆ. ನಮ್ಮ ಹೊಸ ಪೀಳಿಗೆಯ ತಲೆಯಲ್ಲಿ………ಹೆಮ್ಮೆಯಿಂದ ಬದುಕಬಯಸುವ ಇಂಥಹ ವಿಚಾರಗಳು ಬರುತ್ತಿರುವುದು ಸ್ವಾಗತಾರ್ಹ.

ಮೊದಲು ವಿದೇಶಗಳಲ್ಲಿ ಎಲ್ಲ ಯುವಕರು ರಾತ್ರಿವೇಳೆಯಲ್ಲಿ ಹೋಗಿ ಎರಡೆರಡು, ಮೂರುಮೂರು ಗಂಟೆಗಳ ಕಾಲ ಈ ರೀತಿಯ ಕೆಲಸ ಮಾಡುತ್ತಾರೆ, ಟ್ಯಾಕ್ಸಿ ಓಡಿಸ್ತಾರೆ, ಇನ್ನೇನೋ ಮಾಡ್ತಾರೆ , ಸಂಪಾದಿಸುತ್ತಾರೆ ಜೊತೆಗೆ ಓದುತ್ತಿರುತ್ತಾರೆ ಎಂದು ನಾವು ಕೇಳುತ್ತಿದ್ದೆವು. ಇಂದಿಗೂ ಹಿಂದೂಸ್ಥಾನಕ್ಕೆ ಈ ವಿಚಾರಗಳು ಕಾಲಿಟ್ಟಿಲ್ಲ.ಈ ಭೀಮ್-ಆಧಾರ್ ಅಡಿಯಲ್ಲಿ ನಾನು ಈ ಬಾರಿ ಬಿಡುವಿನಸಮಯದಲ್ಲಿ ನನ್ನ ದೇಶದ ಯುವಕರನ್ನು ಆಹ್ವಾನಿಸುತ್ತೇನೆ. ಇದರಲ್ಲಿ ರೆಫೆರಲ್ ಎಂಬುದೊಂದು ಯೋಜನೆಯಿದೆ, ಅದೇನೆಂದರೆ ನೀವು ಯಾರಿಗಾದರೂ ಭೀಮಾ ಆಪ್ ಬಗ್ಗೆ ತಿಳುವಳಿಕೆ ನೀಡಿದರೆ, ಅಂದರೆ ಯಾರೋ ವ್ಯಾಪಾರಿಗೆ, ಯಾರೋ ಒಬ್ಬ ಪ್ರಜೆಗೆ,ತಿಳಿಯಹೇಳುತ್ತಾ ಅವರ ಮೊಬೈಲ್ ನಲ್ಲಿ ಭೀಮ್ ಆಪ್ ಡೌನ್ಲೋಡ್ ಮಾಡಿದಿರಿ ಎಂದಿಟ್ಟುಕೊಳ್ಳಿ. ಆತ ಅದರಿಂದ ಮೂರು ಬಾರಿ ಖರೀದಿ ಮಾಡಿದ, ಒಮ್ಮೆ ಐವತ್ತು ರೂಪಾಯಿಯ ವಸ್ತು ಖರೀದಿಸಿದ, ಮತ್ತೊಮ್ಮೆ 30 ರೂಪಾಯಿಯದು, ಮಗದೊಮ್ಮೆ 100 ರೂಪಾಯಿಯದನ್ನು ಖರೀದಿಸಿದ.

ಇದೆಲ್ಲಾ ನಿಮ್ಮಿಂದಲೇ ಸಾಧ್ಯವಾಗಿದ್ದರೆ, ನೀವೇ ಆತನನ್ನು ಇದರೊಂದಿಗೆ ಜೋಡಿಸಿದ್ದರೆ ನಿಮ್ಮ ಖಾತೆಗೆ ಸರ್ಕಾರದ ವತಿಯಿಂದ 10 ರೂಪಾಯಿ ಸಂದಾಯವಾಗುತ್ತದೆ. ಒಂದುವೇಳೆ ಒಂದು ದಿನದಲ್ಲಿ ನೀವು 20 ಮಂದಿಯನ್ನು ಜೋಡಿಸಿದ್ದರೆ ಸಂಜೆಗೆ ನಿಮ್ಮ ಖಾತೆಗೆ 200 ರೂಪಾಯಿ ಸಂದಾಯವಾಗುತ್ತದೆ. ರಜೆಯ ಮೂರು ತಿಂಗಳು ದಿಮವೊಂದಕ್ಕೆ 200 ರೂಪಾಯಿ ಯಂತೆ ಸಂಪಾದಿಸುವ ನಿರ್ಧಾರ ಮಾಡಿದರೆ ಹೇಗಿರುತ್ತೆ ? ಹೇಳಿ ಯುವಕರೇ ಇದು ನಿಮಗೆ ಕಷ್ಟದ ಕೆಲಸವೇ? ಇದರಲ್ಲಿ ಕೊಡುಕೊಳ್ಳುವುದೇನೂ ಇಲ್ಲ . ಅವರಿಗೆ ಕಲಿಸುವುದು, ಅರ್ಥಮಾಡಿಸುವುದು ಹಾಗೂ ಯಾವ ವ್ಯಾಪಾರಿ ಭೀಮ್ ಆಪ್ ಅನ್ನು ತನ್ನ ಅಂಗಡಿಯಲ್ಲಿ ಆರಂಭಿಸುತ್ತಾನೋ, ವಹಿವಾಟುಗಳನ್ನು ಇದರಲ್ಲಿ ಮಾಡುವನೋ ಅವನಿಗೆ ಅಂದರೆ ಅವನ ಬಳಿ ಇರುವ ಸಣ್ಣ ನೌಕರನು ಇದನ್ನು ಬಳಸುತ್ತಾನೆ ಆದರೂ ಅವನಿಗೆ 25 ರೂಪಾಯಿ ದೊರೆಯುತ್ತದೆ.ಅಂದರೆ ನೀವು ಯಾರಿಗೆ ಅರ್ಥಮಾಡಿಸಬೇಕೋ ಅವರಿಗೆ ನೋಡು ನನಗೆ 10 ರೂಪಾಯಿ ಸಿಗುತ್ತೆ ನಿನಗೆ 25 ರೂಪಾಯಿ ಸಿಗುತ್ತೆ ಎಂದು ಸುಲಭವಾಗಿ ಅರ್ಥಮಾಡಿಸಬಹುದು. ಈ ಯೋಜನೆ ಅಕ್ಟೋಬರ್ 14ರವರೆಗೆ ಬಾಬ ಸಾಹೇಬ ಅಂಬೇಡ್ಕರರು ದೀಕ್ಷೆತೆಗೆದುಕೊಂಡ ದಿನದ ವರೆಗೆ ನಡೆಯಲಿದೆ. ನಮ್ಮ ಬಳಿ ಆರು ತಿಂಗಳ ಕಾಲಾವಕಾಶವಿದೆ. ಪ್ರತಿ ಯುವಕನೂ ಈ ಬಾರಿಯ ರಜೆಯಲ್ಲಿ 10ಸಾವಿರ, 15ಸಾವಿರ ಆರಾಮವಾಗಿ ಸಂಪಾದಿಸಬಹುದು. ಹಾಗೂ ಭ್ರಷ್ಟಚಾರದ ವಿರುದ್ಧದ ಸಮರದಲ್ಲಿ ಜಯ ಸಾಧಿಸಲು ನನಗೆ ಸಹಕಾರ ನೀಡಿರಿ. ನಿಮ್ಮೆಲ್ಲರನ್ನೂ ಇದಕ್ಕಾಗಿಯೇ ಆಹ್ವಾನಿಸುತ್ತಿದ್ದೇನೆ.

ಈ ಯೋಜನೆಯ ಬಗ್ಗೆ ವಿವರವಾದ ಸೂಕ್ಷ್ಮ ವಿಷಯಗಳ ಲಿಖಿತ ವಿವರಣೆಯಿದೆ. ಅದನ್ನು ವಿವರಿಸುವಾಗ ನಾನು ಕೆಲವು ಪ್ಲಸ್ ಮೈನೆಸ್ ಹೇಳಿರುತ್ತೇನೆ. ನೀವು ಇದರ ಲಿಖಿತ ವಿವರಣೆಯನ್ನು ಓದಿದಾಗ ನಿಮಗೆ ಸ್ಪಷ್ಟ ಯೋಜನೆಯ ಅರಿವು ಮೂಡುತ್ತದೆ.ಈಗ ನಿಮ್ಮ ಪರೀಕ್ಷೆಗಳು ಮುಗಿದಿವೆ, ಮೊಬೈಲ್ ಕೈಗೆತ್ತಿಕೊಂಡು ಈ ಯೋಜನೆಯನ್ನು ಅರಿತುಕೊಳ್ಳಿ. ಹಾಗೂ ಪ್ರತಿ ದಿನವೂ 20 ಜನ,25 ಜನ,30 ಜನ ಇದರಲ್ಲಿ ತೊಡಗಿಸಿಕೊಳ್ಳಿ. ಸಂಜೆ ಮನೆಗೆ ವಾಪಸ್ಸು ಹೋಗುವ ವೇಳೆಗೆ 200-300 ರೂಪಾಯಿ ಸಂಪಾದಿಸುತ್ತೀರಿ. ರಜೆಯ ಪೂರ್ತಿ ಅವಧಿಯಲ್ಲಿ ಹೀಗೆ ಮಾಡಿದಲ್ಲಿ ಮುಂದಿನ ವರ್ಷದ ನಿಮ್ಮ ಓದಿನ ಮತ್ತು ಜೇಬುಖರ್ಚಿಗಾಗುವಷ್ಟು ಹಣವನ್ನು ನೀವೇ ಸಂಪಾದಿಸಿರುತ್ತೀರಿ. ಬಡ ಅಪ್ಪ-ಅಮ್ಮಂದಿರ ಕೈಯಿಂದ ಒಂದು ರೂಪಾಯಿಯನ್ನೂ ಕೇಳುವ ಅಗತ್ಯ ಬರುವುದಿಲ್ಲ. ಇದೊಂದು ಕ್ರಾಂತಿಕಾರಿ ಪ್ರಯತ್ನ.

ಇಂದು ಇಲ್ಲಿ ಕಡಿಮೆ ಕ್ಯಾಶಿನ 75 township ಗಳನ್ನು ಲೋಕಾರ್ಪಣೆ ಮಾಡಲಾಯಿತು. ಇದರ ಅರ್ಥ township ಗಳಲ್ಲಿ ಜನ ವಾಸಿಸುತ್ತಾರೆ, ಬೇರೆ- ಬೇರೆ fertilizers ಗಳ township ಗಳಿವೆ, ಎಲ್ಲೋ ರೈಲ್ವೆಯವರ township ಗಳು, ಮತ್ತೆಲ್ಲೋ ಸೈನಿಕರ township ಹೀಗೆ ಕಡಿಮೆ ಕ್ಯಾಶಿನ 75 township ಗಳನ್ನು ತಯಾರುಮಾಡಲಾಗಿದೆ. ಮೊದಲು ನಾನು ಇಂತಹ ಕಡಿಮೆ ಕ್ಯಾಶಿನ township ನ presentation ನಲ್ಲಿ ಭಾಗವಹಿಸಿದ್ದೆ.. ನಾನು ತರಕಾರಿ ಮಾರುವವರನ್ನು ಈ ಬಗ್ಗೆ ನಿಮಗೆಎಷ್ಟು ಆಸಕ್ತಿಯಿದೆ, ನೀವೇಕೆಕ ಈ ವ್ಯವಸ್ಥೆಗೆ ಬಂದಿರಿ ಎಂದು ಕೇಳಿದೆ. ಒಬ್ಬ ತರಕಾರಿ ಮಾರುವವನು ಬಹಳ interesting ಉತ್ತರ ನೀಡಿದ ಈ township ನ ಫುಟ್ಪಾತಿನಲ್ಲಿ ಕುಳಿತು ನಾನು ತರಕಾರಿ ಮಾರುತ್ತೇನೆ. ತರಕಾರಿ ಕೊಂಡುಕೊಳ್ಳಲು ಬರುವ ಹೆಂಗಸರು ಅವರ ಬಿಲ್ 25 ರೂಪಾಯಿ 80 ಪೈಸೆ ಆಗಿತ್ತೆಂದುಕೊಳ್ಳಿ, ಆಗ 25 ರೂಪಾಯಿ ತೊಗೋ ಚಿಲ್ಲರೆ 80 ಪೈಸೆ ಬಿಡು ಎಂದು 25 ರೂಪಾಯಿ ಕೊಟ್ಟು ಹೋಗುತ್ತಿದ್ದರು. ಈಗ ಈ ಕ್ರಮದಿಂದ ನನಗೆ ಪೂರ್ತಿ25 ರೂಪಾಯಿ 80 ಪೈಸೆ ದೊರೆಯುತ್ತೆ. ಹೀಗಾಗಿ ಸಂಜೆಯಷ್ಟರಲ್ಲಿ ನನಗೆ 15-20 ರೂಪಾಯಿ ಮೊದಲು ಕಡಿಮೆಯಾಗ್ತಿತ್ತಲ್ಲಾ ಅದು ಈಗ extra ಆದಾಯದ ರೂಪದಲ್ಲಿ ದೊರೆಯುತ್ತೆ . ಒಬ್ಬ ಬಡವ ಹೇಗೆ ಲಾಭ ಪಡೆದುಕೊಂಡನೆಂದು ನೋಡಿದಿರಾ. ನಾವು ಕಡಿಮೆ ಕ್ಯಾಶಿನ ಮೂಲಕ ದೇಶವನ್ನು ಮುನ್ನಡೆಸಬೇಕೆನ್ನುವ ಪ್ರಯತ್ನ ಮಾಡಬೇಕು.ಈ ಕ್ರಾಂತಿಗೆ ಸಹಕಾರ ನೀಡಬೇಕು. ಸ್ವಯಂ ಸೈನಿಕರಾಗಿ ಈ ಉದ್ದೇಶ್ಯವನ್ನು ಮಂದುವರೆಸಬೇಕು.

ಇಂದು ಕೆಲವರಿಗೆ ಬಹುಮಾನ ದೊರೆತಿದೆ. ಇಷ್ಟು ಕಡಿಮೆ ಸಮಯದಲ್ಲಿ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಮೊತ್ತದ ಬಹುಮಾನ ದೊರೆತಿದೆ. ಸಾವಿರಾರು ಜನರಿಗೆ ಬಹುಮಾನ ದೊರೆತಿದೆ. ಬಹುಮಾನ ಪಡೆದು ಸಂತೋಷದಿಂದ ಸುಮ್ಮನೆ ಕೂರಬೇಡಿ. ಈ ಕಾರ್ಯದ ರಾಯಭಾರಿಗಳಾಗಿ ಇದನ್ನು ಇನ್ನೂ ಮುಂದುವರಿಸಿ. ಈ ಕೆಲಸ ದೇಶದಲ್ಲಿ ಪರಿವರ್ತನೆ ತರಬಲ್ಲ , ನಾಗರಿಕರಿಗೆ ಸಹಾಯಕವಾದ ಬಹಳ ದೊಡ್ಡ ಹಾಗೂ ಸಫಲ ಅಭಿಯಾನವಿದು. ಕಠಿಣ ಪರಿಶ್ರಮದಿಂದ ಪ್ರಯತ್ನದಿಂದ ಕಂಡುಹಿಡಿದ ಈ full-proof technology ಗಾಗಿ ನಾನು ರವಿಶಂಕರ್ ಜೀ ಹಾಗೂ ಅವರ ಟೀಮಿಗೂ, ನೀತಿಆಯೋಗಕ್ಕೂ ಅಭಿನಂದನೆಗಳನ್ನು ನೀಡುತ್ತೇನೆ. ಪ್ರಪಂಚದಲ್ಲಿ ಎಷ್ಟು technologyಗಳಲ್ಲಿ innovation ಆಗಿದೆಯೋ ಅದನ್ನೆಲ್ಲಾ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದಕ್ಕಿಂತ ಉತ್ತಮ ಯಾವುದು ಎಂದು ತೀರ್ಮಾನಿಸಿ, ಭಾರತದ ಬಡವನಿಗೂ ಬಳಕೆದಾರನ ಮಿತ್ರನಾಗಬಲ್ಲ ಈ ವ್ಯವಸ್ಥೆಯನ್ನು ವಿಕಸಿತಗೊಳಿಸಲಾಗಿದೆ.

ನಾನು ಈ ಕಾರ್ಯಕ್ರಮದ ರಚನೆಗಾಗಿ ನಾಗಪುರದಲ್ಲಿ ಮಾಡಿದ ಉತ್ತಮ ಸೇವೆಗಾಗಿ ಮತ್ತೊಮ್ಮೆ ವಿಭಾಗದ ಸ್ನೇಹಿತರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ. ಇಷ್ಟೊಂದು ಸಂಖ್ಯೆಯಲ್ಲಿ ನೆರೆದಿರುವ ನಿಮ್ಮನ್ನು ಭೇಟಿಮಾಡಿದೆ ಇದಕ್ಕಾಗಿ ತಮಗೆಲ್ಲರಿಗೂ ನನ್ನ ಅನೇಕಾನೇಕ ಧನ್ಯವಾದಗಳು.