Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಗಪುರದಲ್ಲಿ ಪ್ರಧಾನಮಂತ್ರಿ

ನಾಗಪುರದಲ್ಲಿ ಪ್ರಧಾನಮಂತ್ರಿ

ನಾಗಪುರದಲ್ಲಿ ಪ್ರಧಾನಮಂತ್ರಿ

ನಾಗಪುರದಲ್ಲಿ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ನಾಗಪುರದಲ್ಲಿ ದೀಕ್ಷಾಭೂಮಿಗೆ ಭೇಟಿ ನೀಡಿದರು. ಅಲ್ಲಿ ಅವರು ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಜಯಂತಿಯಂದು ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಪ್ರಧಾನಮಂತ್ರಿಯವರು ಕರೋಡಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೂ ಭೇಟಿ ನೀಡಿದ ಪ್ರಧಾನಮಂತ್ರಿಯವರು, ಅದರ ಉದ್ಘಾಟನೆಯ ಅಂಗವಾಗಿ ಫಲಕ ಅನಾವರಣ ಮಾಡಿದರು. ವಿದ್ಯುತ್ ಘಟಕದ ನಿಯಂತ್ರಣ ಕಾರ್ಯಾಚರಣೆ ಕೊಠಡಿಗೂ ಅವರು ಭೇಟಿ ನೀಡಿದರು.

ಮನ್ಕಾಪುರ್ ಒಳಾಂಗಣ ಕ್ರೀಡಾ ಸಮುಚ್ಚಯದಲ್ಲಿ ಅವರು ನಾಗಪುರ ಐಐಐಟಿ, ಐಐಎಂ ಮತ್ತು ಎಐಐಎಂಎಸ್ ಭವನ ಶಂಕುಸ್ಥಾಪನೆ ಅಂಗವಾಗಿ ಡಿಜಿಟಲ್ ಫಲಕಗಳ ಅನಾವರಣ ಮಾಡಿದರು.

ಪ್ರಧಾನಮಂತ್ರಿಯವರು ಡಾ. ಬಾಬಾ ಸಾಹೇಬ್ ಬೀಮರಾವ್ ಅಂಬೇಡ್ಕರ್ ಅವರ ದೀಕ್ಷಾಭೂಮಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು. ಲಕ್ಕಿಗ್ರಾಹಕ್ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರ ಯೋಜನೆ ಮೆಗಾ ಡ್ರಾ ವಿಜೇತರಿಗೆ ಬಹುಮಾನ ವಿತರಿಸಿದರು.

ಪ್ರಧಾನಮಂತ್ರಿಯವರು ಬೀಮ್ ಆಧಾರ್ – ನಗದು ರಹಿತ ಪಾವತಿ ವ್ಯವಸ್ಥೆ ಆಧಾರಿತ ಹೆಬ್ಬೆಟ್ಟಿನ ಗುರುತನ್ನು ಗುರುತಿಸುವ ಬಯೋ ಮೆಟ್ರಿಕ್ ವ್ಯವಸ್ಥೆಗೂ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ನರೇಂದ್ರ ಮೋದಿ ಅವರು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ತಾವು ನಾಗಪುರದಲ್ಲಿರುವುದಕ್ಕೆ ಅತೀವ ಸಂತೋಷವಾಗಿದೆ. ದೀಕ್ಷಾಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ದೊರೆತಿದ್ದು ತಮಗೆ ದೊರೆತ ಗೌರವ ಎಂದು ಅವರು ಹೇಳಿದರು.

ಡಾ. ಅಂಬೇಡ್ಕರ್ ಅವರಲ್ಲಿ ದ್ವೇಷ ಅಥವಾ ಕಹಿಯನ್ನು ಹುಡುಕಲು ಸಾಧ್ಯವಿರಲಿಲ್ಲ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಶೇಷತೆ ಎಂದು ಹೇಳಿದರು.

ಕರೋಡಿ ವಿದ್ಯುತ್ ಕೇಂದ್ರದ ವಿಚಾರದಲ್ಲಿ ಮಾತನಾಡಿದ ಪ್ರಧಾನಿ, 21 ಶತಮಾನದಲ್ಲಿ ಇಂಧನ ವಲಯಕ್ಕೆ ತುಂಬಾ ಮಹತ್ವ ಇದೆ. ಭಾರತ ಸರ್ಕಾರ ನವೀಕರಿಸಬಹುದಾದ ಇಂಧನ ವಲಯಕ್ಕೆ ಒತ್ತು ನೀಡಿ ಗಣನೀಯ ಪ್ರಯತ್ನ ಮಾಡುತ್ತಿದೆ ಎಂದರು.

ಜನರ ಬಲಿದಾನದ ಫಲವಾಗಿ ಭಾರತ ಸ್ವತಂತ್ರವಾಯಿತು ಎಂಬುದನ್ನು ಸ್ಮರಿಸಿದ ಪ್ರಧಾನಿ, ಪ್ರತಿಯೊಬ್ಬ ಭಾರತೀಯರಿಗೂ ತಮ್ಮದೇ ಆದ ಸ್ವಂತ ಮನೆ ಇರಬೇಕು. ಅದು ವಿದ್ಯುತ್, ನೀರು ಮತ್ತು ಮೂಲ ಸೌಕರ್ಯಗಳಿಂದ ಕೂಡಿರಬೇಕು ಎಂದರು.

ಬೀಮ್ ಆಪ್ ದೇಶದಾದ್ಯಂತ ಹಲವರ ಬದುಕಿನ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರಿದೆ ಎಂದು ಪ್ರಧಾನಿ ತಿಳಿಸಿದರು. ಡಿಜಿಧನ್ ಆಂದೋಲನ ಸಹ ಭ್ರಷ್ಟಾಚಾರದ ವಿರುದ್ಧದ ಶುದ್ಧೀಕರಣ ಅಭಿಯಾನವಾಗಿದೆ ಎಂದರು.

****

AKT/AK