Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ನವ ಭಾರತ – ಮಂಥನ” ವಿಷಯದ ಕುರಿತಂತೆ ವೀಡಿಯೋ ಸಂವಾದದ ಮೂಲಕ ದೇಶಾದ್ಯಂತದ ಜಿಲ್ಲಾಧಿಕಾರಿಗಳನ್ನುದ್ದೇಶಿಸಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ನವ ಭಾರತ – ಮಂಥನ” ವಿಷಯದ ಕುರಿತಂತೆ ವಿಡಿಯೋ ಸಂವಾದದ ಮೂಲಕ ದೇಶಾದ್ಯಂತದ ಜಿಲ್ಲಾಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ 75ನೇ ವರ್ಷಾಚರಣೆ ಅಂಗವಾಗಿ ಇದೇ ಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಈ ಸಂವಾದವು “ನವ ಭಾರತ -ಮಂಥನ” ವನ್ನು ಬೇರು ಮಟ್ಟದಲ್ಲಿ ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ.

ಆಗಸ್ಟ್ 9ರ ದಿನಾಂಕವು ‘ಸಂಕಲ್ಪದಿಂದ ಸಿದ್ಧಿ’ ಮಂತ್ರದೊಂದಿಗೆ ಅಂತರ್ಗತವಾದ ನಂಟು ಹೊಂದಿದೆ ಎಂದು ಪ್ರಧಾನಿ ಹೇಳಿದರು. ಈ ದಿನಾಂಕವು ಯುವಜನರ ಆಶೋತ್ತರ ಮತ್ತು ಇಚ್ಛಾಶಕ್ತಿಯ ಸಂಕೇತವಾಗಿದೆ ಎಂದರು.

ಕ್ವಿಟ್ ಇಂಡಿಯಾ ಚಳವಳಿಯ ಆರಂಭದಲ್ಲಿ ಹೇಗೆ ಹಿರಿಯ ಸ್ವಾತಂತ್ರ ಹೋರಾಟಗಾರರು ಬಂಧಿತರಾದರು ಎಂಬುದನ್ನು ಸ್ಮರಿಸಿದ ಶ್ರೀ ನರೇಂದ್ರ ಮೋದಿ, ದೇಶಾದ್ಯಂತ ಇರುವ ಯುವಜನರು ಯಶಸ್ವಿಯಾಗಿ ಈ ಚಳವಳಿಯನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂದರು.
ಯಾವಾಗ ಯುವಜನರು ನಾಯಕತ್ವ ಪಾತ್ರ ವಹಿಸಿದರೆ, ಗುರಿಯನ್ನು ಸುಲಭವಾಗಿ ಸಾಧಿಸಬಹುದು ಎಂದರು. ಜಿಲ್ಲಾಧಿಕಾರಿಗಳು ಕೇವಲ ಆ ಜಿಲ್ಲೆಯ ಪ್ರತಿನಿಧಿಗಳಷ್ಟೇ ಅಲ್ಲ, ಅವರು ಆ ವಲಯದ ಯುವಜನರು ಎಂದು ಹೇಳಿದರು. ದೇಶಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಅವಕಾಶವನ್ನು ಪಡೆದ ಜಿಲ್ಲಾಧಿಕಾರಿಗಳು ಅದೃಷ್ಟವಂತರು ಎಂದು ಪ್ರಧಾನಿ ಹೇಳಿದರು.

ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಕುಟುಂಬ, ಪ್ರತಿಯೊಂದು ಸಂಘಟನೆಗೂ 2022ರ ಹೊತ್ತಿಗೆ  ನಿರ್ದಿಷ್ಟ ಗುರಿ ಹೊಂದುವಂತೆ ಸರ್ಕಾರ ಕೋರಿದೆ ಎಂದು ಪ್ರಧಾನಿ ಹೇಳಿದರು. ಜಿಲ್ಲೆಯ ಪ್ರತಿನಿಧಿಯಾಗಿ ಜಿಲ್ಲಾಧಿಕಾರಿಗಳು, 2022ರಲ್ಲಿ ತಮ್ಮ ಜಿಲ್ಲೆಯಲ್ಲಿ ಯಾವ ಎತ್ತರದಲ್ಲಿ ಕಾಣ ಬಯಸುತ್ತಾರೆ, ಯಾವ ನ್ಯೂನತೆಯಿಂದ ಹೊರಬರಬೇಕು ಮತ್ತು ಯಾವ ಸೇವೆಯ ಖಾತ್ರಿ ಒದಗಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದರು.

ಕೆಲವು ಜಿಲ್ಲೆಗಳು ವಿದ್ಯುತ್, ನೀರು, ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಸದಾ ಹಿಂದೆ ಬಿದ್ದಿವೆ ಎಂಬುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಯಾವಾಗ 100ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಆರ್ಥಿಕ ಮಟ್ಟ ಸುಧಾರಿಸುತ್ತದೆಯೋ ಆಗ ಅದು ದೇಶದ ಒಟ್ಟಾರೆ ಅಭಿವೃದ್ಧಿಯ ಮಾನದಂಡಗಳಿಗೆ ದೊಡ್ಡ ಚೈತನ್ಯ ನೀಡುತ್ತದೆ ಎಂದರು. ಇದು ಅಭಿಯಾನದೋಪಾದಿಯಲ್ಲಿ ಕೆಲಸ ಮಾಡಲು ಜಿಲ್ಲಾಧಿಕಾರಿಗಳ ಮೇಲೆ ಜವಾಬ್ದಾರಿ ಹೊರಿಸಿದೆ ಎಂದರು.

ಪ್ರಧಾನ ಮಂತ್ರಿಗಳು ಉತ್ತಮ ಫಲಶ್ರುತಿ ಬಂದಿರುವ ಜಿಲ್ಲೆಗಳ ಉತ್ತಮ ಪದ್ಧತಿಗಳನ್ನು ಪುನರಾವರ್ತಿಸುವಂತೆ ಮತ್ತು ಅಂಥ ಪದ್ಧತಿಗಳನ್ನು ನಿರ್ದಿಷ್ಟ ಕ್ಷೇತ್ರ ಅಥವಾ ಯೋಜನೆಗಳಲ್ಲಿ ಹೆಚ್ಚಳ ಮಾಡುವಂತೆ ಪ್ರಧಾನಿ ಪ್ರೋತ್ಸಾಹ ನೀಡಿದರು.

ಮುನ್ನೋಟದ ದಸ್ತಾವೇಜು ಅಥವಾ ಸಂಕಲ್ಪ ದಸ್ತಾವೇಜನ್ನು ರೂಪಿಸಲು ಜಿಲ್ಲೆಯ ಬುದ್ಧಿಜೀವಿಗಳು, ಸಹೋದ್ಯೋಗಿಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೆರವು ಪಡೆದು ಆಗಸ್ಟ್ 15ರೊಳಗೆ ಸಲ್ಲಿಸುವಂತೆ ಸೂಚಿಸಿದರು. ಈ ಸಂಕಲ್ಪ ದಸ್ತಾವೇಜು 2022ರ ಹೊತ್ತಿಗೆ ಅವರು ಸಾಧಿಸಲು ಉದ್ದೇಶಿಸಿರುವ 10 ಅಥವಾ 15 ಉದ್ದೇಶಗಳನ್ನು ಒಳಗೊಂಡಿರಬೇಕು ಎಂದು ಹೇಳಿದರು.

ಸಂಕಲ್ಪದಿಂದ ಸಿದ್ಧಿ ಚಳವಳಿಗೆ ಸಂಬಂಧಿಸಿದ ಸಾಧನೆಗಳು ಮತ್ತು ಮಾಹಿತಿಯನ್ನು ಒಳಗೊಂಡ www.newindia.in ಅಂತರ್ಜಾಲ ತಾಣದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮಾಹಿತಿ ನೀಡಿದರು. ತಾವು ಜಿಲ್ಲಾಧಿಕಾರಿಗಳೊಂದಿಗೆ ಈ ಮಂಥನ ಕಾರ್ಯಕ್ರಮ ನಡೆಸಿದಂತೆಯೇ ಜಿಲ್ಲಾಧಿಕಾರಿಗಳೂ ಸಹ ತಮ್ಮ ಜಿಲ್ಲೆಗಳಲ್ಲಿ ನಡೆಸಬಹುದು ಎಂದರು.

ನ್ಯೂ ಇಂಡಿಯಾ ಅಂತರ್ಜಾಲ ತಾಣದ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ, ಇದರಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕುರಿತ ಆನ್ ಲೈನ್ ರಸಪ್ರಶ್ನೆ ಮತ್ತು ಸಂಕಲ್ಪದಿಂದ ಸಿದ್ಧಿಯ ಭಾಗವಾದ ವಿವಿಧ ಕಾರ್ಯಕ್ರಮಗಳ ಸಮಗ್ರ ವೇಳಾಪಟ್ಟಿಯೂ ಇದೆ ಎಂದರು.

ಜಿಲ್ಲೆಯೊಂದರ ಅಭಿವೃದ್ಧಿಯನ್ನು ಪ್ರಧಾನಮಂತ್ರಿಯವರು ರಿಲೆ ಓಟದ ಸ್ಪರ್ಧೆಗೆ ಹೋಲಿಸಿದರು. ಆ ಓಟದಲ್ಲಿ ದಂಡವನ್ನು ಒಬ್ಬ ಅಥ್ಲೀಟ್ ಮತ್ತೊಬ್ಬರ ಕೈಗೆ ಹಸ್ತಾಂತರಿಸುತ್ತಾರೆ, ಅವರ ಅಂತಿಮ ಗುರಿ ಗೆಲುವು ಆಗಿರುತ್ತದೆ, ಅದೇ ರೀತಿ ಅಭಿವೃದ್ಧಿಯ ದಂಡವನ್ನು ಒಬ್ಬ ಜಿಲ್ಲಾಧಿಕಾರಿ ಮತ್ತೊಬ್ಬ ಜಿಲ್ಲಾಧಿಕಾರಿಗೆ ಹಸ್ತಾಂತರಿಸಬೇಕು ಎಂದರು.

ಹಲವು ಬಾರಿ, ಯೋಜನೆಗಳು ತಮ್ಮ ಅಪೇಕ್ಷಿತ ಫಲ ನೀಡುವಲ್ಲಿ ಸೋಲುತ್ತವೆ, ಕಾರಣ ಅದರ ಬಗ್ಗೆ ಜನರಿಗೆ ಅರಿವು ಇರುವುದಿಲ್ಲ ಎಂದು ಪ್ರಧಾನಿ ಹೇಳಿದರು. ಜಿಲ್ಲಾಧಿಕಾರಿಗಳು ಎಲ್.ಇ.ಡಿ. ಬಲ್ಬ್, ಭೀಮ್ ಆಪ್ ಇತ್ಯಾದಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು. ಅದೇ ರೀತಿ ಸ್ವಚ್ಛ ಭಾರತ ಅಭಿಯಾನವು ಸ್ಪಂದನಾತ್ಮಕ ಆಡಳಿತ ಮತ್ತು ಜನರಲ್ಲಿ ಈ ಕುರಿತ ಜಾಗೃತಿಯನ್ನವಲಂಬಿಸಿದೆ ಎಂದರು. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ನೈಜ ಬದಲಾವಣೆ ಬರಲು ಸಾಧ್ಯ ಎಂದು ಅವರು ಹೇಳಿದರು.

ಜಿಲ್ಲೆಯ ದೂರದ ಭಾಗಗಳಲ್ಲಿನ ಆರೋಗ್ಯ ಸೇವೆಯೇ ಮೊದಲಾದ ವಿಚಾರಗಳ ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಕಡತಗಳಿಂದ ಹೊರಬಂದು, ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಕರೆ ನೀಡಿದರು. ಯಾರು ಹೆಚ್ಚು ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೋ ಅಂಥ ಜಿಲ್ಲಾಧಿಕಾರಿಗಳು ಕಡತದ ವಿಚಾರದಲ್ಲೂ ಹೆಚ್ಚು ಸಕ್ರಿಯರಾಗಿರುತ್ತಾರೆ ಎಂದರು. ಜಿಎಸ್ಟಿ ಕುರಿತಂತೆ ಮಾತನಾಡಿದ ಪ್ರಧಾನಿ, ತಮ್ಮ ತಮ್ಮ ಜಿಲ್ಲೆಯ ವ್ಯಾಪಾರಿಗಳಿಗೆ ಜಿಎಸ್ಟಿ ಹೇಗೆ ಉತ್ತಮ ಮತ್ತು ಸರಳ ತೆರಿಗೆ ಎಂಬುದನ್ನು ಮನವರಿಕೆ ಮಾಡಿಸಬೇಕು ಎಂದರು. ಪ್ರತಿಯೊಬ್ಬ ವ್ಯಾಪಾರಿಯೂ ಜಿಎಸ್ಟಿ ಅಡಿಯಲ್ಲಿ ನೋಂದಣಿ ಆಗಿರುವುದರ ಖಾತ್ರಿ ಪಡಿಸಿಕೊಳ್ಳುವಂತೆ ತಿಳಿಸಿದರು. ತಮ್ಮ ಜಿಲ್ಲೆಗಳಲ್ಲಿನ ದಾಸ್ತಾನಿಗೆ ಸರ್ಕಾರದ ಇ ಮಾರುಕಟ್ಟೆ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಬಡವರಲ್ಲೇ ಬಡವರ ಜೀವನಮಟ್ಟವನ್ನು ಸುಧಾರಿಸುವುದು ಸರ್ಕಾರದ ಅಂತಿಮ ಗುರಿಯಾಗಬೇಕು ಎಂಬ ಮಹಾತ್ಮಾ ಗಾಂಧಿ ಅವರ ಸಂದೇಶವನ್ನು ಪ್ರಧಾನಿ ಸ್ಮರಿಸಿದರು. ತಾವು ಬಡವರ ಜೀವನದಲ್ಲಿ ಬದಲಾವಣೆ ತರಲು ಏನಾದರೂ ಮಾಡಿದ್ದೇವೆಯೇ ಎಂಬ ಬಗ್ಗೆ ನಿತ್ಯವೂ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮನವಿ ಮಾಡಿದರು. ತಮ್ಮ ಕುಂದುಕೊರತೆಯ ಬಗ್ಗೆ ಹೇಳಿಕೊಳ್ಳಲು ಬರುವ ಬಡವರ ಸಂಕಷ್ಟವನ್ನು ಎಚ್ಚರಿಕೆಯಿಂದ ಆಲಿಸುವಂತೆ ಪ್ರಧಾನಿ ತಿಳಿಸಿದರು.

ಕೊನೆಯಲ್ಲಿ, ಪ್ರಧಾನಮಂತ್ರಿಯವರು, ಎಲ್ಲ ಜಿಲ್ಲಾಧಿಕಾರಿಗಳೂ ಯುವಕರು ಮತ್ತು ಸಮರ್ಥರಾಗಿದ್ದಾರೆ ಮತ್ತು ಅವರು ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ 2022ರ ನವ ಭಾರತಕ್ಕೆ ಸಂಕಲ್ಪತೊಡಬೇಕು ಎಂದು ತಿಳಿಸಿದರು.  ಅವರ ಸಂಕಲ್ಪದ ಪ್ರಕ್ರಿಯೆಯು ದೇಶದ ಸಾಧನೆಗೂ ನೆರವಾಗುತ್ತದೆ, ಅದು ಸಾಧನೆಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

***

AKT/NT/SH