Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವೋದ್ಯಮಗಳಿಗೆ ಹಣಕಾಸಿನ ಬೆಂಬಲ ನೀಡಲು ನಿಧಿಯ ನಿಧಿ ಸ್ಥಾಪನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿವಿಧ ಪರ್ಯಾಯ ಹೂಡಿಕೆ ನಿಧಿ (ಎ.ಐ.ಎಫ್.)ಗೆ ಕೊಡುಗೆ ನೀಡಲು ನವೋದ್ಯಮಗಳಿಗೆ ಹಣಕಾಸು ಬೆಂಬಲ ನೀಡುವ ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (ಸೆಬಿ)ಯಲ್ಲಿ ನೋಂದಣಿಯಾಗಿರುವ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನಲ್ಲಿ “ನವೋದ್ಯಮಗಳಿಗೆ ಹಣ ನೀಡುವ ನಿಧಿ” (ಎಫ್.ಎಫ್.ಎಸ್.) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. ಇದು 2016ರ ಜನವರಿಯಲ್ಲಿ ಭಾರತ ಸರ್ಕಾರ ಆರಂಭಿಸಿದ ಭಾರತ ನವೋದ್ಯಮದ ಕ್ರಿಯಾ ಯೋಜನೆಗನುಗುಣವಾಗಿದೆ.

ಎಫ್. ಎಫ್ ಎಸ್ ಕಾಪುನಿಧಿ 10 ಸಾವಿರ ಕೋಟಿ ರೂಪಾಯಿಗಳಾಗಿದ್ದು, ಇದನ್ನು 14 ಮತ್ತು 15 ಹಣಕಾಸು ಆಯೋಗದ ಆವರ್ತನೆಯಲ್ಲಿ ಯೋಜನೆಯ ಪ್ರಗತಿ ಮತ್ತು ನಿಧಿಯ ಲಭ್ಯತೆಗೆ ಅನುಗುಣವಾಗಿ ಬೆಳೆಸಲಾಗುತ್ತದೆ. ಈಗಾಗಲೇ ಎಫ್.ಎಫ್.ಎಸ್. ಕಾಪು ನಿಧಿಗೆ 500 ಕೋಟಿ ರೂಪಾಯಿಗಳ ಮೊತ್ತವನ್ನು 2015-16ನೇ ಸಾಲಿನಲ್ಲಿ ಒದಗಿಸಲಾಗಿದ್ದು, 2016-17ನೇ ಸಾಲಿಗೆ 600 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಈ ನಿಧಿಯು ಪೂರ್ಣ ನಿಯುಕ್ತಿಗೊಂಡ ಬಳಿಕ 18 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆ ಇದೆ.

ಮತ್ತಷ್ಟು ಒದಗಣೆಯನ್ನು ಅನುದಾನದ ನೆರವಿನ ರೂಪದಲ್ಲಿ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ (ಡಿಐಪಿಪಿ)ಯ ನಿವ್ವಳ ಆಯವ್ಯಯ ಬೆಂಬಲದೊಂದಿಗೆ ರೂಪಿಸಲಾಗುತ್ತದೆ, ಇದು ಭಾರತ ನವೋದ್ಯಮ ಕ್ರಿಯಾಯೋಜನೆಯ ಸಾಧನೆಯ ಪರಾಮರ್ಶೆ ಮತ್ತು ಮೇಲ್ವಿಚಾರಣೆ ನಡೆಸಲಿದೆ.

ಎಸ್.ಐ.ಡಿ.ಬಿ.ಐ.ನ ತಜ್ಞತೆಯನ್ನು ಎಫ್.ಎಫ್.ಎಸ್.ನ ದೈನಂದಿನ ಕಾರ್ಯನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಮೈಲಿಗಲ್ಲು ಮತ್ತು ಕಾಲಮಿತಿಯ ಜಾರಿಗೆ ಅವಕಾಶ ನೀಡಲು ಸಾಧನೆಯ ಪರಾಮರ್ಶೆ ಮತ್ತು ಮೇಲ್ವಿಚಾರಣೆಯನ್ನು ನವೋದ್ಯಮದ ಕ್ರಿಯಾ ಯೋಜನೆಯ ಅನುಷ್ಠಾನದೊಂದಿಗೆ ಬೆಸೆಯಲಾಗಿದೆ.

ರೂ. 10,000 ಕೋಟಿ ಕಾಪುನಿಧಿಯು 60 ಸಾವಿರ ಕೋಟಿ ರೂಪಾಯಿಗಳ ಈಕ್ವಿಟಿ ಬಂಡವಾಳ ಮತ್ತು ಸಾಲಹೂಡಿಕೆಯ ದುಪ್ಪಟ್ಟುಗೊಳಿಸಲು ವೇಗವರ್ಧಕ ಬೀಜಕಣವಾಗಿದೆ. ಇದು ನವೋದ್ಯಮಗಳಿಗೆ ಸ್ಥಿರ ಮತ್ತು ಊಹಿಸಬಲ್ಲ ಮೂಲವನ್ನು ಒದಗಿಸುತ್ತದೆ ಮತ್ತು ಆ ಮೂಲಕ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಸುತ್ತದೆ.

ಹಿನ್ನೆಲೆ:

ನಾವಿನ್ಯತೆಯಿಂದ ವೇಗವರ್ದನೆ ಪಡೆಯುವ ಉದ್ಯಮಶೀಲತೆ ಮತ್ತು ನವೋದ್ಯಮಗಳ ಮೂಲಕ ವಾಣಿಜ್ಯದ ಸೃಷ್ಟಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಪ್ರಮುಖವಾಗಿದೆ. ವೆಂಚರ್ ಕ್ಯಾಪಿಟಲ್ ಕುರಿತ ತಜ್ಞರ ಮಂಡಳಿ ಮುಂದಿನ 10 ವರ್ಷಗಳಲ್ಲಿ 2500 ಅತ್ಯುನ್ನತವಾಗಿ ಮೇಲೇರಬಲ್ಲ ವಾಣಿಜ್ಯವನ್ನು ಕಟ್ಟುವ ಸಾಮರ್ಥ್ಯ ಭಾರತಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ, ಮತ್ತು ಉದ್ಯಮಶೀಲತೆಯ ಸಾಧ್ಯತೆಗಳ ಯಶಸ್ಸಿಗೆ ಅಂದರೆ 2,500 ದೊಡ್ಡ ಪ್ರಮಾಣದ ವಾಣಿಜ್ಯ ರೂಪಿಸಲು 10 ಸಾವಿರ ನವೋದ್ಯಮಗಳ ಅಗತ್ಯವಿದೆ.

ನವೋದ್ಯಮಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ – ದೇಶೀಯ ರಿಸ್ಕ್ ಬಂಡವಾಳದ ಸೀಮಿತ ಲಭ್ಯತೆ, ಸಾಂಪ್ರದಾಯಿಕ ಬ್ಯಾಂಕ್ ಗಳ ಆರ್ಥಿಕ ನೆರವಿನ ನಿರ್ಬಂಧಗಳು, ಮಾಹಿತಿಯ ಅಸಮಾನತೆ ಮತ್ತು ವಿಶ್ವಾಸಾರ್ಹ ಸಂಸ್ಥೆಗಳು ಕೈಹಿಡಿಯದಿರುವಿಕೆ. ಯಶಸ್ವೀ ನವೋದ್ಯಮಗಳಿಗೆ ಬಹುತೇಕ ವಿದೇಶೀ ವೆಂಚರ್ ಹಣಕಾಸು ನೆರವು ದೊರೆತಿದೆ ಮತ್ತು ಅವರಲ್ಲಿ ಹಲವರು ಇಂಥ ನೆರವು ಪಡೆಯಲು ದೇಶದ ಹೊರಗೆ ನೆಲೆಸಿದ್ದಾರೆ.

ನಿಧಿಗಾಗಿ ನಿಧಿಯಿಂದ ಸಮರ್ಪಿತ ಹಣಕಾಸು ನೆರವು ನೀಡುವ ಕಾರ್ಯಾಚರಣೆ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಾವಿನ್ಯದ ನವೋದ್ಯಮಗಳು ಪೂರ್ಣ ಪ್ರಮಾಣದ ವಾಣಿಜ್ಯ ಕಾಯಗಳಾಗಿ ಹೊರಹೊಮ್ಮಲು ನೆರವಿನ ಹರಿವಿಗೆ ಅವಕಾಶ ನೀಡುತ್ತದೆ. ಇದು ಸ್ಥಾಪನೆ ಹಂತದಲ್ಲಿ, ಆರಂಭಿಕ ಹಂತದಲ್ಲಿ ಮತ್ತು ಬೆಳವಣಿಗೆ ಹಂತದಲ್ಲಿ ಬೆಂಬಲ ಒಳಗೊಂಡಿರುತ್ತದೆ.

ವೈಯಕ್ತಿಕ ನಿಧಿಯ ಕಾಪು ಗುರಿಗೆ ಬಂಡವಾಳದಾರನಾಗಿ ಸರ್ಕಾರ ಕೊಡುಗೆ ನೀಡುತ್ತದೆ, ಖಾಸಗಿ ಬಂಡವಾಳದಾರರ ಹೆಚ್ಚಿನ ಭಾಗವಹಿಸುವಿಕೆಗೆ ಪ್ರೋತ್ಸಾಹಿಸಲು ಮತ್ತು ದೊಡ್ಡ ಪ್ರಮಾಣದ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ನೆರವಾಗುತ್ತದೆ.