Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವೆಂಬರ್ 18 ರಂದು ನಡೆಯಲಿರುವ 3ನೇ ‘ ನೋ ಮನಿ ಫಾರ್ ಟೆರರ್ ‘ (ಭಯೋತ್ಪಾದನೆಗೆ ಹಣವಿಲ್ಲ) ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಸಚಿವರ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 18ರಂದು ಬೆಳಗ್ಗೆ 9.30ಕ್ಕೆ ನವದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ನಡೆಯಲಿರುವ ಮೂರನೇ ‘ ನೋ ಮನಿ ಫಾರ್ ಟೆರರ್ ‘ (ಎನ್ ಎಂಎಫ್ ಟಿ) ಭಯೋತ್ಪಾದನಾ ನಿಗ್ರಹ ಹಣಕಾಸು ಕುರಿತ ಸಚಿವರ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ನವೆಂಬರ್ 18-19 ರಂದು ಆಯೋಜಿಸಲಾಗಿರುವ ಎರಡು ದಿನಗಳ ಸಮ್ಮೇಳನವು, ಭಯೋತ್ಪಾದನೆ ನಿಗ್ರಹ ಹಣಕಾಸು ಮತ್ತು ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಪ್ರಸ್ತುತ ಅಂತಾರಾಷ್ಟ್ರೀಯ ಆಡಳಿತದ ಪರಿಣಾಮಕಾರಿತ್ವದ ಬಗ್ಗೆ ಚರ್ಚಿಸಲು ಭಾಗವಹಿಸುವ ರಾಷ್ಟ್ರಗಳು ಮತ್ತು ಸಂಸ್ಥೆಗಳಿಗೆ ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ.

 ಈ ಸಮಾವೇಶವು ಹಿಂದಿನ ಎರಡು ಸಮ್ಮೇಳನಗಳ ಲಾಭ ಮತ್ತು ಕಲಿಕೆಗಳ ಮೇಲೆ (2018ರ  ಏಪ್ರಿಲ್  ನಲ್ಲಿ ಪ್ಯಾರಿಸ್ ನಲ್ಲಿ ಮತ್ತು 2019 ರ ನವೆಂಬರ್ ನಲ್ಲಿ ಮೆಲ್ಬೋರ್ನ್ ನಲ್ಲಿ ನಡೆಯಿತು) ಮತ್ತು ಭಯೋತ್ಪಾದಕರಿಗೆ ಹಣಕಾಸು ನಿರಾಕರಿಸಲು ಜಾಗತಿಕ ಸಹಕಾರವನ್ನು ಹೆಚ್ಚಿಸಲು ಮತ್ತು ಕಾರ್ಯನಿರ್ವಹಿಸಲು ಅನುಮತಿಯ ಅಧಿಕಾರವ್ಯಾಪ್ತಿಗಳಿಗೆ ಪ್ರವೇಶವನ್ನು ಹೆಚ್ಚಿಸುವತ್ತ ಕೆಲಸ ಮಾಡುತ್ತದೆ. ಸಚಿವರು, ಬಹುಪಕ್ಷೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಪ್ರತಿನಿಧಿಗಳ ಮುಖ್ಯಸ್ಥರು ಸೇರಿದಂತೆ ವಿಶ್ವದಾದ್ಯಂತದ ಸುಮಾರು 450 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ನಾಲ್ಕು ಗೋಷ್ಠಿಗಳಲ್ಲಿ ‘ ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸು ಕ್ಷೇತ್ರದಲ್ಲಿ ಜಾಗತಿಕ ಪ್ರವೃತ್ತಿಗಳು ‘, ‘ ಭಯೋತ್ಪಾದನೆಗೆ ನಿಧಿಗಳ ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗಗಳ ಬಳಕೆ ‘, ‘ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಭಯೋತ್ಪಾದಕ ಹಣಕಾಸು ‘ ಮತ್ತು ‘ ಭಯೋತ್ಪಾದಕ ಹಣಕಾಸು ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ ‘ ಕುರಿತು ಚರ್ಚೆ ನಡೆಯಲಿದೆ.

*****