Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವೆಂಬರ್‌ 18ರಂದು ʻತಡೆರಹಿತ ಸಾಲದ ಹರಿವು ಮತ್ತು ಆರ್ಥಿಕ ಬೆಳವಣಿಗೆಗಾಗಿ ಸಮನ್ವಯ ಸೃಷ್ಟಿʼ ಕುರಿತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ತಡೆರಹಿತ ಸಾಲದ ಹರಿವು ಮತ್ತು ಆರ್ಥಿಕ ಬೆಳವಣಿಗೆಗಾಗಿ ಸಮನ್ವಯ ಸೃಷ್ಟಿಕುರಿತ ಸಮಾವೇಶದ ಸಮಾರೋಪ ಸಮಾರಂಭನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು 2021 ನವೆಂಬರ್ 17-18ರಂದು ಸಮಾವೇಶವನ್ನು ಆಯೋಜಿಸಿದೆ. ವಿವಿಧ ಸಚಿವಾಲಯಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳು  ಇದರಲ್ಲಿ ಭಾಗವಹಿಸಲಿದ್ದಾರೆ.

ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು ಸಹ ಉಪಸ್ಥಿತರಿರುವರು.

***