Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಮಾತೃದೇವತೆಯ ಆರಾಧನೆಗೆ ಸಮರ್ಪಿತವಾದ ಪಂಡಿತ್ ಜಸರಾಜ್ ಜೀ ಅವರ ಸ್ತುತಿಗೀತೆಯನ್ನೂ ಅವರು ಹಂಚಿಕೊಂಡರು.

ಈ ಸಂಬಂಧ  ಎಕ್ಸ್ ಖಾತೆಯಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಅವರು ಹೀಗೆ ಬರೆದಿದ್ದಾರೆ:

“ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿ ಸಾಧನೆಯ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನವನ್ನು ಧೈರ್ಯ, ಸಂಯಮ ಮತ್ತು ಶಕ್ತಿಯಿಂದ ತುಂಬಲಿ. ಜೈ ಮಾತಾ ದಿ!”

“ನವರಾತ್ರಿಯ ಪ್ರಾರಂಭವು ಮಾತಾ ಆರಾಧಕರಲ್ಲಿ ಭಕ್ತಿಯ ಹೊಸ ಉಲ್ಲಾಸವನ್ನು ಜಾಗೃತಗೊಳಿಸುತ್ತದೆ. ತಾಯಿ ದೇವಿಯ ಆರಾಧನೆಗೆ ಸಮರ್ಪಿತವಾದ ಪಂಡಿತ್ ಜಸರಾಜ್ ಜೀ ಅವರ ಈ ಸ್ತುತಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ,’’ ಎಂದಿದ್ದಾರೆ.

 

 

*****