ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಆವರಣದಿಂದ 77ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗಡಿಭಾಗದ ಗ್ರಾಮಗಳಿಗಾಗಿ ಸರ್ಕಾರವು ವೈಬ್ರಂಟ್ ವಿಲೇಜ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಈ ಮೊದಲು ಈ ಗ್ರಾಮಗಳನ್ನು ದೇಶದ ಕೊನೆಯ ಗ್ರಾಮಗಳೆಂದು ಪರಿಗಣಿಸಲಾಗುತ್ತಿತ್ತು ಆದರೆ ಆ ಗ್ರಹಿಕೆ ಬದಲಾಗಿದೆ ಎಂದರು. ಈ ಗ್ರಾಮಗಳು ಕೊನೆಯ ಗ್ರಾಮಗಳಲ್ಲ, ಗಡಿಭಾಗದ ಮೊದಲ ಗ್ರಾಮಗಳಾಗಿವೆ ಎಂದರು.
ಪೂರ್ವದಲ್ಲಿ ಸೂರ್ಯೋದಯವಾದಾಗ ಸೂರ್ಯನ ಮೊದಲ ಕಿರಣ ಆ ಕಡೆಯ ಗಡಿಗ್ರಾಮಕ್ಕೆ ತಗಲುತ್ತದೆ ಎಂದ ಅವರು, ಸೂರ್ಯ ಮುಳುಗಿದಾಗ ಈ ಕಡೆಯ ಗಡಿಭಾಗದ ಗ್ರಾಮ ಕೊನೆಯ ಕಿರಣದ ಲಾಭ ಪಡೆಯುತ್ತದೆ ಎಂದರು.
ಸುಮಾರು 600 ಗಡಿ ಗ್ರಾಮಗಳ ಮುಖ್ಯಸ್ಥರನ್ನು ವಿಶೇಷ ಅತಿಥಿಗಳಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲು ಆಹ್ವಾನಿಸಿರುವುದಕ್ಕೆ ಪ್ರಧಾನಮಂತ್ರಿ ಯವರು ಸಂತಸ ವ್ಯಕ್ತಪಡಿಸಿದರು. ಈ ವಿಶೇಷ ಅತಿಥಿಗಳು ಹೊಸ ಸಂಕಲ್ಪ ಮತ್ತು ಶಕ್ತಿಯೊಂದಿಗೆ ಪ್ರಥಮ ಬಾರಿಗೆ ಇಲ್ಲಿಯವರೆಗೆ ಬಂದಿದ್ದಾರೆ ಎಂದು ಹೇಳಿದರು.
****