Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಹಿಂದಿ ಸಮಿತಿಯ 31ನೇ ಸಭೆ ನಡೆಯಿತು.


ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಹಿಂದಿ ಸಮಿತಿಯ 31ನೇ ಸಭೆ ಜರುಗಿತು.

ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಸೃಜನಾತ್ಮಕ ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಕ್ಕಾಗಿ ಸಮಿತಿಯ ಸದಸ್ಯರನ್ನು ಅಭಿನಂದಿಸಿದರು.

ಪ್ರತಿದಿನದ ವ್ಯವಹಾರಗಳಲ್ಲಿ ಮಾತನಾಡುವ ಮೂಲಕ ಹಿಂದಿಭಾಷೆಯ ವಿಸ್ತರಣೆಯಾಗಬೇಕು ಮತ್ತು ಕಚೇರಿ ವ್ಯವಹಾರಗಳಿಗಾಗಿ ಸಂಕೀರ್ಣ ತಾಂತ್ರಿಕ ಶಬ್ದಗಳನ್ನು ಬಿಟ್ಟು ಅಥವಾ ಕನಿಷ್ಠವಾಗಿ ಬಳಸಿಕೊಳ್ಳಬೇಕು. ಸರಕಾರದಲ್ಲಿ ಮತ್ತು ಸಮಾಜದಲ್ಲಿ ಹಿಂದಿ ಬಳಕೆಯ ನಡುವಣ ಅಂತರವನ್ನು ಕಡಿಮೆಗೊಳಿಸಬೇಕು, ಮತ್ತು ಈ ನಿಟ್ಟಿನ ಪ್ರಚಾರದ ಮುಂಚೂಣಿಗಾಗಿ ಶಿಕ್ಷಣ ಸಂಸ್ಥೆಗಳು ಸಹಾಯಮಾಡಬಹುದು ಎಂದು ಪ್ರಧಾನಮಂತ್ರಿ ತಿಳಿಸಿದರು.

ವಿಶ್ವದಾದ್ಯಂತದ ಅವರ ಅನುಭವವನ್ನು ಉಲ್ಲೇಖಿಸುತ್ತಾ, ಪ್ರಧಾನಮಂತ್ರಿ ಅವರು “ ನಾವು ಹಿಂದಿ ಸೇರಿದಂತೆ ಇತರ ಎಲ್ಲ ಭಾರತೀಯ ಭಾಷೆಗಳ ಸಹಾಯದಿಂದಲೇ ಪೂರ್ತಿ ಪ್ರಪಂಚವನ್ನೇ ಸಂಪರ್ಕ ಮಾಡಲು ಸಾದ್ಯವಿದೆ” ಎಂದು ಎಲ್ಲ ಸದಸ್ಯರಿಗೆ ತಿಳಿಸಿದರು.

ಇದೇ ರೀತಿ ವಿಶ್ವದ ಅತ್ಯಂತ ಹಳೆಯ ಭಾರತೀಯ ಭಾಷೆ ಎಂಬ ಹೆಗ್ಗಳಿಕೆ ಹೊತ್ತ “ತಮಿಳು” ನಮ್ಮ ಹೆಮ್ಮೆಯಾಗಿದೆ. ದೇಶದ ಎಲ್ಲ ಭಾಷೆಗಳೂ ಹಿಂದಿಯನ್ನು ಸಮೃದ್ಧಗೊಳಿಸಬಹುದು ಎಂದು ಪ್ರಧಾನಮಂತ್ರಿ ತಿಳಿಸಿದರು. ಈ ನಿಟ್ಟಿನಲ್ಲಿ ಸರಕಾರದ “ಏಕ್ ಭಾರತ್ ಶ್ರೇಷ್ಠ ಭಾರತ್“ ಉಪಕ್ರಮ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಉದಾಹರಣೆ ನೀಡಿದರು.

ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಸ್ವಾಗತ ಭಾಷಣದ ನಂತರ ರಾಜಭಾಷಾ ಕಾರ್ಯದರ್ಶಿ ಅವರು ಸಭೆಯ ಸೂಚಿಯಲ್ಲಿದ್ದಂತೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಮಾಹಿತಿ ಮತ್ತು ಲೆಕ್ಕಪತ್ರ ವಿವರಗಳನ್ನು ತಿಳಿಸಿದರು. ಸದಸ್ಯರು ಹಿಂದಿ ಭಾಷಾ ಪ್ರಚಾರ ನಿಮಿತ್ತ ವಿವಿಧ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ತಮ್ಮ ತಮ್ಮ ಅಭಿಪ್ರಾಯಗಳನ್ನುತಿಳಿಸಿದರು.

ಕೇಂದ್ರೀಯ ಹಿಂದಿ ನಿರ್ದೇಶನಾಲಯ ಪ್ರಕಾಶನಗೊಳಿಸಿದ ಗುಜರಾತ್ – ಹಿಂದಿ ಶಬ್ದಕೋಶವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಗುಜರಾತ್, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಸಮಿತಿಯ ಇತರ ಸದಸ್ಯರುಗಳು ಸುಮಾರು 2 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಭಾಗವಹಿಸಿದರು.

***