ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಎಲ್. ಮುರುಗನ್ ಅವರ ನಿವಾಸದಲ್ಲಿ ಪೊಂಗಲ್ ಹಬ್ಬದಲ್ಲಿ ಆಚರಣೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು ಮತ್ತು ತಮಿಳುನಾಡಿನ ಪ್ರತಿಯೊಂದು ಮನೆಯಿಂದಲೂ ಹಬ್ಬದ ಸಂಭ್ರಮವನ್ನು ವೀಕ್ಷಿಸಬಹುದು ಎಂದು ಹೇಳಿದರು.
ಎಲ್ಲಾ ನಾಗರಿಕರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೃಪ್ತಿ ನಿರಂತರವಾಗಿ ಹರಿಯುತ್ತಿರಲಿ ಎಂದು ಶ್ರೀ ನರೇಂದ್ರ ಮೋದಿ ಹಾರೈಸಿದರು. ನಿನ್ನೆ ನಡೆದ ಲೋಹ್ರಿ ಆಚರಣೆಗಳು, ಇಂದು ಮಕರ ಉತ್ತರಾಯಣದ ಹಬ್ಬದ ಸಂದರ್ಭ, ನಾಳೆ ಆಚರಿಸಲಾಗುವ ಮಕರ ಸಂಕ್ರಾಂತಿ ಮತ್ತು ಶೀಘ್ರದಲ್ಲೇ ಮಾಘ ಬಿಹು ಪ್ರಾರಂಭವಾಗುತ್ತದೆ ಎಂದು ತಿಳಿಸಿದರು. ದೇಶದಲ್ಲಿ ನಡೆಯುತ್ತಿರುವ ಹಬ್ಬದ ಋತುವಿಗೆ ಎಲ್ಲಾ ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಕಳೆದ ವರ್ಷ ತಮಿಳು ಪುತಾಂಡು ಆಚರಣೆಯ ಸಂದರ್ಭದಲ್ಲಿ ಭೇಟಿಯಾದವರನ್ನೇ ಮತ್ತೆ ಈ ವರ್ಷವೂ ಭೇಟಿಯಾಗಿದ್ದು ಖುಷಿ ತರಿಸಿದೆ ಎಂದು ಸ್ಮರಿಸಿದರು.
ಈ ದಿನ ಆಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಕ್ಕಾಗಿ ಕೇಂದ್ರ ಸಚಿವರಾದ ಶ್ರೀ ಎಲ್ ಮುರುಗನ್ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬವನ್ನು ಆಚರಿಸಿದ ಭಾವನೆ ಮೂಡಿಸಿದೆ ಎಂದು ಹೇಳಿದರು.
ಮಹಾನ್ ಸಂತ ತಿರುವಳ್ಳುವರ್ ಅವರನ್ನು ಉಲ್ಲೇಖಿಸಿದ ಪ್ರಧಾನಿಯವರು, ವಿದ್ಯಾವಂತ ನಾಗರಿಕರು, ಪ್ರಾಮಾಣಿಕ ಉದ್ಯಮಿಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಿದರೆ, ಪೊಂಗಲ್ ಸಮಯದಲ್ಲಿ ಹೊಸ ಬೆಳೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ, ಇದು ಈ ಹಬ್ಬದ ಸಂಪ್ರದಾಯದ ಕೇಂದ್ರ ಬಿಂದುವಾಗಿ ‘ಅನ್ನದಾತ ಕಿಸಾನ್’ಗಳಿರುತ್ತಾರೆ ಎಂದು ಹೇಳಿದರು.
ಭಾರತದ ಪ್ರತಿಯೊಂದು ಹಬ್ಬದ ವೇಳೆ ಗ್ರಾಮೀಣ, ಬೆಳೆ ಮತ್ತು ರೈತ ಸಂಪರ್ಕದ ಮಹತ್ವ ಹೊಂದಿದೆ. ಕಳೆದ ಬಾರಿ ರಾಗಿ ಮತ್ತು ತಮಿಳು ಸಂಪ್ರದಾಯಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಂಡರು. ಸೂಪರ್‌ಫುಡ್ ಶ್ರೀ ಅನ್ನದ ಬಗ್ಗೆ ಹೊಸ ಜಾಗೃತಿ ಮೂಡಿದೆ ಮತ್ತು ಅನೇಕ ಯುವಕರು ರಾಗಿ-ಶ್ರೀ ಅನ್ನದ ಮೇಲೆ ಸ್ಟಾರ್ಟಪ್ ಉದ್ಯಮಗಳನ್ನು ಆರಂಭಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ರಾಗಿ ಕೃಷಿ ಮಾಡುತ್ತಿರುವ 3 ಕೋಟಿಗೂ ಹೆಚ್ಚು ರೈತರು ರಾಗಿ ಪ್ರಚಾರದ ನೇರ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪೊಂಗಲ್ ಆಚರಣೆಯ ಸಂದರ್ಭದಲ್ಲಿ ತಮಿಳು ಸಮುದಾಯದ ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ನಿಜಕ್ಕೂ ವಿಶೇಷ ಕಲಾಪ್ರಕಾರವಾಗಿದೆ. ರಂಗೋಲಿ ಪುಡಿಯ ಮೂಲಕ ಅನೇಕ ಚುಕ್ಕೆಗಳನ್ನು ಮಾಡಿ ರಂಗೋಲಿ ಬಿಡಿಸುವುದು ವಿಶೇಷ ಮತ್ತು ಸಾಂಪ್ರದಾಯಿಕ ಕಲೆಯಾಗಿದೆ. ಪ್ರತಿಯೊಂದೂ ವಿಭಿನ್ನ ಮಹತ್ವವನ್ನು ಹೊಂದಿದೆ. ಆದರೆ ಈ ಎಲ್ಲಾ ಚುಕ್ಕೆಗಳು ಸೇರಿಕೊಂಡು ದೊಡ್ಡ ಕಲಾಕೃತಿಯನ್ನು ರಚಿಸಲು ಬಣ್ಣದಿಂದ ತುಂಬಿದಾಗ ರಂಗೋಲಿಯು ಅತ್ಯಂತ ಸುಂದರವಾಗಿ ಮನಕ್ಕೆ ಮುದ ನೀಡುತ್ತದೆ. ನೈಜ ನೋಟವು ಹೆಚ್ಚು ಭವ್ಯವಾಗುತ್ತದೆ. ರಂಗೋಲಿಯೊಂದಿಗೆ ಭಾರತದ ವೈವಿಧ್ಯತೆಗೆ ಸಾಮ್ಯತೆಗಳನ್ನು ಚಿತ್ರಿಸಿದ ಪ್ರಧಾನಿ, ದೇಶದ ಪ್ರತಿಯೊಂದು ಮೂಲೆಯು ಪರಸ್ಪರ ಭಾವನಾತ್ಮಕವಾಗಿ ಸಂಪರ್ಕಿಸಿದಾಗ, ರಾಷ್ಟ್ರದ ಶಕ್ತಿಯು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು. “ಪೊಂಗಲ್ ಹಬ್ಬವು ಏಕ್ ಭಾರತ್ ಶ್ರೇಷ್ಠ ಭಾರತದ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಕಾಶಿ-ತಮಿಳು ಸಂಗಮಮ್ ಮತ್ತು ಸೌರಾಷ್ಟ್ರ-ತಮಿಳು ಸಂಗಮಂ ಆರಂಭಿಸಿದ ಸಂಪ್ರದಾಯದಲ್ಲಿ ಅದೇ ಮನೋಭಾವವನ್ನು ವೀಕ್ಷಿಸಬಹುದು. ತಮಿಳು ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
“ಈ ಏಕತೆಯ ಭಾವನೆಯು 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸಲು ದೊಡ್ಡ ಶಕ್ತಿಯಾಗಿದೆ. ನಾನು ಕೆಂಪು ಕೋಟೆಯಿಂದ ಪಂಚಪ್ರಾಣದ ಮುಖ್ಯ ಅಂಶದ ಬಗ್ಗೆ ಕರೆ ನೀಡಿದಾಗ, ದೇಶದ ಏಕತೆಯನ್ನು ಶಕ್ತಿಯುತಗೊಳಿಸುವುದು ಮತ್ತು ಏಕತೆಯನ್ನು ಬಲಪಡಿಸುವುದು ಮುಖ್ಯವಾಗಿತ್ತು. ಪೊಂಗಲ್ ಹಬ್ಬದ ಈ ಶುಭ ಸಂದರ್ಭದಲ್ಲಿ ರಾಷ್ಟ್ರದ ಐಕ್ಯತೆಯನ್ನು ಬಲಪಡಿಸುವ ಸಂಕಲ್ಪಕ್ಕೆ ನಮ್ಮನ್ನು ನಾವು ಪುನಃ ಸಮರ್ಪಿಸಿಕೊಳ್ಳೋಣ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
***
Addressing a programme on Pongal which celebrates the vibrant culture of Tamil Nadu. https://t.co/ZUGb8BF3Vx
— Narendra Modi (@narendramodi) January 14, 2024