Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನರ್ಮದಾ ಉಗಮ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಅಮರಕಂಠಕ್ ನಲ್ಲಿ ನಮಾಮಿ ನರ್ಮದೆ – ಸರ್ಮದಾ ಸೇವಾ ಯಾತ್ರಾ ಸಮಾರೋಪದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ನರ್ಮದಾ ಉಗಮ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಅಮರಕಂಠಕ್ ನಲ್ಲಿ ನಮಾಮಿ ನರ್ಮದೆ – ಸರ್ಮದಾ ಸೇವಾ ಯಾತ್ರಾ ಸಮಾರೋಪದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ನರ್ಮದಾ ಉಗಮ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಅಮರಕಂಠಕ್ ನಲ್ಲಿ ನಮಾಮಿ ನರ್ಮದೆ – ಸರ್ಮದಾ ಸೇವಾ ಯಾತ್ರಾ ಸಮಾರೋಪದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ

ನರ್ಮದಾ ಉಗಮ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ; ಅಮರಕಂಠಕ್ ನಲ್ಲಿ ನಮಾಮಿ ನರ್ಮದೆ – ಸರ್ಮದಾ ಸೇವಾ ಯಾತ್ರಾ ಸಮಾರೋಪದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ


ಪ್ರಧಾನಮಂತ್ರಿ ಶ್ರೀ, ನರೇಂದ್ರ ಮೋದಿ ಅವರಿಂದು ನರ್ಮದಾ ನದಿಯ ಉಗಮಸ್ಥಳದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಪ್ರದೇಶದ ಅಮರಕಂಠಕ್ ನಲ್ಲಿ ನಮಾಮಿ ನರ್ಮದೆ – ನರ್ಮದಾ ಸೇವಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ನೆರೆದಿದ್ದವರನ್ನುದ್ದೇಶಿಸಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಅವದೇಶಾನಂದಜೀ ಅವರು, ಪ್ರಧಾನಮಂತ್ರಿಯವರನ್ನು ‘ವಿಕಾಸ ಅವತಾರ’ ಎಂದು ಬಣ್ಣಸಿದರು ಮತ್ತು ಪ್ರಧಾನಿಯವರು ಜಲ ಸಂರಕ್ಷಣೆಯ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರೇರಣೆ ನೀಡಿದ್ದಾರೆ ಎಂದರು.

ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ, ಶ್ರೀ. ಶಿವರಾಜ್ ಸಿಂಗ್ ಚೌವ್ಹಾಣ್, ಜನರ ಪಾಲ್ಗೊಳ್ಳುವಿಕೆಯೊಂದಿಗೆ ನರ್ಮದೆಯನ್ನು ವಿಶ್ವದ ನಿರ್ಮಲ ನದಿಗಳಲ್ಲಿ ಒಂದನ್ನಾಗಿ ಮಾಡುವುದಾಗಿ ತಿಳಿಸಿದರು. ನರ್ಮದಾ ನದಿಯ ತಟದಲ್ಲಿರುವ ಮಧ್ಯಪ್ರದೇಶದ ಎಲ್ಲ 18 ನಗರಗಳಲ್ಲಿಯೂ ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು. ಈ ಆಂದೋಲನ ಇಲ್ಲಿಗೇ ನಿಲ್ಲುವುದಿಲ್ಲ, ಇದನ್ನು ಇತರ ನದಿಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಮುಂಬರುವ ಮೂರನೇ ವಾರ್ಷಿಕೋತ್ಸವಕ್ಕಾಗಿ ಅವರು ಪ್ರಧಾನಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಧಾನಮಂತ್ರಿಯವರು ನರ್ಮದಾ ಪ್ರವಾಹ – ನರ್ಮದಾ ನದಿ ಅಭಿಯಾನದ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದರು.

ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ನರ್ಮದಾ ಸೇವಾ ಯಾತ್ರೆಯು ಪ್ರಯಾಣಿಕರಿಗೆ ಒಂದು ವರವಾಗಿದೆ- ಮತ್ತು ಅವರ ಪ್ರಯತ್ನಗಳ ಫಲ ಭಾರತಕ್ಕೆ ಮತ್ತು ಬಡವರಲ್ಲೇ ಕಡು ಬಡವರಿಗೆ ಲಭಿಸಲಿದೆ ಎಂದು ಆಶಿಸಿದರು.

ನರ್ಮದಾ ನದಿ ಶತಮಾನಗಳಿಂದ ಜೀವನಾಡಿಯಾಗಿದೆ ಎಂದ ಪ್ರಧಾನಿಯವರು, ಇತ್ತೀಚಿನ ವರ್ಷಗಳಲ್ಲಿ ನರ್ಮದಾ ನದಿಯನ್ನು ನಿರ್ದಯವಾಗಿ ಶೋಷಿಸಲಾಗಿತ್ತು ಮತ್ತು ಹೀಗಾಗಿಯೇ ನರ್ಮದಾ ಸೇವಾ ಯಾತ್ರೆಯ ಅಗತ್ಯ ಬಂತು ಎಂದು ಹೇಳಿದರು. ನಾವು ನಮ್ಮ ನದಿಗಳನ್ನು ಸಂರಕ್ಷಿಸದಿದ್ದಲ್ಲಿ ಮನುಕುಲವೇ ನಷ್ಟ ಅನುಭವಿಸುತ್ತದೆ ಎಂದರು.

ಸುಮಾರು 150 ದಿನಗಳ ಕಾಲ ನಡೆದ ನರ್ಮದಾ ಸೇವಾ ಯಾತ್ರೆ, ಜಾಗತಿಕ ಮಾನದಂಡಗಳಿಂದ ಕೂಡ ಅಸಾಮಾನ್ಯವಾಗಿತ್ತೆಂದರು. ನರ್ಮದಾ ನದಿ ಹಿಮದಿಂದ ಉದ್ಭವಿಸುದಿಲ್ಲ, ಆದರೆ, ಅದು ಮರಗಳಿಂದ ಮೈತುಂಬುತ್ತದೆ, ಮಧ್ಯಪ್ರದೇಶ ಸರ್ಕಾರದ ದೊಡ್ಡ ಮರಗಳ ನೆಡುವಿಕೆ ಕಾರ್ಯಕ್ರಮ ಸಹ ಮನುಕುಲಕ್ಕೆ ದೊಡ್ಡ ಸೇವೆಯಾಗಿದೆ ಎಂದರು.

ನರ್ಮದಾ ನದಿಯಿಂದ ಲಾಭ ಪಡೆಯುವ ಗುಜರಾತ್ ಮತ್ತು ಮಹಾರಾಷ್ಟ್ರದ ರೈತರು ಮತ್ತು ಜನರ ಪರವಾಗಿ ಪ್ರಧಾನಮಂತ್ರಿಯವರು ನರ್ಮದಾ ಸೇವಾ ಯಾತ್ರೆ ಕೈಗೊಂಡ ಮಧ್ಯಪ್ರದೇಶದ ಸರ್ಕಾರ ಮತ್ತು ಜನತೆಗೆ ಧನ್ಯವಾದ ಅರ್ಪಿಸಿದರು.

100 ಅಗ್ರ ಶ್ರೇಯಾಂಕದ ಸ್ವಚ್ಛ ನಗರಗಳ ಪೈಕಿ 22 ಮಧ್ಯಪ್ರದೇಶದಲ್ಲಿದ್ದು, ಸ್ವಚ್ಛ ಭಾರತ ಅಭಿಯಾನದಲ್ಲಿ ರಾಜ್ಯದ ಕಾರ್ಯನಿರ್ವಹಣೆಗಾಗಿ ಪ್ರಧಾನಮಂತ್ರಿಯವರು ಮಧ್ಯಪ್ರದೇಶ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನೀಡಿದ ನರ್ಮದಾ ಸೇವಾ ಅಭಿಯಾನದ ದಸ್ತಾವೇಜನ್ನು ಸ್ವಾಭಾವಿಕ ಸಂಪನ್ಮೂಲವನ್ನು ಸಂರಕ್ಷಿಸುವ ಭವಿಷ್ಯದ ಸೂಕ್ತ ಮುನ್ನೋಟ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು.

ಕೇಂದ್ರ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಸಂಕಲ್ಪ ಮಾಡಿದ್ದು, ಮಧ್ಯಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಒಂದು ಸುಂದರ ಮುನ್ನೋಟ ಸಿದ್ಧಪಡಿಸಿದೆ ಎಂದರು. ಭಾರತ 75ನೇ ಸ್ವಾತಂತ್ರ್ಯ ದಿನ ಆಚರಿಸುವ 2022ರ ಹೊತ್ತಿಗೆ ಧನಾತ್ಮಕವಾಗಿ ದೇಶಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡುವಂತೆ ಜನತೆಗೆ ಮನವಿ ಮಾಡಿದರು.

ಹೊಗಳಿಕೆ ಮತ್ತು ಮೆಚ್ಚುಗೆಯ ಮಾತುಗಳನ್ನಾಡಿದ ಸ್ವಾಮಿ ಅವಧೇಶನಂದರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು.

ಕೊನೆಯದಾಗಿ, ಪ್ರಧಾನಮಂತ್ರಿಯವರು, ನರ್ಮದಾ ಯಾತ್ರೆ ಕೊನೆಯಾಗಿದ್ದರೂ, ಇಂದಿನಿಂದ ಯಾಗ ಆರಂಭವಾಗಿದೆ. ಹೀಗಾಗಿ ನರ್ಮದಾ ನದಿಗಾಗಿ ತ್ಯಾಗ ಮತ್ತು ಕೊಡುಗೆ ನೀಡಲು ಸಜ್ಜಾಗುವಂತೆ ಜನತೆಗೆ ಪ್ರೇರಣೆ ನೀಡಿದರು.

*****

AKT/SH