Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ನಟ ವಿಕ್ರಮ್ ಗೋಖಲೆ ಅವರ ನಿಧನಕ್ಕೆ ಪ್ರಧಾನಿ ಶ್ರೀ ಮೋದಿ ಅವರ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಟ ವಿಕ್ರಮ್ ಗೋಖಲೆ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀ ಮೋದಿ ಟ್ವೀಟ್ ಮಾಡಿದ್ದಾರೆ:

“ವಿಕ್ರಮ್ ಗೋಖಲೆ ಜೀ ಅವರು ಸೃಜನಶೀಲ ಮತ್ತು ಬಹುಮುಖ ನಟರಾಗಿದ್ದರು. ಅವರ ಸುದೀರ್ಘ ನಟನಾ ವೃತ್ತಿಜೀವನದಲ್ಲಿ ಅನೇಕ ಆಸಕ್ತಿದಾಯಕ ಪಾತ್ರಗಳ ನಟನೆಯಿಂದಾಗಿ ಗೋಖಲೆ ಅವರು ಸ್ಮರಣೀಯರಾಗಿದ್ದಾರೆ. ವಿಕ್ರಮ್ ಗೋಖಲೆ ಅವರ ನಿಧನದಿಂದ ಮನಸಿಗೆ ದುಃಖವಾಗಿದೆ.  ಗೋಖಲೆ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪಗಳು.  ಓಂ ಶಾಂತಿ”

***