Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಟರಾದ ಶ್ರೀ ಘನಶ್ಯಾಮ್ ನಾಯಕ್ ಮತ್ತು ಶ್ರೀ ಅರವಿಂದ ತ್ರಿವೇದಿ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಟರಾದ ಶ್ರೀ ಘನಶ್ಯಾಮ್ ನಾಯಕ್ ಮತ್ತು ಶ್ರೀ ಅರವಿಂದ್ ತ್ರಿವೇದಿ ಅವರುಗಳ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ ಹೀಗೆ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ನಾವು ತಮ್ಮ ಕಾರ್ಯದ ಮೂಲಕ ಜನರ ಹೃದಯಗೆದ್ದ ಇಬ್ಬರು ಪ್ರತಿಭಾವಂತ ನಟರನ್ನು ಕಳೆದುಕೊಂಡಿದ್ದೇವೆ. ಶ್ರೀ ಘನಶ್ಯಾಮ್ ನಾಯಕ ಅವರು ಬಹುಬಗೆಯ ಪಾತ್ರಗಳ ಮೂಲಕ, ವಿಶೇಷವಾಗಿ ಜನಪ್ರಿಯ ಕಾರ್ಯಕ್ರಮತಾರಕ್ ಮೆಹ್ತಾ ಕಾ ಊಲ್ತಾ  ಚಾಷ್ಮಾ’  ನೆನಪಿನಲ್ಲಿರುತ್ತಾರೆ. ಅವರು ಅತ್ಯಂತ ಉದಾರ ಮತ್ತು ವಿನಯಕ್ಕೆ ಹೆಸರಾದವರು.

ಅಸಾಧಾರಣ ನಟರಲ್ಲದೆ, ಸಾರ್ವಜನಿಕ ಸೇವೆಯ ಬಗ್ಗೆ ಅತ್ತುತ್ಯಾಹ ಹೊಂದಿದ್ದ ಶ್ರೀ ಅರವಿಂದ್ ತ್ರಿವೇದಿ ಅವರನ್ನೂ ನಾವು ಕಳೆದುಕೊಂಡಿದ್ದೇವೆ. ‘ರಾಮಾಯಣಟಿ ವಿ ಧಾರವಾಹಿ ಮೂಲಕ ಅವರು ಹಲವು ಪೀಳಿಗೆಯ ಭಾರತೀಯರಿಗೆ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಇಬ್ಬರು ನಟ ಕುಟುಂಬಗಳು ಮತ್ತು ಅವರ ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ”.

***