ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೋಹಾದ ಮೆಸೈರೆಬ್ ಯೋಜನಾ ಸ್ಥಳದಲ್ಲಿ ಭಾರತೀಯ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಅಲ್ಲಿ ನೆರೆದಿದ್ದ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ದೋಹಾದಲ್ಲಿ ಬಂದಿಳಿದ ಬಳಿಕ ತಮ್ಮ ಮೊದಲ ಕಾರ್ಯಕ್ರಮವೇ ನಿಮ್ಮನ್ನು ಭೇಟಿ ಮಾಡುವುದಾಗಿತ್ತು ಎಂದರು. ನೀವುಗಳು ಎದುರಿಸುತ್ತಿರುವ ಸಮಸ್ಯೆಯ ಅರಿವು ನನಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ತಾವು ಭೇಟಿ ಮಾಡುವ ಸಂದರ್ಭದಲ್ಲಿ ಖತಾರಿ ನಾಯಕತ್ವದೊಂದಿಗೆ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಸಂವಾದಕ್ಕೆ ಆಗಮಿಸುವ ಮುನ್ನ ಈ ಸ್ಥಳದಲ್ಲಿನ ಆರೋಗ್ಯ ಶಿಬಿರಕ್ಕೂ ಪ್ರಧಾನಮಂತ್ರಿಯವರು ಕೆಲ ಕಾಲ ಭೇಟಿ ನೀಡಿದರು. ಉತ್ತಮ ಕಾರ್ಯ ಮಾಡುತ್ತಿರುವ ವೈದ್ಯರಿಗೆ ಅವರು ಅಭಿನಂದನೆ ಸಲ್ಲಿಸಿದರು.
ತಮ್ಮ ಭಾಷಣ ಮುಗಿಸಿದ ಬಳಿಕ ಪ್ರಧಾನಮಂತ್ರಿಯವರು ಮೇಜಿನಿಂದ ಮೇಜಿಗೆ ತೆರಳಿ, ಕಾರ್ಮಿಕರ ಗುಂಪಿನೊಂದಿಗೆ ಮಾತುಕತೆ ನಡೆಸಿದರು ಮತ್ತು ಅವರಲ್ಲಿ ಕೆಲವರೊಂದಿಗೆ ಕುಳಿತು ಊಟವನ್ನೂ ಹಂಚಿಕೊಂಡರು.
AKT/AK
Smiles and snacks in Doha...my first programme in Qatar was a visit to a Workers' Camp in downtown Doha. pic.twitter.com/vgQwZdZssX
— Narendra Modi (@narendramodi) June 4, 2016