Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೋಹಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ದೋಹಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ

ದೋಹಾದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾನುವಾರ ಸಂಜೆ ಜಿನೀವಾಕ್ಕೆ ತೆರಳುವ ಮುನ್ನ ದೋಹಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು.

ಉತ್ಸಾಹಪೂರ್ಣ ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಖತಾರ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀವೆಂದಿಗೂ ಭಾರತದೊಂದಿಗಿನ ಸಂಪರ್ಕ ಕಡಿದುಕೊಂಡಿಲ್ಲ ಎಂದರು. ಜಾಗತಿಕವಾಗಿ ಭಾರತದ ಚಿತ್ರಣವೇ ಬದಲಾಗಿದೆ ಮತ್ತು ವಿಶ್ವದಾದ್ಯಂತ ಭಾರತದ ಬಗ್ಗೆ ಉತ್ಸುಕತೆ ಇದೆ ಎಂದರು. ಈ ಬದಲಾವಣೆ 125 ಕೋಟಿ ಭಾರತೀಯರಿಂದ ಬಂದಿದೆ ಎಂದು ಹೇಳಿದರು.

ಭಾರತವು ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರ ಎಂಬುದನ್ನು ಜಾಗತಿಕ ಸಂಸ್ಥೆಗಳು ಒಪ್ಪಿಕೊಂಡಿವೆ ಎಂದ ಪ್ರಧಾನಮಂತ್ರಿಯವರು, ಜಾಗತಿಕ ಆರ್ಥಿಕ ಮಂದಗತಿಯ ನಡುವೆಯೂ ಕಳೆದ ತ್ರೈಮಾಸಿಕದಲ್ಲಿ ಶೇ.7.9ರ ಜಿ.ಡಿ.ಪಿ. ವೃದ್ಧಿ ಸಾಧಿಸಲಾಗಿದೆ ಎಂದರು.

ದೀರ್ಘಕಾಲದಿಂದ ಭ್ರಷ್ಟಾಚಾರ ಭಾರತವನ್ನು ಕಾಡುತ್ತಿದೆ ಎಂದ ಪ್ರಧಾನಿ, ಇದನ್ನು ನಿರ್ಮೂಲನೆ ಮಾಡಲು ತಮ್ಮ ಸರ್ಕಾರ ದೃಢ ನಿಲುವು ಹೊಂದಿದೆ ಎಂದರು.

ತಮ್ಮ ಖತಾರ್ ಭೇಟಿ ಫಲಪ್ರದವಾಗಿತ್ತು ಮತ್ತು ತಮ್ಮ ಸಮಗ್ರ ಮಾತುಕತೆಗಳು ಎರಡೂ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯಕ್ಕೆ ಹೊಸ ಶಕೆ ತೋರಿವೆ ಎಂದರು. ತಮ್ಮ ಭೇಟಿಯ ಕಾಲದಲ್ಲಿ ತೋರಿದ ಆತ್ಮೀಯ ಆತಿಥ್ಯಕ್ಕೆ ಪ್ರಧಾನಮಂತ್ರಿಯವರು ಖತಾರ್ ಸರ್ಕಾರ ಮತ್ತು ಜನತೆಗೆ ಕೃತಜ್ಞತೆ ಅರ್ಪಿಸಿದರು.