Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶಾದ್ಯಂತದಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತರಿಂದ ಪ್ರಧಾನಮಂತ್ರಿಗಳ ಭೇಟಿ

ದೇಶಾದ್ಯಂತದಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತರಿಂದ ಪ್ರಧಾನಮಂತ್ರಿಗಳ ಭೇಟಿ

ದೇಶಾದ್ಯಂತದಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತರಿಂದ ಪ್ರಧಾನಮಂತ್ರಿಗಳ ಭೇಟಿ

ದೇಶಾದ್ಯಂತದಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತರಿಂದ ಪ್ರಧಾನಮಂತ್ರಿಗಳ ಭೇಟಿ


ದೇಶದಾದ್ಯಂತದಿಂದ ಆಗಮಿಸಿದ 100 ಅಂಗನವಾಡಿ ಕಾರ್ಯಕರ್ತರು ಇಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ, ಇತ್ತೀಚೆಗೆ ತಮ್ಮ ಗೌರವಧನ ಮತ್ತು ಇತರ ಪ್ರೋತ್ಸಾಹಕಗಳ ಹೆಚ್ಚಳ ಕುರಿತಂತೆ ಘೋಷಣೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು ಮತ್ತು ಸಂತಸ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತರ ಶುಭಾಶಯ ಸ್ವೀಕರಿಸಿದ ಪ್ರಧಾನಮಂತ್ರಿಯವರು, ಇಂದು ತಮ್ಮನ್ನು ಭೇಟಿ ಮಾಡುವುದಕ್ಕಾಗಿ ದೇಶದ ಎಲ್ಲ ಭಾಗದಿಂದ ಆಗಮಿಸಿ ಒಂದೆಡೆ ಸೇರಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಮಕ್ಕಳ ದೈಹಿಕ ಮತ್ತು ಬುದ್ಧಿಯ ಬೆಳವಣಿಗೆಯಲ್ಲಿ ಪೌಷ್ಟಿಕತೆಯ ಮಹತ್ವವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು ಮಹತ್ವದ ಪಾತ್ರ ನಿರ್ವಹಿಸಬಹುದು ಎಂದರು. ಪ್ರಸ್ತುತ ನಡೆಯುತ್ತಿರುವ ಪೋಷಣ ಮಾಸದ ಪ್ರಸ್ತಾಪ ಮಾಡಿದ ಪ್ರಧಾನಮಂತ್ರಿಯವರು, ಈ ಅಭಿಯಾನದ ಸಮಯದಲ್ಲಿ ದೊರೆತಿರುವ ವೇಗ ಕುಂಠಿತವಾಗಬಾರದು ಎಂದರು. ಪೌಷ್ಟಿಕತೆ ಮತ್ತು ಉತ್ತಮ ಹವ್ಯಾಸಗಳ ಮೇಲೆ ನಿರಂತರ ನಿಗಾ ಅಗತ್ಯ ಎಂದ ಅವರು, ಇದನ್ನು ಅಂಗನವಾಡಿ ಕಾರ್ಯಕರ್ತರು ಒದಗಿಸಬಹುದು ಎಂದರು. ಫಲಾನುಭವಿಗಳಿಗೆ ಪೌಷ್ಟಿಕಾಂಶದ ನೆರವು ನ್ಯಾಯೋಚಿತವಾಗಿ ಲಭ್ಯವಾಗುವುದನ್ನು ಖಾತ್ರಿಪಡಿಸುವಂತೆ ಅವರು ತಿಳಿಸಿದರು.

ಮಕ್ಕಳು ಅಂಗನವಾಡಿ ಕಾರ್ಯಕರ್ತರ ಮಾತನ್ನು ಹೆಚ್ಚಾಗಿ ಕೇಳುತ್ತಾರೆ. ಅರಿವು ಮೂಡಿಸುವಲ್ಲಿ ಅವರ ಪಾತ್ರ ಪ್ರಮುಖವಾದದ್ದು ಎಂದ ಅವರು, ಉತ್ತಮ ಪೋಷಣೆಯ ಆರೈಕೆ ಮತ್ತು ವಿವಿಧ ಅಂಗನವಾಡಿ ಕಾರ್ಯಕರ್ತರ ನಡುವೆ ಪ್ರಯತ್ನಗಳಿಗಾಗಿ ಅಂಗನವಾಡಿ ಕಾರ್ಯಕರ್ತರ ನಡುವೆ ಆರೋಗ್ಯಕರ ಪೈಪೋಟಿಯನ್ನು ಅವರು ಉತ್ತೇಜಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಮನೇಕಾ ಗಾಂಧಿ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

***