Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶದಲ್ಲಿ ನಿಗದಿತ ಸಮಯಕ್ಕೆ ಕೆಲಸ ಮಾಡುವ ಮತ್ತು ಫಲಿತಾಂಶ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಿಎಜಿ ಉತ್ತಮ ಪಾತ್ರವನ್ನು ಹೊಂದಿದೆ : ಪ್ರಧಾನ ಮಂತ್ರಿ


ಅಕೌಂಟೆಂಟ್ಸ್ ಜನರಲ್ ಮತ್ತು ಡೆಪ್ಯೂಟಿ ಅಕೌಂಟೆಂಟ್ಸ್ ಜನರಲ್ ಗಳ (ಸಿಎಜಿ) ಸಭೆಯನ್ನು ಉದ್ದೇಶಿಸಿ ಪ್ರಧಾನ ಮಂತ್ರಿಯವರು ಮಾತನಾಡಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಇಲ್ಲಿ ಅಕೌಂಟೆಂಟ್ಸ್ ಜನರಲ್ ಮತ್ತು ಡೆಪ್ಯೂಟಿ ಅಕೌಂಟೆಂಟ್ಸ್ ಜನರಲ್ ಗಳ ಸಭೆಯಲ್ಲಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ದೇಶದಲ್ಲಿ ನಿಗದಿತ ಸಮಯಕ್ಕೆ ಕೆಲಸ ಮಾಡುವ ಮತ್ತು ಫಲಿತಾಂಶ ಆಧಾರಿತ ಕಾರ್ಯ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ ಮತ್ತು ಇದರಲ್ಲಿ ಸಿಎಜಿಯ ದೊಡ್ಡ ಪಾತ್ರವಿದೆ. ಸಿಎಜಿ ನಿರ್ವಹಿಸಿದ ಕೆಲಸದಿಂದಾಗಿ ಮತ್ತು ವಿಶೇಷವಾಗಿ ಸಿಎಜಿಯ ತಳಮಟ್ಟದ ಕ್ಷೇತ್ರದ ಕಚೇರಿಗಳು ಸಾಕಷ್ಟು ಶ್ರಮವಹಿಸುವುದರಿಂದ ಇದು ಸಾಧ್ಯವಾಗಿದೆ.

ಅಂತಹ ಸಮರ್ಪಿತ ಲೆಕ್ಕ ಪರಿಶೋಧಕರ ಕಾರಣದಿಂದಾಗಿ ಸಿಎಜಿಯ ವಿಶ್ವಾಸಾರ್ಹತೆ ಮತ್ತು ಸಾಮರ್ಥ್ಯವು ರೂಪುಗೊಂಡಿದೆ ಎಂದು ಅವರು ಹೇಳಿದರು. ಸಿಎಜಿಯಂತಹ ಒಂದು ಹಳೆಯ ಸಂಸ್ಥೆಯಲ್ಲಿ ಬದಲಾವಣೆ ತರುವುದೇ ಒಂದು ದೊಡ್ಡ ಸವಾಲು ಎಂದು ಅವರು ಒತ್ತಿ ಹೇಳಿದರು.

ಇಂದು ಸುಧಾರಣೆಗಳ ಕುರಿತು ಮಾತನಾಡುವುದು ಅಲಂಕಾರಿಕವಾಗಿದೆ ಆದರೆ ಸಂಪೂರ್ಣ ಸುಧಾರಣೆಯನ್ನು ಪೂರ್ಣ ಸಮರ್ಪಣೆಯೊಂದಿಗೆ ತರಲು ಸಂಪೂರ್ಣ ಪ್ರಾಮಾಣಿಕತೆಯೊಂದಿಗೆ ಸಿದ್ಧವಿದ್ದಾಗ ನಿಜವಾದ ಸುಧಾರಣೆ ಸಂಭವಿಸುತ್ತದೆ ಮತ್ತು ಇದು ಪ್ರತಿ ಸರ್ಕಾರಕ್ಕೂ ಮತ್ತು ಸಿಎಜಿ ಸೇರಿದಂತೆ ದೇಶದ ಪ್ರತಿಯೊಂದು ಸಂಸ್ಥೆಗೂ ಅನ್ವಯಿಸುತ್ತದೆ. ಸಿಎಜಿಯ ಲೆಕ್ಕಪರಿಶೋಧನೆಯ ಪ್ರಕ್ರಿಯೆಯಲ್ಲಿಯೂ ಬದಲಾವಣೆಗಳು ಬಂದಿವೆ ಎಂದು ಅವರು ಹೇಳಿದರು. ಸಿಎಜಿ ಏನೇ ಮಾಡಿದರೂ ಆಡಳಿತದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಿಎಜಿ ಲೆಕ್ಕಪರಾಮರ್ಶನದ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಸಿಎಜಿ ಸಹ ಸಿಎಜಿ ಪ್ಲಸ್ ಕಡೆಗೆ ಪ್ರಗತಿ ಸಾಧಿಸಬೇಕಾಗಿದೆ.

***