Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇವಘಡ್ ನಲ್ಲಿ ಜನೌಷದಿ ಕೇಂದ್ರದ ಆಯೋಜಕರು ಮತ್ತು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

ದೇವಘಡ್ ನಲ್ಲಿ ಜನೌಷದಿ ಕೇಂದ್ರದ ಆಯೋಜಕರು ಮತ್ತು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ


ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಮಾವೇಶ ಮೂಲಕ ಸಂವಾದ ನಡೆಸಿದರು.   ಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ದೇವಘಡ್ ನ ಏಮ್ಸ್ ನಲ್ಲಿ ಹೆಗ್ಗುರುತಾಗಿ ಗುರುತಿಸಲಾಗುವ 10,000ನೇ ಜನೌಷದಿ ಕೇಂದ್ರವನ್ನು ಪ್ರಧಾನಮಂತ್ರಿಯವರು  ಉದ್ಘಾಟಿಸಿದರು.  ಇದಲ್ಲದೆ,   ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.  ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ಗಳನ್ನು ಒದಗಿಸುವುದು ಮತ್ತು ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವುದು – ಈ ವರ್ಷದ ಆರಂಭದಲ್ಲಿ ಅವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಎರಡೂ ಉಪಕ್ರಮಗಳನ್ನು ಘೋಷಿಸಿದರು. ಇಂದಿನ ಕಾರ್ಯಕ್ರಮವು ಈ ಭರವಸೆಗಳ ನೆರವೇರಿಕೆಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ದೇವಘಡ್ ನ ಏಮ್ಸ್ ನ ಜನೌಷಧಿ ಕೇಂದ್ರದ ಫಲಾನುಭವಿ ಮತ್ತು ನಿರ್ವಾಹಕಿ ಶ್ರೀಮತಿ ರುಚಿ ಕುಮಾರಿಯವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.  10,000ನೇ ಜನೌಷಧಿ ಕೇಂದ್ರವನ್ನು ಆರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಅಭಿನಂದಿಸಿದರು, ದೇವಘಡ್ ನ ಬಾಬಾ ಧಾಮ್ ಈ ಮೈಲಿಗಲ್ಲು ಸಾಧಿಸಿದ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಬಡ ಮತ್ತು ಮಧ್ಯಮ ವರ್ಗದವರೊಂದಿಗೆ ಸಂವಾದ ನಡೆಸಿ ಜನೌಷಧಿ ಕೇಂದ್ರದ ಬಗ್ಗೆ ಸಾರ್ವಜನಿಕರ ನಿರ್ಧಾರಗಳ ಬಗ್ಗೆ ವಿಚಾರಿಸಿದರು. ಮಾರುಕಟ್ಟೆಯಲ್ಲಿ 100 ರೂಪಾಯಿಗೆ ಲಭ್ಯವಿರುವ ಔಷಧವು ಜನೌಷಧಿ ಕೇಂದ್ರದಲ್ಲಿ 10 ರಿಂದ 50 ರೂಪಾಯಿಗಳಿಗೆ ಲಭ್ಯವಾಗುವುದರಿಂದ ಕೈಗೆಟುಕುವ ದರದ ಇನ್ನೂ ಹಲವು ಔಷಧಿಗಳ ಅಗತ್ಯವನ್ನು ಸಾರ್ವಜನಿಕರು ಕೋರಿದರು. ಈ ಪ್ರದೇಶದಲ್ಲಿ ಜನೌಷಧಿ ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಪ್ರಧಾನಮಂತ್ರಿಯವರು ಅವರಿಗೆ ತಿಳಿಸಿದರು ಮತ್ತು ಯೋಜನೆಯ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳ ಬಳಕೆಯ ಬಗ್ಗೆ ಅವರಿಂದ ಅನುಭವ ಹಾಗೂ  ಮಾಹಿತಿ ಪಡೆದರು.

ಜನೌಷಧಿ ಯೋಜನೆಯ ಫಲಾನುಭವಿ ಶ್ರೀ ಸೋನಾ ಮಿಶ್ರಾ ಅವರು ಜನೌಷಧಿ ಕೇಂದ್ರದಿಂದ ಅಗ್ಗದ ಬೆಲೆಯಲ್ಲಿ ಔಷಧಿಗಳನ್ನು ಖರೀದಿಸುವ ಮೂಲಕ ತಿಂಗಳಿಗೆ ಸರಿಸುಮಾರು 10,000 ರೂಪಾಯಿಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು.  ಶ್ರೀ ಮಿಶ್ರಾ ಅವರು ಜನೌಷಧಿ ಕೇಂದ್ರದ ಅನುಭವಗಳ ಕುರಿತು ತಮ್ಮ ಅಂಗಡಿಯಲ್ಲಿ ಬೋರ್ಡ್ ಹಾಕುವಂತೆ ಪ್ರಧಾನಮಂತ್ರಿಯವರು ಅವರಿಗೆ ಸಲಹೆ ನೀಡಿದರು ಮತ್ತು ಅಗ್ಗದ ಔಷಧಿಗಳ ಲಭ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡಿದರು.

ಯೋಜನೆಗಳ ಬಗ್ಗೆ ಸ್ಥಳೀಯ ಜನರಿಗೆ ಅರಿವಿದೆ ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.  “ಗುಣಮಟ್ಟದ ಮತ್ತು ಕೈಗೆಟುಕುವ ದರದ ಔಷಧವು ಒಂದು ದೊಡ್ಡ ಸೇವೆಯಾಗಿದೆ” ಮತ್ತು ಜನರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.

 ******