ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ ಮೆಟ್ರೋದಲ್ಲಿ ಆಗಿರುವ ದೈನಂದಿನ ಪ್ರಯಾಣಿಕರ ಹೆಚ್ಚಳವನ್ನು ಶ್ಲಾಘಿಸಿದ್ದಾರೆ.
ದೆಹಲಿ ಮೆಟ್ರೋದಲ್ಲಿ ದೈನಂದಿನ ಪ್ರಯಾಣಿಕರ ಪ್ರಯಾಣವು ಪೂರ್ವ ಕೋವಿಡ್ ಅಂಕಿಅಂಶಗಳನ್ನು ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಮಾಡಿರುವ ಟ್ವೀಟ್ ಗೆ, ಪ್ರಧಾನ ಮಂತ್ರಿ ಈ ಪ್ರತಿಕ್ರಿಯೆ ನೀಡಿದ್ದಾರೆ. 2020 ಫೆಬ್ರವರಿ 10ರಲ್ಲಿ, ದೆಹಲಿ ಮೆಟ್ರೋದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 66,18,717 ಆಗಿದ್ದರೆ, 2023 ಆಗಸ್ಟ್ 28ರಂದು ಅದು 68,16,252ಕ್ಕೆ ಏರಿಕೆ ಕಂಡಿದೆ.
ಪ್ರಧಾನ ಮಂತ್ರಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ;
“ಅದ್ಭುತ ಸುದ್ದಿ. ನಮ್ಮ ನಗರ ಕೇಂದ್ರಗಳು ಆಧುನಿಕ ಮತ್ತು ಆರಾಮದಾಯಕ ಸಾರ್ವಜನಿಕ ಸಾರಿಗೆ ಹೊಂದಲು ನಮ್ಮ ಸರ್ಕಾರವು ನಿರಂತರ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ” ಎಂದಿದ್ದಾರೆ.
***
Wonderful news. Our Government will continue working to ensure our urban centres have modern and comfortable public transport. https://t.co/fe6fXPwhGR
— Narendra Modi (@narendramodi) September 1, 2023