ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪ್ರಹ್ಲಾದ ಜೋಶಿ ಜಿ, ಸಂಸತ್ತಿನ ನಮ್ಮ ಹಿರಿಯ ಸಹೋದ್ಯೋಗಿ ಡಾ. ವೀರೇಂದ್ರ ಹೆಗ್ಗಡೆ ಜಿ, ಪರಮಪೂಜ್ಯ ಸ್ವಾಮಿ ನಿರ್ಮಲಾನಂದನಾಥ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ನಂಜಾವದೂತ ಸ್ವಾಮೀಜಿ, ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ಸಂಪುಟದ ನನ್ನ ಇತರೆ ಸಹೋದ್ಯೋಗಿಗಳು, ಸಂಸದರು, ಸಿ.ಟಿ. ರವಿ ಜೀ, ದೆಹಲಿ-ಕರ್ನಾಟಕ ಸಂಘದ ಎಲ್ಲಾ ಸದಸ್ಯರೆ, ಮಹಿಳೆಯರೆ ಮತ್ತು ಮಹನೀಯರೆ!
ಮೊದಲನೆಯದಾಗಿ, ನಾನಿಲ್ಲಿ ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು ದೆಹಲಿ-ಕರ್ನಾಟಕ ಸಂಘವು ‘ಎಲ್ಲಾದರೂ ಇರು, ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ (ಎಲ್ಲಿ ಇರು, ಹೇಗೇ ಇರು, ಕನ್ನಡಿಗ ಎಂಬುದನ್ನು ಮರೆಯದಿರಿ) ಎಂಬ ಭವ್ಯ ಪರಂಪರೆಯನ್ನು ಮುನ್ನಡೆಸುತ್ತಿದೆ. ದೇಶವು ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ‘ದೆಹಲಿ ಕರ್ನಾಟಕ ಸಂಘ’ದ 75 ವರ್ಷಗಳ ಈ ಸಂಭ್ರಮಾಚರಣೆ ನಡೆಯುತ್ತಿದೆ. ನಾವು 75 ವರ್ಷಗಳ ಹಿಂದಿನ ಘಟನೆಗಳನ್ನು ನೋಡಿದಾಗ ಮತ್ತು ಅವುಗಳನ್ನು ನಿರ್ಣಯಿಸಿದಾಗ, ಈ ಪ್ರಯತ್ನದಲ್ಲಿ ನಾವು ಭಾರತದ ಅಮರ ಆತ್ಮವನ್ನು ನೋಡುತ್ತೇವೆ. ದೆಹಲಿ-ಕರ್ನಾಟಕ ಸಂಘದ ರಚನೆಯು ಸ್ವಾತಂತ್ರ್ಯದ ಮೊದಲ ಹಂತದಲ್ಲಿ ದೇಶವನ್ನು ಬಲಪಡಿಸುವ ಧ್ಯೇಯದಲ್ಲಿ ಜನರು ಹೇಗೆ ಒಗ್ಗೂಡಿದರು ಎಂಬುದನ್ನು ತೋರಿಸುತ್ತದೆ. ಸ್ವಾತಂತ್ರ್ಯದ ಮೊದಲ ಹಂತದ ‘ಅಮೃತ ಕಾಲ’ದಲ್ಲೂ ದೇಶದ ಅದೇ ಶಕ್ತಿ ಮತ್ತು ಸಮರ್ಪಣಾ ಭಾವ ಇಂದಿಗೂ ಜೀವಂತವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಸಂಧರ್ಭದಲ್ಲಿ ಈ ಸಂಘದ ಕನಸು ನನಸು ಮಾಡಿದ ಎಲ್ಲಾ ಧೀಮಂತ ವ್ಯಕ್ತಿಗಳಿಗೆ ನಾನು ನಮಿಸುತ್ತೇನೆ. 75 ವರ್ಷಗಳ ಪ್ರಯಾಣ ಸುಲಭವಲ್ಲ, ಅನೇಕ ಏರಿಳಿತಗಳಿವೆ. ಈ ಪ್ರಯಾಣದಲ್ಲಿ ಒಬ್ಬರೇ ಹಲವಾರು ಜನರನ್ನು ಕರೆದುಕೊಂಡು ಸಾಗಬೇಕಾಗುತ್ತದೆ. ಈ ಸಂಘವನ್ನು 75 ವರ್ಷಗಳ ಕಾಲ ಮುನ್ನಡೆಸಿ, ಅಭಿವೃದ್ಧಿ ಪಡಿಸಿದ ಎಲ್ಲರೂ ಅಭಿನಂದನಾರ್ಹರು. ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸುತ್ತಿರುವ ಕರ್ನಾಟಕದ ಜನತೆಗೂ ನಾನು ಈ ಸಂದರ್ಭದಲ್ಲಿ ವಂದಿಸುತ್ತೇನೆ.
ಸ್ನೇಹಿತರೆ,
ಭಾರತದ ಅಸ್ಮಿತೆಯಾಗಲಿ, ಭಾರತದ ಸಂಪ್ರದಾಯಗಳಾಗಲಿ ಅಥವಾ ಭಾರತದ ಸ್ಫೂರ್ತಿಯಾಗಲಿ, ಕರ್ನಾಟಕವಿಲ್ಲದೆ ನಾವು ಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಪೌರಾಣಿಕ ಕಾಲದಿಂದಲೂ ಭಾರತದಲ್ಲಿ ಕರ್ನಾಟಕದ ಪಾತ್ರ ಹನುಮಂತನದ್ದು. ಹನುಮಂತನಿಲ್ಲದೆ ರಾಮನೂ ಇಲ್ಲ, ರಾಮಾಯಣವೂ ಇಲ್ಲ. ಯಾವುದೇ ಯುಗ ಬದಲಾವಣೆಯ ಕೆಲಸವು ಅಯೋಧ್ಯೆಯಿಂದ ಪ್ರಾರಂಭವಾಗಿ ರಾಮೇಶ್ವರಕ್ಕೆ ಹೋದರೆ, ಅದು ಕರ್ನಾಟಕದಲ್ಲಿ ಮಾತ್ರ ಬಲಗೊಳ್ಳುತ್ತದೆ.
ಸಹೋದರ ಸಹೋದರಿಯರೇ,
ಮಧ್ಯಕಾಲೀನ ಯುಗದಲ್ಲಿ ಆಕ್ರಮಣಕಾರರು ಭಾರತವನ್ನು ನಾಶ ಮಾಡಲು ಪ್ರಯತ್ನಿಸಿದಾಗ ಮತ್ತು ಸೋಮನಾಥರಂತಹ ಶಿವಲಿಂಗಗಳನ್ನು ಹಾನಿಗೊಳಿಸಿದಾಗ, ದೇವರ ದಾಸಿಮಯ್ಯ, ಮಾದರ ಚೆನ್ನಯ್ಯ, ದೋಹರ್ ಕಕ್ಕಯ್ಯ ಮತ್ತು ಕರ್ನಾಟಕದ ಬಸವೇಶ್ವರರಂತಹ ಸಾಧು ಸಂತರು ಜನರನ್ನು ‘ಇಷ್ಟಲಿಂಗ’ (ಶಿವನ ಸಂಕೇತ)ಕ್ಕೆ ಸಂಪರ್ಕಿಸಿದರು. ಬಾಹ್ಯ ಶಕ್ತಿಗಳು ದೇಶದ ಮೇಲೆ ದಾಳಿ ನಡೆಸಿದಾಗ ರಾಣಿ ಅಬ್ಬಕ್ಕ, ಒನಕೆ ಓಬವ್ವ, ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದ ವೀರರು ಶೂರರು ಅವರ ಮುಂದೆ ಬಲಿಷ್ಠ ಗೋಡೆಯಂತೆ ನಿಲ್ಲುತ್ತಾರೆ. ಸ್ವಾತಂತ್ರ್ಯದ ನಂತರವು ಸಹ ಕರ್ನಾಟಕವು ಭಾರತಕ್ಕೆ ಸದಾ ಸ್ಫೂರ್ತಿ ತುಂಬಿದ್ದು, ‘ಕಾಶಿ ಹಿಂದೂ ವಿಶ್ವವಿದ್ಯಾಲಯ’ದ ಮೊದಲ ಉಪಕುಲಪತಿ ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ರೂಪದಲ್ಲಿ ಮತ್ತು ಈಗ ನಾವು ಪೂಜ್ಯ ಸ್ವಾಮೀಜಿಗಳಿಂದ ಕಾಶಿಯ ಅನುಭವಗಳನ್ನು ಕೇಳುತ್ತಿದ್ದೇವೆ.
ಸ್ನೇಹಿತರೆ,
ಕನ್ನಡ ನಾಡಿನ ಜನತೆ ಸದಾ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮಂತ್ರದಿಂದಲೇ ಬದುಕಿದ್ದಾರೆ. ಅವರು ಕರ್ನಾಟಕದ ನೆಲದಿಂದ ಆ ಸ್ಫೂರ್ತಿ ಪಡೆಯುತ್ತಾರೆ. ರಾಷ್ಟ್ರಕವಿ ಕುವೆಂಪು ಅವರ ‘ನಾಡಗೀತೆ’ ರಚನೆಯನ್ನು ನಾವು ಈಗಷ್ಟೇ ಕೇಳಿದ್ದೇವೆ, ಅದನ್ನು ಪೂಜ್ಯ ಸ್ವಾಮೀಜಿ ಅವರು ವಿವರಿಸಿದರು. ಎಂತಹ ಅದ್ಭುತವಾದ ಮಾತು: ‘ಜಯ ಭಾರತ ಜನನಿಯ ತನುಜಾತೆ, ಜಯ ಕರ್ಣಾಟಕ ಮಾತೆ’ (ಕರ್ನಾಟಕ ಮಾತೆ, ಭಾರತ ಮಾತೆಯ ಮಗಳೇ, ನಿನಗೆ ಜಯವಾಗಲಿ!). ‘ಜಯ ಭಾರತ ಜನನಿಯ ತನುಜಾತೆ’ ಎಂದು ಬರೆಯುವಾಗ ಕರ್ನಾಟಕ ಮಾತೆಯನ್ನು ಎಷ್ಟು ಆತ್ಮೀಯವಾಗಿ ಹೃದಯ ತುಂಬಿ ಹೊಗಳಿದ್ದಾರೆ. ಇದು ಭಾರತೀಯ ನಾಗರಿಕತೆಯನ್ನು ವಿವರಿಸುತ್ತದೆ, ಕರ್ನಾಟಕದ ಪ್ರಾಮುಖ್ಯತೆ ಮತ್ತು ಗುರುತರ ಪಾತ್ರವನ್ನು ಸಹ ಉಲ್ಲೇಖಿಸುತ್ತದೆ. ಈ ಹಾಡಿನ ಆತ್ಮವನ್ನು ನಾವು ಅರ್ಥ ಮಾಡಿಕೊಂಡಾಗ, ನಮಗೆ ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಆತ್ಮವೂ ಅರ್ಥವಾಗುತ್ತದೆ.
ಸ್ನೇಹಿತರೆ,
ಪ್ರಮುಖ ಜಾಗತಿಕ ಗುಂಪಿನಲ್ಲಿ ಇಂದು ಭಾರತವು ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವಾಗ, ಪ್ರಜಾಪ್ರಭುತ್ವದ ತಾಯಿಯಾಗಿ ನಮ್ಮ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಿವೆ. ‘ಅನುಭವ ಮಂಟಪ’ದ ಮೂಲಕ ಬಸವೇಶ್ವರರ ವಚನಗಳು, ಅವರ ಪ್ರಜಾಸತ್ತಾತ್ಮಕ ಬೋಧನೆಗಳು ಭಾರತಕ್ಕೆ ಬೆಳಕಿನಂತಿವೆ. ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರ ಬೋಧನೆಗಳನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡುವ ಅವಕಾಶವೂ ನನಗೆ ಸಿಕ್ಕಿತು. ಕರ್ನಾಟಕದ ವೈಚಾರಿಕ ಪರಂಪರೆ ಹಾಗೂ ಅದರ ಪ್ರಭಾವ ಅಜರಾಮರ ಎನ್ನುವುದಕ್ಕೆ ಈ ಸಾಧನೆಗಳೇ ಸಾಕ್ಷಿ.
ಸ್ನೇಹಿತರೆ,
ಕರ್ನಾಟಕವು ಸಂಪ್ರದಾಯಗಳ ಜತೆಗೆ ತಂತ್ರಜ್ಞಾನದ ನಾಡು. ಇದು ಐತಿಹಾಸಿಕ ಸಂಸ್ಕೃತಿ ಮತ್ತು ಆಧುನಿಕ ಕೃತಕ ಬುದ್ಧಿಮತ್ತೆ ಹೊಂದಿದೆ. ನಾನು ಇಂದು ಬೆಳಗ್ಗೆ ಜರ್ಮನ್ ಚಾನ್ಸಲರ್ ಅವರನ್ನು ಭೇಟಿ ಮಾಡಿದ್ದೇನೆ. ನಾಳೆಯಿಂದ ಬೆಂಗಳೂರಿನಲ್ಲಿ ಅವರ ಕಾರ್ಯಕ್ರಮ ನಡೆಯುತ್ತಿರುವುದು ನನಗೆ ಖುಷಿ ತಂದಿದೆ. ಇಂದು ಬೆಂಗಳೂರಿನಲ್ಲಿ ಜಿ-20 ಗುಂಪಿನ ಮಹತ್ವದ ಶೃಂಗಸಭೆ ಸಹ ನಡೆಯುತ್ತಿದೆ.
ಸ್ನೇಹಿತರೆ,
ನಾನು ಯಾವುದೇ ರಾಷ್ಟ್ರದ ಮುಖ್ಯಸ್ಥರನ್ನು ಭೇಟಿಯಾದಾಗ, ಅವರು ಪ್ರಾಚೀನ ಮತ್ತು ಆಧುನಿಕ ಭಾರತದ ಎರಡೂ ಬದಿಗಳನ್ನು ನೋಡಬೇಕೆಂದು ನಾನು ಪ್ರಯತ್ನಿಸುತ್ತೇನೆ. ಸಂಪ್ರದಾಯ ಮತ್ತು ತಂತ್ರಜ್ಞಾನ ಇಂದು ನವ ಭಾರತದ ಮನೋಧರ್ಮವೂ ಆಗಿದೆ. ಇಂದು ದೇಶವು ಅಭಿವೃದ್ಧಿ ಮತ್ತು ಪರಂಪರೆ, ಪ್ರಗತಿ ಮತ್ತು ಸಂಪ್ರದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಮುನ್ನಡೆಯುತ್ತಿದೆ. ಇಂದು ಒಂದೆಡೆ, ಭಾರತವು ತನ್ನ ಪುರಾತನ ದೇವಾಲಯಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಪುನರುಜ್ಜೀವನಗೊಳಿಸುತ್ತಿದೆ ಮತ್ತು ಅದೇ ಸಮಯದಲ್ಲಿ, ನಾವು ಡಿಜಿಟಲ್ ಪಾವತಿಗಳಲ್ಲಿ ವಿಶ್ವ ನಾಯಕರಾಗಿದ್ದೇವೆ. ಇಂದಿನ ಭಾರತವು ನಮ್ಮ ಶತಮಾನಗಳಷ್ಟು ಪುರಾತನವಾದ ಕದ್ದ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ವಿದೇಶದಿಂದ ಮರಳಿ ತರುತ್ತಿದೆ. ಇಂದಿನ ಭಾರತವು ವಿದೇಶದಿಂದ ದಾಖಲೆಯ ವಿದೇಶಿ ನೇರ ಹೂಡಿಕೆ ಆಕರ್ಷಿಸುತ್ತಿದೆ. ಇದು ನವ ಭಾರತದ ಅಭಿವೃದ್ಧಿ ಪಥವಾಗಿದ್ದು, ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತಿದೆ.
ಸ್ನೇಹಿತರೆ,
ಇಂದು ಕರ್ನಾಟಕದ ಅಭಿವೃದ್ಧಿಯು ದೇಶಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ಮೊದಲ ಆದ್ಯತೆಯಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಸರ್ಕಾರ ರಚನೆಯಾದ ನಂತರ ಜನರು ಹಣವನ್ನು ಹೊರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಇಂದು ದೇಶದ ಹಣ ಮತ್ತು ಸಂಪನ್ಮೂಲಗಳನ್ನು ಕರ್ನಾಟಕದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ವಿನಿಯೋಗಿಸಲಾಗುತ್ತಿದೆ. ನೀವು ನೋಡಿ, 2009ರಿಂದ 2014ರ ನಡುವೆ ಕರ್ನಾಟಕ ರಾಜ್ಯಕ್ಕೆ ಕೇಂದ್ರವು ವಾರ್ಷಿಕವಾಗಿ 11,000 ಕೋಟಿ ರೂಪಾಯಿ ನೀಡುತ್ತಿತ್ತು, ಆದರೆ ನಮ್ಮ ಸರ್ಕಾರ ರಚನೆಯಾದ ನಂತರ 2019 ಮತ್ತು 2023ರ ನಡುವೆ ಇದುವರೆಗೆ 30,000 ಕೋಟಿ ರೂಪಾಯಿಯನ್ನು ಕೇಂದ್ರದಿಂದ ಕರ್ನಾಟಕಕ್ಕೆ ಕಳುಹಿಸಲಾಗಿದೆ. 2009 ಮತ್ತು 2014ರ ನಡುವೆ ಕೇಂದ್ರದಲ್ಲಿ ರೈಲ್ವೆ ಸಚಿವರು ಕರ್ನಾಟಕದವರಾಗಿದ್ದರೂ, ಕರ್ನಾಟಕದ ರೈಲ್ವೆ ಯೋಜನೆಗಳಿಗೆ 4,000 ಕೋಟಿ ರೂ.ಗಿಂತ ಕಡಿಮೆ ವೆಚ್ಚ ಮಾಡಲಾಗಿದೆ. ಅಂದರೆ 5 ವರ್ಷಗಳಲ್ಲಿ 4,000 ಕೋಟಿ ರೂಪಾಯಿಗಿಂತ ಕಡಿಮೆ! ಮತ್ತೊಂದೆಡೆ, ನಮ್ಮ ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕದ ರೈಲು ಮೂಲಸೌಕರ್ಯಕ್ಕಾಗಿ ಸುಮಾರು 7,000 ಕೋಟಿ ರೂಪಾಯಿ ಮಂಜೂರು ಮಾಡಿದೆ. ನಾನು ಈ ವರ್ಷದ ಬಗ್ಗೆ ಮಾತನಾಡುತ್ತಿದ್ದೇನೆ. ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಹಿಂದಿನ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 6,000 ಕೋಟಿ ರೂ. ಒದಗಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಈ 9 ವರ್ಷಗಳಲ್ಲಿ ಕರ್ನಾಟಕದಲ್ಲಿ ಪ್ರತಿ ವರ್ಷ 5,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. 5 ವರ್ಷದಲ್ಲಿ 6,000 ಕೋಟಿ ರೂಪಾಯಿಗೂ ಪ್ರತಿ ವರ್ಷ 5,000 ಕೋಟಿ ರೂಪಾಯಿಗೂ ಇರುವ ವ್ಯತ್ಯಾಸ ನೋಡಿ!
ಸ್ನೇಹಿತರೆ,
ಭದ್ರಾ ಮೇಲ್ದಂಡೆ ಯೋಜನೆಯ ಬಹುಕಾಲದ ಬೇಡಿಕೆಯನ್ನೂ ನಮ್ಮ ಸರ್ಕಾರ ಈಡೇರಿಸುತ್ತಿದೆ. ಇದು ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಬರಪೀಡಿತ ಬೃಹತ್ ಪ್ರದೇಶಗಳ ರೈತರಿಗೆ ಅನುಕೂಲವಾಗಲಿದೆ. ಅಭಿವೃದ್ಧಿಯ ಈ ಹೊಸ ಗತಿಯು ಕರ್ನಾಟಕದ ಚಿತ್ರಣವನ್ನು ವೇಗವಾಗಿ ಬದಲಾಯಿಸುತ್ತಿದೆ. ದೆಹಲಿಯಲ್ಲಿ ನೆಲೆಸಿರುವವರು ಮತ್ತು ತಮ್ಮ ಗ್ರಾಮಕ್ಕೆ ಬಹಳ ದಿನಗಳಿಂದ ಭೇಟಿ ನೀಡದಿರುವವರು ಅಲ್ಲಿಗೆ ಹೋದಾಗ ಆಶ್ಚರ್ಯ ಮತ್ತು ಹೆಮ್ಮೆಪಡುತ್ತಾರೆ.
ಸ್ನೇಹಿತರೆ,
ದೆಹಲಿ ಕರ್ನಾಟಕ ಸಂಘದ 75 ವರ್ಷಗಳ ಬೆಳವಣಿಗೆ, ಸಾಧನೆ ಮತ್ತು ಜ್ಞಾನದ ಏಳಿಗೆಯ ಹಲವು ಪ್ರಮುಖ ಕ್ಷಣಗಳನ್ನು ನಮ್ಮ ಮುಂದೆ ತಂದಿದೆ. ಈಗ ಮುಂದಿನ 25 ವರ್ಷಗಳು ಹೆಚ್ಚು ಮಹತ್ವದ್ದಾಗಿದೆ. ಅಮೃತ ಕಾಲ ಮತ್ತು ದೆಹಲಿ ಕರ್ನಾಟಕ ಸಂಘದ ಮುಂದಿನ 25 ವರ್ಷಗಳಲ್ಲಿ ನೀವು ಅನೇಕ ಪ್ರಮುಖ ಕೆಲಸಗಳನ್ನು ಮಾಡಬಹುದು. ನೀವು ಗಮನ ಹರಿಸಬಹುದಾದ 2 ವಿಷಯಗಳೆಂದರೆ – ‘ಕಲಿಕೆ ಮತ್ತು ಕಲೆ’, ಅದು ಜ್ಞಾನ ಮತ್ತು ಕಲೆ. ‘ಕಲಿಕೆ’ಯ ಬಗ್ಗೆ ಮಾತನಾಡಿದರೆ ನಮ್ಮ ಕನ್ನಡ ಭಾಷೆ ಎಷ್ಟು ಸೊಗಸಾಗಿದೆ, ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂಬುದು ತಿಳಿಯುತ್ತದೆ. ಇದರೊಂದಿಗೆ ಕನ್ನಡ ಭಾಷೆಯ ಇನ್ನೊಂದು ವಿಶೇಷತೆಯೂ ಇದೆ. ಈ ಭಾಷೆಯನ್ನು ಮಾತನಾಡುವವರು ಬಹಳ ಬಲವಾದ ಓದುವ ಅಭ್ಯಾಸವನ್ನು ಹೊಂದಿದ್ದಾರೆ. ಕನ್ನಡ ಭಾಷೆಯನ್ನು ಓದುವವರ ಸಂಖ್ಯೆಯೂ ಅತಿ ಹೆಚ್ಚು. ಇಂದು ಕನ್ನಡದಲ್ಲಿ ಒಳ್ಳೆಯ ಹೊಸ ಪುಸ್ತಕ ಅಥವಾ ಕೃತಿ ಬಂದರೆ ಕೆಲವೇ ವಾರಗಳಲ್ಲಿ ಪ್ರಕಾಶಕರು ಅದನ್ನು ಮರುಮುದ್ರಣ ಮಾಡಬೇಕು. ಕರ್ನಾಟಕ ಮತ್ತು ಕನ್ನಡ ಭಾಷೆಗೆ ಇರುವ ಸೌಭಾಗ್ಯ ಬೇರೆ ಭಾಷೆಗಳಿಗೆ ಇಲ್ಲ.
ದೆಹಲಿಯಲ್ಲಿ ವಾಸಿಸುವ ನಿಮ್ಮಲ್ಲಿ ತಮ್ಮ ಸ್ಥಳೀಯ ರಾಜ್ಯದ ಹೊರಗೆ ವಾಸಿಸುವ ಹೊಸ ಪೀಳಿಗೆಗೆ ಭಾಷಾ ತೊಂದರೆಗಳ ಬಗ್ಗೆ ತಿಳಿದಿರಬೇಕು. ಆದುದರಿಂದ ಜಗದ್ಗುರು ಬಸವೇಶ್ವರರ ವಚನಗಳಾಗಲಿ, ಹರಿದಾಸರ ಗೀತೆಗಳಾಗಲಿ, ಕುಮಾರವ್ಯಾಸ ಬರೆದ ಮಹಾಭಾರತದ ಆವೃತ್ತಿಯಾಗಲಿ, ಕುವೆಂಪು ಅವರು ಬರೆದ ಶ್ರೀ ರಾಮಾಯಣ ದರ್ಶನಂ ಆಗಲಿ, ಈ ಅಗಾಧ ಪರಂಪರೆಯನ್ನು ನೀವೆಲ್ಲಾ ಮುಂದಿನ ಪೀಳಿಗೆಗೆ ಕಲಿಸಬೇಕು. ನೀವೂ ಲೈಬ್ರರಿ ನಡೆಸುತ್ತೀರಿ ಎಂದು ಕೇಳಿದ್ದೇನೆ. ಸ್ಟಡಿ ಸರ್ಕಲ್ ಸೆಷನ್‌ಗಳು ಮತ್ತು ಸಾಹಿತ್ಯ ಸಂಬಂಧಿತ ಚರ್ಚೆಗಳಂತಹ ಅನೇಕ ಕಾರ್ಯಕ್ರಮಗಳನ್ನು ನೀವು ನಿಯಮಿತವಾಗಿ ಆಯೋಜಿಸುತ್ತೀರಿ. ನೀವು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಇದರೊಂದಿಗೆ ದೆಹಲಿಯ ಕನ್ನಡಿಗರ ಮಕ್ಕಳಿಗೆ ಕನ್ನಡದಲ್ಲಿ ಓದುವ ಹವ್ಯಾಸ ಬೆಳೆಸಲು ನೀವು ಸಹಾಯ ಮಾಡಬಹುದು. ಅಂತಹ ಪ್ರಯತ್ನಗಳಿಂದ ‘ಕಲಿಕೆ’ ಅಥವಾ ಜ್ಞಾನದ ಹರಡುವಿಕೆಯು ದೆಹಲಿಯ ಕನ್ನಡಿಗರ ಮೇಲೆ ಮತ್ತು ಇತರರ ಮೇಲೆ ಪ್ರಭಾವ ಬೀರುತ್ತದೆ – ‘ಕನ್ನಡ ಕಲಿಯಿರಿ’ ಅಂದರೆ ಕನ್ನಡ ಕಲಿಯಲು ಮತ್ತು ‘ಕನ್ನಡ ಕಲಿಸಿ’ ಅಂದರೆ ಕನ್ನಡ ಕಲಿಸಲು ಸಹಾಯ ಮಾಡುತ್ತದೆ.
ಸ್ನೇಹಿತರೆ,
‘ಕಲಿಕೆ’ಯೊಂದಿಗೆ ಕರ್ನಾಟಕವು ‘ಕಲೆ’ ಅಂದರೆ ಕಲಾ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆ ಮಾಡಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ಕಾರ್ಯಕ್ರಮದಲ್ಲಿ ಇಡೀ ಕರ್ನಾಟಕದ ಸಂಸ್ಕೃತಿಯನ್ನು ಕಣ್ಣಾರೆ ಕಾಣುವ, ಆನಂದಿಸುವ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಕರ್ನಾಟಕವು ಶಾಸ್ತ್ರೀಯ ಕಲೆ ಮತ್ತು ಜನಪದ ಕಲೆ ಎರಡರಲ್ಲೂ ಶ್ರೀಮಂತವಾಗಿದೆ. ಕಂಸಾಳೆಯಿಂದ ಕರ್ನಾಟಕ ಶೈಲಿಯ ಸಂಗೀತದವರೆಗೆ, ಭರತನಾಟ್ಯದಿಂದ ಯಕ್ಷಗಾನದವರೆಗೆ, ಕರ್ನಾಟಕ ಕಲೆಯ ಪ್ರತಿಯೊಂದು ಪ್ರಾಕಾರವೂ ನಮ್ಮಲ್ಲಿ ಆನಂದ ತುಂಬುತ್ತದೆ. ದೆಹಲಿ-ಕರ್ನಾಟಕ ಸಂಘವು ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಆದರೆ ಈಗ ಈ ಪ್ರಯತ್ನಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅವಶ್ಯಕತೆಯಿದೆ. ಕರ್ನಾಟಕದ ಗತವೈಭವವನ್ನು ಕಣ್ತುಂಬಿಕೊಳ್ಳಲು ಮತ್ತು ಕರ್ನಾಟಕದ ಶ್ರೀಮಂತ ಕಲೆಗಳನ್ನು ಆನಂದಿಸಲು ಪ್ರತಿ ದೆಹಲಿಯ ಕನ್ನಡಿಗ ಕುಟುಂಬವು ಮುಂದೆ ಇಂತಹ ಕಾರ್ಯಕ್ರಮ ನಡೆಸಿದಾಗ ಕನ್ನಡೇತರ ಕುಟುಂಬವನ್ನು ತಮ್ಮೊಂದಿಗೆ ಕರೆತರಲು ಪ್ರಯತ್ನಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಲವು ಚಿತ್ರಗಳು ಕನ್ನಡೇತರರಲ್ಲೂ ಬಹಳ ಜನಪ್ರಿಯವಾಗಿವೆ. ಇದು ಕರ್ನಾಟಕವನ್ನು ತಿಳಿದುಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ಕುತೂಹಲವನ್ನು ಜನರಲ್ಲಿ ಹೆಚ್ಚಿಸಿದೆ, ಈ ಕುತೂಹಲವನ್ನು ನಾವು ಬಳಸಿಕೊಳ್ಳಬೇಕಾಗಿದೆ. ಅಲ್ಲದೆ, ನಾನು ನಿಮ್ಮಿಂದ ಇನ್ನೂ ಒಂದು ನಿರೀಕ್ಷೆ ಹೊಂದಿದ್ದೇನೆ. ಇಲ್ಲಿಗೆ ಬಂದಿರುವ ಕರ್ನಾಟಕದ ಕಲಾವಿದರು ಮತ್ತು ಪ್ರಬುದ್ಧರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ, ಪಿಎಂ ಮ್ಯೂಸಿಯಂ ಮತ್ತು ಕರ್ತವ್ಯ ಪಥದಂತಹ ಸ್ಥಳಗಳಿಗೆ ಭೇಟಿ ನೀಡಬೇಕು. ನೀವು ಹೆಮ್ಮೆ ಪಡುವ ಮತ್ತು ಆನಂದಿಸುವ ಬಹಳಷ್ಟು ವಿಚಾರಗಳನ್ನು ನೋಡುತ್ತೀರಿ. ಈ ಕೆಲಸಗಳನ್ನು ಬಹಳ ಹಿಂದೆಯೇ ಮಾಡಬೇಕಿತ್ತು ಎಂದು ಅಂದುಕೊಳ್ಳುತ್ತೀರಿ. ನಿಮ್ಮ ಅನುಭವಗಳನ್ನು ಕರ್ನಾಟಕದ ಜನರೊಂದಿಗೆ ಇಲ್ಲಿ ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ.
ಸ್ನೇಹಿತರೆ,
ಪ್ರಸ್ತುತ, ಭಾರತದ ಉಪಕ್ರಮಗಳನ್ನು ಆಧರಿಸಿ ಇಡೀ ಜಗತ್ತು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಆಚರಿಸುತ್ತಿದೆ. ಕರ್ನಾಟಕವು ಭಾರತೀಯ ಸಿರಿಧಾನ್ಯಗಳ ಪ್ರಮುಖ ಕೇಂದ್ರವಾಗಿದೆ. ಸಿರಿಧಾನ್ಯ ಅಂದರೆ ನಿಮ್ಮ ಶ್ರೀ ಅನ್ನ ಕರ್ನಾಟಕದ ಸಂಸ್ಕೃತಿ ಮತ್ತು ಸಾಮಾಜಿಕ ಅಸ್ಮಿತೆಯ ಭಾಗವೂ ಆಗಿದೆ. ನಮ್ಮ ಯಡಿಯೂರಪ್ಪ ಜಿ ಅವರ ಕಾಲದಿಂದಲೂ ಕರ್ನಾಟಕದಲ್ಲಿ ‘ಸಿರಿಧಾನ್ಯ’ ಪ್ರಚಾರಕ್ಕಾಗಿ ಕಾರ್ಯಕ್ರಮಗಳು ಪ್ರಾರಂಭವಾದವು. ಇಂದು ಇಡೀ ದೇಶವೇ ಕನ್ನಡಿಗರ ಹಾದಿಯಲ್ಲಿ ಸಾಗುತ್ತಿದ್ದು, ಸಿರಿಧಾನ್ಯಗಳನ್ನು ಶ್ರೀ ಅನ್ನ ಎಂದು ಕರೆಯಲು ಆರಂಭಿಸಿದೆ. ಇಡೀ ಜಗತ್ತು ಶ್ರೀ ಅನ್ನದ ಪ್ರಯೋಜನಗಳು ಮತ್ತು ಅಗತ್ಯಗಳನ್ನು ಅಂಗೀಕರಿಸುತ್ತಿರುವಾಗ, ಮುಂದಿನ ದಿನಗಳಲ್ಲಿ ಅದರ ಬೇಡಿಕೆಯೂ ಹೆಚ್ಚಾಗಲಿದೆ. ಇದರಿಂದ ಕರ್ನಾಟಕದ ಜನತೆ ಮತ್ತು ಸಣ್ಣ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಸ್ನೇಹಿತರೆ,
2047ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ದೆಹಲಿ-ಕರ್ನಾಟಕ ಸಂಘವು ತನ್ನ 100ನೇ ವರ್ಷವನ್ನು ಪ್ರವೇಶಿಸುತ್ತದೆ. ಭಾರತದ ಅಮರತ್ವದ ವೈಭವಕ್ಕೆ ನಿಮ್ಮ ಕೊಡುಗೆಗಳನ್ನು ಸಹ ಆ ಸಮಯದಲ್ಲಿ ಚರ್ಚಿಸಲಾಗುವುದು. ಈ ಅದ್ಧೂರಿ ಸಮಾರಂಭಕ್ಕೆ ಮತ್ತು 75 ವರ್ಷಗಳ ಈ ಪಯಣಕ್ಕೆ ಮತ್ತೊಮ್ಮೆ ನಾನು ನಿಮಗೆ ಶುಭ ಹಾರೈಸುತ್ತೇನೆ. ನಮ್ಮನ್ನು ಆಶೀರ್ವದಿಸಿ ಪ್ರೇರೇಪಿಸಿದ ಪೂಜ್ಯ ಸಾಧು ಸಂತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಪೂಜ್ಯ ಸಂತರ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ ಎಂದು ಹೆಮ್ಮೆ ಪಡುತ್ತೇನೆ. ಮತ್ತೊಮ್ಮೆ ನನ್ನ ಹೃದಯಂತರಾಳದಿಂದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ಹೇಳಿ: ಭಾರತ್ ಮಾತಾ ಕಿ – ಜೈ, ಭಾರತ್ ಮಾತಾ ಕಿ – ಜೈ, ಭಾರತ್ ಮಾತಾ ಕಿ – ಜೈ!
Addressing ‘Barisu Kannada Dimdimava’ cultural festival in Delhi. It celebrates the vivid culture of Karnataka. https://t.co/8PipVHg2U1
— Narendra Modi (@narendramodi) February 25, 2023
‘दिल्ली कर्नाटका संघ’ के 75 वर्षों का ये उत्सव ऐसे समय में हो रहा है, जब देश भी आज़ादी के 75 वर्ष का अमृत महोत्सव मना रहा है। pic.twitter.com/mb6Sugi574
— PMO India (@PMOIndia) February 25, 2023
भारत की पहचान हो, भारत की परम्पराएँ हों, या भारत की प्रेरणाएं हों, कर्नाटका के बिना हम भारत को परिभाषित नहीं कर सकते। pic.twitter.com/A2blhLOCa2
— PMO India (@PMOIndia) February 25, 2023
आज जब भारत G-20 जैसे बड़े वैश्विक समूह की अध्यक्षता कर रहा है, तो लोकतन्त्र की जननी- Mother of Democracy के रूप में हमारे आदर्श हमारा मार्गदर्शन कर रहे हैं। pic.twitter.com/wfBVGffqBj
— PMO India (@PMOIndia) February 25, 2023
कर्नाटका traditions की धरती भी है, और technology की धरती भी है। pic.twitter.com/SXHh81lfM8
— PMO India (@PMOIndia) February 25, 2023
आज देश विकास और विरासत को, प्रोग्रेस और परम्पराओं को एक साथ लेकर आगे बढ़ रहा है। pic.twitter.com/iLkxnETyPf
— PMO India (@PMOIndia) February 25, 2023
विकास की नई रफ्तार, कर्नाटका की तस्वीर को तेजी से बदल रही है। pic.twitter.com/jEgWFUfAnj
— PMO India (@PMOIndia) February 25, 2023
The land of Karnataka is special. It epitomises the spirit of 'Ek Bharat Shreshtha Bharat.' pic.twitter.com/dDPGhZEbss
— Narendra Modi (@narendramodi) February 25, 2023
Karnataka is the land of tradition and technology.
— Narendra Modi (@narendramodi) February 25, 2023
The state has a glorious historical culture and it is also making a mark in modern artificial intelligence. pic.twitter.com/hMQKXjxNas
Two things on which the Delhi Karnataka Sangha can focus on... pic.twitter.com/dm55QWZCDG
— Narendra Modi (@narendramodi) February 25, 2023
The programme organised by the Delhi Karnataka Sangha showcased the glorious culture of Karnataka. pic.twitter.com/079WqiYA6O
— Narendra Modi (@narendramodi) February 25, 2023
ಕರ್ನಾಟಕದ ನೆಲ ವಿಶಿಷ್ಟವಾಗಿದೆ. ಇದು 'ಏಕ್ ಭಾರತ್ ಶ್ರೇಷ್ಠ ಭಾರತ್'ನ ಚೈತನ್ಯವನ್ನು ಸಾರುತ್ತದೆ pic.twitter.com/qAH1codh5j
— Narendra Modi (@narendramodi) February 25, 2023
ದೆಹಲಿ ಕರ್ನಾಟಕ ಸಂಘವು ಗಮನಹರಿಸಬಹುದಾದ ಎರಡು ವಿಷಯಗಳು... pic.twitter.com/B8iTLZses2
— Narendra Modi (@narendramodi) February 25, 2023