Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಯ ನರೈನಾದಲ್ಲಿ ಲೋಹರಿ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

ದೆಹಲಿಯ ನರೈನಾದಲ್ಲಿ ಲೋಹರಿ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ದೆಹಲಿಯ ನರೈನಾದಲ್ಲಿ ನಡೆದ ಲೋಹರಿ ಆಚರಣೆಯಲ್ಲಿ ಭಾಗವಹಿಸಿದ್ದರು. ಲೋಹರಿ ಹಲವಾರು ಜನರಿಗೆ, ವಿಶೇಷವಾಗಿ ಉತ್ತರ ಭಾರತೀಯರಿಗೆ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿಯವರು ಹೇಳಿದರು. “ಈ ಹಬ್ಬವು ಪುನರಾರಂಭ ಮತ್ತು ಭರವಸೆಯ ಸಂಕೇತವಾಗಿದ್ದು, ಕೃಷಿ ಮತ್ತು ನಮ್ಮ ಶ್ರಮಜೀವಿ ರೈತರೊಂದಿಗೆ ಸಂಬಂಧ ಹೊಂದಿದೆ” ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

“ಲೋಹರಿ ಹಲವಾರು ಜನರಿಗೆ, ವಿಶೇಷವಾಗಿ ಉತ್ತರ ಭಾರತದವರಿಗೆ ವಿಶೇಷ ಮಹತ್ವವನ್ನು ಹೊಂದಿದೆ. ಇದು ಪುನರಾರಂಭ ಮತ್ತು ಭರವಸೆಯ ಸಂಕೇತವಾಗಿದೆ. ಕೃಷಿ ಮತ್ತು ನಮ್ಮ ಕಠಿಣ ಪರಿಶ್ರಮಿ ರೈತರೊಂದಿಗೆ ಈ ಹಬ್ಬವು ಸಂಬಂಧ ಹೊಂದಿದೆ. 

ಇಂದು ಸಂಜೆ, ದೆಹಲಿಯ ನರೈನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಹರಿಯನ್ನು ಆಚರಿಸುವ ಅವಕಾಶ ನನಗೆ ಸಿಕ್ಕಿತು. ವಿವಿಧ ವರ್ಗದ ಜನರು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರು ಆಚರಣೆಗಳಲ್ಲಿ ಭಾಗವಹಿಸಿದ್ದರು. 

 

ಎಲ್ಲರಿಗೂ ಲೊಹರಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

 

 

*****