Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಯಲ್ಲಿ ನಡೆದ ಭಾರತ – ಯುಕೆ ಟೆಕ್ ಶೃಂಗದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

(ನವೆಂಬರ್ 7, 2016)

ದೆಹಲಿಯಲ್ಲಿ ನಡೆದ ಭಾರತ – ಯುಕೆ ಟೆಕ್ ಶೃಂಗದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

(ನವೆಂಬರ್ 7, 2016)

ದೆಹಲಿಯಲ್ಲಿ ನಡೆದ ಭಾರತ – ಯುಕೆ ಟೆಕ್ ಶೃಂಗದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

(ನವೆಂಬರ್ 7, 2016)

ಯುನೈಟೆಡ್ ಕಿಂಗ್ಡಮ್ ನ ಪ್ರಧಾನಮಂತ್ರಿಯವರಾದ ರೈಟ್ ಗೌರವಾನ್ವಿತ ಥೆರೆಸಾ ಮೇ ಅವರೇ,

ನನ್ನ ಸಹೋದ್ಯೋಗಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವರಾದ ಡಾ. ಹರ್ಷವರ್ಧನ್ ಅವರೇ,

ಸಿಐಐ ಅಧ್ಯಕ್ಷರಾದ ಡಾ. ನೌಷಾದ್ ಪೋರ್ಬ್ಸ್ ಅವರೇ,

ಶಿಕ್ಷಣ ಕ್ಷೇತ್ರದ ಗೌರವಾನ್ವಿತ ಸದಸ್ಯರೇ,

ಖ್ಯಾತ ವಿಜ್ಞಾನಿಗಳು ಮತ್ತು ತಂತ್ರಜ್ಞರೇ,

ಭಾರತ ಮತ್ತು ಯುಕೆಯ ಕೈಗಾರಿಕಾ ನಾಯಕರೇ,

ಮಹಿಳೆಯರೇ ಹಾಗೂ ಮಹನೀಯರೇ,

1. ನಾನು ಭಾರತ-ಯುಕೆ ಟೆಕ್ ಶೃಂಗವನ್ನುದ್ದೇಶಿಸಿ ಭಾಷಣ ಮಾಡಲು ಸಂತೋಷಭರಿತನಾಗಿದ್ದೇನೆ.

2. ಕಳೆದ ವರ್ಷ ನಾನು ಯುಕೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತ ಮತ್ತು ಯುಕೆ ನಡುವಿನ ಮೈತ್ರಿಯನ್ನು ಬಲಪಡಿಸಲು ಈ ತಾಂತ್ರಿಕ ಶೃಂಗಸಭೆಯನ್ನು ನಡೆಸಲು ಚಿಂತಿಸಲಾಯಿತು. ಭಾರತ –ಯುಕೆ ಸಂಶೋಧನೆ ಮತ್ತು ನಾವಿನ್ಯ, ಶೈಕ್ಷಣಿಕ ವರ್ಷವಾಗಿ 2016 ಆಚರಿಸುತ್ತಿರುವ ಸಂದರ್ಭದಲ್ಲಿ ಇದು ಅತ್ಯುನ್ನತವಾದುದಾಗಿದೆ.

3. ಈ ಸಂದರ್ಭದಲ್ಲಿ ಯುನೈಟೆಡ್ ಕಿಂಗ್ಡಮ್ ಪ್ರಧಾನಮಂತ್ರಿ ರೈಟ್ ಗೌರವಾನ್ವಿತ ಥೆರೆಸಾ ಮೇ ಅವರು ಜೊತೆಗೂಡಿರುವುದು ನಮ್ಮ ಸೌಭಾಗ್ಯವಾಗಿದೆ. ಮೇಡಂ ಪ್ರಧಾನಿಯವರೇ, ಭಾರತ ಸದಾ ನಿಮ್ಮ ಹೃದಯಕ್ಕೆ ಹತ್ತಿರವಾಗಿದೆ ಎಂಬುದನ್ನು ನಾನು ಬಲ್ಲೆ ಮತ್ತು ನೀವು ಭಾರತದ ಶ್ರೇಷ್ಠ ಮಿತ್ರರಾಗಿದ್ದೀರಿ. ಇತ್ತೀಚೆಗಷ್ಟೇ ನೀವು ನಿಮ್ಮ ನಿವಾಸದಲ್ಲಿ ಭಾರತೀಯ ಸಮುದಾಯದವರೊಂದಿಗೆ ದೀಪಾವಳಿಯನ್ನು ಆಚರಿಸಿದ್ದೀರಿ!

4. ನೀವು ಇಂದು ಇಲ್ಲಿರುವುದು ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ನಿಮಗಿರುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ನಿಮ್ಮ ನೆರೆ ರಾಷ್ಟ್ರಗಳ ಹೊರತಾಗಿ ಮತ್ತು ಹೊರಗೆ ದ್ವಿಪಕ್ಷೀಯ ಬಾಂಧವ್ಯದ ಪ್ರವಾಸಕ್ಕೆ ನೀವು ಮೊದಲಿಗೆ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆ ಗೌರವ ತಂದಿದೆ ಮತ್ತು ನಾವು ನಿಮಗೆ ಆತ್ಮೀಯ ಆಹ್ವಾನವನ್ನು ನೀಡುತ್ತೇವೆ.

5. ಇಂದು ವಿಶ್ವ ಹಣದುಬ್ಬರದ ಬಿಂದುವಿನಲ್ಲಿದೆ, ಇಲ್ಲಿ ತಂತ್ರಜ್ಞಾನ ಪ್ರಗತಿ ಪರಿವರ್ತನೆಯಶಕ್ತಿಯಾಗಿದೆ. ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಎರಡೂ ರಾಷ್ಟ್ರಗಳು ಇತಿಹಾಸಿಕ ನಂಟು ಹೊಂದಿದ್ದು, ಇವು 21ನೇ ಶತಮಾನದ ಜ್ಞಾನ ಆರ್ಥಿಕ ರಾಷ್ಟ್ರವೆಂದು ಬಣ್ಣನೆಗಾಗಿ ಒಗ್ಗೂಡಿ ಕೆಲಸ ಮಾಡುವುದು ಮಹತ್ವದ್ದಾಗಿದೆ.

6. ಪ್ರಸಕ್ತ ಜಾಗತಿಕ ವಾತಾವರಣದಲ್ಲಿ, ನಮ್ಮ ಎರಡೂ ರಾಷ್ಟ್ರಗಳು ಹಲವು ಆರ್ಥಿಕ ಸವಾಲುಗಳನ್ನು ಎದುರಿಸಿದ್ದು, ಇವು ನೇರವಾಗಿ ವಾಣಿಜ್ಯ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಆದರೆ, ನಾವು ಒಗ್ಗೂಡಿ ನಮ್ಮ ವೈಜ್ಞಾನಿಕ ಶಕ್ತಿ ಮತ್ತು ತಂತ್ರಜ್ಞಾನದ ಶಕ್ತಿಗಳನ್ನು ಸೇರಿಸಿ ಹೊಸ ಅವಕಾಶ ಸೃಷ್ಟಿಸಬಹುದು ಎಂಬ ವಿಶ್ವಾಸ ಹೊಂದಿದ್ದೇನೆ.

7. ಭಾರತವು ಈಗ ಮುಕ್ತ ಹೂಡಿಕೆ ವಾತಾವರಣದೊಂದಿಗೆ ತ್ವರಿತವಾಗಿ ಬೆಳಯುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. ನಮ್ಮ ನಾವಿನ್ಯ ಉದ್ದಿಮೆದಾರರು, ಪ್ರತಿಭಾವಂತ ಕಾರ್ಯಪಡೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಸಾಮರ್ಥ್ಯ ದೊಡ್ಡ ಮಾರುಕಟ್ಟೆ, ಜನಸಂಖ್ಯೆಯ ಲಾಭ ಮತ್ತು ಹೆಚ್ಚುತ್ತಿರುವ ಆರ್ಥಿಕ ಸ್ಪರ್ಧಾತ್ಮಕತೆ ಜೊತೆಗೂಡಿದರೆ, ವಿಶ್ವದ ಆರ್ಥಿಕತೆಗೆ ಹೊಸ ಅಭಿವೃದ್ಧಿಯ ಮೂಲವನ್ನು ಒದಗಿಸುತ್ತದೆ.

8. ಅದೇ ರೀತಿ ಯು.ಕೆ. ಸಹ ಇತ್ತೀಚಿನ ದಿನದಲ್ಲಿ ಚೇತರಿಕೆಯ ಅಭಿವೃದ್ಧಿಯನ್ನು ಅನುಭವಿಸಿದೆ. ಇದು ತಾಂತ್ರಿಕ ನಾವಿನ್ಯತೆ ಮತ್ತು ಶೈಕ್ಷಣಿಕ ಅನ್ವೇಷಣೆಯ ಪರಿಣತಿ ಒದಗಿಸುತ್ತದೆ.

9. ಎರಡೂ ಕಡೆಯಿಂದ ಕಳೆದ ಐದು ವರ್ಷಗಳಲ್ಲಿ ಹೂಡಿಕೆ ಚೇತರಿಕೆ ಕಂಡಿದ್ದಾಗ್ಯೂ ದ್ವಿಪಕ್ಷೀಯ ವ್ಯಾಪಾರದ ಗಾತ್ರ ಮಾತ್ರ ಅದೇ ಮಟ್ಟದಲ್ಲಿ ಉಳಿದಿತ್ತು. ಭಾರತವು ಯುಕೆಯಲ್ಲಿ 3ನೇ ಅತಿ ದೊಡ್ಡ ಹೂಡಿಕೆದಾರನಾಗಿದೆ ಮತ್ತು ಯುಕೆ ಸಹ ಬಾರತದಲ್ಲಿ ಜಿ 20ರ ಅತಿ ದೊಡ್ಡ ಹೂಡಿಕೆದಾರನಾಗಿದೆ. ಎರಡೂ ರಾಷ್ಟ್ರಗಳು ಪರಸ್ಪರ ರಾಷ್ಟ್ರಗಳಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗದ ಬೆಂಬಲ ನೀಡುತ್ತಿದೆ.

10. ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ- ಯುಕೆ ಸಹಕಾರವು ಅತ್ಯುನ್ನತ ಗುಣಮಟ್ಟ ಮತ್ತು ಉನ್ನತ ಪರಿಣಾಮದ ಸಂಶೋಧನಾ ಪಾಲುದಾರಿಕೆಯಾಗಿದೆ. ‘ನ್ಯೂಟನ್ – ಭಾಭಾ’ ಕಾರ್ಯಕ್ರಮದಡಿ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ನಾವು ಸಾಮಾಜಿಕ ಸವಾಲುಗಳನ್ನು ಎದುರಿಸಲು ಮೂಲ ವಿಜ್ಞಾನದಿಂದ ಹಿಡಿದು ಪರಿಹಾರ ವಿಜ್ಞಾನದವರೆಗೆ ವಿಸ್ತೃತ ಶ್ರೇಣಿಯ ಸಹಯೋಗವನ್ನು ಆರಂಭಿಸಿದ್ದೇವೆ ಎಂದು ಹೇಳಲು ನಾನು ಸಂತೋಷ ಪಡುತ್ತೇನೆ.

11. ನಮ್ಮ ವೈಜ್ಞಾನಿಕ ಸಮುದಾಯಗಳು ಸಾಂಕ್ರಾಮಿಕ ರೋಗಗಳಿಗೆ ಹೊಸ ಚುಚ್ಚುಮದ್ದುಗಳನ್ನು, ಹೊಸ ಸ್ಮಾರ್ಟ್ ವಸ್ತುಗಳ ಆವಿಷ್ಕಾರ, ಶುದ್ಧ ಇಂಧನಕ್ಕೆ ಪರಿಹಾರ ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಕೃಷಿ ಹಾಗೂ ಆಹಾರ ಭದ್ರತೆ ಸೇರಿದಂತೆ ಫಸಲು ಇಳುವರಿಯನ್ನು ಸುಧಾರಿಸಲು ಒಟ್ಟಾಗಿ ಶ್ರಮಿಸುತ್ತಿವೆ.

12. ನಾವು ಜಂಟಿಯಾಗಿ 10 ದಶಲಕ್ಷ ಪೌಂಡ್ ಹೂಡಿಕೆಯೊಂದಿಗೆ ಸೌರ ವಿದ್ಯುತ್ ಗೆ ಸಂಬಂಧಿಸಿದಂತೆ ಭಾರತ- ಯುಕೆ ಶುದ್ಧ ಇಂಧನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಒಪ್ಪಿದ್ದೇವೆ. 15 ದಶಲಕ್ಷ ಪೌಂಡ್ ಜಂಟಿ ಹೂಡಿಕೆಯೊಂದಿಗೆ ಹೊಸ ಆಂಟಿ-ಮೈಕ್ರೋಬಿಯಲ್ ನಿರೋಧಕ ಉಪಕ್ರಮವನ್ನೂ ಆರಂಭಿಸುತ್ತಿದ್ದೇವೆ.

13. ಆರೋಗ್ಯ ರಕ್ಷಣೆಯಲ್ಲಿ ರೋಗ ಬಾರದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಸೇವೆ ಒದಗಿಸುವ ನಿಟ್ಟಿನಲ್ಲಿ ಭಾರತದ ವಿಸ್ತೃತವಾದ ಸಾಂಪ್ರದಾಯಿಕ ಜ್ಞಾನ ನೆಲೆಯೊಂದಿಗೆ ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ಮೇಳೈಸಲು ಭಾರತ ಮತ್ತು ಯುಕೆ ಪಾಲುದಾರರಾಗಬಹುದು ಎಂದು ನಾನು ಭಾವಿಸುತ್ತೇನೆ. ಇದು ನಾವು ಆಧುನಿಕ ಜೀವನ ಶೈಲಿಯಲ್ಲಿ ಎದುರಿಸುತ್ತಿರುವ ಹಲವು ರೋಗಳನ್ನು ನಿಯಂತ್ರಿಸಲು ಸಹಕಾರಿ ಆಗುತ್ತದೆ.

14. ಕೈಗಾರಿಕಾ ಸಂಶೋಧನೆಯಲ್ಲಿ ಯು.ಕೆ.ಯೊಂದಿಗಿನ ಭಾರತದ ಪಾಲುದಾರಿಕೆ ನಮ್ಮ ಉತ್ತೇಜನಕಾರಿ ಕಾರ್ಯಕ್ರಮಗಳಲ್ಲಿ ಪ್ರಮುಖವಾದುದಾಗಿದೆ. ಜಾಗತಿಕ ನಾವಿನ್ಯತೆ ಮತ್ತು ತಂತ್ರಜ್ಞಾನ ಮೈತ್ರಿ ಅಥವಾ ಸಿಐಐನ ಜಿಐಟಿಎ ವೇದಿಕೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕೈಗೆಟಕುವ ದರದ ಆರೋಗ್ಯ ಸೇವೆ, ಶುದ್ಧ ಇಂಧನ, ಉತ್ಪಾದನೆ ಮತ್ತು ಐಸಿಟಿಯ ಕೈಗಾರಿಕಾ ನೇತೃತ್ವದ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ನಾವಿನ್ಯ – ಯುಕೆ ಬೆಂಬಲ ನೀಡುತ್ತದೆ.

15.ಈ ವಲಯಗಳು ಭಾರತ ಮತ್ತು ಯುಕೆ ವಾಣಿಜ್ಯಕ್ಕೆ ಹೊಸ ಅವಕಾಶ ತೆರೆಯಲಿದ್ದು, ವೈಜ್ಞಾನಿಕ ಜ್ಞಾನವನ್ನು ತಂತ್ರಜ್ಞಾನ ಆಧಾರಿತ ಉದ್ದಿಮೆಯಾಗಿ ಪರಿವರ್ತಿಸಲಿದೆ. ವೇಗವಾದ ನಾವಿನ್ಯ ಮತ್ತು ತಾಂತ್ರಿಕ ಉದ್ಯಮ ಶೀಲತೆಯ ಗುರಿ ಹೊಂದಿರುವ ಈ ಚೈತನ್ಯಶೀಲ ದ್ವಿಪಕ್ಷೀಯ ಕಾರ್ಯಕ್ರಮಗಳಿಗೆ ಇಲ್ಲಿ ಪಾಲ್ಗೊಂಡಿರುವ ಎಲ್ಲರೂ ಮೌಲ್ಯ ಸೇರಿಸುವ ಮೂಲಕ ಕೊಡುಗೆ ನೀಡಬೇಕು ಎಂದು ನಾನು ಕರೆ ನೀಡುತ್ತೇನೆ.

16.ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಗಳು ಪ್ರಗತಿಯ ಅಪೂರ್ವ ಶಕ್ತಿ ಎಂದು ನಾನು ಭಾವಿಸುತ್ತೇನೆ ಮತ್ತು ಅದು ನಮ್ಮ ಪಾಲುದಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ತಾಂತ್ರಿಕ ಶೃಂಗವು ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಪರಸ್ಪರರ ಲಾಭದ ಆಧಾರದ ಮೇಲೆ ಮತ್ತು ನಮ್ಮ ಹಂಚಿಕೆಯ ತಂತ್ರಜ್ಞಾನದ ಶಕ್ತಿಯೊಂದಿಗೆ ಮತ್ತು ವೈಜ್ಞಾನಿಕ ಅರಿವಿನೊಂದಿಗೆ ಬಲಪಡಿಸುವ ಗುರಿ ಹೊಂದಿದೆ.

17. ವಿಜ್ಞಾನ ಜಾಗತಿಕವಾಗಿರಬೇಕು ಮತ್ತು ತಂತ್ರಜ್ಞಾನ ಸ್ಥಳೀಯವಾಗಿರಬೇಕು ಎಂದು ನಾನು ಯಾವಾಗಲೂ ಹೇಳುತ್ತೇನೆ. ಈ ನಿಟ್ಟಿನಲ್ಲಿ ಇಂಥ ಶೃಂಗಗಳು ಪರಸ್ಪರರ ಅವಶ್ಯಕತೆಯನ್ನುಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತವೆ ಮತ್ತು ಆ ಅರಿವಿನ ಮೇಲೆ ನಮ್ಮ ಬಾಂಧವ್ಯವನ್ನು ಮುಂದುವರಿಸಲು ಉತ್ತೇಜಿಸುತ್ತವೆ.

18. ನನ್ನ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಅಭಿಯಾನದ ಒಮ್ಮತ ತಂತ್ರಜ್ಞಾನದ ಸಾಧನೆ ಮತ್ತು ಆಶೋತ್ತರಗಳು ಮತ್ತು ನಮ್ಮ ಬಲವಾದ ದ್ವಿಪಕ್ಷೀಯ ಬಾಂಧವ್ಯ ಭಾರತೀಯ ಮತ್ತು ಬ್ರಿಟಿಷ್ ಕೈಗಾರಿಕೆಗಳಿಗೆ ಒದಗಿಸುವ ಹೊಸ ಅಭಿವೃದ್ಧಿಯ ದಾರಿಗಳಾಗಿವೆ.

19. ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿನ ಸಹಯೋಗಕ್ಕೆ ಭಾರತ ಮತ್ತು ಯುಕೆಗೆ ಇದು ಅವಕಾಶ ಕಲ್ಪಿಸುತ್ತದೆ ಮತ್ತು ಮಾಹಿತಿ ಕೇಂದ್ರೀಕರಣ ಮತ್ತು ಜನ ಕೇಂದ್ರಿತ ಇ-ಆಡಳಿತ ವಿಸ್ತರಿಸುತ್ತದೆ.

20. ಭಾರತವು ಶೀಘ್ರವೇ ನಗರ ಪ್ರದೇಶದಲ್ಲಿ ಶೇ.154ರ ದೂರಸಂಪರ್ಕದೊಂದಿಗೆ ನೂರು ಕೋಟಿಗೂ ಹೆಚ್ಚು ದೂರವಾಣಿ ಸಂಪರ್ಕ ಹೊಂದಲಿದೆ. ನಮ್ಮಲ್ಲಿ 350 ದಶಲಕ್ಷ ಅಂತರ್ಜಾಲ ಬಳಕೆದಾರರಿದ್ದಾರೆ. ನಾವು ದೇಶಾದ್ಯಂತ ಸುಮಾರು 1 ಲಕ್ಷ ಹಳ್ಳಿಗಳಿಗೆ ಕೊನೆ ಮೈಲಿಯ ಸಂಪರ್ಕವನ್ನು ತರುತ್ತಿದ್ದೇವೆ. ಈ ತ್ವರಿತವಾದ ಪ್ರಗತಿ ಹೊಸ ಡಿಜಿಟಲ್ ಹೆದ್ದಾರಿಯ ಹೊಸ ಅವಕಾಶ ನೀಡುತ್ತಿದೆ ಮತ್ತು ಭಾರತ ಮತ್ತು ಯುಕೆಯ ಸಂಸ್ಥೆಗಳಿಗೆ ಹೊಸ ಮಾರುಕಟ್ಟೆ ಒದಗಿಸುತ್ತಿದೆ.

21. ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕ ಸೇವಾ ವಲಯದಲ್ಲಿ ಸ್ವಾಭಾವಿಕ ಸಹಯೋಗ ಹೊರಹೊಮ್ಮಿದೆ. ನಾವು ಜನ್ ಧನ್ ಯೋಜನೆ ಅಡಿಯಲ್ಲಿ 220 ದಶಲಕ್ಷ ಹೊಸ ಕುಟುಂಬಗಳನ್ನು ತರುತ್ತಿದ್ದು, ‘ಫಿನ್ಟೆಕ್’ ಭಾರತಕ್ಕೆ ಮುಂದಿನ ಅತಿ ದೊಡ್ಡ ಪರಿವರ್ತನೆಯಾಗಿ ಹೊರಹೊಮ್ಮಿದೆ. ಈ ಹಣಪೂರಣ ಯೋಜನೆಯನ್ನು ಮೊಬೈಲ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದೆ ಮತ್ತು ಅನನ್ಯವಾದ ಗುರುತಿನ ಚೀಟಿಯು ವಿಶ್ವದ ಅತಿ ದೊಡ್ಡ ಸಾಮಾಜಿಕ ಭದ್ರತೆಯ ಕಾರ್ಯಕ್ರಮವಾಗಿದೆ.

22.ಆರ್ಥಿಕ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಹಣಕಾಸಿನಲ್ಲಿ ಯುಕೆಯ ನಾಯಕತ್ವದಲ್ಲಿ, ಭರವಸೆಯ ಅವಕಾಶಗಳನ್ನು ಈ ಅಭಿಯಾನದಲ್ಲಿ ನಮ್ಮ ಉದ್ದಿಮೆಗಳು ಪಡೆಯಬಹುದಾಗಿದೆ.

23. ನಮ್ಮ ದ್ವಿಪಕ್ಷೀಯ ಕಾರ್ಯಕ್ರಮದಲ್ಲಿ ಮೇಕ್ ಇನ್ ಇಂಡಿಯಾ ಕೂಡ ಒಂದು ಪ್ರಮುಖ ವಲಯವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಮುಂದುವರಿದ ಉತ್ಪಾದನೆ ಈ ಕಾರ್ಯಕ್ರಮದಡಿಯಲ್ಲಿ ವಿಶೇಷ ಪ್ರಯತ್ನವಾಗಿದೆ. ಅತಿ ದೊಡ್ಡ ವಹಿವಾಟುದಾರರನಾದ ಯುಕೆ ರಕ್ಷಣಾ ಉತ್ಪಾದನೆ, ಏರೋಸ್ಪೇಸ್ ಮತ್ತು ವಿಧ್ಯುನ್ಮಾನ ಎಂಜಿನಿಯರಿಂಗ್ ವಲಯದಲ್ಲಿನ ನಮ್ಮ ಉದರೀಕೃತ ಎಫ್.ಡಿ.ಐ. ನೀತಿಯಿಂದ ಲಾಭ ಪಡೆಯಬಹುದಾಗಿದೆ.

24. ಸ್ಮಾರ್ಟ್ ಸಿಟಿ ಅಭಿಯಾನವು ತ್ವರಿತವಾದ ನಗರೀಕರಣ ವಾತಾವರಣಕ್ಕೆ ಡಿಜಿಟಲ್ ತಂತ್ರಜ್ಞಾನವನ್ನು ಸೇರ್ಪಡೆ ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ ಪುಣೆ, ಅಮರಾವತಿ ಮತ್ತು ಇಂದೋರ್ ಯೋಜನೆಗಳಿಗೆ ಯುಕೆ ಉನ್ನತ ಮಟ್ಟದ ಆಸಕ್ತಿ ತೋರಿದೆ. ಈಗಾಗಲೇ ಯುಕೆಯ ಕಂಪನಿಗಳು 9 ಶತಕೋಟಿ ಪೌಂಡ್ ಮೊತ್ತದ ವಹಿವಾಟುಗಲಿಗೆ ಅಂಕಿತ ಹಾಕಿದ್ದಾರೆ ಎಂದು ನಾನು ತಿಳಿದಿದ್ದೇನೆ ಮತ್ತು ನಾನು ಇನ್ನೂ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತೇನೆ.

25. ನವೋದ್ಯಮ ಭಾರತ ಕಾರ್ಯಕ್ರಮವು ನಮ್ಮ ಟೆಕ್ ಸೆವಿ ಯುವಜನರಿಗಾಗಿ ನಾವಿನ್ಯ ಮತ್ತು ತಂತ್ರಜ್ಞಾನವನ್ನು ಉದ್ಯಮಶೀಲತೆಯಾಗಿ ಪರಿವರ್ತಿಸುವ ಗುರಿ ಹೊಂದಿದೆ. ಇಂದು ಭಾರತ ಮತ್ತು ಯುಕೆ ವಿಶ್ವದ ಮೊದಲ ಮೂರು ಅತಿ ದೊಡ್ಡ ನವೋದ್ಯಮ ತಾಣಗಳಾಗಿ ಹೊರಹೊಮ್ಮಿವೆ.

26.ನಾವು ಅನಿರೀಕ್ಷಿತ ತಂತ್ರಜ್ಞಾನದೊಂದಿಗೆ ಹೊಸ ವಾಣಿಜ್ಯ ಆನ್ವಯಿಕಗಳಿಗೆ ಚೈತನ್ಯಶೀಲ ಮತ್ತು ಅಭಿವೃದ್ಧಿಹೊಂದುತ್ತಿರುವ ಪರಿಸರವನ್ನು ಸೃಷ್ಟಿಸಬಹುದಾಗಿದೆ.

27. ಈ ಶೃಂಗಸಭೆಗೆ ಆಯ್ಕೆ ಮಾಡಿಕೊಂಡಿರುವ ವಿಷಯಗಳು ಮುಂದುವರಿದ ಉತ್ಪಾದನೆ, ಜೀವ ವೈದ್ಯಕೀಯ ಉಪಕರಣಗಳು, ವಿನ್ಯಾಸ, ನಾವಿನ್ಯತೆ ಮತ್ತು ಎಲ್ಲ ಹೊಸ ಆರಂಭಗಳಿಗೆ ಉದ್ಯಮಶೀಲತೆಗೆ ನಮ್ಮ ವಾಣಿಜ್ಯ ಬಾಂಧವ್ಯದಲ್ಲಿ ಸಹಯೋಗ ತರುವುದಾಗಿದೆ.

28. ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಯುಕೆ ಜಂಟಿ ತಂತ್ರಜ್ಞಾನ ಅಭಿವೃದ್ಧಿಗೆ ಮಾರ್ಗ ನೀಡುವ ಅತ್ಯುನ್ನತ ಗುಣಮಟ್ಟದ ಮೂಲಭೂತ ಸಂಶೋಧನೆಯ ಪರಿಸರಸ್ನೇಹಿ ವಾತಾವರಣ ನಿರ್ಮಾಣ ಮಾಡಲಿದೆ ಎಂಬ ವಿಶ್ವಾಸ ನನಗಿದೆ.

29.ಭಾರತ ಮತ್ತು ಯುಕೆ ತಂತ್ರಜ್ಞಾನ ಶೃಂಗಸಭೆಯು ಉನ್ನತ ಶಿಕ್ಷಣದ ಮೇಲೂ ಗಮನ ಹರಿಸಿದೆ. ಶಿಕ್ಷಣ ನಮ್ಮ ವಿದ್ಯಾರ್ಥಿಗಳಿಗೆ ಮಹತ್ವದ್ದಾಗಿದೆ ಮತ್ತು ಹಂಚಿಕೆಯ ಭವಿಷ್ಯದಲ್ಲಿ ಇದು ನಮ್ಮ ಕಾರ್ಯಕ್ರಮವನ್ನು ವಿಶ್ಲೇಷಿಸುತ್ತದೆ. ಹೀಗಾಗಿ ನಾವು ಹೆಚ್ಚಿನ ಶಿಕ್ಷಣ ಮತ್ತು ಸಂಶೋಧನಾ ಅವಕಾಶಗಳಲ್ಲಿ ಪಾಲ್ಗೊಳ್ಳಲು ನಮ್ಮ ಯುವಕರಿಗೆ ಹೆಚ್ಚಿನ ಅವಕಾಶ ನೀಡಬೇಕಾಗಿದೆ.

30. ಯುಕೆಯನ್ನು ಪಾಲುದಾರ ರಾಷ್ಟ್ರ ಮಾಡಿಕೊಂಡು ಈ ಮಹತ್ವದ ಕಾರ್ಯಕ್ರಮ ಯೋಜಿಸಿದ್ದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಾಗೂ ಸಿಐಐಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ತಂತ್ರಜ್ಞಾನ ಶೃಂಗವು ಭಾರತ –ಯುಕೆಯ ಮುಂದಿನ ಹಂತದ ಪಾಲುದಾರಿಕೆಗೆ ಬುನಾದಿ ಹಾಕುತ್ತದೆ ಎಂಬ ವಿಶ್ವಾಸ ನನಗಿದೆ. ಹಂಚಿಕೆಯ ವೈಜ್ಞಾನಿಕ ಅರಿವು ಮತ್ತು ತಾಂತ್ರಿಕ ಪರಾಕ್ರಮದ ಆಧಾರದ ಪಯಣದಲ್ಲಿ ನಮ್ಮನ್ನು ಒಟ್ಟಿಗೆ ಕರೆದುಕೊಂಡು ಹೋಗಲಿದೆ.

31. ಈ ಮಹತ್ವದ ಸಭೆಯಲ್ಲಿ ಹಾಜರಾಗಿ ಇದರ ಯಶಸ್ಸಿಗೆ ಕಾರಣರಾದ ಯುಕೆ ಮತ್ತು ಭಾರತದಿಂದ ಬಂದು ಪಾಲ್ಗೊಂಡಿರುವ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮತ್ತು ಭಾರತ –ಯುಕೆ ನಡುವೆ ಹೊಸ ಪಾಲುದಾರಿಕೆ ನಿರ್ಮಾಣಕ್ಕೆ ತಮ್ಮ ಮುನ್ನೋಟ ಬೀರಿದ ಪ್ರಧಾನಮಂತ್ರಿ ಥೆರೇಸಾ ಮೇ ಅವರಿಗೆ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ.

AKT/AK