ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಇತರ ಸಚಿವಾಲಯಗಳ “ಎ” ಶ್ರೇಣಿಯ ಅಧಿಕಾರಿಗಳನ್ನು ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ಕ್ಕೆಈ ಕೆಳಗಿನ ವಿವರಗಳ ಆಧಾರದ ಮೇಲೆ ನಿಯೋಜನೆ ಮೇಲೆ ಕಳುಹಿಸಲು ಅನುಮೋದನೆ ನೀಡಿದೆ:
a) ಡಿಪಿಇ ಮಾರ್ಗಸೂಚಿಯಂತೆ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ನ ಮಂಡಳಿಗಿಂತ ಕೆಳ ಮಟ್ಟದ ಒಟ್ಟು ಹುದ್ದೆಯ ಗರಿಷ್ಠ 10ಕ್ಕೆ ಸೀಮಿತವಾಗಿ ಮತ್ತು ತತ್ ಕ್ಷಣದ ಸೇರ್ಪಡೆ ನಿಯಮದ ವಿನಾಯಿತಿಯೊಂದಿಗೆ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್) ಕ್ಕೆ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಹಿನ್ನೆಲೆ ಇರುವ ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಇತರ ಸಚಿವಾಲಯಗಳ ‘ಎ’ಶ್ರೇಣಿಯ ಅಧಿಕಾರಿಗಳ ನಿಯೋಜನೆಯ ಮೂಲಕ ಬಾಕಿ ಇರುವ ಅಂತಹ ಹುದ್ದೆಯನ್ನು ಮಧ್ಯದ ಅವಧಿಯಲ್ಲಿ ಅಂದರೆ 01.10.2016 ರಿಂದ ಈ ಪ್ರಸ್ತಾಪದ ಅನುಮೋದನೆಯವರೆಗೆ (ಇದಕ್ಕೂ ಮುನ್ನ ಸಂಪುಟದ ಅನುಮೋದನೆಯು 30.09.2016ರವರೆಗೆ ಮಾತ್ರ ಸಿಂಧುವಾಗಿತ್ತು) ಮತ್ತು ಅನುಮೋದನೆ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅರ್ಹವಾಗುವಂತೆ ಭರ್ತಿ ಮಾಡಲು ಅವಕಾಶ ನೀಡುತ್ತದೆ. ಮತ್ತು
b) ಭವಿಷ್ಯದಲ್ಲಿ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್) ದಲ್ಲಿ ಮಂಡಳಿಗಿಂತ ಕೆಳಗಿನ ಮಟ್ಟದ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ವಿನಾಯಿತಿಯನ್ನು, ದಿನಾಂಕ 28.12.2005ರ ದಿನಾಂಕದ ಡಿಪಿಇ ಓಎಂ ಸಂಖ್ಯೆ 18 (6)/2001-ಜಿಎಂ-ಜಿಎಲ್-77ರ ನಿಯಮಗಳ ರೀತ್ಯ ನಿರ್ವಹಿಸಲು ಅವಕಾಶ ನೀಡುತ್ತದೆ, ಇದರಿಂದ ಅಂಥ ಪ್ರಸ್ತಾಪಗಳನ್ನು ಸಂಪುಟದ ಮುಂದೆ ತರುವ ಅಗತ್ಯ ಇರುವುದಿಲ್ಲ.
ಹಿನ್ನೆಲೆ:
ಟಿಸಿಐಎಲ್, ಐಎಸ್ಓ -9001:2008 ಮತ್ತು ಐಎಸ್ಓ: 2008 ಮತ್ತು 14001 :2004 ಪ್ರಮಾಣಪತ್ರ ಪಡೆದ ಪರಿಶಿಷ್ಟ – ಎ, ಮಿನಿ ರತ್ನ ಪ್ರವರ್ಗ-1ರ ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆ (ಪಿಎಸ್.ಯು) ಆಗಿದೆ. ಟಿಸಿಐಎಲ್, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಬಲವಾದ ನೆಲೆಯನ್ನು ಉಳ್ಳ ಒಂದು ಪ್ರಮುಖ ದೂರಸಂಪರ್ಕ ಸಲಹೆ ಮತ್ತು ಎಂಜಿನಿಯರಿಂಗ್ ಕಂಪನಿಯಾಗಿದ್ದು, 1978ರಲ್ಲಿ ಭಾರತ ಸರ್ಕಾರದಿಂದ ಈ ಕೆಳಕಂಡ ಉದ್ದೇಶಗಳೊಂದಿಗೆ ಸ್ಥಾಪನೆಗೊಂಡಿದೆ :-
i. ದೂರಸಂಪರ್ಕದ ಎಲ್ಲ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ತಾಂತ್ರಿಜ್ಞಾನ ಮತ್ತು ಭಾರತೀಯ ತಜ್ಞತೆಯನ್ನು ಒದಗಿಸಲು,
iii. ನಿರಂತರ ಆಧಾರದ ಮೇಲೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಲು.
ಟಿ.ಸಿ.ಐ.ಎಲ್. ಶೇ.100ರಷ್ಟು ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿದ್ದು, 70ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಇದು ದೂರಸಂಪರ್ಕ, ಐಟಿ ಮತ್ತು ನಾಗರಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಕಾರ್ಯಗತಗೊಳಿಸಲು ಪರಿಕಲ್ಪನೆಯಿಂದ ಹಿಡಿದು ಅದು ಪೂರ್ಣಗೊಳ್ಳುವ ತನಕ ಅನುಷ್ಠಾನ ಸೇವೆ ಒದಗಿಸುತ್ತದೆ ಮತ್ತು ಸಲಹೆ ನೀಡುತ್ತದೆ. ಈ ಕಂಪನಿಯ ಅಧಿಕೃತ ಬಂಡವಾಳವು 2017ರ ಮಾರ್ಚ್ 31ರಲ್ಲಿದ್ದಂತೆ 60 ಕೋಟಿ ರೂಪಾಯಿಗಳಾಗಿದ್ದು, ಇದರ ಪಾವತಿಸಿದ ಬಂಡವಾಳವ 59.20 ಕೋಟಿ ರೂಪಾಯಿ ಆಗಿದೆ.
ಟಿಸಿಐಎಲ್ ಅತ್ಯಂತ ಪ್ರತಿಷ್ಠಿತವಾದ ಪ್ಯಾನ್ –ಆಫ್ರಿಕನ್ ಇ-ನೆಟ್ ವರ್ಕ್ ಅನ್ನು 48 ರಾಷ್ಟ್ರಗಳಲ್ಲಿ ಜಾರಿ ಮಾಡಿದೆ, ಇದು ಪ್ರಾಥಮಿಕವಾಗಿ ಟೆಲಿ ಶಿಕ್ಷಣ, ಟೆಲಿ –ವೈದ್ಯಕೀಯ ಮತ್ತು ಡಬ್ಲ್ಯುಐಪಿ ಸಂಪರ್ಕವನ್ನು ಆಫ್ರಿಕಾ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಮತ್ತು ಉಪಗ್ರಹ ಸಂಪರ್ಕದ ಮೂಲಕ 2009ರಿಂದ ಒದಗಿಸುತ್ತಿದೆ. ಈ ಯೋಜನೆಯು ಕಾಲಮಿತಿಯ ಯೋಜನೆಯಾಗಿದೆ ಮತ್ತು 2021ರವರೆಗೆ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ. ಸಾಗರೋತ್ತರ ಯೋಜನೆಗಳ ಜೊತೆಗೆ ಟಿಸಿಐಎಲ್ ಭಾರತದ ವಿವಿಧ ಸ್ಥಳಗಳಲ್ಲಿ ಐಟಿ ಮತ್ತು ದೂರಸಂಪರ್ಕ ಸಂಬಂಧಿತ ಹಲವುಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಇವುಗಳಲ್ಲಿ ಪ್ರಮುಖ ಯೋಜನೆಗಳೆಂದರೆ, ರಕ್ಷಣಾ ಇಲಾಖೆ ಮತ್ತು ಭಾರತೀಯ ನೌಕಾ ಪಡೆಯ ಎನ್.ಎಫ್.ಎಸ್. ನೆಟ್ ವರ್ಕ್ ಗೆ ಟರ್ನ್ ಕೀ ಆಧಾರದಲ್ಲಿ, ಜಮ್ಮ ಮತ್ತು ಕಾಶ್ಮೀರದಲ್ಲಿ ಓಪಿಜಿಡಬ್ಲ್ಯು ಯೋಜನೆ, ಡಿಓಪಿ ಗ್ರಾಮೀಣ ಐಸಿಟಿ ಪರಿಹಾರ (ಆರ್.ಎಚ್.) ಯೋಜನೆ, ಒಡಿಶಾದ 500 ಶಾಲೆಗಳಲ್ಲಿ ಮತ್ತು ಯು.ಪಿ.ಯ 1500 ಶಾಲೆಗಳಲ್ಲಿ (ಐಸಿಟಿ) ಯೋಜನೆ, ಮತ್ತು ಭಾರತದ ವಿವಿಧ ರಾಜ್ಯಗಳಲ್ಲಿ ವೆಬ್ ಆಧಾರಿತ ಸೇವೆಗಳನ್ನು ಕಾರ್ಯಗತಗೊಳಿಸಲು ದಾಸ್ತಾನು, ಪೂರೈಕೆ, ಕಾಲುವೆ ತೋಡುವುದು, ಸ್ಥಾಪನೆ, ಪರೀಕ್ಷೆ ಮತ್ತು ನಿರ್ವಹಣೆ ಸೇರಿವೆ. ಬಿಬಿಎನ್.ಎಲ್.ಗೆ ಎನ್.ಓ.ಎಫ್.ಎನ್. ಯೋಜನೆ ಇತ್ಯಾದಿಗೆ ಯೋಜನಾ ನಿರ್ವಹಣೆ ಕಾರ್ಯಕ್ಕಾಗಿ ತಂತ್ರಾಂಶ ಮತ್ತು ಯಂತ್ರಾಂಶಗಳ ಪೂರೈಕೆ.
ಪ್ರಗತಿಯಲ್ಲಿರುವ ಸಾಗರೋತ್ತರ / ಒಳನಾಡಿನ ಯೋಜನೆಗಳನ್ನು ಕಾರ್ಯಗತಗೊಳಿಸುವುದರ ಜೊತೆಗೆ, ನಿರೀಕ್ಷಿತ ಯೋಜನೆಗಳ ನಿರ್ವಹಣೆಗಾಗಿಮತ್ತು ಕಾಲಕಾಲಕ್ಕೆ ನಿರ್ವಹಿಸುವ ಯೋಜನೆಗಳ ಅವಶ್ಯಕತೆಗಳಿಗನುಗುಣವಾಗಿ ಟಿಸಿಐಎಲ್ ಗೆ ದೂರ ಸಂಪರ್ಕ ಮತ್ತು ಐಟಿ ಹಿನ್ನೆಲೆಯಲ್ಲಿ ಅನುಭವಿ ಮತ್ತು ಪ್ರತಿಭಾನ್ವಿತ ಹಿರಿಯ ಅಧಿಕಾರಿಗಳು ಅಗತ್ಯವಿದೆ. ಟಿಸಿಐಎಲ್ ಗೆ ಮುಕ್ತ ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ, ಕಡಿಮೆ ಅವಧಿಯಲ್ಲಿ ನಿಯೋಜನೆಗೆ ಹೋಲಿಸಿದರೆ ತಜ್ಞ ಮಾನವ ಸಂಪನ್ಮೂಲ ದೊರಕುವುದು ಕಷ್ಟವಾಗಿದ್ದು, ಈ ನಿಟ್ಟಿನಲ್ಲಿ ನಿಯೋಜನೆಯ ಮೇರೆಗೆ ತೆಗೆದುಕೊಳ್ಳುವ ಮೂಲಕ ಟಿಸಿಐಎಲ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಲು ನೆರವಾಗಲಿದೆ. ಮಿಗಿಲಾಗಿ, ಟಿಸಿಐಎಲ್ ಮಾನವ ಶಕ್ತಿಯನ್ನು ಮುಕ್ತ ಮಾರುಕಟ್ಟೆಯಿಂದ ತೆಗೆದುಕೊಂಡರೆ, ಅದು ಟಿಸಿಐಎಲ್ ಗೆ ಶಾಶ್ವತ ಹೊಣೆಗಾರಿಕೆ ಆಗುತ್ತದೆ, ನಿಯೋಜನೆ ಮೇಲೆ ತೆಗೆದುಕೊಳ್ಳುವವರು ಟಿಸಿಐಎಲ್ ನಲ್ಲಿ ಆ ಯೋಜನೆಯ ಸೇವೆಯ ಅಗತ್ಯದ ಅವಧಿಯವರೆಗೆ ಮಾತ್ರ ಇರುತ್ತಾರೆ.
ಆ ಪ್ರಕಾರವಾಗಿ, ಸಂಪುಟವು ಟಿಸಿಐಎಲ್ ಗೆ ಅಂಥ ಹುದ್ದೆಗಳನ್ನು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಹಿನ್ನೆಲೆಯಿರುವ ದೂರಸಂಪರ್ಕ ಇಲಾಖೆ (ಡಿಓಟಿ) ಮತ್ತು ಇತರ ಸಚಿವಾಲಯಗಳ “ಎ” ಶ್ರೇಣಿಯ ಅಧಿಕಾರಿಗಳನ್ನು ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ಕ್ಕೆ ನಿಯೋಜನೆ ಮೇರೆಗೆ ಮಧ್ಯಂತರ ಅವಧಿಯಾದ ಅಂದರೆ 01.10.2016ರಿಂದ ಈ ಪ್ರಸ್ತಾವನೆಯ ಅನುಮೋದನೆಯವರೆಗೆ (ಇದಕ್ಕೂ ಮುನ್ನ ಸಂಪುಟದ ಅನುಮೋದನೆಯು 30.09.2016ರವರೆಗೆ ಮಾತ್ರ ಸಿಂಧುವಾಗಿತ್ತು) ಮತ್ತು ಅನುಮೋದನೆ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅರ್ಹವಾಗುವಂತೆ ಡಿಪಿಇ ಮಾರ್ಗಸೂಚಿಯ ಪ್ರಕಾರ ಟಿಸಿಐಎಲ್ ನ ಮಂಡಳಿ ಮಟ್ಟದ ಕೆಳಗಿನ ಹುದ್ದೆಗಳ ಒಟ್ಟು ಸಂಖ್ಯೆಯ ಗರಿಷ್ಠ ಶೇ.10ರಷ್ಟಕ್ಕೆ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡುತ್ತದೆ, ಜೊತೆಗೆ ಸಂಪುಟವು ದಿನಾಂಕ 28.12.2005ರ ದಿನಾಂಕದ ಡಿಪಿಇ ಓಎಂ ಸಂಖ್ಯೆ 18 (6)/2001-ಜಿಎಂ-ಜಿಎಲ್-77ರ ನಿಯಮಗಳ ರೀತ್ಯ ಭಾರತೀಯ ದೂರಸಂಪರ್ಕ ಸಲಹೆಗಾರರ ನಿಯಮಿತ (ಟಿಸಿಐಎಲ್)ನಲ್ಲಿ ಮಂಡಳಿ ಮಟ್ಟದ ಕೆಳಗಿನ ಹುದ್ದೆಗಳಿಗೆ ಭವಿಷ್ಯದಲ್ಲಿ ವಿನಾಯಿತಿ ನೀಡಲೂ ಸಮ್ಮತಿ ಸೂಚಿಸಿದೆ.