Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೀರ್ಘಾವಧಿ ನೀರಾವರಿ ನಿಧಿಗಾಗಿ 2017-18ನೇ ಸಾಲಿನಲ್ಲಿ ನೀಡಲಾಗುವ ಹೆಚ್ಚುವರಿ ಆಯವ್ಯಯ ಸಂಪನ್ಮೂಲ ಸಂಗ್ರಹವನ್ನು 9020 ಕೋಟಿ ರೂಪಾಯಿಗೆ ಹೆಚ್ಚಿಸಲು ಸಚಿವ ಸಂಪುಟ ಒಪ್ಪಿಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ 2017-18ನೇ ಸಾಲಿಗೆ ದೀರ್ಘಾವಧಿ ನೀರಾವರಿ ಯೋಜನೆಗಳಿಗೆ ಅವಶ್ಯವಾದ ಹೆಚ್ಚುವರಿ ಬಜೆಟ್ ಸಂಗ್ರಹವನ್ನು 9020 ಕೋಟಿ ರೂಪಾಯಿಗೆ ಹೆಚ್ಚಿಸಲು ತನ್ನ ಒಪ್ಪಿಗೆ ನೀಡಿದೆ. ಆದ್ಯತೆಯ ಮೇರೆಗೆ ಪ್ರಸ್ತುತ ಪ್ರಗತಿಯಲ್ಲಿರುವ 99 ನೀರಾವರಿ ಯೋಜನೆಗಳು ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿ ಈ ನೀರಾವರಿ ಯೋಜನೆಗಳ ಅಧೀನದ ಪ್ರದೇಶಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಆಯವ್ಯಯ ಸಂಗ್ರಹವನ್ನು ನಬಾರ್ಡ್, ತಾನು ಪಡೆಯುವ ಸಾಲಗಳ ಬದಲಿಗೆ ಶೇ.6ರ ಬಡ್ಡಿದರದ ಬಾಂಡು ಗಳನ್ನು ವಿತರಿಸಲಿದೆ.

ವೇಗವರ್ಧಿತ ನೀರಾವರಿ ಕಾರ್ಯಕ್ರಮದಡಿ (AIBP) ಕೈಗೊಳ್ಳಲಾದ ಹಲವಾರು ಬೃಹತ್ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳು ಸಮಪರ್ಕವಾದ ನಿಧಿಯ ಕೊರತೆಯಿಂದ ನಿಧಾನಗತಿಯಲ್ಲಿ ಸಾಗುತ್ತಿವೆ. ಡಿಸೆಂಬರ್ 2019ರೊಳಗೆ ವಿವಿಧ ಹಂತಗಳಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ 99 ಯೋಜನೆಗಳನ್ನು 2016-17ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆ-ವೇಗವರ್ಧಿತ ನೀರಾವರಿ ಕಾರ್ಯಕ್ರಮ ದಡಿ (PMKSY-AIBP) ಕೈಗೆತ್ತಿಕೊಳ್ಳಲಾಗಿತ್ತು. ಬೃಹತ್ ನಿಧಿಯ ಅವಶ್ಯಕತೆಗಾಗಿ ಮತ್ತು ಯೋಜನೆಗಳ ಪೂರ್ಣ ಪ್ರಮಾಣದ ಅನುಷ್ಟಾನಕ್ಕಾಗಿ ಕೇಂದ್ರ ವಿತ್ತ ಸಚಿವರು ತಮ್ಮ 2016-17ನೇ ಬಜೆಟ್ ಭಾಷಣದಲ್ಲಿ ನಬಾರ್ಡ್ ಮೂಲಕ ಪ್ರತ್ಯೇಕ ದೀರ್ಘಾವಧಿ ನೀರಾವರಿ ನಿಧಿ (LTIF) ಸ್ಥಾಪನೆಯನ್ನು ಘೋಷಿಸಿದ್ದರು. PMKSY-AIBPಯಡಿ, ರಾಜ್ಯ ಮತ್ತು ಕೇಂದ್ರದ ಹಲವಾರು ನೀರಾವರಿ ಯೋಜನೆಗಳ ಪೂರ್ಣ ಅನುಷ್ಟಾನಕ್ಕಾಗಿ ಆರಂಭಿಕ ನಿಧಿಯಾಗಿ 20,000 ಕೋಟಿ ರೂಪಾಯಿ ಮೊತ್ತವನ್ನು ಘೋಷಿಸಲಾಗಿತ್ತು.

ನಬಾರ್ಡ್ ಸಾಲದೆಡೆಗೆ ರಾಜ್ಯಗಳನ್ನು ಆಕರ್ಷಿಸಲು ತನ್ನ ಬಡ್ಡಿದರವನ್ನು ಶೇ.6 ಸಮೀಪದಲ್ಲೇ ಇರಿಸಲು ನಿರ್ಧರಿಸಲಾಗಿತ್ತಲ್ಲದೇ, 2016-17 ರಿಂದ 2019-20 ಸಾಲಿನ ಅವಧಿಯಲ್ಲಿ ನಬಾರ್ಡ್ ಗೆ ಬೇಕಾದ ಅಗತ್ಯ ವೆಚ್ಚದ ಹಣವನ್ನು ಉಚಿತವಾಗಿ ನೀಡಿಲು ಸರ್ಕಾರ ತೀರ್ಮಾನಿಸಿತ್ತು. ಅಂದರೆ, ಕೇಂದ್ರ ಸರ್ಕಾರವೇ ಈ ಮೊತ್ತದ ಬಡ್ಡಿದರವನ್ನು ಭರಿಸಲು ನಿರ್ಧರಿಸಿತ್ತು.

2016-17ರ ಅವಧಿಯಲ್ಲಿ ನಬಾರ್ಡ್ ಒಟ್ಟಾರೆ 9086.02 ಕೋಟಿ ರೂಪಾಯಿ ಮೊತ್ತವನ್ನು ವಿತರಿಸಿದ್ದು, ಪೋಲಾವರಂ ಯೋಜನೆಗಾಗಿ 2414.16 ಕೋಟಿ ರೂಪಾಯಿ ನೀಡಿದೆ. ಇನ್ನುಳಿದ 6671.86 ಕೋಟಿ ರೂಪಾಯಿ ಮೊತ್ತವನ್ನು ಹೆಚ್ಚುವರಿ ಬಜೆಟ್ ಸಂಪನ್ಮೂಲವಾಗಿ ಇತರೆ ಗುರುತಿಸಲಾದ ಯೋಜನೆಗಳಿಗೆ ನೀಡಿದೆ. 924.9 ಕೋಟಿ ರೂಪಾಯಿ ಮೊತ್ತವನ್ನು ಆಯವ್ಯಯದ ಅಧಿಕಾರದಡಿ ಕೇಂದ್ರಕ್ಕೆ ಸಹಾಯಕ ಮೊತ್ತವಾಗಿ ವಿತರಿಸಿದೆ. ಒಟ್ಟಾರೆ ಹೆಚ್ಚುವರಿ ಬಜೆಟ್ ಸಂಪನ್ಮೂಲವಾಗಿ ನಬಾರ್ಡ್, ಭಾರತ ಸರ್ಕಾರ ವಿತರಿಸುವ ಬಾಂಡ್ಗಳ ಮೂಲಕ 2187 ಕೋಟಿ ರೂಪಾಯಿ ಸಂಗ್ರಹಿಸಿದೆ.

2017-18ರ ಅವಧಿಯಲ್ಲಿ ಅಂದಾಜು 29,000 ಕೋಟಿ ರೂಪಾಯಿ ಹಣ ಪ್ರತ್ಯೇಕ ದೀರ್ಘಾವಧಿ ನೀರಾವರಿ ನಿಧಿ (LTIF) ಮೂಲಕ ಅವಶ್ಯಕವಾಗಿದ್ದು, ಇದರಲ್ಲಿ 9020 ಕೋಟಿ ಹೆಚ್ಚುವರಿ ಬಜೆಟ್ ಸಂಪನ್ಮೂಲವೂ ಸೇರಿದೆ.

ಈಗಾಗಲೇ 18 ಯೋಜನೆಗಳು ಪೂರ್ಣಗೊಂಡಿವೆ ಅಥವಾ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ರಾಜ್ಯ ಮತ್ತು ಕೇಂದ್ರಿಯ ಜಲ ಆಯೋಗಗಳು ಹಲವಾರು ಪರಾಮರ್ಶೆ ಸಭೆಗಳಲ್ಲಿ ತಿಳಿಸಿವೆ. 2016-17ರ ಅವಧಿಯಲ್ಲಿ ಒಟ್ಟಾರೆ 99 ಯೋಜನೆಗಳಿಂದ ಸರಿಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಗೊಳ್ಳಲಿದೆ. 2017-18ರ ಅವಧಿಯಲ್ಲಿ 33 ಯೋಜನೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಎಲ್ಲಾ ಯೋಜನೆಗಳು ವಿವಿಧ ಹಂತದ ನಿರ್ಮಾಣದ ಸಮಯದಲ್ಲಿ ತತ್ ಕ್ಷಣ ಕೂಲಿ ನೀಡುವ ಮತ್ತು ಇತರೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಈ ಯೋಜನೆಗಳು ಪೂರ್ಣಗೊಂಡ ನಂತರ ಒಟ್ಟಾರೆ 76 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಗೊಳ್ಳಲಿದ್ದು, ಅಧಿಕ ಕೃಷಿ ಇಳುವರಿ, ನವೀನ ಬೆಳೆ ಪದ್ಧತಿ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಇತರೆ ಚಟುವಟಿಕೆಗಳಿಂದಾಗಿ ಒಟ್ಟಾರೆ ದೇಶದ ಕೃಷಿಯ ಚಿತ್ರಣವನ್ನೇ ಬದಲಾಯಿಸಲಿದೆ.

******