Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಿವ್ಯ ಕುಮಾರ್ ಅವರು ಹಾಡಿರುವ “ಹರ್ ಘರ್ ಮಂದಿರ್, ಹರ್ ಘರ್ ಉತ್ಸವ್” ಭಕ್ತಿಪೂರ್ವ ಭಜನೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ


ಸಿದ್ಧಾರ್ಥ್ ಅಮಿತ್ ಭಾವ್‌ಸರ್ ಅವರು ಸಂಗೀತ ಸಂಯೋಜಿಸಿದ ದಿವ್ಯಾ ಕುಮಾರ್ ಅವರು ಹಾಡಿರುವ “ಹರ್ ಘರ್ ಮಂದಿರಯರ್ ಹರ್ ಘರ್ ಉತ್ಸವ್” ಭಕ್ತಿಪೂರ್ವ ಭಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಶತಮಾನಗಳ ಕಾಯುವಿಕೆಯ ನಂತರ ಅಯೋಧ್ಯಾ ಧಾಮದಲ್ಲಿ ಮಂಗಳಕರ ಕ್ಷಣ ಸಮೀಪಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. 

ಈ ಶುಭ ಸಂದರ್ಭದಲ್ಲಿ, ಭಗವಾನ್ ಶ್ರೀ ರಾಮನ ಸ್ತುತಿಯು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಎಲ್ಲೆಡೆ ಪ್ರತಿಧ್ವನಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಮೇಲೆ ತಿಳಿಸಿದ ಭಕ್ತಿಗೀತೆಯನ್ನು ಹಂಚಿಕೊಂಡ ಅವರು ಈ ಪ್ರಸ್ತುತಿಯ ಮೂಲಕ ನೀವು ನಂಬಿಕೆ ಮತ್ತು ಭಕ್ತಿಯ ವಾತಾವರಣವನ್ನು ಅನುಭವಿಸುವಿರಿ ಎಂದು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;

“सदियों के इंतजार के बाद अयोध्या धाम में सुमंगल की घड़ी नजदीक है। इस पुण्य अवसर को लेकर उत्तर से दक्षिण और पूरब से पश्चिम तक, हर ओर प्रभु श्री राम का जयकारा गूंज रहा है। आस्था और भक्ति के इसी वातावरण का अनुभव आपको इस प्रस्तुति से होगा। #ಶ್ರೀರಾಮಭಜನೆ ( ShriRamBhajan ) ” 

*********