Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಹೇಜ್ (ಗುಜರಾತ್) ಮಾರ್ಚ್ 7, 2017: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ( ಓ.ಎನ್.ಜಿ.ಸಿ ಪೆಟ್ರೋ ಅಡಿಶನ್ಸ್ ಲಿಮಿಟೆಡ್ (ಓಪಾಲ್) ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ದಹೇಜ್ (ಗುಜರಾತ್) ಮಾರ್ಚ್ 7, 2017: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ( ಓ.ಎನ್.ಜಿ.ಸಿ ಪೆಟ್ರೋ ಅಡಿಶನ್ಸ್ ಲಿಮಿಟೆಡ್ (ಓಪಾಲ್) ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ದಹೇಜ್ (ಗುಜರಾತ್) ಮಾರ್ಚ್ 7, 2017: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ( ಓ.ಎನ್.ಜಿ.ಸಿ ಪೆಟ್ರೋ ಅಡಿಶನ್ಸ್ ಲಿಮಿಟೆಡ್ (ಓಪಾಲ್) ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.


ಪ್ರಧಾನಿ ಅವರು ಒಪಾಲ್ ( ಒ.ಎನ್.ಜಿ.ಸಿ.ಪೆಟ್ರೋ ಅಡಿಶನ್ಸ್ ಲಿಮಿಟೆಡ್-ಒಪಾಲ್) ಗೆ ಭೇಟಿ ನೀಡಿ ಕೈಗಾರಿಕಾ ಸಮಾವೇಶದಲ್ಲಿ ಮಾತನಾಡಿದರು. ಅವರು ಒಪಾಲ್ ಕುರಿತಂತೆ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.ಘಟಕದ ಲೋಕಾರ್ಪಣೆ ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಹಾಯಕ ಸಚಿವರಾದ ಮಾನ್ಸುಖ್ ಎಲ್ ಮಾಂಡವೀಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ, ಗೈಲ್ (ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ) ಮತ್ತು ಜಿ.ಎಸ್.ಪಿ.ಸಿ( ಗುಜರಾತ್ ರಾಜ್ಯ ಪೆಟ್ರೋನೆಟ್ ನಿಯಮಿತ) ಸಂಸ್ಥೆಗಳ ಜಂಟಿ ಉದ್ಯಮವಾಗಿರುವ ಒಪಾಲ್ ಗುಜರಾತಿನಲ್ಲಿರುವ ದಹೇಜ್‍ನ ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಹೂಡಿಕೆ ವಲಯದ (ಪಿಸಿಪಿಐಆರ್)ಅಡಿಯಲ್ಲಿ ವಿಶೇಷ ಆರ್ಥಿಕ ವಲಯದಲ್ಲಿ ಸಮಗ್ರ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಅನ್ನು ಅನುಷ್ಟಾನಗೊಳಿಸುತ್ತಿದೆ. ಈ ಸಂಸ್ಥೆಯನ್ನು 2006 ರ ನವೆಂಬರ್ ತಿಂಗಳಲ್ಲಿ ಸ್ಥಾಪಿಸಲಾಗಿತ್ತು.

ಇದು ಭಾರತದ ಏಕೈಕ ದೊಡ್ಡ ಪೆಟ್ರೋ ಕೆಮಿಕಲ್ ಸಂಕೀರ್ಣವಾಗಿದೆ. ಪೂರ್ಣ ಸಾಮರ್ಥ್ಯದಲ್ಲಿ ವಾರ್ಷಿಕ 14 ಲಕ್ಷ್ಯ ಮೆಟ್ರಿಕ್ ಟನ್ ಪಾಲಿಮರ್‍ಗಳನ್ನು ಉತ್ಪಾದನೆ ಮಾಡಲಿದೆ. ಇವುಗಳಲ್ಲಿ ಕಡಿಮೆ ಸಾಂದ್ರತೆಯ ಮತ್ತು ಹೆಚ್ಚು ಸಾಂದ್ರತೆಯ ಪಾಲಿಈಥೆಲೀನ್, ಪಾಲಿಪೆÇ್ರಪೈಲೀನ್ ಮತ್ತು 5 ಲಕ್ಷ್ಯ ಮೆಟ್ರಿಕ್ ಟನ್‍ಗಳಷ್ಟು ಬೆನ್ಜೀನ್, ಬ್ಯೂಟಡೀನ್, ಪೈರೋಲಿಸಿಸ್ ಗ್ಯಾಸೋಲೀನ್ ಇತ್ಯಾದಿಗಳು ಉತ್ಪಾದನೆಯಾಗಲಿವೆ. 1,28,250 ಚದರ ಮೀಟರ್ ವಿಸ್ತಾರ ಇರುವ ಇದರ ಉತ್ಪನ್ನಗಳ ಉಗ್ರಾಣ ದೇಶದಲ್ಲೇ ಅತೀ ದೊಡ್ದದು.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಸಂಸ್ಕರಣಾ ಘಟಕದಿಂದ ಈಥೇನ್, ಪೆÇ್ರೀಪೇನ್ ಮತ್ತು ಬ್ಯುಟೇನ್‍ಗಳನ್ನು ಹಾಗು ಹಾಜಿರಾ ಮತ್ತು ಉರಾನ್‍ಗಳಿಂದ ನ್ಯಾ¥sóÁ್ತ ಪಡೆದುಕೊಂಡು ಒಪಾಲ್ ಪಾಲಿಈಥಿಲೀನ್ ಮತ್ತು ಪಾಲಿಪೆÇ್ರಪೈಲೀನ್‍ಗಳನ್ನು ಉತ್ಪಾದಿಸಲಿದೆ.

30,000 ಕೋಟಿ ರೂ. ಹೂಡಿಕೆಯಲ್ಲಿ ಸ್ಥಾಪನೆಯಾದ ಈ ಘಟಕ ದೇಶದ ಪೆಟ್ರೋಕೆಮಿಕಲ್ ಮತ್ತು ಕೆಮಿಕಲ್ ಕೈಗಾರಿಕೆಗಳ ಕೇಂದ್ರ ಸ್ಥಾನದಲ್ಲಿದ್ದು ಅತ್ಯುತ್ತಮ ಸಂಪರ್ಕ ಜಾಲ ಮತ್ತು ಸಮಗ್ರ ಸೂಕ್ತ ಪರಿಸರವನ್ನು ಹೊಂದಿದೆ. ಇದು 3,500 ಮಂದಿಗೆ ನೇರ ಉದ್ಯೋಗ ಒದಗಿಸಲಿದೆ ಮತ್ತು ಸುಮಾರು 10,500 ಮಂದಿಗೆ ಪರೋಕ್ಷ ಉದ್ಯೋಗಾವಕಾಶ ಒದಗಿಸಲಿದೆ.

ಈ ಯೋಜನೆಯಿಂದ ದೇಶದಲ್ಲಿ ಪ್ಲಾಸ್ಟಿಕ್ ಸಂಸ್ಕರಣಾ ಕೈಗಾರಿಕೆಗಳು ಬೆಳೆಯಲು ಅವಕಾಶವಿದ್ದು ಮತ್ತೆ 40,000 ಕೋಟಿ ರೂ. ಹೂಡಿಕೆಗೆ ಅವಕಾಶವಾಗಲಿದೆ.ಇದರಿಂದ 20,000 ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ, ಆ ಮೂಲಕ ಸರಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಹೆಚ್ಚಿನ ಬಲ ದೊರೆಯಲಿದೆ. ಪಾಲಿಮರ್‍ಗಳ ಬಳಕೆ ಹೆಚ್ಚುವುದರಿಂದ ಸಾಂಪ್ರದಾಯಿಕ ವಸ್ತುಗಳಾದ ಮರ, ಕಾಗದ, ಲೋಹಗಳ ಬಳಕೆ ತಗ್ಗಲಿದ್ದು ನೈಸರ್ಗಿಕ ಸಂಪನ್ಮೂಲಗಳಾದ ನೀರು, ಇಂಧನಗಳ ಸಂರಕ್ಷಣೆಗೂ ಸಹಾಯವಾಗಲಿದೆ, ಆಹಾರ ಸುರಕ್ಷೆ ಮತ್ತು ಆಹಾರ ಸಂರಕ್ಷಣೆಗೂ ಪ್ರಯೋಜನವಾಗಲಿದೆ.

2018ರ ವೇಳೆಗೆ ಪಾಲಿಮರ್ ವಲಯದಲ್ಲಿ ಒಪಾಲ್‍ನ ಮಾರುಕಟ್ಟೆ ಪಾಲು ಶೇಖಡಾ 13 ರಷ್ಟಾಗಲಿದೆ. ದೇಶದಲ್ಲಿ ಪಾಲಿಮರ್ ಬಳಕೆಯನ್ನು ಉತ್ತೇಜಿಸಲು ಕಂಪೆನಿಯು ತನ್ನ ಕೊಡುಗೆ ನೀಡಲಿದೆ ಮತ್ತು ಇದರ ಉತ್ಪನ್ನಗಳು ಮೂಲಸೌಕರ್ಯಗಳು, ವಸತಿ, ಪ್ಯಾಕೇಜಿಂಗ್, ನೀರಾವರಿ, ವಾಹನೋದ್ಯಮ, ಆರೋಗ್ಯ ರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆಯಾಗಲಿವೆ. ಒಪಾಲ್‍ನ ಪಾಲಿಮರ್ ಉತ್ಪಾದನೆ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯಲು ಸಹಾಯವಾಗಲಿದೆ. ಭಾರತದಲ್ಲಿ ಪಾಲಿಮರ್ ಬಳಕೆ ಸರಾಸರಿ ತಲಾ 10 ಕಿ.ಗ್ರಾಂ ಆಗಿದ್ದರೆ ವಿಶ್ವದ ಸರಾಸರಿ 32 ಕಿ.ಗ್ರಾಂ ಇದೆ. ಈ ವಲಯದಲ್ಲಿ ಬೆಳವಣಿಗೆಗೆ ಅದ್ಭುತ ಅವಕಾಶಗಳಿವೆ. ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಹೆಚ್ಚಳ ಮತ್ತು ಖರ್ಚು ಮಾಡಲು ಲಭ್ಯ ಇರುವ ಆದಾಯ ಹಾಗು ನಗರೀಕರಣಗಳು ಈ ಕ್ಷೇತ್ರದಲ್ಲಿ ಬೆಳವಣಿಗೆಗೆ ಚಾಲಕ ಶಕ್ತಿಯಾಗಲಿವೆ.

ಕಳೆದ ದಶಕದಲ್ಲಿ ದೇಶದ ಪೆಟ್ರೋಕೆಮಿಕಲ್ ವಲಯ ವಾರ್ಷಿಕ 10 ರಿಂದ 12 ಶೇಖಡಾ ಬೆಳವಣಿಗೆ ದರ ದಾಖಲಿಸಿದೆ. ಮುಂದಿನ ದಶಕದಲ್ಲಿ ಇದು 12 ರಿಂದ 15 ಶೇಖಡಾ ಆಗುವ ನಿರೀಕ್ಷೆ ಇದೆ.