ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 4 ದಿನಗಳ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಫಲಪ್ರದ ಪ್ರವಾಸದ ನಂತರ ಇಂದು ಬೆಂಗಳೂರಿಗೆ ಬಂದಿಳಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ, ನಂತರ ಗ್ರೀಸ್‌ಗೆ ಭೇಟಿ ನೀಡಿದರು. ಪ್ರಧಾನ ಮಂತ್ರಿ ಅವರು ವಿವಿಧ ದ್ವಿಪಕ್ಷೀಯ ಸಭೆಗಳನ್ನು ಮತ್ತು ಸ್ಥಳೀಯ ಚಿಂತಕರ ಗುಂಪಿನೊಂದಿಗೆ ಸಭೆಗಳನ್ನು ನಡೆಸಿದರು. ಮೋದಿ ಅವರು ಎರಡೂ ದೇಶಗಳಲ್ಲಿ ಇರುವ ರೋಮಾಂಚಕ ಭಾರತೀಯ ಸಮುದಾಯವನ್ನು ಭೇಟಿ ಮಾಡಿದರು. ಮೂಲಕ ಚಂದ್ರಯಾನ-3 ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಅನ್ನು ವೀಡಿಯೊ ಕಾನ್ಫರೆನ್ಸ್ ವೀಕ್ಷಿಸಿದ್ದ ಪ್ರಧಾನಿ ಅವರು, ಇಂದು ಇಸ್ರೋ ತಂಡದೊಂದಿಗೆ ಸಂವಾದ ನಡೆಸಲು ಬೆಂಗಳೂರಿಗೆ ಬಂದಿಳಿದರು.
ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಪ್ರಧಾನಿ ಮೋದಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನ, ಜೈ ಅನುಸಂಧಾನ ಎಂದು ಅವರು ನೆರೆದಿದ್ದ ನಾಗರಿಕರನ್ನು ಉದ್ದೇಶಿಸಿ ಭಾಷಣ ಆರಂಭಿಸಿದರು. ಭಾರತದ ಮಹತ್ವದ ಯಶಸ್ಸಿನ ಬಗ್ಗೆ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ನಲ್ಲೂ ಅದೇ ಉತ್ಸಾಹವನ್ನು ನಾನು ಕಂಡೆ ಎಂದು ಶ್ರೀ ಮೋದಿ ಹೇಳಿದರು.
ಇಸ್ರೋ ತಂಡದೊಂದಿಗೆ ಇರಲು ತೀರಾ ಉತ್ಸುಕನಾಗಿದ್ದೆ. ಹಾಗಾಗಿ, ವಿದೇಶ ಪ್ರವಾಸದ ನಂತರ ನೇರವಾಗಿ ಮೊದಲು ಬೆಂಗಳೂರಿಗೆ ಬರಲು ನಿರ್ಧರಿಸಿದೆ ಎಂದರು. ಶಿಷ್ಟಾಚಾರಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೆಗೆದುಕೊಳ್ಳದಂತೆ ನಾನು ಮಾಡಿದ ಮನವಿಗೆ ಸಹಕರಿಸಿದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಪ್ರಧಾನಮಂತ್ರಿ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಹೃತ್ಪೂರ್ವಕ ಸ್ವಾಗತ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನ ಮಂತ್ರಿ, ನೆರೆದಿದ್ದ ನಾಗರಿಕರಲ್ಲಿ ಇದ್ದ ಉತ್ಸಾಹವನ್ನು ಗಮನಿಸುತ್ತಾ, ರೋಡ್‌ಶೋ ಮೂಲಕ ಚಂದ್ರಯಾನ ತಂಡವನ್ನು ಭೇಟಿ ಮಾಡಲು ಇಸ್ರೋಗೆ ತೆರಳಿದರು.
*****
I am very grateful to the people of Bengaluru for the very warm welcome this morning. pic.twitter.com/oV0NcUy9lR
— Narendra Modi (@narendramodi) August 26, 2023