ದಕ್ಷಿಣ ಆಫ್ರಿಕಾ ಗಣರಾಜ್ಯದ ಘನತೆವೆತ್ತ ಅಧ್ಯಕ್ಷರಾದ ಶ್ರೀ. ಜಾಕೋಬ್ ಜುಮಾ ಅವರೇ,
ಸ್ನೇಹಿತರೇ,
ಘನತೆವೆತ್ತರೇ, ನಿಮ್ಮ ಆತ್ಮೀಯ ಸ್ವಾಗತದ ಮಾತುಗಳಿಗೆ ಮತ್ತು ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು. ಇದು ಈ ಶ್ರೇಷ್ಠ ದೇಶಕ್ಕೆ ನನ್ನ ಮೊದಲ ಭೇಟಿ ಆಗಿದ್ದರೂ, ನಾನು ಮತ್ತು ನನ್ನ ನಿಯೋಗ ಈ ಕಾಮನಬಿಲ್ಲಿನ ದೇಶದಲ್ಲಿ ನಮ್ಮ ಮನೆಯಲ್ಲಿಯೇ ಇರುವ ಅನುಭವ ಹೊಂದಿದ್ದೇವೆ. ಇದಕ್ಕಾಗಿ ಘನತೆವೆತ್ತರೇ, ನಾವು ನಿಮಗೆ ಆಭಾರಿಗಳಾಗಿದ್ದೇವೆ. ವೈಯಕ್ತಿಕವಾಗಿ ನನಗೆ ಈ ಭೇಟಿ ಈ ಭೂಮಿಯ ಮೇಲೆ ನಡೆದಾಡಿದ ಇಬ್ಬರು ಶ್ರೇಷ್ಠ ಮಾನವರಾದ ಮಹಾತ್ಮಾ ಗಾಂಧಿ ಮತ್ತು ನೆಲ್ಸನ್ ಮಂಡೇಲ ಅವರಿಗೆ ಗೌರವ ಸೂಚಿಸುವ ಅವಕಾಶ ಒದಗಿಸಿಕೊಟ್ಟಿದೆ.
ಸ್ನೇಹಿತರೇ,
ಭಾರತ ಮತ್ತು ದಕ್ಷಿಣ ಆಫ್ರಿಕಾ ಶತಮಾನಗಳಿಂದ ಜನರಿಂದ ಜನರ ನಡುವಿನ ಸಂಪರ್ಕವನ್ನು ಪೋಷಿಸಿಕೊಂಡು ಬಂದಿವೆ. ನಾವು ಜನಾಂಗೀಯ ಮತ್ತು ವಸಾಹತುಶಾಹಿಯ ವಿರುದ್ಧದ ಸಾಮಾನ ಹೋರಾಟದಲ್ಲಿ ಇಬ್ಬರೂ ಒಟ್ಟಿಗೆ ನಿಂತಿದ್ದೇವೆ. ದಕ್ಷಿಣ ಆಫ್ರಿಕಾದಲ್ಲೇ ಮಹಾತ್ಮಾ ಗಾಂಧಿ ಅವರು ತಮ್ಮ ನಿಜವಾದ ಹೋರಾಟ ಕಂಡುಕೊಂಡರು. ಅವರು ಭಾರತಕ್ಕೆ ಎಷ್ಟು ಸೇರಿದ್ದಾರೋ, ದಕ್ಷಿಣ ಆಫ್ರಿಕಾಕ್ಕೂ ಅಷ್ಟೇ ಸೇರಿದವರಾಗಿದ್ದಾರೆ.
ಸ್ನೇಹಿತರೆ,
ನಮ್ಮ ವಿನಿಮಯಿತ ಮೌಲ್ಯಗಳು, ವೇದನೆ ಮತ್ತು ಹೋರಾಟ ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಗೆ ನಮಗೆ ಬಲವಾದ ಬುನಾದಿಯನ್ನು ಹಾಕಿಕೊಟ್ಟಿದೆ. ಮತ್ತು ಅದರ ಯಶಸ್ಸು ವಲಯದ ಶ್ರೇಣಿಯಾದ್ಯಂತ ಗೋಚರಿಸುತ್ತಿದೆ. ನಮ್ಮ ಇಂದಿನ ಚರ್ಚೆಯ ವೇಳೆ, ಅಧ್ಯಕ್ಷ ಜುಮಾ ಮತ್ತು ನಾನು ನಮ್ಮ ಮಾತುಕತೆಯ ಪೂರ್ಣ ಆಯಾಮಗಳ ಕುರಿತು ಪರಾಮರ್ಶಿಸಿದೆವು. ಕಳೆದ ಎರಡು ದಶಕದಲ್ಲಿ ನಮ್ಮ ಬಾಂಧವ್ಯ ಬಲವಾಗಿ ಮುಂದುವರಿದುಕೊಂಡು ಬಂದಿವೆ ಎಂಬುದನ್ನು ನಾವು ಒಪ್ಪಿದೆವು. ಎರಡೂ ಕಡೆಯ ವಾಣಿಜ್ಯ ಕಳೆದ 10 ವರ್ಷಗಳಲ್ಲಿ ಶೇ.300ರಷ್ಟು ವೃದ್ಧಿಸಿದೆ. ಭಾರತೀಯ ಕಂಪನಿಗಳು ದಕ್ಷಿಣ ಆಫ್ರಿಕಾದಲ್ಲಿ ಬಲವಾದ ವಾಣಿಜ್ಯ ಆಸಕ್ತಿ ತಳೆದಿವೆ. ಆಫ್ರಿಕಾದಲ್ಲಿನ ನಮ್ಮ ಹೂಡಿಕೆಯ ನಾಲ್ಕನೇ ಒಂದು ಭಾಗ ಈ ದೇಶದಲ್ಲಿದೆ.
ಮತ್ತು ನಮ್ಮ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಸಾಮರ್ಥ್ಯ ಇದೆ, ಅದರಲ್ಲೂ ಈ ಕೆಳಗಿನ ಕ್ಷೇತ್ರಗಳಲ್ಲಿ ಅದು ಅಧಿಕವಾಗಿದೆ:
ಖನಿಜ ಮತ್ತು ಗಣಿ;
ರಾಸಾಯನಿಕಗಳು ಮತ್ತು ಔಷಧ;
ಅತ್ಯುನ್ನತ-ತಂತ್ರಜ್ಞಾನ ಉತ್ಪಾದನೆ; ಮತ್ತು
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ.
ಕೈಗಾರಿಕೆಯಿಂದ ಕೈಗಾರಿಕೆಗಳ ನಡುವಿನ ಬಾಂಧವ್ಯ ಕೇವಲ ಶ್ರೀಮಂತ ಆರ್ಥಿಕ ಲಾಭವನ್ನಷ್ಟೇ ನಮ್ಮ ಸಮಾಜಕ್ಕೆ ತರುವಿದಿಲ್ಲ, ಜೊತೆಗೆ ಅವು ನಮ್ಮ ಪಾಲುದಾರಿಕೆಗೆ ಹೊಸ ಸ್ವರೂಪ ನೀಡುತ್ತವೆ ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಮನವರಿಕೆ ಆಗಿದೆ. ಮತ್ತು ಈ ಪ್ರಕ್ರಿಯೆಯಲ್ಲಿ,ಎರಡೂ ರಾಷ್ಟ್ರಗಳಿಗೆ ಪ್ರಾದೇಶಿಕ ಮತ್ತು ಜಾಗತಿಕವಾಗಿ ಮಹತ್ವದ ಪಾತ್ರ ನಿರ್ವಹಿಸಲೂ ಸಹಕಾರಿಯಾಗಿದೆ. ಇಂದು ನಾನು ಮತ್ತು ಅಧ್ಯಕ್ಷರು ಎರಡೂ ದೇಶಗಳ ವಾಣಿಜ್ಯ ನಾಯಕತ್ವದೊಂದಿಗೆ ಕುಳಿತು ಮಾತುಕತೆ ನಡೆಸಿ ನಮ್ಮ ಒಡಂಬಡಿಕೆಗಳನ್ನು ಗುರುತಿಸಲಿದ್ದೇವೆ.
ಸ್ನೇಹಿತರೇ,
ನಮ್ಮ ಅಭಿವೃದ್ಧಿಶೀಲ ಆರ್ಥಿಕತೆಗಳು ನಮ್ಮ ಮಾತುಕತೆ ನಮ್ಮ ಮಾನವ ಬಂಡವಾಳದ ಸುಧಾರಣೆಯ ಬಗ್ಗೆ ಗಮನ ಹರಿಸಬೇಕು ಎಂದೂ ಒತ್ತಾಯಿಸುತ್ತದೆ. ವೃತ್ತಿಪರ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ನಮ್ಮ ಸಾಮರ್ಥ್ಯ ಮತ್ತು ಅಗತ್ಯಗಳಿಗೆ ಪರಸ್ಪರ ಪೂರಕವಾಗಿವೆ ಮತ್ತು ಅವು ಎರಡೂ ದೇಶಗಳ ಜನರಿಗೆ ಲಾಭತರಲಿವೆ. ದಕ್ಷಿಣ ಆಫ್ರಿಕಾದಲ್ಲಿ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಅಬಿವೃದ್ಧಿಗೆ ಭಾರತವು ತನ್ನ ತಜ್ಞತೆ ಮತ್ತು ಸಾಮರ್ಥ್ಯವನ್ನು ಹಂಚಿಕೊಳ್ಳಲು ಸಿದ್ಧವಿದೆ. ಆರ್ಥಿಕ ಬಾಂಧವ್ಯದ ಮತ್ತು ವಾಣಿಜ್ಯ, ವ್ಯಾಪಾರ ಮತ್ತು ಹೂಡಿಕೆಯ ನಂಟಿನ ಹೊರತಾಗಿ, ಕೈಗಾರಿಕಾ ಮಟ್ಟದಲ್ಲಿ ಮತ್ತು ನಮ್ಮ ಕಾರ್ಯತಂತ್ರಾತ್ಮಕ ಹಾಗೂ ಭದ್ರತೆಯ ಅಗತ್ಯದ ಮಟ್ಟದಲ್ಲಿ ನಾವು ರಕ್ಷಣೆ ಮತ್ತು ಭದ್ರತೆಯ ರಂಗದಲ್ಲೂ ಪಾಲುದಾರರಾಗಬಹುದು. ಭಾರತದಲ್ಲಿ, ಈ ಕ್ಷೇತ್ರ ಸಂಪೂರ್ಣ ಪರಿವರ್ತನೆಯನ್ನು ಕಾಣುತ್ತಿದೆ. ಇದು ರಕ್ಷಣಾ ವ್ಯಾಪಾರದಲ್ಲಿ ಆಕರ್ಷಕ ಅವಕಾಶಗಳನ್ನು ಒದಗಿಸುತ್ತಿದೆ. ನಮ್ಮ ಕಂಪನಿಗಳು ಜಂಟಿ ಅಭಿವೃದ್ಧಿ ಅಥವಾ ರಕ್ಷಣಾ ಉಪಕರಣಗಳ ಉತ್ಪಾದನೆಗೆ ಮತ್ತು ಅಂಥ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಹರಿಸಲಿವೆ. ಮತ್ತು ಇದು ಕೇವಲ ನಮ್ಮ ರಕ್ಷಣಾ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಷ್ಟೇ ಅಲ್ಲ, ಜೊತೆಗೆ ಪ್ರಾದೇಶಿಕ ಮತ್ತು ಜಾಗತಿಕ ಬೇಡಿಕೆಯನ್ನೂ ಪೂರೈಸಲು ಸಿದ್ದವಿವೆ.
ಸ್ನೇಹಿತರೆ,
ಅಧ್ಯಕ್ಷ ಜುಮಾ ಮತ್ತು ನಾನು, ಅಂತಾರಾಷ್ಟ್ರೀಯ ವಿಚಾರಗಳ ಮತ್ತು ಉದಯಿಸುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಹೆಚ್ಚು ನಿಕಟವಾಗಿ ಕೆಲಸ ಮಾಡುವ ಅಗತ್ಯವನ್ನು ಒಪ್ಪಿಕೊಂಡಿದ್ದೇವೆ. ಪರಮಾಣು ಪೂರೈಕೆ ಗುಂಪಿನ ಸದಸ್ಯತ್ವಕ್ಕಾಗಿ ಭಾರತಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನು ದಕ್ಷಿಣ ಆಫ್ರಿಕಾಕ್ಕೆ ಧನ್ಯವಾದ ಅರ್ಪಿಸುತ್ತೇನೆ. ದಕ್ಷಿಣ ಆಫ್ರಿಕಾದಂಥ ನಮ್ಮ ಸ್ನೇಹಿತರ ಸಕ್ರಿಯ ಬೆಂಬಲವನ್ನು ನಾವು ಎಣಿಸಬಹುದು ಎಂಬುದು ನನಗೆ ತಿಳಿದಿದೆ. ಹವಾಮಾನ ಬದಲಾವಣೆ, ಮತ್ತು ಅದರ ಜಾಗತಿಕ ಪರಿಣಾಮ, ನಮ್ಮ ವಿನಿಮಯಿತ ಕಾಳಜಿಯಾಗಿದೆ. ಈ ಸವಾಲುಗಳನ್ನು ಎದುರಿಸಲು ಮರು ನವೀಕರಿಸಬಹುದಾದ ಇಂಧನದ ದೊಡ್ಡ ಪ್ರಮಾಣದ ಪ್ರಯತ್ನ ಮತ್ತು ಗಮನದ ಅಗತ್ಯವಿದೆ ಎಂಬುದನ್ನೂ ನಾವು ಒಪ್ಪಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಭಾರತವು ಅಂತಾರಾಷ್ಟ್ರೀಯ ಸೌರ ಸಹಯೋಗವನ್ನು ಸ್ಥಾಪಿಸಲು ಪ್ಯಾರಿಸ್ ನಲ್ಲಿ ನಡೆದ 21ನೇ ಕಾಪ್ ನಲ್ಲಿ ಪ್ರಯತ್ನ ನಡೆಸಿದ್ದು.ಸೌರ ಇಂಧನ ಉತ್ತೇಜನಕ್ಕೆ ಜ್ಞಾನ, ತಂತ್ರಜ್ಞಾನ ಮತ್ತು ಹಣಕಾಸು ಪಡೆಯಲು ಇದು ಬಹಳ ಪರಿಣಾಮಕಾರಿಯಾದ ವೇದಿಕೆ ಎಂದು ನಾನು ಭಾವಿಸುತ್ತೇನೆ. ನಾನು ದಕ್ಷಿಣ ಆಫ್ರಿಕಾದ ಸಹಯೋಗಕ್ಕಾಗಿ ಅಧ್ಯಕ್ಷ ಜುಮಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ, ಇದಕ್ಕೆ ಈಗಾಗಲೇ 120 ರಾಷ್ಟ್ರಗಳು ಬೆಂಬಲ ನೀಡಿವೆ. ಭಯೋತ್ಪಾದನೆ ಮತ್ತೊಂದು ಭೀತಿಯಾಗಿದ್ದು, ಇದು ನಮ್ಮ ಜನರ ಸುರಕ್ಷತೆ ಮತ್ತು ಭದ್ರತೆಗೆ ಅಪಾಯ ಒಡ್ಡಿದೆ. ಇದು ನಮ್ಮ
ಸಮಾಜದ ಬುನಾದಿಯ ಮೇಲೇ ದಾಳಿ ಮಾಡುತ್ತಿದೆ. ನಾನು ಮತ್ತು ಅಧ್ಯಕ್ಷರು ಎರಡೂ ರಾಷ್ಟ್ರಗಳು ಸದಾ ಜಾಗೃತರಾಗಿರಲು ಮತ್ತು ನಮ್ಮ ವಲಯದಲ್ಲಿ ಮತ್ತು ಜಗತ್ತಿನಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಹಕರಿಸಲು ಸಮ್ಮತಿಸಿದ್ದೇವೆ.
ಸ್ನೇಹಿತರೇ,
ಹಿಂದೂ ಮಹಾಸಾಗರದ ಜಲ ನಮ್ಮ ಸಮಾನ ಕಡಲ ಗಡಿಯಾಗಿವೆ. ಮತ್ತು ಹಿಂದೂ ಮಹಾಸಾಗರದ ರಿಮ್ ಸಂಘಟನೆ, ಹಿಂದೂ ಮಹಾಸಾಗರದೊಂದಿಗೆ ಸಂಪರ್ಕ ಹೊಂದಿರುವ ನಮ್ಮ ನೆರೆಯವರೊಂದಿಗೆ ಕರಾವಳಿ ಕುರಿತಂತೆ ಮಾತುಕತೆಗೆ ಪ್ರಮುಖ ವೇದಿಕೆಯಾಗಿದೆ.2017-19ರ ಅವಧಿಗೆ ನಾನು ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯನ್ನು ಸ್ವಾಗತಿಸುತ್ತೇನೆ. ಐ.ಬಿ.ಎಸ್.ಎ. (ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ) ಮತ್ತು ಬ್ರಿಕ್ಸ್ ಮೂಲಕ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಆದ್ಯತೆಯನ್ನು ರೂಪಿಸಲು ಭಾರತ ಮತ್ತು ದಕ್ಷಿಣ ಆಫ್ರಿಕಾ ಒಗ್ಗೂಡಿ ಶ್ರಮಿಸುತ್ತಿವೆ. ನಾನು ಈ ವರ್ಷದ ಅಕ್ಟೋಬರ್ ನಲ್ಲಿ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗದಲ್ಲಿ ಅಧ್ಯಕ್ಷ ಜುಮಾ ಅವರನ್ನು ಆಹ್ವಾನಿಸಲು ನಾನು ಕಾತರಿಸುತ್ತಿದ್ದೇನೆ.
ಸ್ನೇಹಿತರೇ,
ನಾನು ಕೊನೆಯಲ್ಲಿ ಇದನ್ನು ಹೇಳಲು ಇಚ್ಛಿಸುತ್ತೇನೆ:
• ಗಾಂಧಿ ಅವರ ಸತ್ಯಾಗ್ರಹದಿಂದ ಮಡಿಬಾ ಅವರ ಕ್ಷಮಾಶೀಲತೆವರೆಗೆ;
• ಗುಜರಾತ್ ನ ಬಂದರುಗಳಿಂದ ಡರ್ಬನ್ ನ ತೀರದವರೆಗೆ;
• ನಮ್ಮ ಸಂಯುಕ್ತ ಮೌಲ್ಯಗಳು ಮತ್ತು ಸಮಾನ ಹೋರಾಟ;
• ನಮ್ಮ ಸಾಗರಗಳ ವಿಶಾಲ ಅವಕಾಶಗಳು ಮತ್ತು ಆರ್ಥಿಕತೆ; ಮತ್ತು
• ವಸುದೈವ ಕುಟುಂಬಕಂ ಮತ್ತು ಉಬುಂಟು ಸ್ಫೂತಿಯ ಮೂಲಕ ನಮ್ಮ ಬಾಂಧವ್ಯ ನಿರ್ಧಾರ, ಸಂಕಲ್ಪ, ನ್ಯಾಯದ ಒಂದು ಕಥೆ ಮತ್ತು ಮಾನವ ಪ್ರಯತ್ನದ ಶ್ರೇಷ್ಠತೆಯಾಗಿದೆ.ಇದು ನಿಜಕ್ಕೂ ಅಸಾಧಾರಣ ಮತ್ತು ಇತರ ಎಲ್ಲದಕ್ಕಿಂತ ಭಿನ್ನವಾಗಿದೆ.
ಧನ್ಯವಾದಗಳು,
ಮತ್ತೊಮ್ಮೆ ಧನ್ಯವಾದಗಳು.
This visit is an opportunity to pay homage to two greatest human souls- Mahatma Gandhi & Nelson Mandela: PM @narendramodi @NelsonMandela
— PMO India (@PMOIndia) July 8, 2016
Stood together in our common fight against colonialism and racial subjugation: PM @narendramodi on India-SA ties @PresidencyZA @SAPresident
— PMO India (@PMOIndia) July 8, 2016
In last the two decades our ties are a story of strong advances and concrete achievements: PM @narendramodi at the joint press meet
— PMO India (@PMOIndia) July 8, 2016
The Prime Minister is talking about increasing economic and trade ties between India and South Africa. Watch. https://t.co/J4IwYA96cJ
— PMO India (@PMOIndia) July 8, 2016
Thank President Zuma for South Africa's support to India's membership in the Nuclear Suppliers Group: PM @narendramodi @PresidencyZA
— PMO India (@PMOIndia) July 8, 2016