ಗೌರವಾನ್ವಿತ ಪ್ರಧಾನಮಂತ್ರಿ ಶಿನವಾತ್ರಾ,
ಎರಡೂ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಹಲೋ!
ನನಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಪ್ರಧಾನಿ ಶಿನವಾತ್ರಾ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ಮಾರ್ಚ್ 28ರಂದು ಸಂಭವಿಸಿದ ಭೂಕಂಪದಲ್ಲಿ ಜೀವಹಾನಿಗೆ ನಾನು ಭಾರತದ ಜನರ ಪರವಾಗಿ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ.
ಸ್ನೇಹಿತರೇ,
ಭಾರತ ಮತ್ತು ಥಾಯ್ಲೆಂಡ್ ನಡುವಿನ ಹಳೆಯ ಸಂಬಂಧಗಳು ನಮ್ಮ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳಲ್ಲಿ ಬೇರೂರಿವೆ. ಬೌದ್ಧ ಧರ್ಮದ ಹರಡುವಿಕೆಯು ನಮ್ಮ ಜನರನ್ನು ಒಟ್ಟುಗೂಡಿಸಿದೆ.
ಅಯುತ್ತಾಯದಿಂದ ನಳಂದದವರೆಗೆ ವಿದ್ವಾಂಸರ ವಿನಿಮಯಗಳು ನಡೆದಿವೆ. ರಾಮಾಯಣದ ಕಥೆಯು ಥಾಯ್ ಜಾನಪದ ಕಥೆಯಲ್ಲಿಆಳವಾಗಿ ಬೇರೂರಿದೆ. ಮತ್ತು, ಸಂಸ್ಕೃತ ಮತ್ತು ಪಾಲಿಯ ಪ್ರಭಾವವು ಇಂದಿಗೂ ನಮ್ಮ ಭಾಷೆಗಳು ಮತ್ತು ಸಂಪ್ರದಾಯಗಳೊಂದಿಗೆ ಅನುರಣಿಸುತ್ತಿದೆ.
ನನ್ನ ಭೇಟಿಯ ಭಾಗವಾಗಿ 18ನೇ ಶತಮಾನದ ‘ರಾಮಾಯಣ’ ಭಿತ್ತಿಚಿತ್ರಗಳನ್ನು ಆಧರಿಸಿದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ಥಾಯ್ಲೆಂಡ್ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ.
ಪ್ರಧಾನಮಂತ್ರಿ ಶಿನವಾತ್ರ ಅವರು ನನಗೆ ತ್ರಿ-ಪಿತಾಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಬುದ್ಧನ ಭೂಮಿಯಾದ ಭಾರತದ ಪರವಾಗಿ, ನಾನು ಅದನ್ನು ಕೈಮುಗಿದು ಸ್ವೀಕರಿಸುತ್ತೇನೆ. ಕಳೆದ ವರ್ಷ, ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಭಾರತದಿಂದ ಥಾಯ್ಲೆಂಡ್‌ಗೆ ಕಳುಹಿಸಲಾಯಿತು. ನಾಲ್ಕು ದಶಲಕ್ಷಕ್ಕೂ ಹೆಚ್ಚು ಭಕ್ತರಿಗೆ ತಮ್ಮ ಗೌರವವನ್ನು ಸಲ್ಲಿಸುವ ಅವಕಾಶ ದೊರೆತಿರುವುದು ಬಹಳ ಸಂತೋಷದ ವಿಷಯವಾಗಿದೆ. 1960ರಲ್ಲಿ ಗುಜರಾತ್‌ನ ಅರಾವಳಿಯಲ್ಲಿ ಪತ್ತೆಯಾದ ಪವಿತ್ರ ಅವಶೇಷಗಳನ್ನು ಥಾಯ್ಲೆಂಡ್‌ಗೆ ಪ್ರದರ್ಶನಕ್ಕಾಗಿ ಕಳುಹಿಸಲಾಗುವುದು ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ.
ಈ ವರ್ಷ ನಮ್ಮ ಹಳೆಯ ಸಂಪರ್ಕವು ಭಾರತದ ಮಹಾಕುಂಭದಲ್ಲಿಯೂ ಗೋಚರಿಸಿತು. ಥಾಯ್ಲೆಂಡ್ ಸೇರಿದಂತೆ ವಿದೇಶಗಳಿಂದ 600 ಕ್ಕೂ ಹೆಚ್ಚು ಬೌದ್ಧ ಭಕ್ತರು ಈ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆಯ ಭಾಗವಾದರು. ಈ ಕಾರ್ಯಕ್ರಮವು ಜಾಗತಿಕ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡಿತು.
ಸ್ನೇಹಿತರೇ, ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನದಲ್ಲಿ ಥಾಯ್ಲೆಂಡ್ ವಿಶೇಷ ಸ್ಥಾನವನ್ನು ಹೊಂದಿದೆ. ಇಂದು, ನಾವು ನಮ್ಮ ಸಂಬಂಧಗಳನ್ನು ವ್ಯೂಹಾತ್ಮಕ ಪಾಲುದಾರಿಕೆಯಾಗಿ ಬಲಪಡಿಸಲು ನಿರ್ಧರಿಸಿದ್ದೇವೆ. ಅಲ್ಲದೆ, ನಮ್ಮ ಭದ್ರತಾ ಸಂಸ್ಥೆಗಳ ನಡುವೆ ‘ಕಾರ್ಯತಂತ್ರದ ಸಂವಾದ’ ಸ್ಥಾಪಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ.
ಸೈಬರ್ ಅಪರಾಧಕ್ಕೆ ಬಲಿಯಾದ ಭಾರತೀಯರನ್ನು ಮರಳಿ ಕರೆತರಲು ಸಹಕರಿಸಿದ್ದಕ್ಕಾಗಿ ನಾವು ಥಾಯ್ಲೆಂಡ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದೇವೆ. ಮಾನವ ಕಳ್ಳಸಾಗಣೆ ಮತ್ತು ಅಕ್ರಮ ವಲಸೆಯನ್ನು ಎದುರಿಸಲು ನಮ್ಮ ಏಜೆನ್ಸಿಗಳು ನಿಕಟವಾಗಿ ಸಹಕರಿಸುತ್ತವೆ ಎಂದು ನಾವು ಒಪ್ಪಿದ್ದೇವೆ.
ಥಾಯ್ಲೆಂಡ್ ಮತ್ತು ಭಾರತದ ಈಶಾನ್ಯ ರಾಜ್ಯಗಳ ನಡುವೆ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ನಾವು ಒತ್ತು ನೀಡಿದ್ದೇವೆ.
ನಾವು ಪರಸ್ಪರ ವ್ಯಾಪಾರ, ಹೂಡಿಕೆ ಮತ್ತು ವ್ಯಾಪಾರ ವಿನಿಮಯವನ್ನು ಬೆಳೆಸುವ ಬಗ್ಗೆ ಚರ್ಚಿಸಿದ್ದೇವೆ. ಎಂಎಸ್‌ಎಂಇ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ನವೀಕರಿಸಬಹುದಾದ ಇಂಧನ, ಡಿಜಿಟಲ್ ತಂತ್ರಜ್ಞಾನ, ಇ-ವಾಹನಗಳು, ರೊಬೊಟಿಕ್ಸ್, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮಗಳಲ್ಲಿಸಹಕಾರವನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ಭೌತಿಕ ಸಂಪರ್ಕವನ್ನು ಹೆಚ್ಚಿಸುವುದರ ಚತೆಗೆ, ಎರಡೂ ದೇಶಗಳು ಫಿನ್‌ಟೆಕ್ ಸಂಪರ್ಕವನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ.
ಜನರ ನಡುವಿನ ವಿನಿಮಯವನ್ನು ಉತ್ತೇಜಿಸುವ ಉದ್ದೇಶದಿಂದ, ಭಾರತವು ಥಾಯ್ ಪ್ರವಾಸಿಗರಿಗೆ ಉಚಿತ ಇ-ವೀಸಾ ಸೌಲಭ್ಯಗಳನ್ನು ನೀಡಲು ಪ್ರಾರಂಭಿಸಿದೆ.
ಸ್ನೇಹಿತರೇ,
ಆಸಿಯಾನ್ ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರನಾಗಿದ್ದು, ಈ ಪ್ರದೇಶದಲ್ಲಿ, ನೆರೆಯ ಕಡಲ ರಾಷ್ಟ್ರಗಳಾಗಿ, ನಾವು ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯಲ್ಲಿಸಮಾನ ಹಿತಾಸಕ್ತಿಗಳನ್ನು ಹೊಂದಿದ್ದೇವೆ.
ಭಾರತವು ಆಸಿಯಾನ್ ಏಕತೆ ಮತ್ತು ಆಸಿಯಾನ್ ಕೇಂದ್ರೀಕರಣವನ್ನು ದೃಢವಾಗಿ ಬೆಂಬಲಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ, ಎರಡೂ ದೇಶಗಳು ಮುಕ್ತ, ಮುಕ್ತ, ಅಂತರ್ಗತ ಮತ್ತು ನಿಯಮ ಆಧಾರಿತ ಕ್ರಮವನ್ನು ಪ್ರತಿಪಾದಿಸುತ್ತವೆ.
ನಾವು ಅಭಿವೃದ್ಧಿಯನ್ನು ನಂಬುತ್ತೇವೆಯೇ ಹೊರತು ವಿಸ್ತರಣಾವಾದವನ್ನು ಅಲ್ಲ. ‘ಇಂಡೋ-ಪೆಸಿಫಿಕ್ ಸಾಗರಗಳು’ ಉಪಕ್ರಮದ ‘ಕಡಲ ಪರಿಸರ ವಿಜ್ಞಾನ’ ಸ್ತಂಭವನ್ನು ಸಹ-ಮುನ್ನಡೆಸುವ ಥಾಯ್ಲೆಂಡ್ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.
ಸ್ನೇಹಿತರೇ, ನಾಳೆ ನಡೆಯಲಿರುವ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿಭಾಗವಹಿಸಲು ನಾನು ಉತ್ಸುಕನಾಗಿದ್ದೇನೆ. ಥಾಯ್ಲೆಂಡ್ ಅಧ್ಯಕ್ಷ ತೆಯಲ್ಲಿ, ಈ ವೇದಿಕೆಯು ಪ್ರಾದೇಶಿಕ ಸಹಕಾರದತ್ತ ಹೊಸ ಆವೇಗವನ್ನು ಪಡೆದುಕೊಂಡಿದೆ. ಈ ಸಾಧನೆಗಾಗಿ ನಾವು ಪ್ರಧಾನಿ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇವೆ.
ಗೌರವಾನ್ವಿತರೇ,
ಮತ್ತೊಮ್ಮೆ, ಈ ಆತ್ಮೀಯ ಸ್ವಾಗತ ಮತ್ತು ಗೌರವಕ್ಕಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ತ್ರಿ-ಪಿಟಕನ ಈ ಉಡುಗೊರೆಗಾಗಿ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಧನ್ಯವಾದಗಳು!
ಹಕ್ಕು ನಿರಾಕರಣೆ- ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
Addressing the press meet with PM @ingshin of Thailand. https://t.co/zqbYjrEEwO
— Narendra Modi (@narendramodi) April 3, 2025
इस खूबसूरत स्वर्ण-भूमि में मेरे और मेरे डेलीगेशन के गर्मजोशी भरे स्वागत और आतिथ्य-सत्कार के लिए मैं प्रधानमंत्री शिन्नावात का हार्दिक आभार व्यक्त करता हूँ।
— PMO India (@PMOIndia) April 3, 2025
28 मार्च को आए भूकंप में हुई जनहानि के लिए मैं भारत के लोगों की ओर से गहरी संवेदनाएं प्रकट करता हूं।
और, हम घायल हुए लोगों…
भारत और थाईलैंड के सदियों पुराने संबंध हमारे गहरे सांस्कृतिक और आध्यात्मिक सूत्रों से जुड़े हैं।
— PMO India (@PMOIndia) April 3, 2025
बौद्ध धर्म के प्रसार ने हमारे जन-जन को जोड़ा है।
अयुत्थया से नालंदा तक विद्वानों का आदान-प्रदान हुआ है।
रामायण की कथा थाई लोक-जीवन में रची-बसी है।
और, संस्कृत-पाली के प्रभाव आज भी…
मैं थाईलैंड सरकार का आभारी हूँ कि मेरी यात्रा के उप्लक्ष्य में 18वी शताब्दी की ‘रामायण’ म्यूरल पेंटिंग्स पर आधारित एक विशेष डाक-टिकट जारी किया गया है।
— PMO India (@PMOIndia) April 3, 2025
प्रधानमंत्री शिन्नावात ने अभी मुझे त्रिपिटक भेंट की।
बुद्ध-भूमि भारत की ओर से मैंने इसे हाथ जोड़ कर स्वीकार किया: PM…
भारत की ‘Act East’ पॉलिसी और हमारे Indo-Pacific विजन में थाईलैंड का विशेष स्थान है।
— PMO India (@PMOIndia) April 3, 2025
आज हमने अपने संबंधों को स्ट्रैटेजिक पार्टनरशिप का रूप देने का निर्णय लिया है।
सुरक्षा एजेंसियों के बीच ‘स्ट्रैटेजिक डायलॉग’ स्थापित करने पर भी चर्चा की: PM @narendramodi
हमने भारत के उत्तर-पूर्वी राज्यों और थाईलैंड के बीच tourism, culture, education क्षेत्रों में सहयोग पर बल दिया है।
— PMO India (@PMOIndia) April 3, 2025
आपसी व्यापार, निवेश और businesses के बीच आदान प्रदान बढ़ाने पर हमने बात की।
MSME, handloom और handicraft में भी सहयोग के लिए समझौते किए गए हैं: PM @narendramodi
भारत ASEAN unity और ASEAN Centrality का पूर्ण समर्थन करता है।
— PMO India (@PMOIndia) April 3, 2025
Indo-Pacific में, Free, open, inclusive and rule-based order का हम दोनों समर्थन करते हैं।
हम विस्तार-वाद नहीं, विकास-वाद की नीति में विश्वास रखते हैं: PM @narendramodi