Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಥಾಣೆ ಸಮಗ್ರ ರಿಂಗ್ ಮೆಟ್ರೋ ರೈಲು ಯೋಜನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಹಾರಾಷ್ಟ್ರದ ಥಾಣೆ ಸಮಗ್ರ ರಿಂಗ್ ಮೆಟ್ರೋ ರೈಲು ಯೋಜನೆ ಕಾರಿಡಾರ್ ಗೆ ತನ್ನ ಅನುಮೋದನೆ ನೀಡಿದೆ. 29 ಕಿ.ಮೀ ಉದ್ದದ ಕಾರಿಡಾರ್ ಥಾಣೆ ನಗರದ ಪಶ್ಚಿಮ ಭಾಗದ ಅಂಚಿನಲ್ಲಿ ಸಾಗುತ್ತದೆ ಮತ್ತು 22 ನಿಲ್ದಾಣಗಳೊಂದಿಗೆ ಅಸ್ತಿತ್ವಕ್ಕೆ ಬರಲಿದೆ. ಈ ಜಾಲವು ಒಂದು ಬದಿಯಲ್ಲಿ ಉಲ್ಹಾಸ್ ನದಿ ಮತ್ತು ಮತ್ತೊಂದೆಡೆ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ (ಎಸ್ಜಿಎನ್ಪಿ) ಗಳಿಂದ ಸುತ್ತುವರೆದಿದೆ.

ಸಂಪರ್ಕವು ಸುಸ್ಥಿರ ಮತ್ತು ಪರಿಣಾಮಕಾರಿ ಸಾರಿಗೆ ವಿಧಾನವನ್ನು ಒದಗಿಸುತ್ತದೆ, ನಗರವು ತನ್ನ ಆರ್ಥಿಕ ಸಾಮರ್ಥ್ಯವನ್ನು ಸಾಕಾರಗೊಳಿಸಿಕೊಳ್ಳಲು ಮತ್ತು ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಿ ಸಂಚಾರವನ್ನು ಸರಾಗಗೊಳಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಯೋಜನಾ ವೆಚ್ಚ ಮತ್ತು ಹಣಕಾಸು:

ಯೋಜನೆಯ ಅಂದಾಜು ವೆಚ್ಚ 12,200.10 ಕೋಟಿ ರೂ.ಗಳಾಗಿದ್ದು, ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಸಮಾನ ಈಕ್ವಿಟಿ ಮತ್ತು ದ್ವಿಪಕ್ಷೀಯ ಸಂಸ್ಥೆಗಳಿಂದ ಭಾಗಶಃ ಧನಸಹಾಯವನ್ನು ಹೊಂದಿರುತ್ತದೆ.

ಕಾರ್ಪೊರೇಟ್ ಸಂಸ್ಥೆಗಳಿಗೆ ಸ್ಟೇಷನ್ ಹೆಸರಿಸುವಿಕೆ ಮತ್ತು ಪ್ರವೇಶ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ, ಸ್ವತ್ತುಗಳ ನಗದೀಕರಣ, ಮೌಲ್ಯ ಗಳಿಕೆಯ  ಹಣಕಾಸು ಮಾರ್ಗದಂತಹ ನವೀನ ಹಣಕಾಸು ವಿಧಾನಗಳ ಮೂಲಕವೂ ಹಣವನ್ನು ಸಂಗ್ರಹಿಸಲಾಗುವುದು.

ಪ್ರಮುಖ ವ್ಯಾಪಾರ ಕೇಂದ್ರಗಳನ್ನು ಸಂಪರ್ಕಿಸುವ ಕಾರಿಡಾರ್ ಬಹುಪಾಲು ಉದ್ಯೋಗಿಗಳಿಗೆ ಪರಿಣಾಮಕಾರಿ ಸಾರಿಗೆ ಆಯ್ಕೆಯನ್ನು ಒದಗಿಸುತ್ತದೆ.  ಈ ಯೋಜನೆಯು 2029 ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಮೆಟ್ರೋ ಮಾರ್ಗವು ಸಾವಿರಾರು ದೈನಂದಿನ ಪ್ರಯಾಣಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಪ್ರತಿದಿನ ಕಚೇರಿ ಮತ್ತು ಕೆಲಸದ ಪ್ರದೇಶಕ್ಕೆ ಪ್ರಯಾಣಿಸುವವರಿಗೆ ವೇಗದ ಮತ್ತು ಆರ್ಥಿಕ ಮಿತವ್ಯಯದ ಸಾರಿಗೆ ಆಯ್ಕೆಗಳನ್ನು ಒದಗಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಿಂದಾಗಿ 2029, 2035 ಮತ್ತು 2045 ರಲ್ಲಿ ಮೆಟ್ರೋ ಕಾರಿಡಾರ್ಗಳಲ್ಲಿ ಒಟ್ಟು ದೈನಂದಿನ ಪ್ರಯಾಣಿಕರ ಸಂಖ್ಯೆ ಕ್ರಮವಾಗಿ 6.47 ಲಕ್ಷ, 7.61 ಲಕ್ಷ ಮತ್ತು 8.72 ಲಕ್ಷ ಆಗಬುಹುದು ಎಂದು ಅಂದಾಜಿಸಲಾಗಿದೆ. .

ಮಹಾ ಮೆಟ್ರೋ ಯೋಜನೆಯನ್ನು ಸಿವಿಲ್, ಎಲೆಕ್ಟ್ರೋ-ಮೆಕ್ಯಾನಿಕಲ್, ಇತರ ಸಂಬಂಧಿತ ಸೌಲಭ್ಯಗಳು, ಕಾಮಗಾರಿಗಳು ಮತ್ತು ಸಂಬಂಧಿತ ಸ್ವತ್ತುಗಳೊಂದಿಗೆ ಕಾರ್ಯಗತಗೊಳಿಸುತ್ತದೆ. ಮಹಾ-ಮೆಟ್ರೋ ಈಗಾಗಲೇ ಬಿಡ್ ಪೂರ್ವ  ಚಟುವಟಿಕೆಗಳು ಮತ್ತು ಟೆಂಡರ್ ದಾಖಲೆಗಳ ತಯಾರಿಕೆಯನ್ನು ಪ್ರಾರಂಭಿಸಿದೆ. ಬಿಡ್ಡಿಂಗ್ ಗಾಗಿ ಗುತ್ತಿಗೆಗಳನ್ನು  ತಕ್ಷಣವೇ ಆಹ್ವಾನಿಸಲಾಗುತ್ತದೆ.

 

*****