Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತ್ರಿಪುರಾ ರಾಜ್ಯದ ಜನರಿಗೆ ರಾಜ್ಯೋತ್ಸವ ದಿನದ ಶುಭಾಶಯ ತಿಳಿಸಿದ ಪ್ರಧಾನ ಮಂತ್ರಿಗಳು


ತ್ರಿಪುರಾ ರಾಜ್ಯೋತ್ಸವದ ದಿನದ ಹಿನ್ನೆಲೆಯಲ್ಲಿ ಆ ರಾಜ್ಯದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.

ಈ ಸಂಬಂಧ ‘ ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು, “ತ್ರಿಪುರಾದ ಜನರಿಗೆ ರಾಜ್ಯೋತ್ಸವ ದಿನದಂದು ಹೃತ್ಪೂರ್ವಕ ಶುಭಾಶಯಗಳು. ಈ ದಿನವು ರಾಜ್ಯದ ಅನನ್ಯ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನುಸಂಭ್ರಮದಿಂದ  ಆಚರಿಸಲಿ. ತ್ರಿಪುರಾದ ಜನ ಸಮೃದ್ಧಿ ಮತ್ತು ಸಾಮರಸ್ಯದಿಂದ ಜೀವನ ನಡೆಸಲಿ ಎಂದು ಆಶಿಸುತ್ತೇನೆ,” ಎಂದು ಹಾರೈಸಿದ್ದಾರೆ.