Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಮಿಷನ್ ಅಡಿಯಲ್ಲಿ ಕ್ಲೀನ್ ಪ್ಲಾಂಟ್ ಕಾರ್ಯಕ್ರಮಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಸ್ತಾಪಿಸಿದ ಕ್ಲೀನ್ ಪ್ಲಾಂಟ್ ಕಾರ್ಯಕ್ರಮಕ್ಕೆ (ಸಿಪಿಪಿ) ಅನುಮೋದನೆ ನೀಡಿದೆ.

1,765.67 ಕೋಟಿ ರೂ.ಗಳ ಗಣನೀಯ ಹೂಡಿಕೆಯೊಂದಿಗೆ, ಈ ಪ್ರವರ್ತಕ ಉಪಕ್ರಮವು ಭಾರತದಲ್ಲಿನ ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಲು ಸಿದ್ಧವಾಗಿದೆ ಮತ್ತು ಉತ್ಕೃಷ್ಟತೆ ಮತ್ತು ಸುಸ್ಥಿರತೆಗೆ ಹೊಸ ಮಾನದಂಡಗಳನ್ನು ನಿಗದಿಪಡಿಸುವ ನಿರೀಕ್ಷೆಯಿದೆ. ಫೆಬ್ರವರಿ 2023 ರಲ್ಲಿ ಹಣಕಾಸು ಸಚಿವರು  ಬಜೆಟ್ ಭಾಷಣದಲ್ಲಿ ಈ ಕಾರ್ಯಕ್ರಮವನ್ನು ಘೋಷಿಸಿದ್ದರು. ಸಿಪಿಪಿ ರಾಷ್ಟ್ರದಾದ್ಯಂತ ಹಣ್ಣಿನ ಬೆಳೆಗಳ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಲಿದೆ.

ಕ್ಲೀನ್ ಪ್ಲಾಂಟ್ ಪ್ರೋಗ್ರಾಂ (ಸಿಪಿಪಿ) ನ ಪ್ರಮುಖ ಪ್ರಯೋಜನಗಳು:

ರೈತರು: ಕ್ಲೀನ್ ಪ್ಲಾಂಟ್ ಕಾರ್ಯಕ್ರಮವು ವೈರಸ್-ಮುಕ್ತ, ಉತ್ತಮ ಗುಣಮಟ್ಟದ ನಾಟಿ ಮಾಡುವ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ, ಇದು ಹೆಚ್ಚಿನ ಬೆಳೆ ಇಳುವರಿ ಮತ್ತು ಸುಧಾರಿತ ಆದಾಯದ ಅವಕಾಶಗಳಿಗೆ ಕಾರಣವಾಗುತ್ತದೆ.

ನರ್ಸರಿಗಳು: ಸುವ್ಯವಸ್ಥಿತ ಪ್ರಮಾಣೀಕರಣ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯ ಬೆಂಬಲವು ನರ್ಸರಿಗಳನ್ನು ಶುದ್ಧ ನಾಟಿ ಮಾಡುವ ಸಾಮಗ್ರಿಗಳನ್ನು ಸಮರ್ಥವಾಗಿ ಪ್ರಚಾರ ಮಾಡಲು, ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ಅನುವು ಮಾಡಿಕೊಡುತ್ತದೆ.

ಗ್ರಾಹಕರು: ಈ ಉಪಕ್ರಮವು ವೈರಸ್‌ ಗಳಿಂದ ಮುಕ್ತವಾದ ಉತ್ತಮ ಉತ್ಪನ್ನಗಳಿಂದ ಗ್ರಾಹಕರು ಪ್ರಯೋಜನ ಪಡೆಯುವುದನ್ನು ಖಚಿತಪಡಿಸುತ್ತದೆ, ಹಣ್ಣುಗಳ ರುಚಿ, ನೋಟ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ.

ರಫ್ತುಗಳು: ಉತ್ತಮ ಗುಣಮಟ್ಟದ, ರೋಗ-ಮುಕ್ತ ಹಣ್ಣುಗಳನ್ನು ಉತ್ಪಾದಿಸುವ ಮೂಲಕ, ಭಾರತವು ಪ್ರಮುಖ ಜಾಗತಿಕ ರಫ್ತುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತದೆ, ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುತ್ತದೆ ಮತ್ತು ಅಂತರರಾಷ್ಟ್ರೀಯ ಹಣ್ಣಿನ ವ್ಯಾಪಾರದಲ್ಲಿ ತನ್ನ ಪಾಲನ್ನು ಹೆಚ್ಚಿಸುತ್ತದೆ.

ಈ ಕಾರ್ಯಕ್ರಮವು ಎಲ್ಲಾ ರೈತರಿಗೆ ಅವರ ಭೂಮಿ ಹಿಡುವಳಿಯ ಗಾತ್ರ ಅಥವಾ ಸಾಮಾಜಿಕ -ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಶುದ್ಧ ನೆಡುವ ಸಾಮಗ್ರಿಗಳಿಗೆ ಸುಲಭ ಪ್ರವೇಶಕ್ಕೆ ಆದ್ಯತೆ ನೀಡುತ್ತದೆ.

ಕಾರ್ಯಕ್ರಮವು ಮಹಿಳಾ ರೈತರನ್ನು ಅದರ ಯೋಜನೆ ಮತ್ತು ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸುತ್ತದೆ, ಸಂಪನ್ಮೂಲಗಳಿಗೆ ಅವರ ಪ್ರವೇಶವನ್ನು ಖಚಿತಪಡಿಸುತ್ತದೆ, ತರಬೇತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಅವಕಾಶಗಳನ್ನು ನೀಡುತ್ತದೆ.

ಈ ಕಾರ್ಯಕ್ರಮವು ಪ್ರದೇಶ-ನಿರ್ದಿಷ್ಟ ಶುದ್ಧ ಸಸ್ಯ ಪ್ರಭೇದಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಾದ್ಯಂತ ವೈವಿಧ್ಯಮಯ ಕೃಷಿ-ಹವಾಮಾನ ಪರಿಸ್ಥಿತಿಗಳನ್ನು ಪರಿಹರಿಸುತ್ತದೆ.

ಸಿಪಿಪಿಯ ಮುಖ್ಯ ಅಂಶಗಳು:

ಶುದ್ಧ ಸಸ್ಯ ಪ್ಲಾಂಟ್ ಕೇಂದ್ರಗಳು (ಸಿಪಿಪಿಗಳು): ಸುಧಾರಿತ ರೋಗನಿರ್ಣಯದ ಚಿಕಿತ್ಸಕಗಳು ಮತ್ತು ಅಂಗಾಂಶ ಕೃಷಿ ಪ್ರಯೋಗಾಲಯಗಳೊಂದಿಗೆ ಸುಸಜ್ಜಿತವಾದ ಒಂಬತ್ತು ವಿಶ್ವದರ್ಜೆಯ ಅತ್ಯಾಧುನಿಕ ಸಿಪಿಪಿಗಳನ್ನು ಭಾರತದಾದ್ಯಂತ ಸ್ಥಾಪಿಸಲಾಗುವುದು. ಇವುಗಳಲ್ಲಿ ದ್ರಾಕ್ಷಿ (ಎನ್‌ ಆರ್‌ ಸಿ, ಪುಣೆ), ಸಮಶೀತೋಷ್ಣ ಹಣ್ಣುಗಳು – ಸೇಬು, ಬಾದಾಮಿ, ವಾಲ್‌ ನಟ್ಸ್ ಇತ್ಯಾದಿ. (ಸಿಐಟಿಎಚ್, ಶ್ರೀನಗರ & ಮುಕ್ತೇಶ್ವರ), ಸಿಟ್ರಸ್ ಹಣ್ಣುಗಳು (ಸಿ ಸಿ ಆರ್‌ ಐ, ನಾಗಪುರ ಮತ್ತು ಸಿ ಐ ಎ ಎಚ್, ಬಿಕಾನೆರ್), ಮಾವು/ಸೀಬೆ/ಅವಕಾಡೊ (ಐ‌ ಐ ಎಚ್‌ ಆರ್, ಬೆಂಗಳೂರು), ಮಾವು / ಸೀಬೆ/ಲಿಚ್ಚಿ (ಸಿ ಐ ಎಸ್‌ ಎಚ್‌, ಲಕ್ನೋ), ದಾಳಿಂಬೆ (ಎನ್‌ ಆರ್‌ ಸಿ, ಶೋಲಾಪುರ) ಮತ್ತು ಪೂರ್ವ ಭಾರತದಲ್ಲಿ ಉಷ್ಣವಲಯದ/ಉಪ-ಉಷ್ಣವಲಯದ ಹಣ್ಣುಗಳು ಸೇರಿವೆ. ಈ ಕೇಂದ್ರಗಳು ದೊಡ್ಡ ಪ್ರಸರಣಕ್ಕೆ ಉದ್ದೇಶಿಸಿರುವ ವೈರಸ್-ಮುಕ್ತ ಸಸ್ಯ ಸಾಮಗ್ರಿಗಳನ್ನು ಉತ್ಪಾದಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಪ್ರಮಾಣೀಕರಣ ಮತ್ತು ಕಾನೂನು ಚೌಕಟ್ಟು: ಬೀಜಗಳ ಕಾಯಿದೆ 1966 ರ ಅಡಿಯಲ್ಲಿ ನಿಯಂತ್ರಕ ಚೌಕಟ್ಟಿನಿಂದ ಬೆಂಬಲಿತವಾದ ದೃಢವಾದ ಪ್ರಮಾಣೀಕರಣ ವ್ಯವಸ್ಥೆಯನ್ನು ಅಳವಡಿಸಲಾಗುವುದು, ಇದು ನಾಟಿ ಮಾಡುವ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸಂಪೂರ್ಣ ಹೊಣೆಗಾರಿಕೆ ಮತ್ತು ಪತ್ತೆಹಚ್ಚುವಿಕೆಯನ್ನು ಖಚಿತಪಡಿಸುತ್ತದೆ.

ವರ್ಧಿತ ಮೂಲಸೌಕರ್ಯ: ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ನರ್ಸರಿಗಳಿಗೆ ಬೆಂಬಲವನ್ನು ಒದಗಿಸಲಾಗುವುದು, ಶುದ್ಧ ನಾಟಿ ಮಾಡುವ ವಸ್ತುಗಳ ಸಮರ್ಥ ಗುಣಕವನ್ನು ಸುಗಮಗೊಳಿಸುತ್ತದೆ.

ಮಿಷನ್ ಲೈಫ್ ಮತ್ತು ಒನ್ ಹೆಲ್ತ್ ಉಪಕ್ರಮಗಳೊಂದಿಗೆ ಅನುಗುಣವಾಗಿ ಕ್ಲೀನ್ ಪ್ಲಾಂಟ್ ಪ್ರೋಗ್ರಾಂ ಭಾರತದ ತೋಟಗಾರಿಕಾ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ರೂಪಿಸಲಾಗಿದೆ. ಇದು ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಉತ್ತೇಜಿಸುತ್ತದೆ ಮತ್ತು ಆಮದು ಮಾಡಿಕೊಂಡ ನಾಟಿ ಮಾಡುವ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಈ ಕಾರ್ಯಕ್ರಮವು ಭಾರತವನ್ನು ಪ್ರಮುಖ ಜಾಗತಿಕ ಹಣ್ಣುಗಳ ರಫ್ತುದಾರನಾಗುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಮತ್ತು ಈ ವಲಯದಲ್ಲಿ ಪರಿವರ್ತಕ ಬದಲಾವಣೆಗೆ ಚಾಲನೆ ನೀಡುತ್ತದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತದೆ.

 

*****