ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ತೈಲ ಮತ್ತು ಅನಿಲಯದ ದೇಶೀಯ ಉತ್ಪಾದನೆ ಹೆಚ್ಚಿಸಲು ಹಾಲಿ ಇರುವ ಹೈಡ್ರೋ ಕಾರ್ಬನ್ ಮೀಸಲಿನ ಪುನರ್ ಸಂಪಾದನೆ ಅಂಶಗಳ ಸುಧಾರಣೆಗಾಗಿ ವರ್ಧಿತ ಪುನರ್ ಸಂಪಾದನೆ (ಇಆರ್)/ಸುಧಾರಿತ ಪುನರ್ ಸಂಪಾದನೆ (ಐ.ಆರ್.)/ ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ (ಯು.ಎಚ್.ಸಿ) ಉತ್ಪಾದನೆ ವಿಧಾನ/ತಂತ್ರಗಾರಿಕೆಯ ಹೆಚ್ಚಳ ಮತ್ತು ಉತ್ತೇಜನಕ್ಕೆ ನೀತಿ ಚೌಕಟ್ಟಿಗೆ ತನ್ನ ಅನುಮೋದನೆ ನೀಡಿದೆ. ವರ್ಧಿತ ತೈಲ ಪುನರ್ ಸಂಪಾದನೆ (ಇ.ಓ.ಆರ್) ಮತ್ತು ವರ್ಧಿತ ಅನಿಲ ಪುನರ್ ಸಂಪಾದನೆ (ಇ.ಜಿ.ಆರ್.), ಶೇಲ್ ತೈಲ ಮತ್ತು ಅನಿಲ ಉತ್ಪಾದನೆ, ಟೈಟ್ ತೈಲ ಮತ್ತು ಅನಿಲ ಉತ್ಪಾದನೆ, ತೈಲ ಶೇಲ್ ನಿಂದ ಉತ್ಪಾದನೆ, ಅನಿಲ ಹೈಡ್ರೇಟ್ಸ್ ಮತ್ತು ಭಾರಿ ತೈಲ ಉತ್ಪಾದನೆ ಸೇರಿದಂತೆ ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ (ಯು.ಎಚ್.ಸಿ.) ಉತ್ಪಾದನೆ ವಿಧಾನಗಳನ್ನು ಇ.ಆರ್. ಒಳಗೊಂಡಿದೆ. ವರ್ಧಿತ ಪುನರ್ ಸಂಪಾದನೆ, ಸುಧಾರಿತ ಪುನರ್ ಸಂಪಾದನೆ ಮತ್ತು ಅಸಾಂಪ್ರದಾಯಿಕ ಹೈಡ್ರೋಕಾರ್ಬನ್ ಗಳ ಪರಿಶೋಧನೆ ಮತ್ತು ಶೋಷಣೆ ತೀವ್ರ ಬಂಡವಾಳ, ತಾಂತ್ರಿಕವಾಗಿ ಸಂಕೀರ್ಣ ಮತ್ತು ಸವಾಲಿನಿಂದ ಕೂಡಿರುವುದಾಗಿದೆ. ಇದು ಬೆಂಬಲಿತ ಮೂಲಸೌಕರ್ಯ, ಸಾಗಣೆ ಬೆಂಬಲ, ಹಣಕಾಸು ಪ್ರೋತ್ಸಾಹಕ ಮತ್ತು ಉತ್ತಮ ಪರಿಸರಕ್ಕೆ ಕರೆ ನೀಡುತ್ತದೆ. ನೀತಿಯ ಕಾರ್ಯತಂತ್ರಾತ್ಮಕ ಉದ್ದೇಶ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಮೂಲಕ ಉದ್ಯಮ ಮತ್ತು ಶೈಕ್ಷಣಿಕ ಸಂಶೋಧನೆ ಮತ್ತು ಇ.ಆರ್ / ಐಆರ್ / ಯುಎಚ್.ಸಿ. ವಿಧಾನಗಳು / ಕೌಶಲ್ಯಗಳನ್ನು ನಿಯೋಜಿಸಲು ಪರಿಶೋಧನೆ ಮತ್ತು ಉತ್ಪಾದನೆ (ಇ ಮತ್ತುಪಿ) ಗುತ್ತಿಗೆದಾರರ ಬೆಂಬಲ ಮತ್ತು ಪ್ರೋತ್ಸಾಹಿತ ಬೆಂಬಲ ನೀಡುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ. ಈ ನೀತಿಯು ಎಲ್ಲ ಒಪ್ಪಂದದ ಆಡಳಿತಗಳು ಮತ್ತು ನಾಮನಿರ್ದೇಶನ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಈ ನೀತಿ ಉಪಕ್ರಮವು ಹೊಸ ಹೂಡಿಕೆಗೆ ಒತ್ತು ನೀಡಿ, ಆರ್ಥಿಕ ಚಟುವಟಿಕೆಗೆ ಇಂಬು ನೀಡಿ, ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ನೀತಿಯು ಅಸ್ತಿತ್ವದಲ್ಲಿರುವ ಕ್ಷೇತ್ರಗಳ ಉತ್ಪಾದಕತೆಯನ್ನು ಸುಧಾರಿಸಲು ಹೊಸ, ನವೀನ ಮತ್ತು ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮತ್ತು ತಾಂತ್ರಿಕ ಸಹಕಾರವನ್ನು ಕಲ್ಪಿಸಲು ನೆರವಾಗಲಿದೆಎಂದು ನಿರೀಕ್ಷಿಸಲಾಗಿದೆ.
ಇ.ಆರ್.ಸಾಮರ್ಥ್ಯಕ್ಕೆ ಪ್ರತಿ ಕ್ಷೇತ್ರದ ವ್ಯವಸ್ಥಿತ ಮೌಲ್ಯಮಾಪನವು, ಸೂಕ್ತವಾದ ಇ.ಆರ್.ತಂತ್ರಜ್ಞಾನಗಳ ಮೌಲ್ಯಮಾಪನ ಮತ್ತು ಇ.ಆರ್.ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವೆಚ್ಚದ ಅಪಾಯವನ್ನು ಆರ್ಥಿಕ ಪ್ರೋತ್ಸಾಹಕಗಳಿಗೆ ಹೂಡಿಕೆ ಮಾಡುತ್ತವೆ, ಹೂಡಿಕೆ ಆರ್ಥಿಕವಾಗಿ ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ. ಗೊತ್ತುಪಡಿಸಿದ ಸಂಸ್ಥೆಗಳ ಮೂಲಕ ಕ್ಷೇತ್ರಗಳನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡುವುದು, ಸರ್ಕಾರದಿಂದ ಸೂಚನೆ ಪಡೆಯುವುದು, ಮತ್ತು ವಾಣಿಜ್ಯ ಮಟ್ಟದಲ್ಲಿ ಇಆರ್ ಪ್ರಾಜೆಕ್ಟ್ ನ ನೈಜ ಅನುಷ್ಠಾನಕ್ಕೆ ಮುನ್ನ ಪ್ರಾಯೋಗಿಕ ಪರೀಕ್ಷೆ ನಡೆಸುವುದು, ನೀತಿಯ ಇತರ ಪ್ರಮುಖ ಲಕ್ಷಣಗಳಾಗಿವೆ. ವರ್ಧಿತ ಪುನರ್ ಸಂಪಾದನೆ (ಇ.ಆರ್.) ಸಮಿತಿಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಹೈಡ್ರೋ ಕಾರ್ಬನ್ ಕುರಿತ ಮಹಾ ನಿರ್ದೇಶನಾಲಯ (ಡಿಜಿಎಚ್), ತೈಲ ವಲಯದ ತಜ್ಞರ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಮತ್ತು ಶೈಕ್ಷಣಿಕ ರಂಗ ಇದರ ನಿಗಾ ವಹಿಸಿ ನೀತಿಯನ್ನು ಜಾರಿ ಮಾಡುತ್ತದೆ. ನೀತಿಯು ಸನ್ ಸೆಟ್ ಷರತ್ತು ಒಳಗೊಂಡಿದ್ದು, ಅಧಿಸೂಚನೆಯಾದ ದಿನಾಂಕದಿಂದ 10 ವರ್ಷಗಳವರೆಗೆ ಇದು ಜಾರಿಯಲ್ಲಿರುತ್ತದೆ. ಆದಾಗ್ಯೂ, ಆರ್ಥಿಕ ಪ್ರೋತ್ಸಾಹಕಗಳು ಇಆರ್/ಯುಎಚ್.ಸಿ.ಯೋಜನೆಗಳಲ್ಲಿ ಉತ್ಪಾದನೆ ಆರಂಭಗೊಂಡ ದಿನದಿಂದ 120 ತಿಂಗಳುಗಳಿಗೆ ಲಭ್ಯವಾಗುತ್ತವೆ. ಐ.ಆರ್. ಯೋಜನೆಗಳ ವಿಚಾರದಲ್ಲಿ, ಪ್ರೋತ್ಸಾಹಕಗಳು ನಿಗದಿತ ಮಾನದಂಡಗಳನ್ನು ಸಾಧಿಸಿದ ತರುವಾಯ ಮಾತ್ರವೇ ಲಭಿಸುತ್ತದೆ. ನೀತಿಯ ಅಡಿಯಲ್ಲಿ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಿರ್ದಿಷ್ಟ ಕಾಲಾವಧಿಯನ್ನು ಸೂಚಿಸಲಾಗಿದೆ. ಹಣಕಾಸಿನ ಪ್ರೋತ್ಸಾಹಕಗಳನ್ನು ಗೂತ್ತುಪಡಿಸಿದ ಬಾವಿಗಳ ಮೇಲೆ ಇ.ಆರ್.ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಪರಿಣಾಮವಾಗಿ ಅನ್ವಯವಾಗುವ ಉಪಕರವನ್ನು ಭಾಗಶಃ ಮನ್ನಾ / ರಾಯಧನ ಉತ್ಪಾದನೆಯ ರೂಪದಲ್ಲಿ ವಿಸ್ತರಿಸಲಾಗುತ್ತದೆ.
ಪ್ರೌಢ / ಹಳೆಯ ಜಾಗಗಳಿಂದ ಹೈಡ್ರೋಕಾರ್ಬನ್ ನಿಕ್ಷೇಪಗಳ ಪುನರ್ ಚೇತರಿಕೆಯನ್ನು ಉತ್ತೇಜಿಸುವಲ್ಲಿ ತಾಂತ್ರಿಕ ಮಧ್ಯಸ್ಥಿಕೆಗಳು ಗಮನಾರ್ಹವಾದ ಸಾಮರ್ಥ್ಯವನ್ನು ಹೊಂದಿವೆ. ತೈಲ ಉತ್ಪಾದನೆಯಲ್ಲಿನ ಮೂಲ ಸ್ಥಳದಲ್ಲಿನ ಪರಿಮಾಣದ ಚೇತರಿಕೆಯ ಪ್ರಮಾಣದಲ್ಲಿ ಶೇ.5ರಷ್ಟು ಹೆಚ್ಚಳವಾದರೂ ಮುಂದಿನ 20 ವರ್ಷಗಳಲ್ಲಿ 120 ಎಂ.ಎಂ.ಟಿಹೆಚ್ಚುವರಿ ತೈಲ ಉತ್ಪಾದನೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅನಿಲದ ವಿಚಾರದಲ್ಲಿ ಹಾಲಿ ಇರುವ ಉತ್ಪಾದನೆಯ ಪ್ರಮಾಣದ ಮೇಲೆ ಶೇ.3ರಷ್ಟು ಪುನರ್ ಸಂಪಾದನೆ ದರ ಹೆಚ್ಚಳವಾದರೂ, ಇದು ಮುಂದಿನ 20 ವರ್ಷಗಳಲ್ಲಿ ಹೆಚ್ಚುವರಿಯಾಗಿ 52 ಬಿ.ಸಿ.ಎಂ. ಉತ್ಪಾದನೆಗೆ ಕಾರಣವಾಗುತ್ತದೆ.
***
AKT/SH