Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೇಜು ವಿಮಾನ ನಿಲ್ದಾಣವನ್ನು ಉನ್ನತೀಕರಿಸಿರುವುದನ್ನು ಸ್ವಾಗತಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಇಂದು ಉದ್ಘಾಟಿಸಿದ ತೇಜು ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಉನ್ನತೀಕರಣವನ್ನು ಸ್ವಾಗತಿಸಿದ್ದಾರೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರು “2022ರ ನವೆಂಬರ್ ನಲ್ಲಿ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅವರು ಡೋನಿ ಪೋಲೊ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ನಂತರ, ನವೀಕರಿಸಿದ ತೇಜು ವಿಮಾನ ನಿಲ್ದಾಣದ ಸೇರ್ಪಡೆಯು ಮಹತ್ವದ ಮೈಲಿಗಲ್ಲಾಗಿದೆ, ಇದು ನಮ್ಮ ರಾಜ್ಯದ ಸಂಪರ್ಕಾಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ” ಎಂದು ಹೇಳಿದರು.

ಇದಕ್ಕೆ ಎಕ್ಸ್ ನಲ್ಲಿ ಉತ್ತರಿಸಿದ ಪ್ರಧಾನಿ ಮೋದಿಯವರು;

“ಅರುಣಾಚಲ ಪ್ರದೇಶ ಮತ್ತು ಇಡೀ ಈಶಾನ್ಯದಲ್ಲಿ ಸಂಪರ್ಕಕ್ಕೆ ಇದು ಅದ್ಭುತವಾದ ಸುದ್ದಿಯಾಗಿದೆ.” ಎಂದು ಹೇಳಿದ್ದಾರೆ.

 

***