Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೃತೀಯಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2016ಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತೃತೀಯ ಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ 2016ಕ್ಕೆ ತನ್ನ ಅನುಮೋದನೆ ನೀಡಿದೆ.

ಈ ಮಸೂದೆಯ ಮೂಲಕ ಸರ್ಕಾರ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಲಿದೆ. ಅಂಚಿನಲ್ಲಿರುವ ಈ ವರ್ಗದ ಕಳಂಕ, ತಾರತಮ್ಯ ಮತ್ತು ನಿಂದನೆಯನ್ನು ತೊಡೆದುಹಾಕಲು ಈ ವಿಧೇಯಕವು ದೊಡ್ಡ ಸಂಖ್ಯೆಯ ತೃತೀಯ ಲಿಂಗದ ವ್ಯಕ್ತಿಗಳಿಗೆ ನೆರವಾಗಲಿದೆ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಿದೆ. ಇದು ದೊಡ್ಡ ಒಳಗೊಳ್ಳುವಿಕೆಗೆ ದಾರಿ ಮಾಡಿಕೊಡುತ್ತದೆ ಮತ್ತು ತೃತೀಯಲಿಂಗಿಗಳನ್ನು ಸಮಾಜದ ಉತ್ಪಾದಕ ಸದಸ್ಯರನ್ನಾಗಿ ಮಾಡುತ್ತದೆ.

ತೃತೀಯ ಲಿಂಗಿಗಳು ‘ಪುರುಷರು’ ಅಥವಾ ‘ಮಹಿಳೆ’ ಲಿಂಗ ರೂಢಿಗತ ವರ್ಗಗಳಿಗೆ ಸೇರದ ಕಾರಣ, ಈ ಸಮುದಾಯ ದೇಶದ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳ ಪೈಕಿ ಒಂದಾಗಿವೆ. ಹೀಗಾಗಿ ಅವರು ಸಾಮಾಜಿಕ ಬಹಿಷ್ಕಾರ, ತಾರತಮ್ಯದಿಂದ ಹಿಡಿದು, ಶೈಕ್ಷಣಿಕ ಸೌಲಭ್ಯಗಳ ಕೊರತೆ, ನಿರುದ್ಯೋಗ, ವೈದ್ಯಕೀಯ ಸೌಲಭ್ಯದ ಕೊರತೆ ಮತ್ತು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಮಸೂದೆಯು ವಿಧೇಯಕದಲ್ಲಿ ಒತ್ತಿ ಹೇಳಲಾಗಿರುವ ತತ್ವಗಳನ್ನು ಎತ್ತಿಹಿಡಿಯಲುಎಲ್ಲಾ ಬಾಧ್ಯಸ್ಥರನ್ನೂ ಸ್ಪಂದನಶೀಲರಾಗಿ ಮತ್ತು ಜವಾಬ್ದಾರಿ ಮಾಡುತ್ತದೆ. ತೃತೀಯ ಲಿಂಗದ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ತರಲಿದೆ.

***

AKT/SHB