ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತುರ್ತು ಪರಿಸ್ಥಿತಿ ಮತ್ತು ತದನಂತರದ ಅತಿರೇಕ ಪರಿಣಾಮಗಳನ್ನು ಬಲವಾಗಿ ಖಂಡಿಸಿದ ಗೌರವಾನ್ವಿತ ಲೋಕಸಭಾ ಸ್ಪೀಕರ್ ಅವರನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು Xನ ಪೋಸ್ಟ್ ನಲ್ಲಿ:
“ಗೌರವಾನ್ವಿತ ಸ್ಪೀಕರ್ ಅವರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದು, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಅತಿರೇಕಗಳನ್ನು ಎತ್ತಿ ತೋರಿಸಿದ್ದಾರೆ. ಪ್ರಜಾಪ್ರಭುತ್ವದ ಕತ್ತು ಹಿಸುಕಿದ ವಿಧಾನವನ್ನು ಪರಿಣಾಮಕಾರಿಯಾಗಿ ಅವರು ಉಲ್ಲೇಖಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಆ ದಿನಗಳಲ್ಲಿ ಕಷ್ಟ-ನಷ್ಟಗಳನ್ನು ಅನುಭವಿಸಿದ ಎಲ್ಲರ ಗೌರವಾರ್ಥವಾಗಿ ಮೌನಾಚರಣೆಯು ಒಂದು ಅದ್ಭುತ ಸೂಚನೆಯಾಗಿದೆ.”
“ತುರ್ತು ಪರಿಸ್ಥಿತಿಯನ್ನು 50 ವರ್ಷಗಳ ಹಿಂದೆ ಹೇರಲಾಯಿತು, ಆದರೆ ಇಂದಿನ ಯುವಕರು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಸಂವಿಧಾನದ ಕತ್ತು ಹಿಸುಕಿದಾಗ, ಸಾರ್ವಜನಿಕ ಅಭಿಪ್ರಾಯವನ್ನು ತುಳಿದು ಹಾಕಿದಾಗ, ಸಂಘಟನೆಗಳು ನಾಶವಾದಾಗ ಏನಾಗುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆಯಾಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಘಟನೆಗಳು ಸರ್ವಾಧಿಕಾರಕ್ಕೆ ಒಂದು ಉದಾಹರಣೆಯಾಗಿದೆ” ಎಂದು ಬರೆದಿದ್ದಾರೆ.
*****
I am glad that the Honourable Speaker strongly condemned the Emergency, highlighted the excesses committed during that time and also mentioned the manner in which democracy was strangled. It was also a wonderful gesture to stand in silence in honour of all those who suffered…
— Narendra Modi (@narendramodi) June 26, 2024