Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಾಡಾಸನ ಯೋಗ ಭಂಗಿಯ ವೀಡಿಯೊ ಕ್ಲಿಪ್ ಹಂಚಿಕೊಂಡ ಪ್ರಧಾನ ಮಂತ್ರಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಾಡಾಸನ ಅಥವಾ ತಾಳೆ ಮರದ ಯೋಗ ಭಂಗಿಯ ವೀಡಿಯೊ ಕ್ಲಿಪ್ ಪೋಸ್ಟ್ ಮಾಡಿದ್ದಾರೆ.

ಜೂನ್ 21ರಂದು ನಡೆಯಲಿರುವ 10ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಹಂಚಿಕೊಳ್ಳಲಾದ ಕ್ಲಿಪ್ ನಲ್ಲಿ, ತಾಡಾಸನದಿಂದ ಇರುವ ಆರೋಗ್ಯ ಪ್ರಯೋಜನಗಳು ಮತ್ತು ನಿಂತಿರುವ ಅಥವಾ ಪರ್ವತ ಭಂಗಿ ಅಥವಾ ಸಮಸ್ಥಿ ಆಸನ ಅಭ್ಯಾಸ ಮಾಡುವ ಅಥವಾ ಪ್ರದರ್ಶಿಸುವ ವಿವಿಧ ಹಂತಗಳನ್ನು ವಿವರಿಸಲಾಗಿದೆ.

ಪ್ರಧಾನ ಮಂತ್ರಿ ಈ ಕುರಿತು “ಎಕ್ಸ್”ನಲ್ಲಿ ಪೋಸ್ಟ್ ಮಾಡಿದ್ದು;

“ತಾಡಾಸನ ಭಂಗಿಯು ದೇಹಕ್ಕೆ ತುಂಬಾ ಒಳ್ಳೆಯದು. ಇದು ಹೆಚ್ಚು ಶಕ್ತಿ ಮತ್ತು ದೇಹದ ಅಂಗಾಂಗಗಳು ಮತ್ತು ನರಮಂಡಲದ ಉತ್ತಮ ಜೋಡಣೆಯನ್ನು ಖಚಿತಪಡಿಸುತ್ತದೆ” ಎಂದಿದ್ದಾರೆ.
  
 

 

*****