Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಾಂಜೇನಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ

ತಾಂಜೇನಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ


ಘನತೆವೆತ್ತ ಅಧ್ಯಕ್ಷರಾದ ಜಾನ್ ಮಗುಫುಲಿ ಅವರೇ,
ಮಾಧ್ಯಮದ ಸದಸ್ಯರೇ,
ಘನತೆವೆತ್ತರೇ ನಿಮ್ಮ ಆತ್ಮೀಯ ಸ್ವಾಗತದ ಮಾತುಗಳಿಗೆ ಧನ್ಯವಾದಗಳು.

ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕೆ ನಾನು ಆಭಾರಿ.

ನಾನಿಂದು ನಾಲ್ಕು ಆಫ್ರಿಕಾ ದೇಶಗಳ ನನ್ನ ಪ್ರವಾಸದ ನಾಲ್ಕನೇ ದಿನದಲ್ಲಿದ್ದೇನೆ, ನಾನಿಂದ ರಚನಾತ್ಮಕ ದರ್ ಏಸ್ ಸಲಾಂನಲ್ಲಿರುವುದು ನನಗೆ ಆನಂದ ತಂದಿವೆ. ಘನತೆವೆತ್ತರೇ, ನೀವು ಈಗಷ್ಟೇ ಹೇಳಿದ ನಮ್ಮ ಸಂಬಂಧದ ಬಲ ಮತ್ತು ಭವಿಷ್ಯದ ಸಾಮರ್ಥ್ಯ ಕುರಿತ ವಿಚಾರಕ್ಕೆ ನನ್ನ ಒಪ್ಪಿಗೆ ಇದೆ.

ಸ್ನೇಹಿತರೇ,

ಆಫ್ರಿಕಾದ ಪೂರ್ವ ಕರಾವಳಿ ಮತ್ತು ಅದರಲ್ಲೂ ತಾಂಜೇನಿಯಾ  ಭಾರತದೊಂದಿಗೆ ಬಲವಾದ ನಂಟು ಹೊಂದಿವೆ. ನಾವು ಹಳೆಯ ಕರಾವಳಿಯ ನೆರೆಯವರು. ನಮ್ಮ ನಾಯಕರು ಮತ್ತು ನಮ್ಮ ಜನತೆ ವಸಾಹತುಶಾಯಿಯ ಮತ್ತು ಜನಾಂಗೀಯತೆಯ ವಿರುದ್ಧ ಒಟ್ಟಾಗಿ ಹೋರಾಡಿದ್ದಾರೆ.

19ನೇ ಶತಮಾನದ ಆರಂಭದಿಂದಲೇ ನಮ್ಮ ವ್ಯಾಪಾರಿಗಳು ವಾಣಿಜ್ಯ ನಡೆಸಿದ್ದಾರೆ. ಮತ್ತು ಹಿಂದೂ ಮಹಾಸಾಗರದ ವಿಶಾಲ ತೀರ ನಮ್ಮ ಸಮಾಜ ಮತ್ತು ಜನರನ್ನು ಬೆಸೆದಿದೆ.

ಸ್ನೇಹಿತರೇ,

ಭಾನುವಾರ ನನ್ನ ಭೇಟಿಗೆ ಒಪ್ಪಿಕೊಂಡಿದ್ದಕ್ಕಾಗಿ ನಾನು ಅಧ್ಯಕ್ಷ ಮಗುಫುಲಿ ಅವರಿಗೆ ಆಭಾರಿಯಾಗಿದ್ದೇನೆ. ಇದು ಅವರ ಹಪ ಕಜಿ ತು”, ಅಂದರೆ ಇಲ್ಲಿ ಕಾಯಕ ಮಾತ್ರ ಎಂಬ ಉದ್ದೇಶಕ್ಕೆ ಸಲ್ಲಿಸಿದ ಗೌರವವಾಗಿದೆ.

ಅಧ್ಯಕ್ಷ ಮಗುಫುಲಿ ಅವರಿಗೆ ದೇಶ ಕಟ್ಟುವ, ಅಭಿವೃದ್ಧಿ ಮತ್ತು ಕೈಗಾರಿಕೀಕರಣದ ನೋಟವಿದೆ ಇದೇ ನೋಟ ಭಾರತದಲ್ಲಿ ನನ್ನ ಕನಸೂ ಆಗಿದೆ.

ಸ್ನೇಹಿತರೆ,

ಭಾರತವು ಈಗಾಗಲೇ ತಾಂಜೇನಿಯಾದ ಗಣನೀಯ ಆರ್ಥಿಕ ಪಾಲುದಾರ ರಾಷ್ಟ್ರವಾಗಿದೆ. ನಮ್ಮ ಸರ್ವ ಶ್ರೇಣಿಯ ಆರ್ಥಿಕ ಸಂಬಂಧಗಲು ಆರೋಗ್ಯಪೂರ್ಣ ಮತ್ತು ಮೇಲ್ಮುಖವಾಗಿವೆ.

• ನಮ್ಮ ದ್ವಿಮುಖ ವಾರ್ಷಿಕ ವ್ಯಾಪಾರ 3 ಶತಕೋಟಿ ಅಮೆರಿಕನ್ ಡಾಲರ್ ಆಗಿದೆ.

• ತಾಂಜೇನಿಯಾದಲ್ಲಿ ಭಾರತದ ಹೂಡಿಕೆ ಈಗಾಗಲೇ 3 ಶತಕೋಟಿ ಡಾಲರ್ ದಾಟಿದೆ ಮತ್ತು

• ತಾಂಜೇನಿಯಾದಲ್ಲಿ ಭಾರತದ ವ್ಯಾಪಾರ ಮುಂದುವರಿಯುತ್ತದೆ ಮತ್ತು ವಿಸ್ತಾರವಾಗುತ್ತದೆ.

ತಾಂಜೇನಿಯಾದ ಅಭಿವೃದ್ಧಿಯ ಆದ್ಯತೆಯನ್ನು ಪೂರೈಸುವಲ್ಲಿ ನಾವು ವಿಶ್ವಾಸಾರ್ಹ ಪಾಲುದಾರರು ಎಂಬುದಕ್ಕೆ ನಾವು  ಹೆಮ್ಮೆ ಎಂದು ಪರಿಗಣಿಸುತ್ತೇವೆ.

ಇಂದು, ಅಧ್ಯಕ್ಷ ಮಗುಫುಲಿ ಮತ್ತು ನಾನು ನಮ್ಮ ಪಾಲುದಾರಿಕೆಯ ಸಂಪೂರ್ಣ ಆಯಾಮಗಳ ಬಗ್ಗೆ ಸವಿವರವಾದ ಮಾತುಕತೆ ನಡೆಸಿದ್ದೇವೆ.

ನಮ್ಮ ಗಮನ ಕ್ರಮ ಆಧಾರಿತ ಕಾರ್ಯಕ್ರಮದ ಸಹಕಾರ ರೂಪಿಸುವುದಾಗಿತ್ತು. ನಾವು ಹೀಗಾಗಿ ಸಾಮರ್ಥ್ಯದ ಬಗ್ಗೆ ಕಡಿಮೆ ಮತ್ತು ಸಾಧನೆಯ ನೆಲೆಯಲ್ಲಿ ಹೆಚ್ಚಿನ ಮಾತುಕತೆ ನಡೆಸಿದೆವು.

ನಮ್ಮ ಸಮಾಜದ ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ನಮ್ಮ ಸಮಾನ ಆಕಾಂಕ್ಷೆಗಳು ನಮ್ಮ ಸಹಕಾರ ವಿಸ್ತರಣೆಗೆ ಹೊಸ ಅವಕಾಶ ಒದಗಿಸುತ್ತಿವೆ.

ಇದಕ್ಕಾಗಿ ನಾವಿಬ್ಬರೂ ಈ ಕೆಳಗಿನ ಅಗತ್ಯಗಳು ಬೇಕೆಂದು ಅಭಿಪ್ರಾಯಪಟ್ಟಿದ್ದೇವೆ:

ಒಂದನೆಯದು, ತಾಂಜೇನಿಯಾದಿಂದ ಭಾರತಕ್ಕೆ ಬೇಳೆಕಾಳುಗಳ ರಫ್ತು ಹೆಚ್ಚಿಸುವುದೂ ಸೇರಿದಂತೆ ಕೃಷಿ ಮತ್ತು ಆಹಾರ ಭದ್ರತೆಯಲ್ಲಿ ಪಾಲುದಾರಿಕೆಯ ಹೆಚ್ಚಳ.

• ಎರಡನೆಯದು ನೈಸರ್ಗಿಕ ಅನಿಲಗಳ ಅಭಿವೃದ್ಧಿ ಮತ್ತು ಬಳಕೆಗೆ ಒಗ್ಗೂಡಿ ಶ್ರಮಿಸುವುದು.

ಮೂರು, ತಾಂಜೇನಿಯಾದಲ್ಲಿ ಕೈಗಾರಿಕಾ ಆರ್ಥಿಕತೆ, ಸಾಮರ್ಥ್ಯ ಮತ್ತು ಸಂಸ್ಥೆಗಳ ನಿರ್ಮಾಣದಲ್ಲಿ ಪಾಲುದಾರಿಕೆ. ಮತ್ತು

ನಾಲ್ಕನೆಯದು, ಕೈಗಾರಿಕೆಯಿಂದ ಕೈಗಾರಿಕೆಗಳ ಸಂಬಂಧದೊಂದಿಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ನಮ್ಮ ವಾಣಿಜ್ಯ ಮತ್ತು ಹೂಡಿಕೆ ಪಾಲುದಾರಿಕೆಯನ್ನು ಹೆಚ್ಚಿಸುವುದು

ಸ್ನೇಹಿತರೇ,

ಅಭಿವೃದ್ಧಿಶೀಲ ರಾಷ್ಟ್ರವಾಗಿ ಭಾರತ ನಮ್ಮ ಜನರ ಜೀವನ ಸುಧಾರಿಸುವ ತುರ್ತು ಅಗತ್ಯವನ್ನು ಮನಗಂಡಿದೆ.

ಮತ್ತು ಒಬ್ಬ ಗೆಳೆಯನಾಗಿ, ನಿಮ್ಮ ಜನರಿಗಾಗಿ ನೀವು ಏನನ್ನು ಸಾಧಿಸಲು ಬಯಸುತ್ತೀರೋ ನಾವು ಆ ಪ್ರಯತ್ನಗಳ ಬಗ್ಗೆ ಗಮನ ಹರಿಸಿದ್ದೇವೆ.

ಈ ನಿಟ್ಟಿನಲ್ಲಿ, ದರ್ ಏಸ್ ಸಲಾಂಗೆ 100 ದಶಲಕ್ಷ ಡಾಲರ್ ನೀರು ಪೂರೈಕೆ ಯೋಜನೆ ಒಂದು ಉತ್ತಮ ಸಾಧನೆ.

ನಾವು ಈಗಷ್ಟೇ ಜಾಂಜಿಬರ್ ಗೆ ಸಹ ನೀರು ಪೂರೈಕೆ ಮಾಡುವ 92 ದಶಲಕ್ಷ ಕ್ರೆಡಿಟ್ ಲೈನ್ ನ ಯೋಜನೆಗೆ ಅಂಕಿತ ಹಾಕಿದ್ದೇವೆ. ಅಲ್ಲದೆ ಇತರ 17 ನಗರಗಳಲ್ಲಿ ಕೂಡ ನೀರಿನ ಯೋಜನೆಗಳ ಬಗ್ಗೆ ಕ್ರಿಯಾಶೀಲರಾಗಿದ್ದೇವೆ. ಮತ್ತು ಇದಕ್ಕಾಗಿ ಭಾರತ ಹೆಚ್ಚುವರಿಯಾಗಿ 500 ದಶಲಕ್ಷ ಡಾಲರ್ ರಿಯಾಯಿತಿಯ ಲೈನ್ ಆಫ್ ಕ್ರೆಡಿಟ್ ಪರಿಗಣಿಸುತ್ತಿದೆ. ಸಾರ್ವಜನಿಕ ಆರೋಗ್ಯ ನಮ್ಮ ಮತ್ತೊಂದು ಮಹತ್ವದ ಮಾತುಕತೆಯ ಕ್ಷೇತ್ರವಾಗಿತ್ತು.

ನಾವು ಈಗಾಗಲೇ ಔಷಧಗಳ ಮತ್ತು ಸಲಕರಣೆಗಳ ಪೂರೈಕೆಯೊಂದಿಗೆ ತಾಂಜೇನಿಯಾ ಸರ್ಕಾರದ  ಆರೋಗ್ಯ ಸೇವೆಗಳಿಗೆ ಆದ್ಯತೆಯನ್ನು ಪೂರೈಸಿದ್ದೇವೆ.  ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬುಗಂಡೋ ವೈದ್ಯಕೀಯ ಕೇಂದ್ರದಲ್ಲಿ ಭಾರತದ ರೇಡಿಯೋ ಥೆರಪಿ ಯಂತ್ರವನ್ನು ಅಳವಡಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.

ಶಿಕ್ಷಣ, ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಮ್ಮ ಇತರ ಆದ್ಯತೆಯ ಕ್ಷೇತ್ರಗಳಾಗಿವೆ ಮತ್ತು ಇದಲ್ಲದಕ್ಕೂ ಭಾರತ ಅಗತ್ಯ ನೆರವು ನೀಡಲು ಇಚ್ಛಿಸುತ್ತದೆ.

ಅರುಶಾದ ನೆಲ್ಸನ್ ಮಂಡೇಲಾ ಆಫ್ರಿಕನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಐ.ಟಿ. ಸಂಪನ್ಮೂಲಕೇಂದ್ರ ಮುಕ್ತಾಯದ ಹಂತದಲ್ಲಿದೆ ಎಂಬುದು ನನಗೆ ತಿಳಿದಿದೆ.

ತಾಂಜೇನಿಯಾದೊಂದಿಗೆ ಭಾರತದ ಸಹಕಾರ ಸದಾ ನಿಮ್ಮ ಅಗತ್ಯ ಮತ್ತು ಆದ್ಯತೆಗನುಗುಣವಾಗಿದೆ.

ಸ್ನೇಹಿತರೆ,

ಹಿಂದೂ ಮಹಾಸಾಗರದ ನೆರೆಯವರಾಗಿ, ಅಧ್ಯಕ್ಷರು ಮತ್ತು ನಾನು ನಮ್ಮ ರಕ್ಷಣೆ ಮತ್ತು ಭದ್ರತೆಯ ಅದರಲ್ಲೂ ಕರಾವಳಿಯಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ನಿರ್ಧರಿಸಿದ್ದೇವೆ.

ನಮ್ಮ ಆಳವಾದ ಚರ್ಚೆಯಲ್ಲಿ ಸಮಾನ ಆಸಕ್ತಿ ಮತ್ತು ಕಳಕಳಿಗೆ ಸಂಬಂಧಿಸಿದ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳೂ ಬಿಂಬಿತವಾದವು.

ನಾವು ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂಥ ಎರಡು ಭೀತಿಗಳ ವಿರುದ್ಧ ಸೆಣೆಸಲು ಇನ್ನಷ್ಟು ನಿಕಟವಾಗಿ, ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಶ್ರಮಿಸಲು ಒಪ್ಪಿದ್ದೇವೆ.
ಪ್ಯಾರಿಸ್ ನಲ್ಲಿ ನಡೆದ ಕಾಪ್ 21ರಲ್ಲಿ ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಭಾರತ ಅಂತಾರಾಷ್ಟ್ರೀಯ ಸೌರ ಸಹಯೋಗದ ಪ್ರಯತ್ನ ಮಾಡಿತು. ಈ ಸಹಯೋಗದಲ್ಲಿ 120 ರಾಷ್ಟ್ರಗಳ ಬೆಂಬಲವಿದೆ. ಇದರಲ್ಲಿ ಮಹತ್ವದ ಪಾಲುದಾರಿಕೆಯಲ್ಲಿ ತಾಂಜೇನಿಯಾವನ್ನು ನಾವು ಸ್ವಾಗತಿಸುತ್ತೇವೆ.

ಸ್ನೇಹಿತರೇ,

ತಾಂಜೇನಿಯಾದ ಎಲ್ಲ ಅಧ್ಯಕ್ಷರನ್ನೂ ಭಾರತದಲ್ಲಿ ಬರಮಾಡಿಕೊಳ್ಳುವ ಹೆಮ್ಮ ಇದೆ. ನಾನು ಅಧ್ಯಕ್ಷ ಮಗುಫುಲಿ ಅವರನ್ನು ಆದಷ್ಟು ಬೇಗ ದೊರಕುವ ಅವಕಾಶದಲ್ಲಿ  ಭಾರತದಲ್ಲಿ ಬರಮಾಡಿಕೊಳ್ಳಲು ಕಾತರಿಸುತ್ತೇನೆ.  ಕೊನೆಯಲ್ಲಿ ನಾನು, ಘನತೆವೆತ್ತ ಅಧ್ಯಕ್ಷರಿಗೆ ನಿಮ್ಮ ಆತ್ಮೀಯ ಸ್ವಾಗತ ಮತ್ತು ಗೆಳೆತನಕ್ಕೆ ಧನ್ಯವಾದ ಅರ್ಪಿಸುತ್ತೇನೆ.
ಧನ್ಯವಾದಗಳು,

ಥ್ಯಾಂಕ್ಯೂ ವೆರಿ ಮಚ್.