Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮ್ಮ ಜನ್ಮದಿನದಂದು ಶುಭಾಶಯಗಳನ್ನು ಹಂಚಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಮಂತ್ರಿ 


ತಮ್ಮ ಜನ್ಮದಿನದಂದು ಶುಭಾಶಯಗಳನ್ನು ಹಂಚಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಪ್ರಪಂಚದಾದ್ಯಂತದಿಂದ ಹರಿದುಬಂದ ಶುಭಾಶಯಗಳ ಮಹಾಪೂರದಿಂದ ಅವರು ಆಳವಾಗಿ ಸ್ಪರ್ಶಿಸಲ್ಪಟ್ಟಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ನೀಡಿದ್ದಾರೆ;

“ಭಾರತ ಮತ್ತು ಪ್ರಪಂಚದಾದ್ಯಂತದಿಂದ ಹರಿದುಬಂದ ಶುಭಾಶಯಗಳ ಮಹಾಪೂರದಿಂದ ನಾನು ಆಳವಾಗಿ ಸ್ಪರ್ಶಿಸಲ್ಪಟ್ಟಿದ್ದೇನೆ. ಶುಭಾಶಯಗಳನ್ನು ಹಂಚಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ.

ಈ ದಿನದಂದು ನಿಸ್ವಾರ್ಥ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಹಲವಾರು ಮಂದಿಯನ್ನು ಕಂಡು ಭಾವುಕನಾಗಿದ್ದೇನೆ. ಪ್ರತಿಯೊಂದು ಪ್ರಕ್ರಿಯೆಗಳೂ ವಿಶೇಷ ಹಾಗೂ ಅನನ್ಯವಾಗಿದೆ. ಇವುಗಳು ನಮ್ಮ ಸಾಮೂಹಿಕ ಮನೋಭಾವವನ್ನು ಇನ್ನಷ್ಟು ಬಲಪಡಿಸುತ್ತವೆ.”

***