Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮ್ಮ ಗಾರ್ಬಾ ಹಾಡಿನ ನಿರೂಪಣೆಗಾಗಿ ಕಲಾವಿದರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಹೇಳಿದ್ದಾರೆ.


ತಾವು ವರ್ಷಗಳ ಹಿಂದೆ ಬರೆದ ಗರ್ಬಾ ಹಾಡನ್ನು ಸಂಗೀತ ಬಳಸಿ ನಿರೂಪಿಸಿದ ಕಲಾವಿದರಾದ ಧ್ವನಿ ಭಾನುಶಾಲಿ, ತನಿಷ್ಕ್ ಬಾಗ್ಚಿ ಮತ್ತು ಜುಸ್ಟ್ ಮ್ಯೂಸಿಕ್ ತಂಡಕ್ಕೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದ ಸಲ್ಲಿಸಿದರು. ಮುಂಬರುವ ನವರಾತ್ರಿಯಲ್ಲಿ ಹೊಸ ಗರ್ಬಾವನ್ನು ಹಂಚಿಕೊಳ್ಳುವುದಾಗಿ ಅವರು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:  

“ವರ್ಷಗಳ ಹಿಂದೆ ನಾನು ಬರೆದ ಗರ್ಬಾ ಹಾಡಿಗೆ ನೀಡಿದ ಸುಂದರ ಸಂಗೀತ ನಿರೂಪಣೆಗಾಗಿ @ಧ್ವನಿವಿನೋದ್ ( @dhvanivinod ), ತನಿಷ್ಕ್ ಬಾಗ್ಚಿ ಮತ್ತು @ಜಸ್ಟ್_ಮ್ಯೂಸಿಕ್ ( @Jjust_Music ) ತಂಡಕ್ಕೆ ಧನ್ಯವಾದಗಳು. ಕಳೆದ ಹಲು ವರ್ಷಗಳಿಂದ ಗರ್ಬಾ ಹಾಡು ಬರೆಯಲು ಸಾಧ್ಯವಾಗಲಿಲ್ಲ, ಆದರೆ ಕೆಲವು ದಿನಗಳಿಂದ ಗರ್ಬಾ ಹಾಡು ಬರೆದಿದ್ದೇನೆ, ನವರಾತ್ರಿಯಲ್ಲಿ ನಾನು ಹಂಚಿಕೊಳ್ಳುತ್ತೇನೆ. #ಸೌಲ್  ಫುಲ್ ಗರ್ಬಾ ( #SoulfulGarba )”