Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳು ಶ್ರೇಷ್ಠ ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ತಮಿಳು ಶ್ರೇಷ್ಠ ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಂಬರ್ 7 ನಿವಾಸದಲ್ಲಿ ತಮಿಳು ಮಹಾನ್ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಮಗ್ರ ಕೃತಿಗಳ ಸಂಕಲನ ಬಿಡುಗಡೆ ಮಾಡಿದರು. ತಮಿಳಿನ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ ಅವರು, ಭಾರತದ ಸಂಸ್ಕೃತಿ ಮತ್ತು ಸಾಹಿತ್ಯ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮತ್ತು ತಮಿಳುನಾಡಿನ ಹೆಮ್ಮೆಗೆ ಇಂದು ಉತ್ತಮ ಅವಕಾಶವಾಗಿದೆ. ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಕೃತಿಗಳ ಪ್ರಕಟಣೆಯ ಮಹಾಪೂರವೇ ಇಂದು ನೆರವೇರಿತು ಎಂದರು.

21 ಸಂಪುಟಗಳಲ್ಲಿ ‘ಕಾಲ ವರಿಸೈಯಿಲ್ ಭಾರತಿಯಾರ್ ಪದೈಪ್ಪುಗಳು’ ಸಂಕಲನಕ್ಕಾಗಿ ನಡೆಸಿದ 6 ದಶಕಗಳ ಅಸಾಧಾರಣ, ಅಭೂತಪೂರ್ವ ಮತ್ತು ದಣಿವರಿಯದ ಕೆಲಸವನ್ನು ಪ್ರಧಾನಿ ಶ್ಲಾಘಿಸಿದರು. ಸೀನಿ ವಿಶ್ವನಾಥನ್ ಜೀ ಅವರ ಕಠಿಣ ಪರಿಶ್ರಮವೇ ಅಂತಹ ತಪಸ್ಸಿಗೆ ಕಾರಣವಾಗಿದೆ. ಇದು ಮುಂದಿನ ಪೀಳಿಗೆಗೆ ಅನೇಕ ಪ್ರಯೋಜನ ನೀಡುತ್ತದೆ. ಶ್ರೀ ವಿಶ್ವನಾಥನ್ ಅವರ ತಪಸ್ಸು ಧರ್ಮಶಾಸ್ತ್ರದ ಇತಿಹಾಸ ಬರೆಯುವಲ್ಲಿ ತಮ್ಮ ಜೀವನದ 35 ವರ್ಷಗಳನ್ನು ಕಳೆದ ಮಹಾ-ಮಹೋಪಾಧ್ಯಾಯ ಪಾಂಡುರಂಗ ವಾಮನ್ ಕೇನ್ ಅವರನ್ನು ನೆನಪಿಸಿದೆ, ಶ್ರೀ ಸೀನಿ ವಿಶ್ವನಾಥನ್ ಅವರ ಕಾರ್ಯವು ಶೈಕ್ಷಣಿಕ ಜಗತ್ತಿನಲ್ಲಿ ಒಂದು ಮಾನದಂಡವಾಗಲಿದೆ. ಅವರ ಮೂಲ ಕಾರ್ಯಕ್ಕಾಗಿ ಅವರನ್ನು ಮತ್ತು ಅವರ ಸಹೋದ್ಯೋಗಿಗಳನ್ನು ಅಭಿನಂದಿಸಿದರು.

‘ಕಾಲ ವರಿಸೈಯಿಲ್ ಭಾರತಿ ಪದೈಪ್ಪುಗಳು’ ಅನ್ನು ಉಲ್ಲೇಖಿಸಿದ ಪ್ರಧಾನಿ, ಈ ಸಂಪುಟವು ಕೇವಲ ಭಾರತಿ ಜಿ ಅವರ ಕೃತಿಗಳಾಗದೆ, ಇದು ಅವರ ಸಾಹಿತ್ಯ ಅಥವಾ ಸಾಹಿತ್ಯ ಪಯಣದ ಬಗ್ಗೆ ಒಳನೋಟಗಳ ಮಾಹಿತಿ ಮತ್ತು ಅವರ ರಚನೆಗಳ ಆಳವಾದ ತಾತ್ವಿಕ ವಿಶ್ಲೇಷಣೆಯನ್ನು ಒಳಗೊಂಡಿದೆ. ಪ್ರತಿಯೊಂದು ಸಂಪುಟವು ವ್ಯಾಖ್ಯಾನ, ವಿವರಣೆಗಳು ಮತ್ತು ವಿವರವಾದ ಟಿಪ್ಪಣಿಗಳನ್ನು ಒಳಗೊಂಡಿದೆ. “ಭಾರತೀ ಜಿ ಅವರ ಆಲೋಚನೆಗಳ ಆಳವನ್ನು ಅರ್ಥ ಮಾಡಿಕೊಳ್ಳಲು ಈ ಆವೃತ್ತಿಯು ಸಂಶೋಧನಾ ವಿದ್ವಾಂಸರು ಮತ್ತು ಬುದ್ಧಿಜೀವಿಗಳಿಗೆ ಅವರು ಸೇರಿದ್ದ ಕಾಲದ ದೃಷ್ಟಿಕೋನವನ್ನು ನೀಡುವಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ.”

ಗೀತಾ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಪ್ರಧಾನ ಮಂತ್ರಿ, ಶ್ರೀ ಸುಬ್ರಹ್ಮಣ್ಯ ಭಾರತಿ ಅವರಿಗೆ ಗೀತೆಯ ಬೋಧನೆಗಳಲ್ಲಿ ಆಳವಾದ ನಂಬಿಕೆ ಮತ್ತು ಅದರ ಬುದ್ಧಿವಂತಿಕೆಯ ಬಗ್ಗೆ ಅಷ್ಟೇ ಆಳವಾದ ತಿಳುವಳಿಕೆ ಇತ್ತು. “ಅವರು ಗೀತಾವನ್ನು ತಮಿಳಿಗೆ ಭಾಷಾಂತರಿಸಿದರು, ಅದರ ಆಳವಾದ ಸಂದೇಶದ ಸರಳ ಮತ್ತು ಪ್ರವೇಶಿಸಬಹುದಾದ ವ್ಯಾಖ್ಯಾನ ಒದಗಿಸಿದರು”. ಗೀತಾ ಜಯಂತಿಯ ಸಂದರ್ಭ, ಸುಬ್ರಹ್ಮಣ್ಯ ಭಾರತಿ ಜಿ ಅವರ ಜನ್ಮದಿನ ಮತ್ತು ಅವರ ಕೃತಿಗಳ ಪ್ರಕಟಣೆಯು ಸಂಗಮಕ್ಕಿಂತ ಕಡಿಮೆಯಿಲ್ಲ, ಅದು ‘ತ್ರಿವೇಣಿ’ಗೆ ಹೋಲುತ್ತದೆ.

ಭಾರತೀಯ ತತ್ತ್ವಶಾಸ್ತ್ರದ ‘ಶಬ್ದ ಬ್ರಹ್ಮ’ ಪರಿಕಲ್ಪನೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಭಾರತವು ಯಾವಾಗಲೂ ಪದಗಳನ್ನು ಅಭಿವ್ಯಕ್ತಿಯ ಮಾಧ್ಯಮಕ್ಕಿಂತ ಹೆಚ್ಚಾಗಿ ಪರಿಗಣಿಸುತ್ತದೆ, ಅವುಗಳ ಮಿತಿಯಿಲ್ಲದ ಶಕ್ತಿಯನ್ನು ಎತ್ತಿ ತೋರಿಸುತ್ತದೆ. “ಋಷಿಗಳು ಮತ್ತು ಚಿಂತಕರ ಮಾತುಗಳು ಅವರ ಚಿಂತನೆಗಳು, ಅನುಭವಗಳು ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಸಾರವನ್ನು ಪ್ರತಿಬಿಂಬಿಸುತ್ತವೆ, ಅವುಗಳನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ.” ಮಹತ್ವದ ಕೃತಿಗಳನ್ನು ರಚಿಸುವ ಈ ಸಂಪ್ರದಾಯ ಇಂದಿಗೂ ಪ್ರಸ್ತುತವಾಗಿದೆ. ಉದಾಹರಣೆಗೆ, ಪುರಾಣಗಳಲ್ಲಿ ವ್ಯವಸ್ಥಿತವಾಗಿ ಸಂರಕ್ಷಿಸಲ್ಪಟ್ಟಿರುವ ಮಹರ್ಷಿ ವ್ಯಾಸರ ಬರಹಗಳು ಈಗಲೂ ಪ್ರತಿಧ್ವನಿಸುತ್ತವೆ. ಕೆಲವು ಉದಾಹರಣೆಗಳನ್ನು ಪ್ರಸ್ತಾಪಿಸಿದ ಅವರು, ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು ಮತ್ತು ದೀನ್ ದಯಾಳ್ ಉಪಾಧ್ಯಾಯ ಅವರ ಸಂಪೂರ್ಣ ಕೃತಿಗಳು ಸಮಾಜ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿವೆ. ತಿರುಕ್ಕುರಲ್ ಅನ್ನು ಬಹು ಭಾಷೆಗಳಿಗೆ ಭಾಷಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ, ಇದು ತನ್ನ ಸಾಹಿತ್ಯಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಭಾರತದ ಸಮರ್ಪಣೆಗೆ ಉದಾಹರಣೆಯಾಗಿದೆ. ಪಪುವಾ ನ್ಯೂಗಿನಿಯಾ ಭೇಟಿಯ ಸಮಯದಲ್ಲಿ ಟೋಕ್ ಪಿಸಿನ್‌ನಲ್ಲಿ ತಿರುಕ್ಕುರಲ್ ಗುಜರಾತಿ ಅನುವಾದವನ್ನು ಬಿಡುಗಡೆ ಮಾಡುವ ಅವಕಾಶ ಸಿಕ್ಕಿತು ಎಂದರು.

ಸುಬ್ರಮಣ್ಯ ಭಾರತಿ ಅವರು ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ ಮಹಾನ್ ಚಿಂತಕ ಎಂದು ಶ್ಲಾಘಿಸಿದ ಶ್ರೀ ಮೋದಿ, ಅವರು ಆ ಸಮಯದಲ್ಲಿ ದೇಶಕ್ಕೆ ಅಗತ್ಯವಿರುವ ಪ್ರತಿಯೊಂದು ದಿಕ್ಕಿನಲ್ಲಿಯೂ ಕೆಲಸ ಮಾಡಿದರು. ಭಾರತಿಯಾರ್ ಕೇವಲ ತಮಿಳುನಾಡು ಮತ್ತು ತಮಿಳು ಭಾಷೆಯ ಪರಂಪರೆಯಲ್ಲ, ಆದರೆ ಅವರ ಭಾರತ ಉದಯದ ಪ್ರತಿ ಉಸಿರು ಮತ್ತು ಹೆಮ್ಮೆಯ ಕನಸು ಕಂಡ ಭಾರತ ಮಾತೆಯ ಸೇವೆಗೆ ಮುಡಿಪಾಗಿರುವ ಚಿಂತಕ. ಭಾರತಿಯಾರ್ ಜಿ ಅವರ ಕೊಡುಗೆಯನ್ನು ಜನರಿಗೆ ತಲುಪಿಸಲು ಸರ್ಕಾರವು ಕರ್ತವ್ಯ ಪ್ರಜ್ಞೆಯಿಂದ ನಿರಂತರವಾಗಿ ಕೆಲಸ ಮಾಡಿದೆ. 2020ರಲ್ಲಿ, ಇಡೀ ಜಗತ್ತು ಕೋವಿಡ್ ಸಾಂಕ್ರಾಮಿಕದಿಂದ ಪ್ರಭಾವಿತವಾಗಿದ್ದರೂ, ಸರ್ಕಾರವು ಸುಬ್ರಮಣ್ಯ ಭಾರತಿಯ 100ನೇ ಪುಣ್ಯತಿಥಿಯ ಆಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ನಡೆಸಿತು. ನಾನು ಅಂತಾರಾಷ್ಟ್ರೀಯ ಭಾರತಿ ಉತ್ಸವದ ಭಾಗವಾಗಿದ್ದೆ. ಭಾರತ ಮತ್ತು ವಿದೇಶಗಳಲ್ಲಿ ಮಹಾಕವಿ ಭಾರತಿ ಚಿಂತನೆಗಳ ಮೂಲಕ ಅವರು ಭಾರತದ ದೃಷ್ಟಿಕೋನವನ್ನು ನಿರಂತರವಾಗಿ ಜಗತ್ತಿಗೆ ಪ್ರಸ್ತುತಪಡಿಸಿದ್ದಾರೆ. ಕಾಶಿಯು ತನ್ನ ಮತ್ತು ಸುಬ್ರಮಣ್ಯ ಭಾರತಿ ನಡುವಿನ ಜೀವಂತ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಅವರು ಕಳೆದ ಸಮಯ ಮತ್ತು ಸಂಬಂಧವು ಕಾಶಿಯ ಪರಂಪರೆಯ ಭಾಗವಾಗಿದೆ. ಶ್ರೀ ಭಾರತಿಯವರು ಜ್ಞಾನ ಪಡೆಯಲು ಕಾಶಿಗೆ ಬಂದರು, ಶಾಶ್ವತವಾಗಿ ಅಲ್ಲಿಯೇ ನೆಲೆಸಿದರು. ಅವರ ಕುಟುಂಬದ ಅನೇಕ ಸದಸ್ಯರು ಇನ್ನೂ ಕಾಶಿಯಲ್ಲಿ ವಾಸಿಸುತ್ತಿದ್ದಾರೆ. ಕಾಶಿಯಲ್ಲಿ ವಾಸವಾಗಿದ್ದಾಗ ತಮ್ಮ ಭವ್ಯವಾದ ಮೀಸೆಯನ್ನು ಅಲಂಕರಿಸಲು ಭಾರತಿಯಾರ್ ಪ್ರೇರೇಪಿತರಾಗಿದ್ದರು, ಕಾಶಿಯಲ್ಲಿ ವಾಸಿಸುತ್ತಿದ್ದಾಗ ಭಾರತಿಯಾರ್ ಅವರ ಅನೇಕ ಕೃತಿಗಳನ್ನು ಬರೆದಿದ್ದಾರೆ. ವಾರಾಣಸಿಯ ಸಂಸದರಾಗಿರುವ ಪ್ರಧಾನಿ ಅವರು ಈ ಪವಿತ್ರ ಕಾರ್ಯವನ್ನು ಸ್ವಾಗತಿಸಿದರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಭಾರತಿಯಾರ್ ಅವರ ಕೊಡುಗೆಗೆ ಮೀಸಲಾದ ಪೀಠವನ್ನು ಸ್ಥಾಪಿಸಿರುವುದು ಸರ್ಕಾರದ ಅದೃಷ್ಟ ಎಂದು ಹೇಳಿದರು.

ಪ್ರಸಿದ್ಧ ಕವಿ ಮತ್ತು ದಾರ್ಶನಿಕನಿಗೆ ಗೌರವ ಸಲ್ಲಿಸಿದ ಪ್ರಧಾನ ಮಂತ್ರಿ ಅವರು, ಭಾರತದ ಸಾಂಸ್ಕೃತಿಕ, ಬೌದ್ಧಿಕ ಮತ್ತು ಸಾಮಾಜಿಕ ರಚನೆಗೆ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಎತ್ತಿ ತೋರಿಸಿದರು. ಸುಬ್ರಮಣ್ಯ ಭಾರತಿ ಅವರು ಶತಮಾನಗಳಿಗೊಮ್ಮೆ ಈ ಜಗತ್ತನ್ನು ಅಲಂಕರಿಸಿದ ವ್ಯಕ್ತಿತ್ವ. ಕೇವಲ 39 ವರ್ಷಗಳ ಜೀವಿತಾವಧಿಯ ಹೊರತಾಗಿಯೂ, ಅವರು ನಮ್ಮ ರಾಷ್ಟ್ರದ ಮೇಲೆ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಶಕ್ತಿಯುತವಾದ ಮಾತುಗಳ ಮೂಲಕ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು ಮಾತ್ರವಲ್ಲದೆ, ಜನರ ಸಾಮೂಹಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು, ಇದು ಅವರು ಬರೆದ ದ್ವಿಪದಿಯಲ್ಲಿ ಆಳವಾಗಿ ಪ್ರತಿಫಲಿಸುತ್ತದೆ, ಅದು ಇಂದಿಗೂ ನಮ್ಮೊಂದಿಗೆ ಅನುರಣಿಸುತ್ತಿದೆ: “ಎಂದರು ತಣಿಯುಂ ಇಂದ ಸುಧಂಧಿರ ತ್ಯಾಗಂ” ?ಎಂದು ಮದಿಯುಂ ಎಂಗಲ್ ಆದಿಮಯಿನ್ ಮೊಗಂ?”, ಅಂದರೆ ಈ ಸ್ವಾತಂತ್ರ್ಯದ ದಾಹ ಯಾವಾಗ ತಣಿಯುತ್ತದೆ? ಜೀತದ ಮೇಲಿನ ನಮ್ಮ ವ್ಯಾಮೋಹ ಯಾವಾಗ ಕೊನೆಗೊಳ್ಳುತ್ತದೆ? ಪತ್ರಿಕೋದ್ಯಮ ಮತ್ತು ಸಾಹಿತ್ಯಕ್ಕೆ ಭಾರತಿ ಜಿಯವರ ಕೊಡುಗೆಗಳನ್ನು ಶ್ಲಾಘಿಸಿದ ಶ್ರೀ ಮೋದಿ, “ಭಾರತಿ ಜೀ ಅವರು 1906ರಲ್ಲಿ ಇಂಡಿಯಾ ವೀಕ್ಲಿ ಪ್ರಾರಂಭಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಕ್ರಾಂತಿ ಉಂಟು ಮಾಡಿದರು, ಇದು ರಾಜಕೀಯ ವ್ಯಂಗ್ಯಚಿತ್ರಗಳನ್ನು ಒಳಗೊಂಡ ಮೊದಲ ತಮಿಳು ಪತ್ರಿಕೆಯಾಗಿದೆ. ಕಣ್ಣನ್ ಪಾಟ್ಟು ಮುಂತಾದ ಅವರ ಕಾವ್ಯಗಳು ಅವರ ಆಳವಾದ ಆಧ್ಯಾತ್ಮಿಕತೆ ಮತ್ತು ನಿರ್ಲಕ್ಷಿತರ ಬಗ್ಗೆ ಆಳವಾದ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತದೆ. ಬಡವರಿಗೆ ಬಟ್ಟೆ ದೇಣಿಗೆಗಾಗಿ ಅವರ ಮನವಿಯು ಅವರ ಕೆಲಸವು ಹೇಗೆ ಕ್ರಿಯೆ ಮತ್ತು ಲೋಕೋಪಕಾರವನ್ನು ಪ್ರೇರೇಪಿಸಿತು ಎಂಬುದನ್ನು ತೋರಿಸುತ್ತದೆ. ಅವರನ್ನು ಸ್ಫೂರ್ತಿಯ ಶಾಶ್ವತ ಮೂಲ ಎಂದು ಕರೆದ ಶ್ರೀ ಮೋದಿ, ಅವರ ನಿರ್ಭೀತ ಸ್ಪಷ್ಟತೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಸಮಯಾತೀತ ದೃಷ್ಟಿಯನ್ನು ಶ್ಲಾಘಿಸಿದರು, ಅದು ಯಾವಾಗಲೂ ಸ್ವಾತಂತ್ರ್ಯ, ಸಮಾನತೆ ಮತ್ತು ಸಹಾನುಭೂತಿಗಾಗಿ ಶ್ರಮಿಸುವಂತೆ ಜನರನ್ನು ಒತ್ತಾಯಿಸುತ್ತದೆ ಎಂದರು.

ಶ್ರೀ ಭಾರತಿಯಾರ್ ಅವರು ದೂರದೃಷ್ಟಿಯುಳ್ಳ ವ್ಯಕ್ತಿ ಎಂದು ಶ್ಲಾಘಿಸಿದ ಪ್ರಧಾನ ಮಂತ್ರಿ, ಸಮಾಜವು ಸಂಕಷ್ಟಗಳಲ್ಲಿ ಸಿಲುಕಿರುವ ಸಮಯದಲ್ಲೂ ಭಾರತಿಯರ್ ಯುವಜನತೆ ಮತ್ತು ಮಹಿಳಾ ಸಬಲೀಕರಣದ ದೃಢವಾದ ಬೆಂಬಲಿಗರಾಗಿದ್ದರು,  ವಿಜ್ಞಾನ ಮತ್ತು ಆವಿಷ್ಕಾರಗಳಲ್ಲಿ ಅಪಾರ ನಂಬಿಕೆ ಹೊಂದಿದ್ದರು. ದೂರವನ್ನು ಕಡಿಮೆ ಮಾಡುವ ಮತ್ತು ಇಡೀ ದೇಶವನ್ನು ಸಂಪರ್ಕಿಸುವ ಸಂವಹನವನ್ನು ಭಾರತಿಯಾರ್ ಕಲ್ಪಿಸಿಕೊಂಡಿದ್ದರು. ಸುಬ್ರಹ್ಮಣ್ಯ ಭಾರತಿಯವರ ಸಾಲುಗಳನ್ನು ಹೇಳುತ್ತಾ, “”ಕಾಶಿ ನಗರ, ಪುಲವರ್ ಪೆಸುಂ, ಉರೈ ತಾನ್, ಕಂಚಿಯಿಲ್, ಕೇಟ್ಪಧರ್ಕೋರ್, ಕರುವಿ ಸೇವೋಂ’; ಅಂದರೆ ಕಂಚಿಯಲ್ಲಿ ಕುಳಿತುಕೊಂಡು ಬನಾರಸ್ ಸಂತರು ಹೇಳುವುದನ್ನು ಕೇಳುವ ಸಾಧನ ಇರಬೇಕು. ಭಾರತವನ್ನು ದಕ್ಷಿಣದಿಂದ ಉತ್ತರಕ್ಕೆ ಮತ್ತು ಪೂರ್ವಕ್ಕೆ ಸಂಪರ್ಕಿಸುವ ಮೂಲಕ ಡಿಜಿಟಲ್ ಇಂಡಿಯಾ ಈ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುತ್ತಿದೆ. ಭಾಷಿನಿಯಂತಹ ಅಪ್ಲಿಕೇಶನ್‌ಗಳು ಎಲ್ಲಾ ಭಾಷೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಿವೆ. ಭಾರತದ ಪ್ರತಿಯೊಂದು ಭಾಷೆಯನ್ನು ಸಂರಕ್ಷಿಸುವ ಉತ್ತಮ ಉದ್ದೇಶ ಇದಾಗಿದೆ. ಇದರಲ್ಲಿ ಪ್ರತಿಯೊಂದು ಭಾಷೆಗೂ ಸೇವೆಯನ್ನು ಮಾಡಲಾಗುತ್ತದೆ.

ಶ್ರೀ ಭಾರತಿಯವರ ಸಾಹಿತ್ಯಿಕ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ, ಅವರ ಕೆಲಸಗಳು ಪ್ರಾಚೀನ ತಮಿಳು ಭಾಷೆಗೆ ಅಮೂಲ್ಯವಾದ ಪರಂಪರೆ ಎಂದು ಬಣ್ಣಿಸಿದರು. “ಸುಬ್ರಮಣ್ಯ ಭಾರತಿಯವರ ಸಾಹಿತ್ಯವು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಗೆ ನಿಧಿಯಾಗಿದೆ. ಅವರ ಸಾಹಿತ್ಯವನ್ನು ಪಸರಿಸಿದಾಗ ತಮಿಳು ಭಾಷೆಗೂ ಸೇವೆ ಸಲ್ಲಿಸುತ್ತಿದ್ದೇವೆ, ಹಾಗೆ ಮಾಡುವ ಮೂಲಕ, ನಾವು ನಮ್ಮ ರಾಷ್ಟ್ರದ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುತ್ತಿದ್ದೇವೆ ಮತ್ತು ಪ್ರಚಾರ ಮಾಡುತ್ತಿದ್ದೇವೆ, ತಮಿಳಿನ ಸ್ಥಾನಮಾನ ಉನ್ನತೀಕರಿಸಲು ಕಳೆದ ದಶಕದಲ್ಲಿ ಮಾಡಿದ ಪ್ರಯತ್ನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, “ಕಳೆದ 10 ವರ್ಷಗಳಲ್ಲಿ, ದೇಶವು ತಮಿಳಿನ ಹೆಮ್ಮೆಯನ್ನು ಗೌರವಿಸಲು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದೆ,”  ವಿಶ್ವಸಂಸ್ಥೆಯಲ್ಲಿ ತಮಿಳು ಭಾಷೆಗೆ ಮನ್ನಣೆ ಸೇರಿದಂತೆ “ನಾವು ಪ್ರಪಂಚದಾದ್ಯಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ಸಹ ತೆರೆಯುತ್ತಿದ್ದೇವೆ” ಎಂದರು.

ಕವಿ ಸುಬ್ರಮಣ್ಯ ಭಾರತಿ ಅವರ ಕೃತಿಗಳ ಸಂಕಲನವು ತಮಿಳು ಭಾಷೆಯ ಉತ್ತೇಜನಕ್ಕೆ ಗಣನೀಯ ಕೊಡುಗೆ ನೀಡಲಿದೆ. “ಒಟ್ಟಾಗಿ, ನಾವು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುತ್ತೇವೆ, ನಮ್ಮ ರಾಷ್ಟ್ರಕ್ಕಾಗಿ ಭಾರತಿ ಜಿ ಅವರ ಕನಸುಗಳನ್ನು ಈಡೇರಿಸುತ್ತೇವೆ”. ಕೃತಿಗಳ ಸಂಕಲನ ಮತ್ತು ಪ್ರಕಟಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರನ್ನು ಅಭಿನಂದಿಸುವ ಮೂಲಕ ಶ್ರೀ ಮೋದಿ ಅವರು ಭಾಷಣ ಮುಕ್ತಾಯಗೊಳಿಸಿದರು.

ಕೇಂದ್ರ ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಕಾವತ್, ಕೇಂದ್ರ ಸಹಾಯಕ ಸಚಿವರಾದ ಶ್ರೀ ರಾವ್ ಇಂದರ್‌ಜಿತ್ ಸಿಂಗ್, ಶ್ರೀ ಎಲ್. ಮುರುಗನ್, ಸಾಹಿತಿ ಶ್ರೀ ಸೀನಿ ವಿಶ್ವನಾಥನ್, ಪ್ರಕಾಶಕ ಶ್ರೀ ವಿ. ಶ್ರೀನಿವಾಸನ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಸುಬ್ರಮಣ್ಯ ಭಾರತಿ ಅವರ ಬರಹಗಳು ಜನರಲ್ಲಿ ದೇಶಪ್ರೇಮ ಹುಟ್ಟುಹಾಕಿವೆ, ಭಾರತಿ ಅವರು ಸಂಸ್ಕೃತಿ ಮತ್ತು ದೇಶದ ಆಧ್ಯಾತ್ಮಿಕ ಪರಂಪರೆಯ ಸಾರವನ್ನು ಜನಸಾಮಾನ್ಯರ ಭಾಷೆಗೆ ತಂದಿದ್ದಾರೆ. ಅವರ ಸಂಪೂರ್ಣ ಕೃತಿಗಳ 23 ಸಂಪುಟಗಳ ಸಂಕಲನವನ್ನು ಸೀನಿ ವಿಶ್ವನಾಥನ್ ಅವರು ಸಂಕಲಿಸಿದ್ದಾರೆ ಮತ್ತು ಸಂಪಾದಿಸಿದ್ದಾರೆ. ಅಲಯನ್ಸ್ ಪಬ್ಲಿಷರ್ಸ್ ಈ ಕೃತಿಗಳನ್ನು ಪ್ರಕಟಿಸಿದೆ. ಇದು ಸುಬ್ರಮಣ್ಯ ಭಾರತಿಯವರ ಬರಹಗಳ ಆವೃತ್ತಿಗಳು, ವಿವರಣೆಗಳು, ದಾಖಲೆಗಳು, ಹಿನ್ನೆಲೆ ಮಾಹಿತಿ ಮತ್ತು ತಾತ್ವಿಕ ಪ್ರಸ್ತುತಿಗಳ ವಿವರಗಳನ್ನು ಒಳಗೊಂಡಿದೆ.

 

 

*****