Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡಿನ ಮಧುರೈಯಲ್ಲಿ ಎ.ಐ.ಐ.ಎಂ.ಎಸ್. ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ.

ತಮಿಳುನಾಡಿನ ಮಧುರೈಯಲ್ಲಿ ಎ.ಐ.ಐ.ಎಂ.ಎಸ್. ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ  ಅವರು ಮಾಡಿದ ಭಾಷಣದ ಪಠ್ಯ.

ತಮಿಳುನಾಡಿನ ಮಧುರೈಯಲ್ಲಿ ಎ.ಐ.ಐ.ಎಂ.ಎಸ್. ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ  ಅವರು ಮಾಡಿದ ಭಾಷಣದ ಪಠ್ಯ.

ತಮಿಳುನಾಡಿನ ಮಧುರೈಯಲ್ಲಿ ಎ.ಐ.ಐ.ಎಂ.ಎಸ್. ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ  ಅವರು ಮಾಡಿದ ಭಾಷಣದ ಪಠ್ಯ.


ಪ್ರಖ್ಯಾತ ಮೀನಾಕ್ಷಿ -ಸುಂದರೇಶ್ವರ ದೇವಾಲಯದ ಖ್ಯಾತಿಯನ್ನು ಹೊಂದಿರುವ ಮಧುರೈಯಲ್ಲಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ ಮತ್ತು ಇದು ಶಿವ ದೇವನ ಪವಿತ್ರ ಆಶೀರ್ವಾದವನ್ನು ಧರಿಸಿರುವ ಹೆಸರನ್ನು ಹೊಂದಿರುವ ಸ್ಥಳವಾಗಿದೆ.

ದೇಶವು ನಿನ್ನೆ ಗಣರಾಜ್ಯೋತ್ಸವವನ್ನು ಆಚರಿಸಿತು. ಕೆಲವು ರೀತಿಯಲ್ಲಿ , ಮಧುರೈಯಲ್ಲಿ ಇಂದು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗೆ ಶಿಲಾನ್ಯಾಸ ಮಾಡಿರುವುದು ನಮ್ಮ “ಏಕ ಭಾರತ್ ಶ್ರೇಷ್ಟ ಭಾರತ್” ಚಿಂತನೆಯನ್ನು ಪ್ರತಿಫಲಿಸುತ್ತದೆ.

ಸ್ನೇಹಿತರೇ,

ನಮಗೆಲ್ಲರಿಗೂ ತಿಳಿದಿದೆ, ದಿಲ್ಲಿಯ ಎ.ಐ.ಐ.ಎಂ.ಎಸ್. ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ತನ್ನದೇ ಬ್ರಾಂಡ್ ನ್ನು ನಿರ್ಮಿಸಿಕೊಂಡಿದೆ.

ಮಧುರೈಯಲ್ಲಿ ಎ.ಐ.ಐ.ಎಂ.ಎಸ್. ನೊಂದಿಗೆ ದೇಶಾದ್ಯಂತ-ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಧುರೈವರೆಗೆ , ಗುವಾಹಟಿಯಿಂದ ಗುಜರಾತಿನವರೆಗೆ ಆರೋಗ್ಯ ರಕ್ಷಣೆಯ ಈ ಬ್ರಾಂಡ್ ಅನ್ನು ವಿಸ್ತರಿಸಿದ್ದೇವೆ ಎಂಬುದಾಗಿ ನಾವು ಹೇಳಬಹುದಾಗಿದೆ. ಮಧುರೈಯ ಎ.ಐ.ಐ.ಎಂ.ಎಸ್. 16 ನೂರು ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದು ತಮಿಳುನಾಡಿನ ಇಡೀಯ ಜನತೆಗೆ ಪ್ರಯೋಜನಕಾರಿಯಾಗಲಿದೆ.

ಸ್ನೇಹಿತರೇ,

ಎನ್.ಡಿ.ಎ. ಸರಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ, ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೌಲಭ್ಯ ದೊರೆಯಬೇಕು ಮತ್ತು ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು ಎಂಬುದು ಇದರ ಉದ್ದೇಶ.

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ ಅಡಿಯಲ್ಲಿ ನಾವು ಭಾರತದಾದ್ಯಂತ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಕೆಲಸಕ್ಕೆ ಬೆಂಬಲ ನೀಡಿದ್ದೇವೆ. ಇಂದು ಮಧುರೈ, ತಂಜಾವೂರು, ಮತ್ತು ತಿರುನೆಲ್ವೇಲಿ ವೈದ್ಯಕೀಯ ಕಾಲೇಜುಗಳ ಸೂಪರ್ ಸ್ಪೆಷಾಲಿಟಿ ಬ್ಲಾಕುಗಳನ್ನು ಉದ್ಘಾಟಿಸಲು ಸಂತೋಷಪಡುತ್ತೇನೆ.

ಇಂದ್ರಧನುಷ್ ಮಿಷನ್ ಕಾರ್ಯಾಚರಿಸುತ್ತಿರುವ ವೇಗ ಮತ್ತು ಪ್ರಮಾಣ ರೋಗ ತಡೆ ಕ್ಷೇತ್ರದಲ್ಲಿ ಮಾದರಿ ಬದಲಾವಣೆಗೆ ಕಾರಣವಾಗಿದೆ. ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನಾ ಮತ್ತು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಸುರಕ್ಷಿತ ಗರ್ಭಾವಸ್ಥೆಯನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿಸಿದೆ.

ಕಳೆದ ನಾಲ್ಕುವರೆ ವರ್ಷಗಳಲ್ಲಿ ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ ಸುಮಾರು 30 % ಹೆಚ್ಚಳವಾಗಿದೆ. ಆಯುಷ್ಮಾನ್ ಭಾರತ್ ಆರಂಭ ಒಂದು ದೊಡ್ಡ ಹೆಜ್ಜೆ.

ನಮ್ಮ ದೇಶಕ್ಕೆ ಸರ್ವತ್ರ ಆರೋಗ್ಯ ವ್ಯಾಪ್ತಿಯನ್ನು ಖಾತ್ರಿಪಡಿಸುವುದಕ್ಕಾಗಿ ಅತ್ಯಂತ ಜಾಗರೂಕತೆಯಿಂದ ಚಿಂತಿಸಿ ರೂಪಿಸಿದ ಯೋಜನೆ ಇದಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಸಂಬಂಧಿ ವಿಷಯಗಳನ್ನು ಸಮಗ್ರವಾಗಿ ವಿಶ್ಲೇಷಿಸಿ ಪಥ ಭಂಜಕ ಮಧ್ಯಪ್ರವೇಶಗಳನ್ನು ಕೈಗೆತ್ತಿಕೊಳ್ಳುವ ಯೋಜನೆಯಾಗಿದೆ. 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣಾ ಸೇವೆ ಮತ್ತು ರೋಗ ತಡೆ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕಾಗಿ ಸ್ಥಾಪಿಸಲಾಗುತ್ತಿದೆ.

ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಅವಶ್ಯಕತೆಯುಳ್ಳ 10 ಕೋಟಿ ಕುಟುಂಬಗಳಿಗೆ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಹಣಕಾಸು ರಕ್ಷಣೆಯನ್ನು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ ಅಡಿಯಲ್ಲಿ ಒದಗಿಸಲಾಗುತ್ತದೆ.

ಇದು ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮಾ ಯೋಜನೆ.

ತಮಿಳುನಾಡು ರಾಜ್ಯದ ಒಂದು ಕೋಟಿ ಐವತ್ತೇಳು ಲಕ್ಷ ಜನರು ಈ ಯೋಜನೆ ವ್ಯಾಪ್ತಿಯಲ್ಲಿ ಬಂದಿರುವುದನ್ನು ತಿಳಿದು ನನಗೆ ಸಂತೋಷವಾಗಿದೆ.

ಬರೇ ಮೂರು ತಿಂಗಳಲ್ಲಿ ಸುಮಾರು 89 ಸಾವಿರ ಫಲಾನುಭವಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ತಮಿಳುನಾಡಿನಲ್ಲಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಗೆ 200 ಕೋಟಿ ರೂ. ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗುತ್ತಿದೆ. ತಮಿಳು ನಾಡು ಈಗಾಗಲೇ ಒಂದು ಸಾವಿರದ ಮುನ್ನೂರ ಇಪ್ಪತ್ತು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಆರಂಭಿಸಿರುವುದನ್ನು ತಿಳಿದು ನನಗೆ ಸಂತೋಷವಾಗಿದೆ.

ರೋಗ ನಿಯಂತ್ರಣ ರಂಗದಲ್ಲಿ ನಾವು ರಾಜ್ಯಗಳಿಗೆ ತಾಂತ್ರಿಕ ಮತ್ತು ಹಣಕಾಸು ಬೆಂಬಲವನ್ನು ಕೊಡುತ್ತಿದ್ದೇವೆ. ನಮ್ಮ ಸರಕಾರ 2025 ರೊಳಗೆ ಕ್ಷಯ ರೋಗ ನಿರ್ಮೂಲನೆಗೆ ಪಣ ತೊಟ್ಟಿದೆ. ರಾಜ್ಯ ಸರಕಾರವು ಕ್ಷಯ ರೋಗ ಮುಕ್ತ ಚೆನ್ನೈ ಉಪಕ್ರಮವನ್ನು ಕೈಗೊಂಡಿರುವುದು ಮತ್ತು ರಾಜ್ಯವನ್ನು 2023 ರೊಳಗೆ ಕ್ಷಯ ರೋಗ ಮುಕ್ತ ಮಾಡಲು ಉದ್ದೇಶಿಸಿರುವುದನ್ನು ತಿಳಿದು ನನಗೆ ಸಂತೋಷವಾಗಿದೆ.

ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದ ಎಲ್ಲಾ ಅಂಶಗಳನ್ನು ಅನುಷ್ಟಾನಗೊಳಿಸುವಲ್ಲಿ ರಾಜ್ಯದ ಬದ್ದತೆಯನ್ನು ನಾನು ಅಭಿನಂದಿಸುತ್ತೇನೆ.

ಈ ರೋಗಗಳನ್ನು ನಿಭಾಯಿಸಲು ರಾಜ್ಯವು ಕೈಗೊಳ್ಳುವ ಎಲ್ಲಾ ಪ್ರಯತ್ನಗಳಿಗೂ ಅವಶ್ಯ ಬೆಂಬಲವನ್ನು ನೀಡಲು ಭಾರತ ಸರಕಾರವು ಬದ್ದವಾಗಿದೆ ಎಂಬ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ.

ಇಂದು ತಮಿಳುನಾಡಿನಲ್ಲಿ 12 ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲು ನಾನು ಹರ್ಷಪಡುತ್ತೇನೆ.

ಇದು ನಮ್ಮ ನಾಗರಿಕರಿಗೆ “ಜೀವಿಸಲು ಅನುಕೂಲಕರ ವಾತಾವರಣ” ವನ್ನು ಸುಧಾರಿಸುವ ಉಪಕ್ರಮಕ್ಕೆ ಇನ್ನೊಂದು ಉದಾಹರಣೆಯಾಗಿದೆ.

ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ,- ನನ್ನ ಸರಕಾರ ಸರ್ವತ್ರ ಆರೋಗ್ಯ ವ್ಯಾಪ್ತಿಯನ್ನು ಖಾತ್ರಿಪಡಿಸುವುದಕ್ಕಾಗಿ ಆರೋಗ್ಯ ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಉಪಕ್ರಮಗಳನ್ನು ಕೈಗೊಳ್ಳಲು ಬದ್ದವಾಗಿದೆ.